ಫಿಟ್ಸ್ ಬಂದು ರಸ್ತೆಯಲ್ಲಿ ಒದ್ದಾಡ್ತಿದ್ರೂ ಜನ ಬರಲಿಲ್ಲ ಸಹಾಯಕ್ಕೆ.. ಮುಂದೇನಾಯ್ತು?
ಬೆಂಗಳೂರು: ಫಿಟ್ಸ್ ಬಂದು ಆಟೋ ಚಾಲಕ ರಸ್ತೆಯಲ್ಲೇ ಕುಸಿದು ಬಿದ್ದ ಘಟನೆ ನಗರದ ಮಲ್ಲೇಶ್ವರಂನಲ್ಲಿ ನಡೆದಿದೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಫಿಟ್ಸ್ ಬಂದು ಆಟೋ ಡ್ರೈವರ್ ನಡು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದಂತಹ ಮನ ಕಲಕುವ ಘಟನೆ ನಡೆದಿದೆ. ಆಟೋ ಡ್ರೈವರ್ ಫಿಟ್ಸ್ ಬರೋಕು ಮೊದಲೇ ಚೆನ್ನಾಗಿ ಕುಡಿದಿದ್ದ ಎಂದೂ ಹೇಳಲಾಗುತ್ತಿದೆ. ಫಿಟ್ಸ್ ಬಂದು ರಸ್ತೆಯಲ್ಲಿ ಬಿದ್ದು ಒದ್ದಾಡಿದರೂ ಯಾರೂ ವ್ಯಕ್ತಿಯ ಸಹಾಯಕ್ಕೆ ಬಂದಿಲ್ಲ. ಕೊರೊನಾ ಭೀತಿಯಿಂದ ವ್ಯಕ್ತಿಯನ್ನು ಮುಟ್ಟಲೂ ಜನ ಹಿಂದೇಟು ಹಾಕಿದ್ದಾರೆ. ಮುಕ್ಕಾಲು ಗಂಟೆ […]
ಬೆಂಗಳೂರು: ಫಿಟ್ಸ್ ಬಂದು ಆಟೋ ಚಾಲಕ ರಸ್ತೆಯಲ್ಲೇ ಕುಸಿದು ಬಿದ್ದ ಘಟನೆ ನಗರದ ಮಲ್ಲೇಶ್ವರಂನಲ್ಲಿ ನಡೆದಿದೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಫಿಟ್ಸ್ ಬಂದು ಆಟೋ ಡ್ರೈವರ್ ನಡು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದಂತಹ ಮನ ಕಲಕುವ ಘಟನೆ ನಡೆದಿದೆ. ಆಟೋ ಡ್ರೈವರ್ ಫಿಟ್ಸ್ ಬರೋಕು ಮೊದಲೇ ಚೆನ್ನಾಗಿ ಕುಡಿದಿದ್ದ ಎಂದೂ ಹೇಳಲಾಗುತ್ತಿದೆ. ಫಿಟ್ಸ್ ಬಂದು ರಸ್ತೆಯಲ್ಲಿ ಬಿದ್ದು ಒದ್ದಾಡಿದರೂ ಯಾರೂ ವ್ಯಕ್ತಿಯ ಸಹಾಯಕ್ಕೆ ಬಂದಿಲ್ಲ.
ಕೊರೊನಾ ಭೀತಿಯಿಂದ ವ್ಯಕ್ತಿಯನ್ನು ಮುಟ್ಟಲೂ ಜನ ಹಿಂದೇಟು ಹಾಕಿದ್ದಾರೆ. ಮುಕ್ಕಾಲು ಗಂಟೆ ತಡವಾಗಿ ಆಂಬುಲೆನ್ಸ್ ಸ್ಥಳಕ್ಕೆ ಬಂದಿದೆ. ಆದರೆ ವಿಪರ್ಯಾಸ ಅಂದ್ರೆ ಆಂಬುಲೆನ್ಸ್ ಬಂದರೂ ಪೊಲೀಸರು ಬಾರದ ಹಿನ್ನೆಲೆಯಲ್ಲಿ ಆಟೋ ಡ್ರೈವರ್ನ ಶಿಫ್ಟ್ ಮಾಡಲು ಸಿಬ್ಬಂದಿ ಹಿಂದೇಟು ಹಾಕಿದ್ದಾರೆ. ಕೊನೆಗೆ ಟಿವಿ9 ಕ್ಯಾಮರಾ ಕಂಡ ನಂತರ ಆಂಬುಲೆನ್ಸ್ಗೆ ಶಿಫ್ಟ್ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
Published On - 11:32 am, Tue, 14 July 20