ಮುಖ್ಯ ಕಾರ್ಯದರ್ಶಿಗೆ ಗೃಹ ಕಾರ್ಯದರ್ಶಿ ರೂಪಾ ಪತ್ರ : ನಿಂಬಾಳ್ಕರ್ ಮೇಲೆ ಗಂಭೀರ ಆರೋಪ

ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್​ ನಿಂಬಾಳ್ಕರ್ ಅವರ ಪತ್ರದಿಂದ ಸಾರ್ವಜನಿಕರ ಮನಸ್ಸಿನಲ್ಲಿ ಹುಟ್ಟಿದ್ದ ಹಲವಾರು ಪ್ರಶ್ನೆಗಳಿಗೆ ಸಾಕ್ಷ್ಯಾಧಾರದ ಮೂಲಕವೇ ಉತ್ತರ ಸಿಗದಿರಬಹುದು. ಆದರೆ, ಈಗ ಗೃಹ ಕಾರ್ಯದರ್ಶಿ, ಡಿ. ರೂಪಾ ಮೌದ್ಗಿಲ್​ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಬರೆದಿರುವ ವಿವರಗಳನ್ನು ಕೇಳಿದಾಗ ನಮ್ಮ ವ್ಯವಸ್ಥೆಯ ದುರವಸ್ಥೆ ಬಗ್ಗೆ ಕನಿಕರ ಅಲ್ಲ, ಸಿಟ್ಟು ಬರುವುದು ಸಹಜ.

ಮುಖ್ಯ ಕಾರ್ಯದರ್ಶಿಗೆ ಗೃಹ ಕಾರ್ಯದರ್ಶಿ ರೂಪಾ ಪತ್ರ : ನಿಂಬಾಳ್ಕರ್ ಮೇಲೆ ಗಂಭೀರ ಆರೋಪ
ಗೃಹ ಕಾರ್ಯದರ್ಶಿ ಡಿ. ರೂಪಾ ಮೌದ್ಗಿಲ್​
Follow us
ಡಾ. ಭಾಸ್ಕರ ಹೆಗಡೆ
| Updated By: ರಾಜೇಶ್ ದುಗ್ಗುಮನೆ

Updated on:Dec 26, 2020 | 4:36 PM

ಬೆಂಗಳೂರು: ಗೃಹ ಕಾರ್ಯದರ್ಶಿ, ಡಿ. ರೂಪಾ ಮೌದ್ಗಿಲ್​ ಅವರ ಕಛೇರಿಯ ಮೇಲೆ ಗಂಭೀರ ಆರೋಪ ಹೊರಿಸಿ, ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್​ ನಿಂಬಾಳ್ಕರ್ ಅವರು ಮುಖ್ಯ ಕಾರ್ಯದರ್ಶಿ ಟಿ.ಎಮ್​. ವಿಜಯಭಾಸ್ಕರ್​ ಅವರಿಗೆ ಬರೆದಿರುವ ಪತ್ರದಿಂದ ವಿವಾದ ಹುಟ್ಟಿತ್ತು. ಈ ಬೆನ್ನಲ್ಲೇ, ಡಿ. ರೂಪಾ ಕೂಡ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ತಮ್ಮ ಸಮಜಾಯಿಷಿ ನೀಡುವುದರ ಜೊತೆಗೆ, ನಿಂಬಾಳ್ಕರ್​ ಯಾಕೆ ತಮ್ಮ ಮೇಲೆ ಕ್ಷುಲ್ಲಕ ಆರೋಪ ಮಾಡಿದ್ದಾರೆ ಎಂದು ವಿವರಿಸಿದ್ದಾರೆ. ರೂಪಾ ಬರೆದಿರುವು ಎರಡು ಪುಟಗಳ ಪತ್ರ ಇಂದು ಮುಖ್ಯ ಕಾರ್ಯದರ್ಶಿ ಅವರಿಗೆ ತಲುಪಿದೆ ಎಂದು ಸರಕಾರದಲ್ಲಿನ ಉನ್ನತ ಮೂಲಗಳು ಟಿವಿ9 ಕನ್ನಡ ಡಿಜಿಟಲ್​ಗೆ ತಿಳಿಸಿವೆ.

ತಾನು ಗೃಹ ಕಾರ್ಯದರ್ಶಿಯಾಗಿ ಬಂದ ಮೇಲೆಯೇ, ಐಎಮ್​ಎ ಹಗರಣದಲ್ಲಿ ಓರ್ವ ಆರೋಪಿಯಾಗಿರುವ ನಿಂಬಾಳ್ಕರ್​ ಮೇಲೆ ಈ ಕೇಸಿನಲ್ಲಿ, ಮುಂದಿನ ಕಾನೂನು ಕ್ರಮಕ್ಕೆ (sanction for prosecution) ಅನುಮೋದನೆ ದೊರೆತಿದೆ. ಉಚ್ಛ ನ್ಯಾಯಾಲಯದ ಮೇಲ್ವಿಚಾರಣೆಯೊಂದಿಗೆ (Court monitored investigation) ಐಎಮ್​ಎ ಹಗರಣ ಕುರಿತಾಗಿ, ಸಿಬಿಐ ಕಳೆದ ಡಿಸೆಂಬರ್​ನಲ್ಲಿ 2019 ರಲ್ಲಿ ಕರ್ನಾಟಕ ಸರಕಾರಕ್ಕೆ ಪತ್ರ ಬರೆದು ಕಾನೂನು ಕ್ರಮಕ್ಕೆ ಅನುಮತಿ ಕೇಳಿದ್ದರೂ ಆ ಕುರಿತು ಯಾವ ಬೆಳವಣಿಗೆ ಆಗಿರಲಿಲ್ಲ. ನಾನು ನಿಮ್ಮ ಗಮನಕ್ಕೆ ಈ ವಿಚಾರ ತಂದು ಒಪ್ಪಿಗೆ ಪಡೆದು ಮುಂದುವರಿದ ಮೇಲೆ, ಐಎಮ್​ಎ ಹಗರಣದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ (sanction for prosecution) ಕರ್ನಾಟಕ ಸರಕಾರ ಅನುಮೋದನೆ ನೀಡಿತು.

ನಿರ್ಭಯಾ ಹಣ ಸದ್ಬಳಕೆ ಸಮಿತಿಯ ಅಧ್ಯಕ್ಷರಾಗಿರುವ ನಿಂಬಾಳ್ಕರ್​ ಸಮಯದಲ್ಲಿ ನ್ಯಾಯಯುತವಾಗಿಲ್ಲದ ಮತ್ತು ಪಕ್ಷಪಾತವಾಗಿರುವ (unfair and biased) ಗುತ್ತಿಗೆ ಕರಡು ತಯಾರಾಗಿದ್ದು, ಯಾವುದೋ ಒಂದು ಕಂಪೆನಿಗೆ ಅನುಕೂಲ ಮಾಡಿಕೊಡಲು, ಇಂಥ ಗುತ್ತಿಗೆ ಕರಡನ್ನು ತಯಾರು ಮಾಡಲಾಗಿದೆ. ಗುತ್ತಿಗೆಯಲ್ಲಿ ಭಾಗವಹಿಸಿದ್ದ ಭಾರತ್​ ಇಲೆಕ್ಟ್ರಾನಿಕ್ಸ್​ ಲಿಮಿಟೆಡ್​ ಅವರ ಗುತ್ತಿಗೆ ಪ್ರಸ್ತಾಪವನ್ನು ತಿರಸ್ಕರಿಸಿದ ಮೇಲೆ, ಬಿಇಇಲ್​ ಸಂಸ್ಥೆ ಪ್ರಧಾನಿಗಳ ಕಾರ್ಯಾಲಯಕ್ಕೆ ಪತ್ರ ಬರೆಯಿತು. ಆಮೇಲೆ ವಿಚಾರಣೆ ಪ್ರಾರಂಭವಾಗಿ ಇಡೀ ಗುತ್ತಿಗೆ ಪ್ರಕ್ರಿಯೆಯನ್ನು ಅಲ್ಲಿಗೇ ನಿಲ್ಲಿಸಲಾಯಿತು.

