AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಯ್ ಕುಲಕರ್ಣಿ ಕೇಸ್: ಹೈಕೋರ್ಟ್ ಜಾಮೀನು ಆದೇಶ ರದ್ದಿಗೆ ಸುಪ್ರೀಂಕೋರ್ಟ್ ಕೊಟ್ಟ ಕಾರಣಗಳು ಹೀಗಿವೆ

ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಯವರ ರಾಜಕೀಯದ ಪವರ್, ಅಧಿಕಾರದ ಬಲ ಎಲ್ಲವೂ ಇವತ್ತು ಸುಪ್ರೀಂಕೋರ್ಟ್‌ನ ಒಂದೇ ಒಂದು ತೀರ್ಪಿನಿಂದ ತಲೆಕೆಳಗಾಗಿದೆ. ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕೇಸ್‌ನಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸರ್ವೋಚ್ಚ ನ್ಯಾಯಾಲಯ ಮರ್ಮಾಘಾತ ನೀಡಿದೆ. ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಪಡಿಸಿರುವ ಸುಪ್ರೀಂಕೋರ್ಟ್, ಎರಡು ವಾರಗಳಲ್ಲಿ ಶರಣಾಗುವಂತೆ ಖಡಕ್ ಆದೇಶ ಹೊರಡಿಸಿದೆ. ಇನ್ನು ಹೈಕೋರ್ಟ್ ಆದೇಶ ರದ್ದಿಗೆ ಸುಪ್ರೀಂಕೋರ್ಟ್ ಹಲವು ಕಾರಣಗಳನ್ನು ನೀಡಿದ್ದು, ಈ ಕೆಳಗಿನಂತಿದೆ ನೋಡಿ.

ವಿನಯ್ ಕುಲಕರ್ಣಿ ಕೇಸ್: ಹೈಕೋರ್ಟ್ ಜಾಮೀನು ಆದೇಶ ರದ್ದಿಗೆ ಸುಪ್ರೀಂಕೋರ್ಟ್ ಕೊಟ್ಟ ಕಾರಣಗಳು ಹೀಗಿವೆ
Vijay Kulkarni
ರಮೇಶ್​ ಎಮ್​.
| Edited By: |

Updated on:Nov 25, 2026 | 8:38 PM

Share

ಬೆಂಗಳೂರು, ನವೆಂಬರ್ 25: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಹೈಕೋರ್ಟ್ ಜಾಮೀನಿನ ಮೇಲೆ ಹೊರಗಿದ್ದ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ.ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಪಡಿಸಿರುವ ಸುಪ್ರೀಂಕೋರ್ಟ್, ಎರಡು ವಾರಗಳಲ್ಲಿ ಶರಣಾಗುವಂತೆ ಇಂದು (ನವೆಂಬರ್ 25) ಆದೇಶ ಹೊರಡಿಸಿದೆ. ಇತ್ತ ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆ ಅತ್ತ ಶಾಸಕ ಸ್ಥಾನಕ್ಕೂ ಕುತ್ತು ಬಂದಿದೆ. ಇನ್ನೊಂದೆಡೆ ಧಾರವಾಡದ ವಿನಯ್ ನಿವಾಸದಲ್ಲಿ ಕಣ್ಣೀರ ಕೋಡಿಯೇ ಹರಿದಿದೆ. ಅಭಿಮಾನಿಗಳನ್ನು ತಬ್ಬಿಕೊಂಡು ವಿನಯ್ ಕುಲಕರ್ಣಿ ಕಣ್ಣೀರಿಟ್ಟಿದ್ದಾರೆ.

ಅಂದಹಾಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಗೆ ತಡೆ ನೀಡಿ ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಆದ್ರೆ, ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿಬಿಐ ಹಾಗೂ ಯೋಗೀಶ್ ಗೌಡ ಸಹೋದರ ಗುರುನಾಥ ಗೌಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರ ನಡೆಸಿದ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಚಂದ್ರಶೇಖರ್ ಅವರಿದ್ದ ಸುಪ್ರೀಂಕೋರ್ಟ್ ಪೀಠ, ಸಿಬಿಐ ಅರ್ಜಿ ಪುರಸ್ಕರಿಸಿ ತೀರ್ಪು ನೀಡಿದೆ. ಇನ್ನು ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ರದ್ದುಪಡಿಸಿರೋ ಸುಪ್ರೀಂಕೋರ್ಟ್, ಮುಂದಿನ ಎರಡು ವಾರಗಳಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ವಿನಯ್ ಕುಲಕರ್ಣಿಗೆ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ರದ್ದು; 2 ವಾರಗಳಲ್ಲಿ ಶರಣಾಗಲು ಸುಪ್ರೀಂಕೋರ್ಟ್​ ಸೂಚನೆ

ಹೈಕೋರ್ಟ್​ ರದ್ದತಿಗೆ ಸುಪ್ರೀಂ ಕೊಟ್ಟ ಕಾರಣಗಳೇನು?

ಇನ್ನು ವಿನಯ್ ಕುಲಕರ್ಣಿ ಅವರಿಗೆ ಶಿಕ್ಷೆ ತಡೆ ನೀಡಿ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇನ್ನು ಹೈಕೋರ್ಟ್ ಆದೇಶ ರದ್ದಿಗೆ ಸುಪ್ರೀಂಕೋರ್ಟ್ ಹಲವು ಕಾರಣಗಳನ್ನು ನೀಡಿದ್ದು, ಅವು ಕೆಳಗಿನಂತಿವೆ.

  • ಶಿಕ್ಷೆಗೆ ತಡೆ ನೀಡಿದ ಹೈಕೋರ್ಟ್ ಆದೇಶ ದೋಷಪೂರಿತವಾಗಿದೆ.
  • ಶಾಸಕ ಸ್ಥಾನದಿಂದ ಅನರ್ಹಗೊಳ್ಳುತ್ತಾರೆಂಬ ಕಾರಣಕ್ಕೆ ತಡೆ ಸಮರ್ಥನೀಯವಲ್ಲ
  • ಅಪರಾಧಿಗೆ ಉತ್ತಮ ವಾದ ಯೋಗ್ಯ ಪ್ರಕರಣವಿರುವುದು ಮಾತ್ರವಲ್ಲ, ಅದರಲ್ಲಿ ಯಶಸ್ಸಿನ ಸಾಧ್ಯತೆ ಇದ್ದರೆ ಮಾತ್ರ ಪರಿಗಣಿಸಬೇಕು.
  • ಪ್ರತಿಕೂಲ ಸಾಕ್ಷಿಯಾದ ಯೋಗೀಶ್ ಗೌಡ ಪತ್ನಿ ಹೇಳಿಕೆ ಹೈಕೋರ್ಟ್ ಪರಿಗಣಿಸಿದೆ.
  • ಗಂಭೀರ ಅಪರಾಧಗಳಿಗೆ ಬಲವಾದ ಕಾರಣವಿಲ್ಲದೆ ಶಿಕ್ಷೆ ಅಮಾನತುಗೊಳಿಸಬಾರದು.
  • ವಿಚಾರಣಾ ನ್ಯಾಯಾಲಯದ ಆದೇಶದಲ್ಲಿನ ಲೋಪವೇನೆಂದು ಹೇಳಿಲ್ಲ.
  • ಖುಲಾಸೆಗೊಳ್ಳಬಹುದಾದ ಅಂಶಗಳೇನಿವೆ ಎಂಬುದನ್ನು ತಿಳಿಸಿಲ್ಲ.
  • ಪ್ರಕರಣದ ವಿಚಾರಣೆ ವಿಳಂಬವಾಗಬಹುದೆಂಬುದು ಸೂಕ್ತ ಕಾರಣವಲ್ಲ.
  • ಬೇರೆ ಹೈಕೋರ್ಟ್​​ಗಳಿಗೆ ಹೋಲಿಸಿದರೆ ಕರ್ನಾಟಕ ಹೈಕೋರ್ಟ್​ನಲ್ಲಿ ಮೇಲ್ಮನವಿಗಳ ಸಂಖ್ಯೆ ಕಡಿಮೆಯಿದೆ.
  • ವಿಚಾರಣೆ ವಿಳಂಬ ಸಾಧ್ಯತೆ ಜಾಮೀನಿಗೆ ಅರ್ಹಗೊಳಿಸುವುದಿಲ್ಲ.

