ಜೆಡಿಎಸ್ ಪಕ್ಷಕ್ಕೆ ಬೇಡಿಕೆಗಳಿಲ್ಲ, ಆದರೆ ರಾಜ್ಯದ ಸಮಸ್ಯೆಗಳಿಗೆ ಕೇಂದ್ರದಿಂದ ಪರಿಹಾರ ಕಂಡುಕೊಳ್ಳಬೇಕಿದೆ: ಕುಮಾರಸ್ವಾಮಿ

ಜೆಡಿಎಸ್ ಪಕ್ಷಕ್ಕೆ ಬೇಡಿಕೆಗಳಿಲ್ಲ, ಆದರೆ ರಾಜ್ಯದ ಸಮಸ್ಯೆಗಳಿಗೆ ಕೇಂದ್ರದಿಂದ ಪರಿಹಾರ ಕಂಡುಕೊಳ್ಳಬೇಕಿದೆ: ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 05, 2024 | 2:37 PM

ನಿರ್ದಿಷ್ಟವಾದ ಬೇಡಿಕೆಗಳೇನೂ ತಮಗಿಲ್ಲ, ಅದರೆ ಹಲವಾರು ವರ್ಷಗಳಿಂದ ರಾಜ್ಯ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದೆ, ಅವುಗಳಿಗೆ ಕೇಂದ್ರದಿಂದ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಮತ್ತು ಸಂಪುಟದಲ್ಲಿ ಪ್ರಾತಿನಿಧ್ಯ ಒದಗಿಸುವುದು ಪ್ರಧಾನಿ ನರೇಂದ್ರ ಮೋದಿಯವರ ವಿವೇಚನೆ ಬಿಟ್ಟಿದ್ದು ಎಂದು ಕುಮಾರಸ್ವಾಮಿ ಹೇಳಿದರು.

ದೆಹಲಿ: ರಾಷ್ಟ್ರದ ರಾಜಧಾನಿ ತಲುಪಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಎಗ ಮಾತಾಡಿದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾಯಿತ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿಯರು (HD Kumaraswamy) ನಗರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಇಂದು ಕರೆದಿರುವ ಸಭೆಯ ಅಜೆಂಡಾ ಗೊತ್ತಾಗಿಲ್ಲ, ಆದರೆ ಚುನಾವಣೆ ಮುಗಿದ ಬಳಿಕ ಬಹುಮತ ಪಡೆದ ಪಕ್ಷ ಅಥವಾ ಮೈತ್ರಿಕೂಟ ಸರ್ಕಾರ ರಚಿಸುವ (government formation) ಬಗ್ಗೆ ರೂಪುರೇಷೆಗಳನ್ನು ಹಾಕಿಕೊಳ್ಳಲು ಸಭೆ ನಡೆಸುತ್ತದೆ, ಅದೇ ಪ್ರಕ್ರಿಯೆಯ ಕಾರಣ ಎನ್ ಡಿಎ ಮೈತ್ರಿಕೂಟದ ಸಭೆ ಕರೆಯಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಎನ್ ಡಿಎ ಒಕ್ಕೂಟದ ಸದಸ್ಯ ಪಕ್ಷವಾಗಿರುವ ತೆಲುಗು ದೇಶಂ ಹೊಸ ಸರ್ಕಾರದಲ್ಲಿ ಸ್ಪೀಕರ್ ಹುದ್ದೆಯನ್ನು ಕೇಳಿದೆ, ಜೆಡಿಎಸ್ ಪಕ್ಷದ ಬೇಡಿಕೆಯೇನು ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ನಿರ್ದಿಷ್ಟವಾದ ಬೇಡಿಕೆಗಳೇನೂ ತಮಗಿಲ್ಲ, ಅದರೆ ಹಲವಾರು ವರ್ಷಗಳಿಂದ ರಾಜ್ಯ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದೆ, ಅವುಗಳಿಗೆ ಕೇಂದ್ರದಿಂದ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಮತ್ತು ಸಂಪುಟದಲ್ಲಿ ಪ್ರಾತಿನಿಧ್ಯ ಒದಗಿಸುವುದು ಪ್ರಧಾನಿ ನರೇಂದ್ರ ಮೋದಿಯವರ ವಿವೇಚನೆ ಬಿಟ್ಟಿದ್ದು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಿರ್ಮಾಪಕ, ಮುಖ್ಯಮಂತ್ರಿ ಇದೀಗ ಮತ್ತೊಮ್ಮೆ ಸಂಸದ: ಹೆಚ್​ಡಿ ಕುಮಾರಸ್ವಾಮಿ ರಾಜಕೀಯ ಟೈಂ ​ಲೈನ್​