ಅಡಿಕೆ ಸಸಿ ಕೀಳಿಸಿದ್ದಾರೆಂದು ಆರೋಪಿಸಿ ವಲಯ ಅರಣ್ಯಾಧಿಕಾರಿ ವಿರುದ್ಧ ಪ್ರತಿಭಟನೆ; ಕಿಮ್ಮನೆ ರತ್ನಾಕರ್ ನೇತೃತ್ವ
ಸಾವಿರಕ್ಕೂ ಅಧಿಕ ಸಸಿ ಕಿತ್ತು ಹಾಕಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ತೀರ್ಥಹಳ್ಳಿ ವಲಯ ಅರಣ್ಯ ಅಧಿಕಾರಿ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಪಾದಯಾತ್ರೆ ನಡೆಸಿದರು.
ಶಿವಮೊಗ್ಗ: ಸಾವಿರಾರು ಅಡಿಕೆ ಸಸಿ ಕೀಳಿಸುವ ಮೂಲಕ ವಲಯ ಅರಣ್ಯ ಅಧಿಕಾರಿಯ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ತೀರ್ಥಹಳ್ಳಿ ಪಟ್ಟಣದ ಅರಣ್ಯ ಇಲಾಖೆ ಕಚೇರಿ ಬಳಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅರಣ್ಯ ಭೂಮಿಯ ಒತ್ತುವರಿ ಜಾಗವೆಂದು ಬೀಸು ಗ್ರಾಮದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಪ್ರಿಯಾರವರ ಅಡಿಕೆ ಸಸಿಗಳನ್ನು ಅರಣ್ಯ ಸಿಬ್ಬಂದಿ ಡಿಸೆಂಬರ್ 19 ರಂದು ಕಿತ್ತು ಹಾಕಿದ್ದರು. ಇದನ್ನು ಖಂಡಿಸಿ ತಾಲೂಕಿನ ಬೀಸು ಗ್ರಾಮದಿಂದ ತೀರ್ಥಹಳ್ಳಿ ಪಟ್ಟಣದವರೆಗೆ (ಒಟ್ಟು 23 ಕಿ. ಮೀ) ಪ್ರತಿಭಟನೆ ನಡೆಸಿದ್ದಾರೆ.
ಸಾವಿರಕ್ಕೂ ಅಧಿಕ ಸಸಿ ಕಿತ್ತು ಹಾಕಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ತೀರ್ಥಹಳ್ಳಿ ವಲಯ ಅರಣ್ಯ ಅಧಿಕಾರಿ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಪಾದಯಾತ್ರೆ ನಡೆಸಿದರು. ಜೊತೆಗೆ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಪ್ರತಿಕೃತಿ ದಹಿಸಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಅನಿಲ ಕುಮಾರ್ ಪ್ರತಿಕೃತಿ ದಹಿಸಿ ಪ್ರತಿಭಟನೆ