ಬೆಂಗಳೂರು: ಜುಲೈ 18ರ ನಂತರ ಪ್ರಕಟವಾಗಬಹುದು ಎಂದು ನಿರೀಕ್ಷಿಸಲಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ನಾಲ್ಕು ದಿನ ಮುಂಚೆಯೇ ಹೊರಬಿದ್ದಿದೆ. ಇಂದು ಮಧ್ಯಾಹ್ನ 12 ಗಂಟೆಗೆ ವಿದ್ಯಾರ್ಥಿಗಳ ಮೊಬೈಲ್ಗೆ SMS ಮೂಲಕ ರಿಸಲ್ಟ್ ತಲುಪಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದರು. ಈಗ ಅದಕ್ಕೂ ಮುಂಚಿತವಾಗಿಯೇ ರಿಸಲ್ಟ್ ಲಭ್ಯವಾಗಿದ್ದು ಈ ಬಾರಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಪ್ರಥಮ ಸ್ಥಾನ ಪಡೆದುಕೊಂಡಿವೆ.
ದ್ವಿತೀಯ ಪಿಯುಸಿ ಈ ಬಾರಿ 61.80 ಶೇ ಫಲಿತಾಂಶ ಬಂದಿದೆ. ಈ ಪೈಕಿ ವಿಜ್ಞಾನ ವಿಭಾಗ – 76.2 ಶೇ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಯ ವಿಭಾಗದ ರಿಸಲ್ಟ್ – ಶೇ 65.52, ಕಲಾ ವಿಭಾಗದ ರಿಸಲ್ಟ್- ಶೇ 41.27, ಕಳೆದ ವರ್ಷ 50.53ಶೇ ಇತ್ತು. ಈ ಬಾರಿ ಉತ್ತಮ ಫಲಿತಾಂಶ ಬಂದಿದೆ.
ರಾಜಧಾನಿ ಬೆಂಗಳೂರು ಯಾವ ಸ್ಥಾನದಲ್ಲಿದೆ?
ಬೆಂಗಳೂರು ದಕ್ಷಿಣ ಶೇ 77.56 – 6ನೇ ಸ್ಥಾನ, ಬೆಂಗಳೂರು ಉತ್ತರ- ಶೇ 75.54 7ನೇ ಸ್ಥಾನ, ಬೆಂಗಳೂರು ಗ್ರಾಮಾಂತರ- ಶೇ 69.02 – 13 ನೇ ಸ್ಥಾನ ಪಡೆದುಕೊಂಡಿದೆ.
ಕೊನೆ ಸ್ಥಾನ ಯಾವ ಜಿಲ್ಲೆಗೆ
ವಿಜಯಪುರ ಶೇ 54.22 ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ರಿಸ್ಟಲ್ – ಶೇ47.56 ಮತ್ತು ಇಂಗ್ಲೀಷ್ ಮಾಧ್ಯಮಕ್ಕೆ ಶೇ 72.45 ಫಲಿತಾಂಶ ಬಂದಿದೆ.
ಗ್ರಾಮಾಂತರವನ್ನ ಹಿಂದಿಟ್ಟ ನಗರ ಪ್ರದೇಶದ ವಿದ್ಯಾರ್ಥಿಗಳು
ಈ ಬಾರಿ ನಗರ ಪ್ರದೇಶದ ವಿದ್ಯಾರ್ಥಿಗಳ ಫಲಿತಾಂಶ ಗ್ರಾಮಾಂತ ಪ್ರದೇಶದ ವಿದ್ಯಾರ್ಥಿಗಳಿಗಿಂತ ಉತ್ತಮವಾಗಿದೆ. ನಗರ ಪ್ರದೇಶದ ವಿದ್ಯಾರ್ಥಿಗಳ ರಿಸಲ್ಟ್ -ಶೇ 62.60 ರಷ್ಟಿದ್ದರೆ. ಗ್ರಾಮಾಂತರದಲ್ಲಿ ಶೇ.58.99 ರಷ್ಟು ರಿಸಲ್ಟ್ ಬಂದಿದೆ.
Published On - 12:04 pm, Tue, 14 July 20