ವಿನಯ್ ಕುಲಕರ್ಣಿ ಮುಂದಿರುವ ಹಾದಿ

ವಿನಯ್ ಕುಲಕರ್ಣಿಗೆ ಸದ್ಯಕ್ಕೆ ಸುಪ್ರೀಂ ಕೋರ್ಟ್ ಬಾಗಿಲು ಬಂದ್ ಆಗಲಿದೆ. ಮರುಪರಿಶೀಲನೆ ಅರ್ಜಿ ಸಲ್ಲಿಸಬಹುದಾದರೂ ಅದನ್ನು ಸುಪ್ರೀಂಕೋರ್ಟ್ ಪರಿಗಣಿಸುವ ಸಾಧ್ಯತೆ ಇಲ್ಲ. ಹೈಕೋರ್ಟ್ ನಲ್ಲಿ ಜೀವಾವಧಿ ಶಿಕ್ಷೆ ಪ್ರಶ್ನಿಸಿ ವಿನಯ್ ಕುಲಕರ್ಣಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಬಾಕಿಯಿದೆ. ಹೈಕೋರ್ಟ್ ನಲ್ಲೇ ತಮ್ಮ ಮೇಲ್ಮನವಿಯ ತುರ್ತು ವಿಚಾರಣೆಗೆ ವಿನಯ್ ಮನವಿ ಮಾಡಬಹುದು. ಹೈಕೋರ್ಟ್ ಶೀಘ್ರ ವಿಚಾರಣೆ ನಡೆಸಿ ತೀರ್ಪು ನೀಡಲು ಅವಕಾಶವಿದೆ. ಹೈಕೋರ್ಟ್ ಖುಲಾಸೆಗೊಳಿಸಿದರೆ ವಿನಯ್ ಕುಲಕರ್ಣಿ ಗೆ ರಿಲೀಫ್ ಸಿಗಲಿದೆ. ಆದರೆ ಹೈಕೋರ್ಟ್ ಏನಾದರೂ ಜನಪ್ರತಿನಿಧಿಗಳ ಕೋರ್ಟ್​ ನೀಡಿದ್ದ ಜೀವಾವಧಿ ಶಿಕ್ಷೆಯನ್ನೇ ಎತ್ತಿ ಹಿಡಿದರೆ ಸಂಕಷ್ಟ ಎದುರಾಗಲಿದೆ. ಅಲ್ದೆ ಕುಲಕರ್ಣಿ ಜೈಲಿನಲ್ಲೇ ಮುಂದುವರಿಯಬೇಕಾಗಲಿದೆ. ಆಗ ಸುಪ್ರೀಂ ಕೋರ್ಟ್​ಗೆ ವಿನಯ್ ಕುಲಕರ್ಣಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಅಂತಿಮವಾಗಿ ಸುಪ್ರೀಂಕೋರ್ಟ್ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧರಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:36 pm, Wed, 25 November 26

Follow Us
ರಮೇಶ್​ ಎಮ್​.
ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರಿಗೆ ನಟ ಅವಿನಾಶ್ ಬೆಂಬಲ
ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರಿಗೆ ನಟ ಅವಿನಾಶ್ ಬೆಂಬಲ
ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ
ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