Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಎಸ್​ಆರ್​ಟಿಸಿ ಬಸ್ ಚಾಲಕ ಆತ್ಮಹತ್ಯೆ ಯತ್ನಕ್ಕೂ ಮುನ್ನ ಬರೆದಿದ್ದ ಡೆತ್​ ನೋಟ್​ ಪತ್ತೆ: ಕೃಷಿ ಸಚಿವರ ಹೆಸರು ಉಲ್ಲೇಖ

ರಾಜ್ಯ ರಾಜಕೀಯದಲ್ಲಿ ನಾಗಮಂಗಲ ಡಿಪೊದ ಕೆಎಸ್​​ಆರ್​​​ಟಿಸಿ ಬಸ್​ ಚಾಲಕನ ಆತ್ಮಹತ್ಯೆಗೆ ಯತ್ನ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸುವ ಮುನ್ನ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಪತ್ರ ಟಿವಿ9 ಡಿಜಿಟಲ್​​ಗೆ ದೊರೆತಿದೆ.

ಕೆಎಸ್​ಆರ್​ಟಿಸಿ ಬಸ್ ಚಾಲಕ ಆತ್ಮಹತ್ಯೆ ಯತ್ನಕ್ಕೂ ಮುನ್ನ ಬರೆದಿದ್ದ ಡೆತ್​ ನೋಟ್​ ಪತ್ತೆ: ಕೃಷಿ ಸಚಿವರ ಹೆಸರು ಉಲ್ಲೇಖ
ಜಗದೀಶ್​ ಪತ್ರ (ಎಡಚಿತ್ರ) ಚಾಲಕ ಜಗದೀಶ್​ (ಬಲಚಿತ್ರ)
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ವಿವೇಕ ಬಿರಾದಾರ

Updated on:Jul 06, 2023 | 1:14 PM

ಮಂಡ್ಯ: ಸದ್ಯ ರಾಜ್ಯ ರಾಜಕೀಯದಲ್ಲಿ ನಾಗಮಂಗಲ (Nagamangala) ಡಿಪೊದ ಕೆಎಸ್​​ಆರ್​​​ಟಿಸಿ (KSRTC) ಬಸ್​ ಚಾಲಕನ ಆತ್ಮಹತ್ಯೆ ಯತ್ನ ಸಾಕಷ್ಟು ಚರ್ಚೆಯಾಗುತ್ತಿದೆ. ಚಾಲಕ ಜಗದೀಶ್ (Driver Jagadish) ಆತ್ಮಹತ್ಯೆಗೆ ಯತ್ನಿಸುವ ಮುನ್ನ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಪತ್ರ ಟಿವಿ9 ಡಿಜಿಟಲ್​​ಗೆ ದೊರೆತಿದೆ. ಪತ್ರದಲ್ಲಿ ತಮ್ಮ ಆತ್ಮಹತ್ಯೆಗೆ ಕಾರಣವೇನೆಂದು ಬರೆದಿದ್ದಾರೆ.

ನನ್ನ ವರ್ಗಾವಣೆಗೆ ಕಾರಣ ಏನೆಂದು ಡಿಪೋ ಮ್ಯಾನೇಜರ್​ಗೆ ಕೇಳಿದೆ. ನಿಯಂತ್ರಣಾಧಿಕಾರಿಗಳು ನಿನ್ನನ್ನು ವರ್ಗಾವಣೆ ಮಾಡಿದ್ದಾರೆ ಎಂದರು. ಅವರನ್ನು ಕೇಳಿದಾಗ ಸಚಿವರ ಆದೇಶದ ಮೇರೆಗೆ ವರ್ಗಾವಣೆ ಅಂದರು. ನನ್ನ ಮೇಲೆ ಸಚಿವರಿಗೆ ಯಾಕಿಷ್ಟು ಕೋಪ ತಿಳಿಯದೆ ನೊಂದಿದ್ದೇನೆ. ಈ ಒತ್ತಡ, ಅವಮಾನ ಸಹಿಸಲು ನನ್ನಿಂದ ಆಗುತ್ತಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಿ. ನನ್ನ ಆತ್ಮಹತ್ಯೆಗೆ ಶಾಸಕರೇ ಕಾರಣ” ಎಂದು ಡೆತ್ ನೋಟ್ ಬರೆದಿದ್ದಾರೆ.

