ಸದನದಲ್ಲಿ ಪೆನ್​ ಡ್ರೈವ್​ ಸದ್ದು: ಸ್ಪೀಕರ್​ ಒಪ್ಪಿದರೆ ಇಲ್ಲೇ ಆಡಿಯೋ ಹಾಕಿಸುತ್ತೇನೆ ಎಂದ ಕುಮಾರಸ್ವಾಮಿ

| Updated By: ವಿವೇಕ ಬಿರಾದಾರ

Updated on: Jul 06, 2023 | 2:38 PM

ಇಂದು ಸದನದಲ್ಲಿ ಕೆ.ಜೆ.ಜಾರ್ಜ್ ಹಾಗೂ ಹೆಚ್​.ಡಿ ಕುಮಾರಸ್ವಾಮಿ ಅವರ ನಡುವೆ ವಾಗ್ವಾದ ನಡೆಯಿತು. ಪೆನ್​​ಡ್ರೈವ್​​ ವಿಚಾರವಾಗಿ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್​​ ಪಕ್ಷ, ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್​​ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಸದನದಲ್ಲಿ ಪೆನ್​ ಡ್ರೈವ್​ ಸದ್ದು: ಸ್ಪೀಕರ್​ ಒಪ್ಪಿದರೆ ಇಲ್ಲೇ ಆಡಿಯೋ ಹಾಕಿಸುತ್ತೇನೆ ಎಂದ ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ
Follow us on

ಬೆಂಗಳೂರು: 6ನೇ ವಿಧಾನಸಭೆಯ ಮೊದಲ ಅಧಿವೇಶನ (Legislature Session) ಆರಂಭವಾಗಿದೆ. ಮೊದಲ ದಿನದ ಅಧಿವೇಶನ ಆರಂಭವಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumarswamy) ಅವರು  ಮುಖ್ಯಮಂತ್ರಿ ಕಚೇರಿ (Chief Minister Office) ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಮುಖ್ಯಮಂತ್ರಿ ಕಚೇರಿಯಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಶಾಸಕರ ಶಿಫಾರಸ್ಸು ತಂದರೇ ಸಾಲದು 30 ಲಕ್ಷ ದುಡ್ಡು ತನ್ನಿ ಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದರು. ಈ ವಿಚಾರವಾಗಿ ಕಾಂಗ್ರೆಸ್ (Congress) ​ನಾಯಕರು ಸಾಕ್ಷಿ ಕೇಳಿದ್ದರು. ಇದಕ್ಕೆ ಶಾಸಕ ಹೆಚ್.ಡಿ ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿ ಮಾಧ್ಯಮಗಳ ಮುಂದೆ ಪೆನ್​​ ಡ್ರೈವ್ (Pen Drive) ತೋರಿಸಿ ಇದರಲ್ಲಿ ವರ್ಗಾವಣೆ ಕುರಿತಾದ ಆಡಿಯೋ ಇದೆ ಎಂದು ಹೇಳಿದ್ದರು. ಈ ವಿಚಾರವನ್ನು ಹೆಚ್​.ಡಿ ಕುಮಾರಸ್ವಾಮಿಯವರು ಸದನದಲ್ಲಿ ಪ್ರಸ್ತಾಪಿಸುತ್ತಿದ್ದಂತೆ ಗದ್ದಲ ಎದ್ದಿತು.

ಹೌದು ವಿಧಾನಸಭೆಯಲ್ಲಿ ಕೆ.ಜೆ.ಜಾರ್ಜ್ ಹಾಗೂ ಹೆಚ್​.ಡಿ ಕುಮಾರಸ್ವಾಮಿ ಅವರ ನಡುವೆ ವಾಗ್ವಾದ ನಡೆಯಿತು. ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಹೆಚ್​ಡಿ ಕುಮಾರಸ್ವಾಮಿಯವರು ಆರೋಪ ಮಾಡಿದರು. ಇದಕ್ಕೆ ಸಚಿವ ಕೆಜೆ ಜಾರ್ಚ್​​ ಅವರು ಪ್ರತ್ಯುತ್ತರ ನೀಡಿ ನನ್ನ ಬಳಿ ಪೆನ್​ಡ್ರೈವ್ ಇದೆ, ಅದರಲ್ಲಿ ಸಾಕ್ಷ್ಯವಿದೆ ಎಂದು ಹೇಳುತ್ತೀರಿ. ನಿಮ್ಮ ಬಳಿ ಯಾವ ಸಾಕ್ಷ್ಯವಿದೆ, ಅದನ್ನು ಸ್ಪೀಕರ್​ಗೆ ನೀಡಿ ಎಂದರು.

ಇದನ್ನೂ ಓದಿ: ಸಿಎಂ ಆಗಿದ್ದಾಗ ವರ್ಗಾವಣೆಯಲ್ಲಿ ಮಕ್ಕಳು ಭಾಗಿ ಆರೋಪ: ಸಾಬೀತಾದರೇ ರಾಜಕೀಯ ನಿವೃತ್ತಿ ಘೋಷಿಸುವೆ ಎಂದ ಹೆಚ್​ಡಿ ಕುಮಾರಸ್ವಾಮಿ

ಇದಕ್ಕೆ ಹೆಚ್​​ಡಿ ಕುಮಾರಸ್ವಾಮಿ “​ಡ್ರೈವ್​ನಲ್ಲಿರುವ ಸಾಕ್ಷ್ಯ ವೀಕ್ಷಣೆಗೆ ಸದನದಲ್ಲಿ ವ್ಯವಸ್ಥೆ ಮಾಡಿ. ಸ್ಪೀಕರ್​ ಒಪ್ಪಿದರೆ ಸದನದಲ್ಲೇ ಪೆನ್​ಡ್ರೈವ್ ಪ್ರದರ್ಶನ ಮಾಡುತ್ತೇನೆ. ಇಲ್ಲೇ ಆಡಿಯೋ ಹಾಕಿಸುತ್ತೇನೆ” ಎಂದರು. ಈ ವೇಳೆ ಹೆಚ್​​.ಡಿ.ಕುಮಾರಸ್ವಾಮಿ ಅವರುಗೆ ಬಿಜೆಪಿ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.

ಅಲ್ಲದೇ ಹೆಚ್​​.ಡಿ ಕುಮಾರಸ್ವಾಮಿಯವರು ಕೆಎಸ್ಆರ್​​ಟಿಸಿ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣವನ್ನು ಪ್ರಸ್ತಾಪಿಸಿದರು. ಆತ್ಮಹತ್ಯೆ ಯತ್ನಕ್ಕೂ ಮುನ್ನ ಬರೆದ ಪತ್ರವನ್ನು ಓದಿದರು. ಈ ವಿಚಾರವಾಗಿಯೂ ಕೆ.ಜೆ ಜಾರ್ಜ ಮತ್ತು ಹೆಚ್​ ಡಿ ಕುಮಾರಸ್ವಾಮಿ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ವರ್ಗಾವಣೆ ದಂಧೆ ​ಮತ್ತು ಚಾಲಕನ ಆತ್ಮಹತ್ಯೆ ಯತ್ನದ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡುವಂತೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಳಿದರು. ಈ ವೇಳೆ ಸಭಾಪತಿ ಯುಟಿ ಖಾದರ್ ಅವರು​ ಸದನವನ್ನು 2:45ಕ್ಕೆ ಮುಂದೂಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:36 pm, Thu, 6 July 23