
ಮಡಿಕೇರಿ: ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಹೇಳಿಕೆ ನೀಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಕೃಷಿ ಸಚಿವರು ಇಂತಹ ಹೇಳಿಕೆಯನ್ನು ನೀಡುವ ಮೂಲಕ ರೈತರನ್ನು ಲೇವಡಿ ಮಾಡಿದ್ದಾರೆ ಎಂದು ಕೆಲವೆಡೆ ಆರೋಪ ವ್ಯಕ್ತವಾಗಿದೆ. ಬಿ.ಸಿ. ಪಾಟೀಲ್ ಹೇಳಿಕೆಗೆ ವಿರೋಧ ಆರಂಭವಾಗುತ್ತಿದ್ದಂತೆಯೇ ಅವರ ಪುತ್ರಿ ಸೃಷ್ಟಿ ಪಾಟೀಲ್ ತಂದೆಯ ಬೆನ್ನಿಗೆ ನಿಂತಿದ್ದಾರೆ.
ಯಾರೇ ಆತ್ಮಹತ್ಯೆ ಮಾಡಿಕೊಂಡರೂ ಅದು ಹೇಡಿತನದ ಕೆಲಸ. ಕೃಷಿ ಸಚಿವರು ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿ ಅಂತ ಹೇಳಿರುವುದರಲ್ಲಿ ತಪ್ಪೇನಿದೆ. ಜೀವ ಮತ್ತು ಜೀವನ ಇರೋದೇ ಒಂದು. ಇದ್ದು ಜಯಿಸಬೇಕೇ ಹೊರತು ಆತ್ಮಹತ್ಯೆಯನ್ನು ಮಾಡಿಕೊಳ್ಳುವುದು ಸರಿ ಅಲ್ಲ. ಅವರು ರೈತರಾಗಲಿ ಅಥವಾ ಬೇರೆ ಯಾರೇ ಆಗಲಿ ಆತ್ಮಹತ್ಯೆಗೆ ಶರಣಾದಾಗ ಅವರ ಹೆಂಡತಿ ಮಕ್ಕಳು ಹಾಗೂ ಸಂಬಂಧಿಕರ ಗತಿ ಏನು ಎಂದು ಟ್ವೀಟ್ ಮಾಡುವ ಮೂಲಕ ಅಪ್ಪನ ಪರ ಬ್ಯಾಟಿಂಗ್ ಮಾಡಿದ್ದಾರೆ.
@bcpatilkourava ಅವರು ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿ ಅಂತ ಹೇಳಿರುವುದರಲ್ಲಿ ತಪ್ಪೇನಿದೆ. ಜೀವ ಮತ್ತು ಜೀವನ ಇರೋದೇ ಒಂದು. ಇದ್ದು ಜಯಸಬೇಕು ಹೊರತು ಆತ್ಮಹತ್ಯೆಯನ್ನು ಮಾಡಿಕೊಳ್ಳುವುದು ಸರಿ ಅಲ್ಲ. ಅವರು ರೈತರಾಗಲಿ ಅಥವಾ ಬೇರೆ ಯಾರೇ ಆಗಲಿ ಆತ್ಮಹತ್ಯೆಗೆ ಶರಣಾದಾಗ ಅವರ ಹೆಂಡತಿ ಮಕ್ಕಳು ಹಾಗೂ ಸಂಬಂಧಿಕರ ಗತಿ ಏನು???
— Shrusti Patil (@shrustibcpatil) December 3, 2020
ಬಿ.ಸಿ. ಪಾಟೀಲ್ ಹೇಳಿಕೆಯನ್ನು ವಿವಾದ ಮಾಡಿದ ಕಾರಣಕ್ಕೆ ಕೆಲ ಮಾಧ್ಯಮಗಳ ಮೇಲೆ ಕಿಡಿಕಾರಿರುವ ಸೃಷ್ಟಿ ಪಾಟೀಲ್, ಟ್ವಿಟರ್ನಲ್ಲಿ ಮೇಲಿನಂತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಆತ್ಮಹತ್ಯೆ ಮಾಡಿಕೊಳ್ಳೋ ರೈತರು ಹೇಡಿಗಳು.. ಹೆಂಡತಿ, ಮಕ್ಕಳನ್ನ ನೋಡಿಕೊಳ್ಳಲಾರದವನು ಹೇಡಿ’
Published On - 4:54 pm, Thu, 3 December 20