AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವಜೋಡಿಗಳಿಗೆ ಸಿಗಬೇಕಿದ್ದ ಸಪ್ತಪದಿ ಭಾಗ್ಯ ಕಿತ್ತುಕೊಂಡ ಕೊರೊನಾ!

ಮುಜರಾಯಿ ತಹಶೀಲ್ದಾರ್​ ನಾಗವೇಣಿ ಈ ಬಗ್ಗೆ ಮಾಹಿತಿಯನ್ನು ಖಚಿತ ಪಡಿಸಿದ್ದು, ಮತ್ತೆ ಸಪ್ತಪದಿ ಕಾರ್ಯಕ್ರಮ ಆಯೋಜನೆ ಮಾಡಲು ಮುಂದಾದಾಗ ನೊಂದಣಿಯಾಗಿದ್ದ ಜೋಡಿಗಳು ಮದುವೆಯಾಗಿರುವುದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

ನವಜೋಡಿಗಳಿಗೆ ಸಿಗಬೇಕಿದ್ದ ಸಪ್ತಪದಿ ಭಾಗ್ಯ ಕಿತ್ತುಕೊಂಡ ಕೊರೊನಾ!
ಸಾಂದರ್ಭಿಕ ಚಿತ್ರ
Follow us
preethi shettigar
| Updated By: ರಾಜೇಶ್ ದುಗ್ಗುಮನೆ

Updated on: Dec 26, 2020 | 5:32 PM

ಕೋಲಾರ: ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹೆಚ್ಚಾಗಿ ಜನರು ಅನುಸರಿಸಬೇಕು ಎನ್ನುವ ನಿಟ್ಟಿನಲ್ಲಿ  ಸಾಮೂಹಿಕ ವಿವಾಹಗಳನ್ನು ಪ್ರೋತ್ಸಾಹಿಸಿದ್ದು, ಈ ಉದ್ದೇಶದಿಂದ ಮುಜರಾಯಿ ಇಲಾಖೆಯು, ಪ್ರತಿ ವರ್ಷ ಆಸಕ್ತಿ ಇರುವ ನವ ಜೋಡಿಗಳಿಗೆ ಆಯಾ ಜಿಲ್ಲೆಗಳ  ದೇವಾಲಯಗಳಲ್ಲಿ  ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸುತ್ತಿತ್ತು. ಆದರೆ ಈ ಬಾರಿ ಸಾಮೂಹಿಕ ವಿವಾಹದ ಮೂಲಕ ಸಪ್ತಪದಿ ತುಳಿದು ಮಾದರಿಯಾಗಲು ಮುಂದಾಗಿದ್ದ ನೂರಾರು ನವಜೋಡಿಗಳಿಗೆ ಸರ್ಕಾರದಿಂದ ದೊರೆಯಬೇಕಾಗಿದ್ದ ಸೌಲಭ್ಯಗಳು ಮಹಾಮಾರಿ ಕೊರೊನಾದಿಂದ ತಪ್ಪಿಹೋಗಿದೆ.

ಸಾಮೂಹಿಕ ವಿವಾಹಕ್ಕೆ ಮುಂದಾಗಿದ್ದ ಜೋಡಿಗೆ ಕೊರೊನಾ ಅಡ್ಡಿ! 2020 ರ ಏಪ್ರಿಲ್ ತಿಂಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಮುಜರಾಯಿ ಇಲಾಖೆ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಂತೆ ಅರ್ಹ ಜೋಡಿಗಳ ಪಟ್ಟಿಯನ್ನು ಇಲಾಖೆಯು ಆಯ್ಕೆ ಮಾಡಿ ಪ್ರಕಟಿಸಿದ್ದು, ಸಪ್ತಪದಿ ಕಾರ್ಯಕ್ರಮಕ್ಕೆ ಆಯ್ಕೆಯಾದ ಜೋಡಿಯ ಮದುವೆ ಆಯಾ ಜಿಲ್ಲೆಗಳಲ್ಲಿನ ಪ್ರಮುಖ ಮುಜರಾಯಿ ದೇವಾಲಯಗಳಲ್ಲಿ ಮಾಡಬೇಕಿತ್ತು. ಆದರೆ, ಕೊರೊನಾ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಜಾರಿಯಾದ ಪರಿಣಾಮ ವಿವಾಹ ಕಾರ್ಯಕ್ರಮ ಮುಂದೂಡಲಾಯಿತು. ಆದರೆ ಈವರೆಗೂ ಈ ನವಜೋಡಿಗಳಿಗೆ ಮದುವೆ ಭಾಗ್ಯ ಸಿಗಲೇ ಇಲ್ಲ.

