ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಹಸಿರು ಹೊದ್ದು ನಿಂತ ಕರೀಘಟ್ಟ ಬೆಟ್ಟ!;

ಕರೀಘಟ್ಟ ಬೆಟ್ಟದಲ್ಲಿ ವೆಂಕಟೇಶ್ವರ ಸ್ವಾಮಿಯೂ ನೆಲೆಸಿರುವುದರಿಂದ ಚಿಕ್ಕ ತಿರುಪತಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ಹೀಗಾಗಿ ದೇವರ ದರ್ಶನದ ಜೊತೆಗೆ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದಾಗಿದೆ.

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಹಸಿರು ಹೊದ್ದು ನಿಂತ ಕರೀಘಟ್ಟ ಬೆಟ್ಟ!;
ಕರೀಘಟ್ಟ ಬೆಟ್ಟ
Edited By:

Updated on: Dec 26, 2020 | 4:38 PM

ಮಂಡ್ಯರಾಜ್ಯದ ಪ್ರಮುಖ ಪ್ರವಾಸಿತಾಣಗಳಲ್ಲೊಂದಾದ ಶ್ರೀರಂಗಪಟ್ಟಣದ ಸಮೀಪದ ಕರೀಘಟ್ಟ, ಇದೀಗ ಹಸಿರು ತುಂಬಿಕೊಂಡು ಕಂಗೊಳಿಸುತ್ತಿದೆ. ತಾಣದ ಸೌಂದರ್ಯ ಇಮ್ಮಡಿಯಾಗಿದೆ. ಈಗ ಜನರ ಭೇಟಿ ಪ್ರಮಾಣವೂ ಹೆಚ್ಚುತ್ತಿದೆ. 

ಪ್ರತಿವರ್ಷ ಮಾರ್ಚ್​-ಏಪ್ರಿಲ್​ನಲ್ಲಿ, ಅಂದರೆ ಬೇಸಿಗೆ ಸಮಯದಲ್ಲಿ ಬೆಟ್ಟ ಬೆಂಕಿಯಿಂದ ಒಣಗಿರುತ್ತದೆ. ಆದರೆ ಈ ಬಾರಿ ಸುರಿದಿರುವ ಮಳೆಯಿಂದ ಇಡೀ ಬೆಟ್ಟದ ಚಿತ್ರಣ ಬದಲಾಗಿದೆ. ಎಲ್ಲಿ ನೋಡಿದರೂ ಹಸಿರು ಕಂಗೊಳಿಸುತ್ತಿದೆ.

ವೆಂಕಟರಮಣ ದೇವಾಲಯದ ದ್ವಾರ

ಸಾಕಷ್ಟು ವಿಶಾಲವಾಗಿರುವ ಹಾಗೂ ಸಾವಿರಾರು ಅಡಿ ಎತ್ತರವಾಗಿರುವ ಈ ಬೆಟ್ಟದ ಮೇಲಿನಿಂದ ನಿಂತು ನೋಡಿದರೆ ಸಂಪೂರ್ಣ ಶ್ರೀರಂಗಪಟ್ಟಣದ ಚಿತ್ರಣ ಕಾಣಿಸುತ್ತದೆ. ಬಗೆಬಗೆಯ ಹುಲ್ಲುಗಳಿಂದ ಕೂಡಿದ್ದು ಸಂಪೂರ್ಣ ಹಸಿರನ್ನೇ ಹೊದ್ದು ನಿಂತಿರುವ ಕರೀಘಟ್ಟ ಬೆಟ್ಟದಲ್ಲಿ ವೆಂಕಟೇಶ್ವರ ಸ್ವಾಮಿಯೂ ನೆಲೆಸಿರುವುದರಿಂದ ಚಿಕ್ಕ ತಿರುಪತಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ಹೀಗಾಗಿ ದೇವರ ದರ್ಶನದ ಜೊತೆಗೆ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದಾಗಿದೆ.

ನದಿ ಹರಿಯುವಿಕೆ

ಮೂಢನಂಬಿಕೆ ಕಂಟಕ
ಹಸಿರನ್ನೇ ಹೊದ್ದುಕೊಂಡಂತೆ ಕಂಗೊಳಿಸುತ್ತಿರುವ ಕರೀಘಟ್ಟ ಬೆಟ್ಟ ಈಗೀಗ ಹಾಳಾಗುತ್ತಿದ್ದು, ಜನರು ಮೂಢನಂಬಿಕೆಯ ಹೆಸರಿನಲ್ಲಿ ಬೆಟ್ಟಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕುವುದೇ ಇದಕ್ಕೆ ಕಾರಣ. ಆದರೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದ್ದು, ದೇವರ ದರ್ಶನಕ್ಕೆಂದು ಬೆಟ್ಟಕ್ಕೆ ಬರುವ ಕೆಲವು ಜನರು ತಾವೇ ಒಂದು ಸಸಿಯನ್ನು ತಂದು ನೆಡಲಾರಂಭಿಸಿದ್ದಾರೆ. ಅಲ್ಲದೆ ಬೆಳೆದಿರುವ ಗಿಡಗಳ ರಕ್ಷಣೆಗೂ ಮುಂದಾಗುತ್ತಿದ್ದಾರೆ. ಹೀಗಾಗಿ ಸದ್ಯ ಕರೀಘಟ್ಟ ಬಗೆ ಬಗೆಯ ಗಿಡಮರಗಳ ಜೊತೆಗೆ ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರಿಗೆ ಒಂದು ದಿನದ ಪಿಕ್​ನಿಕ್​ಗೆ ಹೇಳಿ ಮಾಡಿಸಿದಂತಹ ಸುಂದರ ತಾಣವಾಗಿದೆ.

ಹಸಿರಿನಿಂದ ಕಂಗೊಳಿಸುತ್ತಿರುವ ಪ್ರಕೃತಿ

ಒಟ್ಟಾರೆ ಕರೀಘಟ್ಟ ಬೆಟ್ಟಕ್ಕೆ ಬರುವ ಪ್ರವಾಸಿಗರು ಪ್ರಕೃತಿಯ ಸೌಂದರ್ಯ ಸವಿಯುವುದರ ಜೊತೆಗೆ ತಮ್ಮ ಇಷ್ಟ ದೇವರಾದ ಶ್ರೀನಿವಾಸನ ದರ್ಶನ ಪಡೆಯುತ್ತಿದ್ದಾರೆ. ಹೀಗಾಗಿ ಎರಡು ಉದ್ದೇಶಗಳು ಒಂದೇ ಕಡೆ ನೆರವೇರಲಿದೆ ಎಂಬ ಕಾರಣಕ್ಕೆ ದಿನದಿಂದ ದಿನಕ್ಕೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ.

ವೆಂಕಟರಮಣ ದೇವರ ದರ್ಶನ

 

ಮಂಡ್ಯ ಜಿಲ್ಲೆಯ ಕರೀಘಟ್ಟ ಬೆಟ್ಟ

 

ಮಂಜು ಕವಿದ ವಾತಾವರಣ

 

ಬಿಸಿಲು ನಾಡಿನ ಮಿಂಚೇರಿ ನೀಡ್ತಿದೆ ಮಲೆನಾಡಿನ ಅನುಭವ, ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಮಂತ್ರಮುಗ್ಧ

 

 

 

 

Published On - 4:38 pm, Sat, 26 December 20