ಮಳೆರಾಯನ ದಯೆಯಿಂದ ರಾಜ್ಯದಲ್ಲಿ ಶುದ್ಧ ಗಾಳಿ: ಬೆಂಗಳೂರಿನಲ್ಲಿ ಉತ್ತಮ ಶ್ರೇಣಿ, ಮೈಸೂರು, ಮಂಡ್ಯದಲ್ಲಿ ಅತ್ಯಂತ ಸ್ವಚ್ಛ ವಾತಾವರಣ

ನವೆಂಬರ್ 26 ರಂದು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 'ಉತ್ತಮ'ವಾಗಿದೆ. ಮಳೆ, ಮೋಡ ಕವಿದ ವಾತಾವರಣದಿಂದಾಗಿ ಬೆಂಗಳೂರು ಸೇರಿದಂತೆ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗಾಳಿ ಶುದ್ಧವಾಗಿದೆ. CPCB ದತ್ತಾಂಶದ ಪ್ರಕಾರ, ಬೆಂಗಳೂರು AQI 18-33ರಷ್ಟಿದ್ದು, ಮೈಸೂರು, ಮಂಡ್ಯ ಜಿಲ್ಲೆಗಳು ಅತ್ಯಂತ ಸ್ವಚ್ಛ ಗಾಳಿ ಹೊಂದಿವೆ. ಕೆಲವು ಕರಾವಳಿ ಮತ್ತು ಗಡಿ ಪ್ರದೇಶಗಳಲ್ಲಿ ಮಾತ್ರ 'ಸಾಧಾರಣ' AQI ದಾಖಲಾಗಿದೆ.

ಮಳೆರಾಯನ ದಯೆಯಿಂದ ರಾಜ್ಯದಲ್ಲಿ ಶುದ್ಧ ಗಾಳಿ: ಬೆಂಗಳೂರಿನಲ್ಲಿ ಉತ್ತಮ ಶ್ರೇಣಿ, ಮೈಸೂರು, ಮಂಡ್ಯದಲ್ಲಿ ಅತ್ಯಂತ ಸ್ವಚ್ಛ ವಾತಾವರಣ
ವಾಯು ಗುಣಮಟ್ಟ (ಬೆಂಗಳೂರು)
Image Credit source: Tv9 kannada

Updated on: Nov 26, 2026 | 6:59 AM

ಬೆಂಗಳೂರು, ನ.26: ರಾಜ್ಯದ ಹಲವೆಡೆ ಸುರಿಯುತ್ತಿರುವ ತುಂತುರು ಮಳೆ, ಮೋಡ ಕವಿದ ವಾತಾವರಣ ಹಾಗೂ ತೇವಾಂಶಭರಿತ ಗಾಳಿಯ ಪರಿಣಾಮವಾಗಿ ಇಂದು (ನವೆಂಬರ್ 26) ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಅತ್ಯುತ್ತಮವಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ನೈಜ-ಸಮಯದ ದತ್ತಾಂಶಗಳ ಪ್ರಕಾರ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಉತ್ತಮ (Good: 0–50) ಶ್ರೇಣಿಯಲ್ಲಿದೆ.

ಬೆಂಗಳೂರಿನ ಸರಾಸರಿ AQI ಇಂದು ಬೆಳಗ್ಗೆ 18 ರಿಂದ 33ರ ನಡುವೆ ದಾಖಲಾಗಿದ್ದು, ಇದು ‘ಉತ್ತಮ’ (Good) ವರ್ಗಕ್ಕೆ ಸೇರುತ್ತದೆ. ಗಾಳಿಯಲ್ಲಿ ಸೂಕ್ಷ್ಮ ಧೂಳಿನ ಕಣಗಳಾದ PM2.5 ಪ್ರಮಾಣ 5.9 ರಿಂದ ಹಾಗೂ PM10 ಪ್ರಮಾಣ ಮಟ್ಟದಲ್ಲಿದ್ದು, ಹೊರಾಂಗಣ ಚಟುವಟಿಕೆಗಳಿಗೆ ಸಂಪೂರ್ಣ ಸುರಕ್ಷಿತವಾಗಿದೆ. ಜಯನಗರ 5ನೇ ಬ್ಲಾಕ್ (33 AQI) ಮತ್ತು ಪೀಣ್ಯ (28 AQI) ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ಗಾಳಿ ಅತ್ಯಂತ ಶುದ್ಧವಾಗಿದೆ. ವಾಹನ ದಟ್ಟಣೆ ಹೆಚ್ಚಿರುವ ಸಿಲ್ಕ್ ಬೋರ್ಡ್ ಜಂಕ್ಷನ್ ಸುತ್ತಮುತ್ತ ಮಾತ್ರ 72 AQI (ಸಾಧಾರಣ – Moderate) ದಾಖಲಾಗಿದೆ.