ಎಷ್ಟೋ ಮದುವೆಗಳು ಮುಗಿದೇ ಹೋಗಿದೆ ಆದರೆ ಸರ್ಕಾರದ ಸೌಲಭ್ಯ ಮಾತ್ರ ಬಂದಿಲ್ಲ! ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕು ಇಳಿಮುಖವಾಗಿದ್ದು, ಮುಜರಾಯಿ ಇಲಾಖೆಯ ಅಧಿಕಾರಿಗಳು ಸಪ್ತಪದಿ ಕಾರ್ಯಕ್ರಮವನ್ನು ಮತ್ತೆ ಆಯೋಜನೆ ಮಾಡಲು ಮುಂದಾಗಿದ್ದಾರೆ. ಆದರೆ ಕೊರೊನಾ ಎಂದು ಅಧಿಕಾರಿಗಳು ಯೋಜನೆ ಮುಂದೆ ಹಾಕಿದ್ದರಿಂದ ಈ ಹಿಂದೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡಿದ್ದ ಜೋಡಿಗಳು ಮದುವೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂದಿದ್ದು, ವಧುವರರು ಸರಳವಾಗಿ ದೇವಾಲಯ ಹಾಗೂ ಮನೆಗಳ ಮುಂದೆಯೇ ಮದುವೆ ಮಾಡಿಕೊಂಡು ಮುಗಿಸಿದ್ದಾರೆ. ಆದರೆ ಸರ್ಕಾರದಿಂದ ಸಪ್ತಪದಿ ಕಾರ್ಯಕ್ರಮದ ಅಡಿಯಲ್ಲಿ ಸಿಗಬೇಕಾದ ಸೌಲಭ್ಯಗಳಿಂದ ಮಾತ್ರ ಈ ಜೋಡಿಗಳು ವಂಚಿತರಾಗಿದ್ದಾರೆ.

ಮುಜರಾಯಿ ತಹಶೀಲ್ದಾರ್​ ನಾಗವೇಣಿ ಈ ಬಗ್ಗೆ ಮಾಹಿತಿಯನ್ನು ಖಚಿತ ಪಡಿಸಿದ್ದು, ಮತ್ತೆ ಸಪ್ತಪದಿ ಕಾರ್ಯಕ್ರಮ ಆಯೋಜನೆ ಮಾಡಲು ಮುಂದಾದಾಗ ನೊಂದಣಿಯಾಗಿದ್ದ ಜೋಡಿಗಳು ಮದುವೆಯಾಗಿರುವುದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಕೇವಲ ಕೋಲಾರ ಜಿಲ್ಲೆಯೊಂದರಲ್ಲಿಯೇ ಸಪ್ತಪದಿ ಕಾರ್ಯದಲ್ಲಿ ವಿವಾಹ ಮಾಡಿಕೊಳ್ಳಲು 73 ಜೋಡಿಗಳು ನೋಂದಣಿ ಮಾಡಿಕೊಂಡಿದ್ದರು. ಅದರಂತೆ 2020 ಏಪ್ರಿಲ್ 26 ರಂದು 73 ಜೋಡಿಗಳಿಗೆ ಮುಜರಾಯಿ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಕೊರೊನಾದಿಂದಾಗಿ ಕಾರ್ಯಕ್ರಮ ಮುಂದೂಡಲಾಗಿತ್ತು. ಈಗ ಮತ್ತೆ ಮುಜರಾಯಿ ಇಲಾಖೆ ಈ ಯೋಜನೆಗೆ ಮುಂದಾಗಿ ನೋಂದಣಿ ಮಾಡಿಕೊಂಡಿದ್ದ ಜೋಡಿಗಳನ್ನು ಸಂಪರ್ಕಿಸಿದರೆ, 73 ರ ಪೈಕಿ 71 ಜೋಡಿಗಳಿಗೆ ಮದುವೆಯಾಗಿರುವುದು ಕಂಡುಬಂದಿದೆ.

ಕೊನೆ ಪಕ್ಷ ನೊಂದಣಿ ಮಾಡಿಸಿಕೊಂಡಿದ್ದವರಿಗೆ ಸಪ್ತಪದಿ ಯೋಜನೆಯ ಸೌಲಭ್ಯಕೊಡಿ! ಕೊರೊನಾ ಕಾರಣದಿಂದ ಮುಜರಾಯಿ ಇಲಾಖೆ ದಿನಾಂಕ ನಿಗದಿಪಡಿಸದ ಕಾರಣ ಸಂಬಂಧಿಕರು ಸ್ನೇಹಿತರಿಗೆಲ್ಲರಿಗೂ ಮದುವೆಯಾಗುವ ಬಗ್ಗೆ ಹೇಳಲಾಗಿತ್ತು. ಕೊರೊನಾದಿಂದ ಸರಕಾರವೇ ವಿವಾಹ ಕಾರ್ಯಕ್ರಮ ಮುಂದೂಡಿತ್ತು. ಅನಿವಾರ್ಯ ಕಾರಣಗಳಿಂದ ಮದುವೆ ಮಾಡಿಕೊಂಡಿದ್ದು, ಹಿಂದೆ ನೋಂದಣಿ ಮಾಡಿಕೊಂಡವರಿಗೆ ಸಪ್ತಪದಿ ಸೌಲಭ್ಯಗಳನ್ನು ಕಲ್ಪಿಸಬೇಕೆಂಬುದು ನವಜೋಡಿಗಳು ಪೈಕಿ ಹಲವರು ಇಲಾಖೆಯನ್ನು ಒತ್ತಾಯಿಸಿದ್ದಾರೆ

