AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರೈನ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ 11 ವರ್ಷದ ಬಾಲಕಿಯ ಕೊನೆಯಾಸೆ ಏನು ಗೊತ್ತಾ? ರಾಜ್ಯದ ಆ ಮೂವರನ್ನು ಭೇಟಿಯಾಗಬೇಕು

ತುಮಕೂರಿನ 11ರ ಯೋಗಿತಾ ಮಾರಕ ಬ್ರೈನ್ ಕ್ಯಾನ್ಸರ್‌ನ 4ನೇ ಹಂತದಲ್ಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡುವ ಆಸೆ ಹೊಂದಿದ್ದಾಳೆ. ಜಪಾನ್ ಪ್ರವಾಸದಲ್ಲಿದ್ದರೂ ಯೋಗಿತಾ ಮನವಿಗೆ ಸ್ಪಂದಿಸಿದ ಸಿಎಂ, ವಿಡಿಯೋ ಕಾಲ್ ಮೂಲಕ ಧೈರ್ಯ ತುಂಬಿದರು. ಶೀಘ್ರದಲ್ಲೇ ಖುದ್ದು ಭೇಟಿಯಾಗುವ ಭರವಸೆ ನೀಡಿದ್ದು, ಬಾಲಕಿಯ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಬ್ರೈನ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ 11 ವರ್ಷದ ಬಾಲಕಿಯ ಕೊನೆಯಾಸೆ ಏನು ಗೊತ್ತಾ? ರಾಜ್ಯದ ಆ ಮೂವರನ್ನು ಭೇಟಿಯಾಗಬೇಕು
ತುಮಕೂರು ಯೋಗಿತಾ
ಜಗದೀಶ ಬಿ.
| Edited By: |

Updated on: Nov 25, 2026 | 9:55 PM

Share

ತುಮಕೂರು, ನ.25: ಆಡಿ ನಲಿಯಬೇಕಾದ 11ನೇ ವಯಸ್ಸಿನಲ್ಲಿ ನಾಲ್ಕನೇ ಹಂತದ ಮಾರಕ ಬ್ರೈನ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಪುಟ್ಟ ಬಾಲಕಿ ಯೋಗಿತಾಳ ಮನದಾಳದ ಆಸೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾವನಾತ್ಮಕವಾಗಿ ಸ್ಪಂದಿಸಿದ್ದಾರೆ. ದೂರದ ಜಪಾನ್ ಪ್ರವಾಸದಲ್ಲಿದ್ದರೂ ಬಾಲಕಿಯ ಹಂಬಲದ ವಿಷಯ ತಿಳಿಯುತ್ತಿದ್ದಂತೆಯೇ ವಿಡಿಯೋ ಕಾಲ್ ಮೂಲಕ ಯೋಗಿತಾ ಹಾಗೂ ಆಕೆಯ ಪೋಷಕರೊಂದಿಗೆ ಮಾತನಾಡಿದ ಸಿಎಂ, ಧೈರ್ಯ ತುಂಬುವುದರ ಜೊತೆಗೆ ವಾಪಸ್ ಬಂದ ತಕ್ಷಣ ಖುದ್ದಾಗಿ ಭೇಟಿಯಾಗುವ ಭರವಸೆ ನೀಡಿದ್ದಾರೆ.

ಗುಬ್ಬಿ ತಾಲೂಕಿನ ಅರಿವೇಸಂದ್ರ ಗ್ರಾಮದ ಮಂಜುನಾಥ್ ಅವರ ಪುತ್ರಿಯಾದ 11 ವರ್ಷದ ಯೋಗಿತಾ, 5ನೇ ತರಗತಿಯ ವಿದ್ಯಾರ್ಥಿನಿ. ಒಂದು ವರ್ಷದ ಹಿಂದೆ ಕಾಣಿಸಿಕೊಂಡ ಬ್ರೈನ್ ಕ್ಯಾನ್ಸರ್ ಇದೀಗ ನಾಲ್ಕನೇ ಹಂತ ತಲುಪಿದ್ದು, ಮಗಳನ್ನು ಉಳಿಸಿಕೊಳ್ಳಲು ಪೋಷಕರು ಇನ್ನಿಲ್ಲದ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಯೋಗಿತಾಗೆ ಎಂಟು ಬಾರಿ ಕೀಮೋಥೆರಪಿ ಚಿಕಿತ್ಸೆ ಕೊಡಿಸಲಾಗಿದೆ.

