ಕುಂದಾನಗರಿಯಲ್ಲಿ ನಾಮಫಲಕದಲ್ಲಿದ್ದ ಮರಾಠಿ ಅಕ್ಷರಕ್ಕೆ ಮಸಿ ಬಳಿದ ಕರವೇ ಕಾರ್ಯಕರ್ತರು

|

Updated on: Mar 11, 2021 | 10:26 PM

ನಗರದಲ್ಲಿ ನಾಮಫಲಕದಲ್ಲಿದ್ದ ಮರಾಠಿ ಅಕ್ಷರಕ್ಕೆ ಕರವೇ ಕಾರ್ಯಕರ್ತರು ಮಸಿ ಬಳೆದ ಘಟನೆ ಅಂಬೇಡ್ಕರ್ ರಸ್ತೆಯ ವಾಯ್ ಜಂಕ್ಷನ್ ಬಳಿ ನಡೆದಿದೆ. ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್‌ ನಾಮಫಲಕದಲ್ಲಿದ್ದ ಮರಾಠಿ ಅಕ್ಷರಕ್ಕೆ ಕಪ್ಪು ಮಸಿ ಬಳಿದು ತಮ್ಮ ಆಕ್ರೋಶ ಹೊರಹಾಕಿದರು.

ಕುಂದಾನಗರಿಯಲ್ಲಿ ನಾಮಫಲಕದಲ್ಲಿದ್ದ ಮರಾಠಿ ಅಕ್ಷರಕ್ಕೆ ಮಸಿ ಬಳಿದ ಕರವೇ ಕಾರ್ಯಕರ್ತರು
ನಾಮಫಲಕದಲ್ಲಿದ್ದ ಮರಾಠಿ ಅಕ್ಷರಕ್ಕೆ ಮಸಿ ಬಳಿದ ಕರವೇ ಕಾರ್ಯಕರ್ತರು
Follow us on

ಬೆಳಗಾವಿ: ನಗರದಲ್ಲಿ ನಾಮಫಲಕದಲ್ಲಿದ್ದ ಮರಾಠಿ ಅಕ್ಷರಕ್ಕೆ ಕರವೇ ಕಾರ್ಯಕರ್ತರು ಮಸಿ ಬಳೆದ ಘಟನೆ ಅಂಬೇಡ್ಕರ್ ರಸ್ತೆಯ ವಾಯ್ ಜಂಕ್ಷನ್ ಬಳಿ ನಡೆದಿದೆ. ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್‌ ನಾಮಫಲಕದಲ್ಲಿದ್ದ ಮರಾಠಿ ಅಕ್ಷರಕ್ಕೆ ಕಪ್ಪು ಮಸಿ ಬಳಿದು ತಮ್ಮ ಆಕ್ರೋಶ ಹೊರಹಾಕಿದರು.

ನಾಮಫಲಕದಲ್ಲಿದ್ದ ಮರಾಠಿ ಅಕ್ಷರಕ್ಕೆ ಮಸಿ ಬಳಿದ ಕರವೇ ಕಾರ್ಯಕರ್ತರು

ಮರಾಠಿ ಅಕ್ಷರಕ್ಕೆ ಕಪ್ಪು ಮಸಿ ಬಳಿದು ಆಕ್ರೋಶ ಹೊರಹಾಕಿದ ಕಾರ್ಯಕರ್ತರು

ವಾಜೀದ್​ರನ್ನು ತಡೆಯಲು ಯತ್ನಿಸಿದ ಪೊಲೀಸರು

ಕರವೇ ಕಾರ್ಯಕರ್ತರನ್ನು ತಡೆಯಲು ಯತ್ನಿಸಿದ ಪೊಲೀಸರು

ಈ ವೇಳೆ, ವಾಜೀದ್ ಹಿರೇಕೋಡಿಯನ್ನ ಪೊಲೀಸರು ತಡೆದರು. ವಾಜೀದ್​ ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡಾಟಿಕೆ ಖಂಡಿಸಿ ಇಂದು ಪ್ರತಿಭಟನೆ ನಡೆಸಿದರು. ಅಂದ ಹಾಗೆ, ಈ ಹಿಂದೆ, ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕನ್ನಡ ನಾಮಫಲಕಗಳಿಗೆ ಮಸಿ ಬಳಿದಿದ್ದರು.

ಕೌಟುಂಬಿಕ ಕಲಹ: ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆಗೆ ಶರಣು
ಇತ್ತ, ಕೌಟುಂಬಿಕ ಕಲಹದಿಂದ ಬೇಸತ್ತು ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೆರೆಗೆ ಹಾರಿ ಜಗದಾಂಬಾ(45) ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇಂದು ಬೆಳಗ್ಗೆ ಮನೆಯಿಂದ ಬಂದಿದ್ದ ಗೃಹಿಣಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಗ್ನಿಶಾಮಕ ದಳದ‌ ಸಿಬ್ಬಂದಿ ಕೆರೆಯಲ್ಲಿ ಶೋಧಕಾರ್ಯ ನಡೆಸಿ ಮೃತದೇಹ ಹೊರತೆಗೆದರು.

ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

ದಂಪತಿ, ಮಗು ತೆರಳುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ: ಪತಿ ಸಾವು
ಅತ್ತ, ದಂಪತಿ, ಮಗು ತೆರಳುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿಯಾದ ಪರಿಣಾಮ ಪತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಶಾಂತರಾಜು(36) ಮೃತಪಟ್ಟಿದ್ದಾರೆ.

ಮೃತ ಸವಾರ ಶಾಂತರಾಜು ಪತ್ನಿ ಸಂಧ್ಯಾಗೆ ಕಾಲು ಮುರಿದಿದೆ. ಸದ್ಯ, ಉಡುಪಿಯ ಮಣಿಪಾಲ್​ ಆಸ್ಪತ್ರೆಯಲ್ಲಿ ಸಂಧ್ಯಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಪವಾಡಸದೃಶ ರೀತಿಯಲ್ಲಿ ಮಗು ಪಾರಾಗಿದೆ. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಲಾರಿಯನ್ನು ಜಪ್ತಿ ಮಾಡಿ ಡ್ರೈವರ್​ ಸುಬ್ಬರಾಜುನನ್ನು ಬಂಧಿಸಿದ್ದಾರೆ.

ಕಾಣೆಯಾಗಿದ್ದ 11 ವರ್ಷದ ಬಾಲಕ ಕೊಲೆಯಾಗಿರೋ ಶಂಕೆ
ಕಾಣೆಯಾಗಿದ್ದ ಹಾವೇರಿ ನಗರದ ಅಶ್ವಿನಿ ನಗರದ ನಿವಾಸಿಯಾಗಿದ್ದ 11 ವರ್ಷದ ಬಾಲಕ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದೆ.  ಬಾಲಕ ತೇಜಸ್ ಗೌಡ ಮಲ್ಲಿಕೇರಿ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದೆ. ಮಾರ್ಚ್‌ 7ರಂದು ಮನೆಯಿಂದ ಕಾಣೆಯಾಗಿದ್ದ ಬಾಲಕ ತೇಜಸ್‌ನನ್ನು ಹತ್ಯೆ ಮಾಡಿ ಸುಟ್ಟು ಹಾಕಿರುವ ಶಂಕೆಯಿದೆ.  ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿಕೊಟ್ಟರು.

ಇದನ್ನೂ ಓದಿ: ಮಹಾಶಿವರಾತ್ರಿಯಂದು ಮಲೆ ಮಹದೇಶ್ವರನಿಗೆ ಸಿದ್ದರಾಮಯ್ಯ, ಜಮೀರ್​ರಿಂದ ಜೋಡಿ ತೆಂಗಿನಕಾಯಿ ಆರತಿ!

Published On - 7:58 pm, Thu, 11 March 21