Loading...

ಮೈಸೂರು (9–23 AQI), ಮಂಡ್ಯ (10 AQI) ಹಾಗೂ ಚಾಮರಾಜನಗರ (26 AQI) ಜಿಲ್ಲೆಗಳು ರಾಜ್ಯದಲ್ಲೇ ಅತ್ಯಂತ ಸ್ವಚ್ಛ ಗಾಳಿ ಹೊಂದಿರುವ ಪ್ರದೇಶಗಳಾಗಿ ದಾಖಲಾಗಿವೆ. ಬೆಂಗಳೂರು ನಗರ (18–33), ಬೆಂಗಳೂರು ಗ್ರಾಮಾಂತರ (25–35), ರಾಮನಗರ (30–38), ಚಿಕ್ಕಬಳ್ಳಾಪುರ (12–26), ಕೋಲಾರ (25), ತುಮಕೂರು (30–40), ಹಾಸನ (12–42), ಚಿಕ್ಕಮಗಳೂರು (30–40), ಶಿವಮೊಗ್ಗ (35–42) ಹಾಗೂ ದಾವಣಗೆರೆ (24) ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಅತ್ಯುತ್ತಮವಾಗಿದೆ.

ಗದಗ (25), ಬಾಗಲಕೋಟೆ (27), ವಿಜಯಪುರ (25), ಧಾರವಾಡ (29), ಹುಬ್ಬಳ್ಳಿ (43), ಬೆಳಗಾವಿ (46), ಹಾವೇರಿ (46), ಚಿತ್ರದುರ್ಗ (30–38) ಹಾಗೂ ಬಳ್ಳಾರಿ-ವಿಜಯನಗರ (11–35) ಜಿಲ್ಲೆಗಳಲ್ಲಿ ಶುದ್ಧ ಗಾಳಿ ದಾಖಲಾಗಿದೆ. ರಾಯಚೂರು (26), ಯಾದಗಿರಿ (39), ಕಲಬುರಗಿ (48) ಹಾಗೂ ಕೊಪ್ಪಳ (35–45) ಜಿಲ್ಲೆಗಳಲ್ಲಿಯೂ ವಾಯು ಗುಣಮಟ್ಟ ‘ಉತ್ತಮ’ ಶ್ರೇಣಿಯಲ್ಲಿದೆ.

ಇದನ್ನೂ ಓದಿ: ರಾಜ್ಯದ ಹಲವೆಡೆ ಮುಂದುವರಿದ ಮಳೆ: ಇಂದು ಬೆಂಗಳೂರು, ಕರಾವಳಿ ಸೇರಿ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

ಉತ್ತರ ಕನ್ನಡದ ಕಾರವಾರ (63 AQI), ದಕ್ಷಿಣ ಕನ್ನಡದ ಮಂಗಳೂರು (59 AQI), ಉಡುಪಿ (50–55 AQI) ಹಾಗೂ ಕೊಡಗಿನ ಮಡಿಕೇರಿ (52 AQI) ಭಾಗಗಳಲ್ಲಿ ಗಾಳಿಯ ಗುಣಮಟ್ಟ ‘ಸಾಧಾರಣ’ ಶ್ರೇಣಿಯಲ್ಲಿದೆ. ಬೀದರ್ ನಗರದಲ್ಲಿ 57 AQI ದಾಖಲಾಗಿದ್ದು, ಗಡಿ ಭಾಗದ ಔರಾದ್ (100–105 AQI) ಹಾಗೂ ಭಾಲ್ಕಿ (96–102 AQI) ಸುತ್ತಮುತ್ತ ಮಾತ್ರ ವಾಯು ಗುಣಮಟ್ಟ ಸಾಧಾರಣದಿಂದ ಕೊಂಚ ಕಳಪೆ ಮಟ್ಟಕ್ಕೆ ತಲುಪಿದೆ. ಉಸಿರಾಟದ ಸಮಸ್ಯೆ ಇರುವವರು ಇಲ್ಲಿ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us