ಚಿಕಿತ್ಸೆಯ ತೀವ್ರ ನೋವಿನ ನಡುವೆಯೂ ಕಳೆದ ಒಂದು ತಿಂಗಳಿಂದ ಯೋಗಿತಾ ತನ್ನ ಪೋಷಕರ ಬಳಿ ಒಂದು ಆಸೆಯನ್ನು ವ್ಯಕ್ತಪಡಿಸುತ್ತಿದ್ದಾಳೆ. ತನ್ನ ಕೊನೆಯ ಸಮಯಕ್ಕೂ ಮುನ್ನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರನ್ನು ಭೇಟಿಯಾಗಬೇಕು, ಅದರಲ್ಲೂ ಡಿ.ಕೆ. ಶಿವಕುಮಾರ್ ಅವರನ್ನು ಕಣ್ಣಾರೆ ಕಾಣಬೇಕು ಎಂದು ಹಂಬಲಿಸುತ್ತಿದ್ದಾಳೆ. ಆದರೆ, ಯಾಕೆ ಈ ಮೂವರು ನಾಯಕರನ್ನೇ ಭೇಟಿಯಾಗಬೇಕು ಎಂಬ ಕಾರಣವನ್ನು ಬಾಲಕಿ ಬಿಟ್ಟುಕೊಟ್ಟಿಲ್ಲ; “ಅವರ ಎದುರಲ್ಲೇ ನನ್ನ ಮನದ ಮಾತು ಹೇಳುತ್ತೇನೆ” ಎನ್ನುತ್ತಿರುವ ಮಗಳ ಮಾತು ಕೇಳಿ ಪೋಷಕರು ಕಣ್ಣೀರಾಗಿದ್ದಾರೆ.

ಇದನ್ನೂ ಓದಿ: ತಿಪ್ಪೆಯಲ್ಲಿ ಕಸ ಹಾಕುವ ವಿಚಾರಕ್ಕೆ ಜಗಳ: ಮೊಬೈಲ್‌ನಲ್ಲಿ ಸೆರೆಯಾಯಿತು ಭೀಕರ ದೃಶ್ಯ

ಜಪಾನ್‌ನಿಂದಲೇ ವಿಡಿಯೋ ಕಾಲ್ ಮಾಡಿದ ಡಿಕೆಶಿ; ಖುದ್ದು ಭೇಟಿ ಮಾಡುವ ಭರವಸೆ:

ವಿಷಯ ತಿಳಿದ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಬಾಲಕಿಯ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಕುಣಿಗಲ್ ಶಾಸಕ ಡಾ. ರಂಗನಾಥ್ ಹಾಗೂ ಎಸ್.ಆರ್. ಶ್ರೀನಿವಾಸ್ ಮೂಲಕ ಬಾಲಕಿಯ ಆಸೆಯ ವಿಚಾರ ಜಪಾನ್ ಪ್ರವಾಸದಲ್ಲಿದ್ದ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಲುಪಿದೆ. ತಕ್ಷಣವೇ ಜಪಾನ್‌ನಿಂದ ವಿಡಿಯೋ ಕಾಲ್ ಮಾಡಿದ ಡಿ.ಕೆ. ಶಿವಕುಮಾರ್, ಯೋಗಿತಾಳ ಆರೋಗ್ಯ ವಿಚಾರಿಸಿ ಪೋಷಕರಿಗೂ ಸಾಂತ್ವನ ಹೇಳಿದರು. “ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡ. ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ಈ ಕಷ್ಟದ ಸಮಯದಲ್ಲಿ ನಿಮ್ಮ ಜೊತೆ ನಾವಿದ್ದೇವೆ, ಭಗವಂತ ಇದ್ದಾನೆ, ಎಲ್ಲವೂ ಒಳ್ಳೆಯದಾಗುತ್ತದೆ” ಎಂದು ಧೈರ್ಯ ತುಂಬಿದ್ದಾರೆ. ಅಲ್ಲದೆ, ಜಪಾನ್ ಪ್ರವಾಸ ಮುಗಿಸಿ ವಾಪಸ್ ಬಂದ ತಕ್ಷಣ ಬಾಲಕಿಯನ್ನು ಖುದ್ದಾಗಿ ಭೇಟಿಯಾಗುವುದಾಗಿ ಭರವಸೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರಿಗೆ ನಟ ಅವಿನಾಶ್ ಬೆಂಬಲ
ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರಿಗೆ ನಟ ಅವಿನಾಶ್ ಬೆಂಬಲ
ಮತ್ತಿಬ್ಬರು ಆಶಾ ಕಾರ್ಯಕರ್ತೆಯರು ಆಸ್ಪತ್ರೆಗೆ:ಈವರೆಗೆ 20 ಮಂದಿ ಅಸ್ವಸ್ಥ
ಮತ್ತಿಬ್ಬರು ಆಶಾ ಕಾರ್ಯಕರ್ತೆಯರು ಆಸ್ಪತ್ರೆಗೆ:ಈವರೆಗೆ 20 ಮಂದಿ ಅಸ್ವಸ್ಥ
ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ
ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು