PAK vs AUS: ಪಾಕ್ ತಂಡಕ್ಕೆ ತಾಯ್ನಾಡಿನಲ್ಲೇ ಮುಖಭಂಗ! ಲಾಹೋರ್ ಟೆಸ್ಟ್‌ನೊಂದಿಗೆ ಸರಣಿ ಗೆದ್ದ ಆಸ್ಟ್ರೇಲಿಯಾ
PAK vs AUS: 24 ವರ್ಷಗಳ ನಂತರ ಆಸ್ಟ್ರೇಲಿಯಾ ತನ್ನ ಮೊದಲ ಐತಿಹಾಸಿಕ ಪ್ರವಾಸವನ್ನು ಅದ್ಭುತ ರೀತಿಯಲ್ಲಿ ಪೂರ್ಣಗೊಳಿಸಿದೆ. ಲಾಹೋರ್ ಟೆಸ್ಟ್‌ನಲ್ಲಿ ಆತಿಥೇಯ ಪಾಕಿಸ್ತಾನವನ್ನು 115 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಮೂರು ಪಂದ್ಯಗಳ ಸರಣಿಯನ್ನು 1-0 ರಿಂದ ಗೆದ್ದುಕೊಂಡಿತು.
24 ವರ್ಷಗಳ ನಂತರ ಆಸ್ಟ್ರೇಲಿಯಾ ತನ್ನ ಮೊದಲ ಐತಿಹಾಸಿಕ ಪ್ರವಾಸವನ್ನು ಅದ್ಭುತ ರೀತಿಯಲ್ಲಿ ಪೂರ್ಣಗೊಳಿಸಿದೆ. ಲಾಹೋರ್ ಟೆಸ್ಟ್‌ನಲ್ಲಿ ಆತಿಥೇಯ ಪಾಕಿಸ್ತಾನವನ್ನು 115 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಮೂರು ಪಂದ್ಯಗಳ ಸರಣಿಯನ್ನು 1-0 ರಿಂದ ಗೆದ್ದುಕೊಂಡಿತು. ಲಾಹೋರ್‌ನಲ್ಲಿ ನಡೆದ ಕೊನೆಯ ಟೆಸ್ಟ್‌ನ ಕೊನೆಯ ದಿನದಂದು ಪಾಕಿಸ್ತಾನಕ್ಕೆ ಗೆಲ್ಲಲು 278 ರನ್‌ಗಳ ಅಗತ್ಯವಿತ್ತು. ಆದರೆ ಇಮಾಮ್-ಉಲ್-ಹಕ್ ಮತ್ತು ನಾಯಕ ಬಾಬರ್ ಅಜಮ್ ಅವರ ಅರ್ಧಶತಕಗಳನ್ನು ಹೊರತುಪಡಿಸಿ, ಯಾವುದೇ ಪಾಕಿಸ್ತಾನದ ಬ್ಯಾಟ್ಸ್‌ಮನ್ ದೃಢವಾಗಿ ಆಡಲು ಸಾಧ್ಯವಾಗಲಿಲ್ಲ. ಇದುವರೆಗಿನ ಸರಣಿಯಲ್ಲಿ ಹೆಚ್ಚು ಪ್ರಭಾವ ಬೀರಲು ವಿಫಲರಾಗಿದ್ದ ಅನುಭವಿ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಕೊನೆಯ ದಿನ 5 ವಿಕೆಟ್ ಕಬಳಿಸುವ ಮೂಲಕ ಸರಣಿ ಗೆಲುವಿಗೆ ಅಡಿಪಾಯ ಹಾಕಿದರು.
ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್‌ನ ತೊಡಕಿನ ಡ್ರಾದೊಂದಿಗೆ ಆರಂಭವಾದ ಬಹುನಿರೀಕ್ಷಿತ ಸರಣಿಯು ನಿಧಾನವಾಗಿ ವೇಗವನ್ನು ಪಡೆಯಿತು. ಕರಾಚಿಯಲ್ಲಿ, ನಾಯಕ ಬಾಬರ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಅದ್ಭುತ ಶತಕಗಳ ಆಧಾರದ ಮೇಲೆ ಪಾಕಿಸ್ತಾನವು ರೋಚಕ ಶೈಲಿಯಲ್ಲಿ ಟೆಸ್ಟ್ ಅನ್ನು ಡ್ರಾ ಮಾಡಿಕೊಂಡಿತು. ನಂತರ ಅಂತಿಮವಾಗಿ, 14 ದಿನಗಳ ಟೆಸ್ಟ್ ಕ್ರಿಕೆಟ್‌ನ ನಂತರ, 15 ನೇ ಮತ್ತು ಕೊನೆಯ ದಿನದಲ್ಲಿ ಮತ್ತೊಮ್ಮೆ ಬಾಬರ್ ಸೋಲನ್ನು ತಪ್ಪಿಸಲು ಪ್ರಯತ್ನಿಸಿದರು. ಆದರೆ ಪ್ಯಾಟ್ ಕಮಿನ್ಸ್ ಅವರ ವಿಶ್ವದ ನಂಬರ್ ಒನ್ ಟೆಸ್ಟ್ ತಂಡ ಆಸ್ಟ್ರೇಲಿಯಾ ಅಂತಿಮವಾಗಿ ಗೆಲ್ಲುವಲ್ಲಿ ಯಶಸ್ವಿಯಾಯಿತು. ಈ ಮೂಲಕ 24 ವರ್ಷಗಳ ಹಿಂದಿನ ಪಾಕಿಸ್ತಾನ ಪ್ರವಾಸದಂತೆ ಈ ಬಾರಿಯೂ ಆಸ್ಟ್ರೇಲಿಯಾ ಜಯಭೇರಿ ಬಾರಿಸಿದೆ.
ಮೊದಲ ಸೆಷನ್‌ನಿಂದಲೇ ಆಸ್ಟ್ರೇಲಿಯಾ ಮೇಲುಗೈ
ಆಸ್ಟ್ರೇಲಿಯಾ ನೀಡಿದ ಗುರಿಗೆ ಉತ್ತರವಾಗಿ, ಪಾಕಿಸ್ತಾನ ನಾಲ್ಕನೇ ದಿನದಂದು ಉತ್ತಮ ಆರಂಭವನ್ನು ಮಾಡಿ ವಿಕೆಟ್ ನಷ್ಟವಿಲ್ಲದೆ 73 ರನ್ ಗಳಿಸಿತು. ಆದರೆ ಕೊನೆಯ ದಿನ ಆಸ್ಟ್ರೇಲಿಯಾ ಮೊದಲ ಸೆಷನ್‌ನಲ್ಲಿಯೇ ಎರಡು ಯಶಸ್ಸನ್ನು ಸಾಧಿಸಿತು. ಬೆಳಗಿನ ನಾಲ್ಕನೇ ಓವರ್‌ನಲ್ಲಿ ಮಧ್ಯಮ ವೇಗಿ ಕ್ಯಾಮರೂನ್ ಗ್ರೀನ್ ಅಬ್ದುಲ್ಲಾ ಶಫೀಕ್ ಅವರನ್ನು ಔಟ್ ಮಾಡಿದರು. ಇದಾದ ಬಳಿಕ ನಾಥನ್ ಲಿಯಾನ್ ಕೆಲ ಸಮಯದ ಬಳಿಕ ಅಜರ್ ಅಲಿಗೆ ಪೆವಿಲಿಯನ್ ದಾರಿ ತೋರಿಸಿದರು. ಎರಡನೇ ಸೆಷನ್‌ನಲ್ಲಿ ಬಾಬರ್ ಮತ್ತು ಇಮಾಮ್-ಉಲ್-ಹಕ್ ನಡುವಿನ ಜೊತೆಯಾಟವು ಪ್ರವರ್ಧಮಾನಕ್ಕೆ ಬಂದಿತು. ಆದರೆ ಲಿಯಾನ್ ಎಸೆತದಲ್ಲಿ ಇಮಾಮ್ ವಿಕೆಟ್ ಪತನಗೊಂಡಿತು. ಪಾಕಿಸ್ತಾನದ ಹಾದಿ ಇಲ್ಲಿಂದ ಕಷ್ಟಕರವಾಗತೊಡಗಿತು.