ಕೆಎಸ್​ಆರ್​​ಟಿಸಿ ಚಾಲಕ ಜಗದೀಶ್​ ಪತ್ರ

“ನಾನು ಜಗದೀಶ್​ ಹೆಚ್​​.ಆರ್​ ಚಾಲಕ ಕಮ್​ ನಿರ್ವಾಹಕನಾದ ನಾನು ನಾಗಮಂಗಲ ಘಟಕ ಮಂಡ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ದಿನಾಂಕ 5/07/2023 ರಂದು 83AB ಘಟಕಕ್ಕೆ ಕರ್ತವ್ಯಕ್ಕೆ ನಿಯೋಜಿಸಿದ್ದು, ಎಂದಿನಂತೆ ನಾನು ಘಟಕಕ್ಕೆ ಬಂದಿದ್ದು, 83ABಗೆ ETM ಯಂತ್ರ ಪಡೆದ ನಂತರ AWS ಮಂಜುನಾಥ್​​ ಸರ್​​​​​ರವರು ನನನ್ನು ಭೇಟಿ ಮಾಡಿ ETM ಯಂತ್ರವನ್ನು ವಾಪಸ್​​ ನೀಡುವಂತೆ ಸೂಚಿಸಿ ನಿಮಗೆ ಮದ್ದೂರು ಘಟಕಕ್ಕೆ ವರ್ಗಾವಣೆಗೊಂಡಿದೆ. ನೀವು ಮದ್ದೂರು ಘಟಕದಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿರುತ್ತಾರೆ.

ಇದನ್ನೂ ಓದಿ: ಕೆಎಸ್​ಆರ್​​ಟಿಸಿ ಚಾಲಕ ಆತ್ಮಹತ್ಯೆಗೆ ಯತ್ನ ಪ್ರಕರಣ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಗರಂ

ನಾನು AWS ಅವರನ್ನು ನನ್ನನ್ನು ಏಕಾಏಕಿ ವರ್ಗಾವಣೆ ಮಾಡಲು ಕಾರಣ ಏನು ಎಂದು ಕೇಳಿರುತ್ತೇನೆ. ಅವರು ನನಗೆ ಗೊತ್ತಿಲ್ಲ ನನಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಆದೇಶ ಎಂದು ತಿಳಿಸಿರುತ್ತಾರೆ. ನಂತರ ನಾನು ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ದೂರವಾಣಿ ಮುಖಾಂತರ ಕೇಳಿದಾಗ ಅವರು ನಾಗಮಂಗಲ ತಾಲೂಕಿನ ಶಾಸಕರು ಮಾನ್ಯ ಕೃಷಿ ಸಚಿವರಾದ ಚಲುವರಾಯಸ್ವಾಮಿಯವರ ಆದೇಶದ ಮೇರೆಗೆ ನಿಮ್ಮನ್ನು ವರ್ಗಾವಣೆ ಎಂದು ತಿಳಿಸಿರುತ್ತೇವೆ.

ಆದಕಾರಣ ನನ್ನ ಮೇಲೆ ಸಚಿವರಿಗೆ ಯಾಕಿಷ್ಟು ಕೋಪ ಎಂದು ತಿಳಿಯದೆ ಮಾನಸಿಕವಾಗಿ ನೊಂದು, ಒತ್ತಡ ಮತ್ತು ಅವಮಾನ ಸಹಿಸದೆ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ಇದಕ್ಕೆ ಶಾಸಕರೇ ನೇರ ಹೊಣೆ” ಎಂದು ಪತ್ರ ಬರೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:47 pm, Thu, 6 July 23