ರಾಜಧಾನಿಯಲ್ಲಿ ಕೊರೊನಾಗೆ ಪಿಎಸ್‌ಐ ಬಲಿ
ಬೆಂಗಳೂರು: ಕಿಲ್ಲರ್ ಕೋವಿಡ್ಗೆ ಕೊರೊನಾ ವಾರಿಯರ್ನಂತೆ ಕಾರ್ಯ ನಿರ್ವಹಿಸುತ್ತಿದ್ದ 59 ವರ್ಷದ ಪಿಎಸ್‌ಐ ಬಲಿಯಾಗಿದ್ದಾರೆ. ಭಾನುವಾರ ಚಿಕಿತ್ಸೆಗೆ ಎಂದು ಅತ್ತಿಬೆಲೆಯ ಸಾಯಿ ಆಸ್ಪತ್ರೆಗೆ ದಾಖಲಾಗಿದ್ರು. ಆದರೆ ಚಿಕಿತ್ಸೆ ಫಲಿಸದೆ ಕೊರೊನಾಗೆ ಬಲಿಯಾಗಿದ್ದಾರೆ. ಇವರು ಬೆಂಗಳೂರು ಕಂಟ್ರೋಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಕಳೆದ ಹಲವು ದಿನಗಳಿಂದ ಕರ್ತವ್ಯಕ್ಕೆ ಹಾಜಾರಗಿರಲಿಲ್ಲ. ನಗರದಲ್ಲಿ ಇದುವರೆಗೆ ಏಳು ಪೊಲೀಸರು ಕೊರೊನದಿಂದ ಮೃತಪಟ್ಟಿದ್ದಾರೆ. ಒಟ್ಟು 578 ಪೊಲೀಸರಿಗೆ ಸೋಂಕು ತಗುಲಿದೆ. 732 ಜನ ಪೊಲೀಸರು ಕ್ವಾರಂಟೈನ್ನಲ್ಲಿದ್ದಾರೆ. ಐವತ್ತು ವರ್ಷ ಮೇಲ್ಪಟ್ಟ ಪೊಲೀಸರಿಗೆ ಮನೆಯಿಂದ ಕರ್ತವ್ಯ […]
ಬೆಂಗಳೂರು: ಕಿಲ್ಲರ್ ಕೋವಿಡ್ಗೆ ಕೊರೊನಾ ವಾರಿಯರ್ನಂತೆ ಕಾರ್ಯ ನಿರ್ವಹಿಸುತ್ತಿದ್ದ 59 ವರ್ಷದ ಪಿಎಸ್‌ಐ ಬಲಿಯಾಗಿದ್ದಾರೆ. ಭಾನುವಾರ ಚಿಕಿತ್ಸೆಗೆ ಎಂದು ಅತ್ತಿಬೆಲೆಯ ಸಾಯಿ ಆಸ್ಪತ್ರೆಗೆ ದಾಖಲಾಗಿದ್ರು. ಆದರೆ ಚಿಕಿತ್ಸೆ ಫಲಿಸದೆ ಕೊರೊನಾಗೆ ಬಲಿಯಾಗಿದ್ದಾರೆ. ಇವರು ಬೆಂಗಳೂರು ಕಂಟ್ರೋಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಕಳೆದ ಹಲವು ದಿನಗಳಿಂದ ಕರ್ತವ್ಯಕ್ಕೆ ಹಾಜಾರಗಿರಲಿಲ್ಲ.
ನಗರದಲ್ಲಿ ಇದುವರೆಗೆ ಏಳು ಪೊಲೀಸರು ಕೊರೊನದಿಂದ ಮೃತಪಟ್ಟಿದ್ದಾರೆ. ಒಟ್ಟು 578 ಪೊಲೀಸರಿಗೆ ಸೋಂಕು ತಗುಲಿದೆ. 732 ಜನ ಪೊಲೀಸರು ಕ್ವಾರಂಟೈನ್ನಲ್ಲಿದ್ದಾರೆ. ಐವತ್ತು ವರ್ಷ ಮೇಲ್ಪಟ್ಟ ಪೊಲೀಸರಿಗೆ ಮನೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿತ್ತು. ಹೀಗಾಗಿ ಮೃತ ಪಿಎಸ್‌ಐ ಕಳೆದ ಹಲವು ದಿನಗಳಿಂದ ಮನೆಯಲ್ಲಿ ಇದ್ದರು. ಸೋಂಕಿತನ ಮೂಲ ಎಲ್ಲಿಯದ್ದು ಎಂಬುದು ಪತ್ತೆಯಾಗಿಲ್ಲ.