ಶೀಘ್ರದಲ್ಲೇ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ರಿವರ್ಸ್ ಸ್ವಿಂಗ್ ಅನ್ನು ಅತ್ಯುತ್ತಮವಾಗಿ ಬಳಸಿ ಸತತ ಓವರ್‌ಗಳಲ್ಲಿ ಫವಾದ್ ಆಲಂ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಎಲ್ಬಿಡಬ್ಲ್ಯೂ ಮಾಡಿದರು. ರಿಜ್ವಾನ್ ರಿವ್ಯೂ ತೆಗೆದುಕೊಂಡಿದ್ದರೆ, ಅದು ಅವರಿಗೆ ವರದಾನವಾಗಲಿತ್ತು. ಆದರೆ ಬಾಬರ್ ಅಜಮ್ ಮತ್ತು ರಿಜ್ವಾನ್ ಒಟ್ಟಿಗೆ ರಿವ್ಯೂ ತೆಗೆದುಕೊಳ್ಳದಿರಲು ನಿರ್ಧರಿಸಿದರು. ಇದರಿಂದ ಪಾಕಿಸ್ತಾನ ಬಹಳ ನಷ್ಟ ಅನುಭವಿಸಬೇಕಾಯ್ತು.
ಬಾಬರ್ ಹೋರಾಟ ವ್ಯರ್ಥ ಬಾಬರ್ ಆಜಮ್ ಇನ್ನೊಂದು ಬದಿಯಿಂದ ವಿಕೆಟ್ ಪತನದ ನಡುವೆಯೂ ಆಸ್ಟ್ರೇಲಿಯಾದ ಗೆಲುವಿನ ಹಾದಿಯಲ್ಲಿ ದೊಡ್ಡ ಅಡಚಣೆಯಾಗಿದ್ದರು. ಬಾಬರ್ ಮೂರನೇ ಸೆಷನ್‌ನಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು, ಇದು ಈ ಪಂದ್ಯದಲ್ಲಿ ಅವರ ಎರಡನೆಯ ಅರ್ಧಶತಕವಾಗಿತ್ತು. ಇಲ್ಲಿಯೇ ನಾಥನ್ ಲಿಯಾನ್ ಪಾಕಿಸ್ತಾನದ ಕೊನೆಯ ಭರವಸೆಯನ್ನು ಕೊನೆಗೊಳಿಸಿದರು. ಲಿಯಾನ್ ಎಸೆತದಲ್ಲಿ ಬಾಬರ್ (55) ಸ್ಲಿಪ್ ನಲ್ಲಿ ಸ್ಟೀವ್ ಸ್ಮಿತ್ಗೆ ಕ್ಯಾಚ್ ನೀಡಿದರು. ಬಾಬರ್ ಔಟಾದ ಬಳಿಕ ಕೇವಲ 22 ರನ್ಗಳಿಗೆ ಉಳಿದ 4 ವಿಕೆಟ್ಗಳೂ ಪತನಗೊಂಡವು. ಈ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಲಿಯಾನ್ (5/83) ಹೊರತುಪಡಿಸಿ, ಕ್ಯಾಪ್ಟನ್ ಕಮ್ಮಿನ್ಸ್ (3/23) ಕೂಡ ವಿಕೆಟ್ ಪಡೆದರು. ಮಿಚೆಲ್ ಸ್ಟಾರ್ಕ್ ಮತ್ತು ಗ್ರೀನ್ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ:IPL 2022: 46 ಎಸೆತಗಳಲ್ಲಿ 87 ರನ್ ಚಚ್ಚಿದ ಆರ್ಸಿಬಿ ಆಲ್ರೌಂಡರ್! ತಂಡದಲ್ಲಿ ಸಿಗುತ್ತಾ ಅವಕಾಶ?
Published On - 5:07 pm, Fri, 25 March 22