ಸಪ್ತಪದಿ ಯೋಜನೆಯಡಿ ನವ ಜೋಡಿಗಳಿಗೆ ಸಿಗುತ್ತಿದ್ದ ಸೌಲಭ್ಯಗಳಾದರೂ ಏನೇನು? 1-ಸಪ್ತಪದಿ ಯೋಜನೆಗೆ ಆಯ್ಕೆಯಾಗುವವರರಿಗೆ 5 ಸಾವಿರ ರೂಪಾಯಿ ನಗದು. 2-ವಧುವಿಗೆ 10 ಸಾವಿರ ರೂಪಾಯಿ ನೀಡಲಾಗುತ್ತದೆ. 3-ವಧುವಿಗೆ ಚಿನ್ನದ ತಾಳಿ, 8 ಗ್ರಾಂ ತೂಕದ ಚಿನ್ನದ 2 ಗುಂಡು ಇದನ್ನು ದೇವಾಲಯದಿಂದ ಭರಿಸಲಾಗುತ್ತದೆ. 4- ಇದರ ಜೊತೆಗೆ ವಧುವಿಗೆ ಕಂದಾಯ ಇಲಾಖೆಯಿಂದ ಆದರ್ಶ ವಿವಾಹ ಯೋಜನೆಯಡಿ 10000ರೂ. ನಿಶ್ಚಿತ ಠೇವಣಿ ಸೌಲಭ್ಯ ಒದಗಿಸಲಾಗುತ್ತದೆ. 5- ಸಾಮೂಹಿಕ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸರಳ ವಿವಾಹ ಯೋಜನೆಯಡಿ 50000 ರೂ. ಸೌಲಭ್ಯ ಒದಗಿಸಲಾಗುತ್ತದೆ.ಇದನ್ನು ಹೊರತುಪಡಿಸಿ ವಿವಾಹಕ್ಕೆ ಬರುವ ವಧುವರರು ಮತ್ತು ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಅವಶ್ಯಕ ವ್ಯವಸ್ಥೆಯನ್ನು ದೇವಾಲಯದಿಂದ ಮಾಡಲಾಗುತ್ತದೆ. ಈ ಸಪ್ತಪದಿ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹತೆಗಳೇನು?

ಸರಕಾರ ನಿಗದಿಪಡಿಸಿದಂತೆ 21 ವರ್ಷ ಮೀರಿದ ಪುರುಷರು ಹಾಗೂ 18 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ವಯಸ್ಸಿನ ದೃಢೀಕರಣ ಪತ್ರ ಒದಗಿಸಬೇಕು. ವಧುವರರ ಪೋಟೋ ಎಸ್​ಎಸ್​ಎಲ್​ಸಿ ಅಂಕಪಟ್ಟಿ, ಆಧಾರ್ ಕಾರ್ಡ್ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಪಡೆದ ಅವಿವಾಹಿತ ದೃಢೀಕರಣ ಪತ್ರ ಹಾಗೂ ಪಡಿತರ ಚೀಟಿ ಸಲ್ಲಿಸಬೇಕು. ಆದರೆ ಇದರಲ್ಲಿ ಪ್ರೇಮ ವಿವಾಹಕ್ಕೆ ಅವಕಾಶವಿರುವುದಿಲ್ಲ. ವಧುವರರ ಪೋಷಕರು ಮದುವೆ ಒಪ್ಪಿ, ಮದುವೆ ಕಾರ್ಯಾಕ್ರಮದಲ್ಲಿ ಭಾಗಿಯಾಗಬೇಕು. ಜೊತೆಗೆ ಎರಡೂ ಕಡೆಯ ಸಾಕ್ಷೀದಾರರು ಇರಬೇಕು.

ಕೊರೊನಾದಿಂದ ಮುಂದೂಡಲಾಗಿದ್ದ ಸಪ್ತಪದಿ ವಿವಾಹ ಯೋಜನೆಗೆ ಮರುಚಾಲನೆ

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್