2nd PUC Result 2020: ಶೇ 69.20 Freshers ಪಾಸ್, ಬಾಲಕಿಯರೇ ಮೇಲುಗೈ
ಬೆಂಗಳೂರು: ವಿಳಂಬವಾಗಿ ನಡೆದ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇಕಡಾ 61.80 ಫಲಿತಾಂಶ ಬಂದಿದೆ. ಜೊತೆಗೆ, ಕಳೆದ ವರ್ಷಕ್ಕಿಂತ ಈ ಸಲ ಹೆಚ್ಚು ಪ್ರಮಾಣದಲ್ಲಿ ಫ್ರೆಶರ್ಸ್ ಪಾಸ್ ಆಗಿದ್ದು ಈ ಬಾರಿ ಶೇಕಡಾ 69.20% ಮಂದಿ ಫ್ರೆಶರ್ಸ್ ತೇರ್ಗಡೆ ಆಗಿದ್ದಾರೆ. ಕಳೆದ ವರ್ಷ ಇದರ ಪ್ರಮಾಣ ಶೇಕಡಾ 68.68% ಆಗಿತ್ತು. 2ನೇ ಪಿಯು ರಿಸಲ್ಟ್ ಬಿಡುಗಡೆ ಮಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ವರ್ಷ ಒಟ್ಟು 6,75,277 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರ್ […]
ಬೆಂಗಳೂರು: ವಿಳಂಬವಾಗಿ ನಡೆದ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇಕಡಾ 61.80 ಫಲಿತಾಂಶ ಬಂದಿದೆ. ಜೊತೆಗೆ, ಕಳೆದ ವರ್ಷಕ್ಕಿಂತ ಈ ಸಲ ಹೆಚ್ಚು ಪ್ರಮಾಣದಲ್ಲಿ ಫ್ರೆಶರ್ಸ್ ಪಾಸ್ ಆಗಿದ್ದು ಈ ಬಾರಿ ಶೇಕಡಾ 69.20% ಮಂದಿ ಫ್ರೆಶರ್ಸ್ ತೇರ್ಗಡೆ ಆಗಿದ್ದಾರೆ. ಕಳೆದ ವರ್ಷ ಇದರ ಪ್ರಮಾಣ ಶೇಕಡಾ 68.68% ಆಗಿತ್ತು.
2ನೇ ಪಿಯು ರಿಸಲ್ಟ್ ಬಿಡುಗಡೆ ಮಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ವರ್ಷ ಒಟ್ಟು 6,75,277 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರ್ ಆಗಿದ್ರು ಎಂದು ತಿಳಿಸಿದ್ದಾರೆ. ಪರೀಕ್ಷೆಗೆ ಹಾಜರಾದವರಲ್ಲಿ 5,56,267 ವಿದ್ಯಾರ್ಥಿಗಳು ಫ್ರೆಶರ್ಸ್ ಆಗಿ ಪರೀಕ್ಷೆ ಬರೆದಿದ್ದಾರೆ. ಇದೀಗ, ಅವರಲ್ಲಿ 3,84,947 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ.
ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು ಶೇಕಡಾ 68.73 ರಷ್ಟು ರಿಸಲ್ಟ್ ಗಳಿಸಿದ್ದಾರೆ. ಬಾಲಕರು ಈ ಬಾರಿ ಶೇಕಡಾ 54.77 ರಷ್ಟು ರಿಸಲ್ಟ್ ಗಳಿಸಿದ್ದಾರೆ.
Published On - 12:04 pm, Tue, 14 July 20