ಮೊದಲು ಇದರ ಕಡತವನ್ನು ನನಗೆ ಕೊಟ್ಟವರು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ. ಇದನ್ನು ಅಧ್ಯಯನ ಮಾಡಿದ ನಾನು ಅದರಲ್ಲಿ ತುಂಬಾ ಅಕ್ರಮಗಳನ್ನು ಕಂಡು, ಖಾಸಗಿ ಕಂಪೆನಿ ಅರ್ನಸ್ಟ್​ ಆ್ಯಂಡ್​ ಯಂಗ್​ನ ಪ್ರತಿನಿಧಿಯೊಂದಿಗೆ ಮಾತನಾಡಿ, ಇನ್ನು ಹೆಚ್ಚಿನ ಸತ್ಯಾಸತ್ಯತೆ ತಿಳಿದುಕೊಳ್ಳಲು ಪ್ರಯತ್ನಿಸಿದೆ. ಈ ಕುರಿತಾಗಿ ಮೊದಲ ಬಾರಿಗೆ ನ್ಯಾಯಕ್ಕಾಗಿ ಧ್ವನಿ (whistle blower) ಎತ್ತಿ, ತಮ್ಮ ಗಮನಕ್ಕೆ ಈ ವಿಚಾರ ತಂದಾಗ ತಾವು ಅದಕ್ಕೆ ಸ್ಪಂದಿಸಿ ಈ ಕುರಿತಾಗಿ ನೇಮಿಸಿರುವ ಸಮಿತಿಗೆ ನನ್ನನ್ನು ಸೇರಿಸಿದ್ದೀರಿ. ನಾನು ಗೃಹ ಕಾರ್ಯದರ್ಶಿ ಆಗಿದ್ದು ನನ್ನ ಹೆಸರಿನ ಸೋಗಿನಲ್ಲಿ ಯಾರೂ ದೂರವಾಣಿ ಮಾಡಿಲ್ಲ.

ಹೇಮಂತ್ ನಿಂಬಾಳ್ಕರ್

ನ್ಯಾಯಯುತವಾಗಿಲ್ಲದ ಮತ್ತು ಪಕ್ಷಪಾತವಾಗಿ (unfair and biased) ಗುತ್ತಿಗೆ ಪಡೆಯಲು ಪ್ರಯತ್ನಿಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳಿಗೆ ನಾನು ಗೃಹ ಕಾರ್ಯದರ್ಶಿಯಾಗಿರುವುದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.

ನಿರ್ಭಯಾ ಮಹಿಳಾ ಸುರಕ್ಷತಾ ನಿಧಿ ವಿನಿಯೋಗಕ್ಕಾಗಿ ನ್ಯಾಯಯುತವಾಗಿಲ್ಲದ ಮತ್ತು ಪಕ್ಷಪಾತವಾಗಿ (unfair and biased) ಗುತ್ತಿಗೆ ಪ್ರಕ್ರಿಯೆ ನಡೆಸಿರುವ ಮತ್ತು ಐಎಮ್​​ಎ ಕೇಸಿನಲ್ಲಿ ಆರೋಪಿಯಾಗಿರುವ ನಿಂಬಾಳ್ಕರ್​ ಅವರು, ನಿರ್ಭಯಾ ಮಹಿಳಾ ಸುರಕ್ಷತಾ ನಿಧಿ ವಿನಿಯೋಗ ಗುತ್ತಿಗೆ ಪ್ರಕ್ರಿಯೆ ಸಮಿತಿಯ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಆದ್ದರಿಂದ ಅವರನ್ನು ಆ ಕೆಲಸದಿಂದ ತೆಗೆದು, ಈ ಕುರಿತು ಧ್ವನಿ ಎತ್ತಿದ ನನಗೆ ರಕ್ಷಣೆ ನೀಡಬೇಕೆಂದು ರೂಪಾ ಅವರು ಪತ್ರದಲ್ಲಿ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ ಮತ್ತು ತಮಗೆ (ಮುಖ್ಯ ಕಾರ್ಯದರ್ಶಿ) ದೂರು ನೀಡಿ ನನ್ನ ಮೇಲೆ ಕಪ್ಪು ಚುಕ್ಕೆ ಹೊರಿಸುವ ಮತ್ತು ನನ್ನ ಸ್ಥೈರ್ಯಗೆಡಿಸುವ ಪ್ರಯತ್ನ ಇದಾಗಿದೆ. ಈ ಕುರಿತಾಗಿ ನಾನು ಓರ್ವ ನಾಗರಿಕ ಸೇವಾ ಅಧಿಕಾರಿಯಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಮತ್ತು ಮುಂದೂ ಸಹ ಇದನ್ನು ಮುಂದುವರಿಸುತ್ತೇನೆ ಎಂದು ತಮ್ಮ ಪತ್ರದಲ್ಲಿ, ರೂಪಾ ಅವರು ಬರೆದಿರುವುದಾಗಿ ಮೂಲಗಳು ತಿಳಿಸಿವೆ.

ನಿರ್ಭಯಾ ನಿಧಿ ಮಹಿಳಾ ಸುರಕ್ಷತಾ ಯೋಜನೆ: ಗೃಹ ಕಾರ್ಯದರ್ಶಿ ರೂಪಾ ಅವರಿಂದ ದಾಖಲೆ ಬಿಡುಗಡೆ, ವಿವಾದಕ್ಕೆ ಹೊಸ ಆಯಾಮ

Published On - 4:22 pm, Sat, 26 December 20

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