ದೆಹಲಿ ಕರ್ನಾಟಕ ಭವನದಲ್ಲಿರುವ ‘ಸೊನಾಟಾ ಗೋಲ್ಡ್ ‘ ಕಾರು ಹರಾಜಿಗೆ ಸರಕಾರ ಆದೇಶ ಹೊರಡಿಸಿದೆ. ‘ಸೊನಾಟ ಗೋಲ್ಡ್ ‘ಕಾರು ಇದು ಕರ್ನಾಟಕ ರಾಜ್ಯದ ರಾಜ್ಯಪಾಲರು ಬಳಸಿರುವ ಸರಕಾರಿ ಕಾರು. ಈ ಹಿಂದೆ ರಾಜ್ಯಪಾಲರಾಗಿದ್ದ ಟಿ.ಎನ್ ಚತುರ್ವೇದಿ ಅವರು ಹೆಚ್ಚಾಗಿ ಬಳಸಿರುವ ಕಾರು ಇದಾಗಿದ್ದು, ಹೆಚ್ಚು ಕಿಲೋ ಮೀಟರ್ ಸಹ ಓಡಿಲ್ಲ. ಅಚ್ಚುಕಟ್ಟಾಗಿ ನಿರ್ವಹಿಸಿರುವ ಕಾರನ್ನು ಈಗ ಹರಾಜಿಗೆ ಇಡಲಾಗಿದೆ. ಸರಕಾರ ಲೈಸೆನ್ಸ್ ಹೊಂದಿರುವ ಗುಜರಿ ಸಂಸ್ಥೆಯವರಿಗೆ ಮಾತ್ರ ಕೊಂಡುಕೊಳ್ಳಲು ಅವಕಾಶವಿದೆ. ಕಳೆದ ವಾರ ದೆಹಲಿಯ ಕರ್ನಾಟಕ ಭವನದಲ್ಲಿ ಹರಾಜು ಪ್ರಕ್ರಿಯೆ ನಡೆದಿದೆ. ಸರ್ಕಾರಿ ಲೈಸೆನ್ಸ್ ಹೊಂದಿರುವವರು ಯಾರೂ ಮುಂದೆ ಬಾರದ ಕಾರಣ ಈ ಕಾರು ಹರಾಜು ಆಗಿಲ್ಲ.
ಸೊನಾಟಾ ಗೋಲ್ಡ್ 2003ರ ಮಾಡೆಲ್ ಆಗಿದ್ದು ಖರೀದಿಸಲು ದೆಹಲಿಯಲ್ಲಿ ಕೆಲವರು ಮುಂದೆ ಬಂದಿದ್ದರು. ಕೊಂಡು ಕೊಳ್ಳಲು ಬಂದ ಯಾರಲ್ಲೂ ಕೂಡ ಗುಜರಿ ಲೇಸೆನ್ಸ್ ಇಲ್ಲದ ಕಾರಣ ಕಾರು ಹರಾಜು ಆಗದೇ ಉಳಿದಿದೆ. ಗುಜರಿ ಲೈಸೆನ್ಸ್ ಇರುವವರು ಕಾರು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದಾಗಿದೆ. ಸರಕಾರ ಇದಕ್ಕೆ ಮೂಲ ಬೆಲೆಯಾಗಿ 25,000 ರೂಪಾಯಿ ನಿಗದಿಪಡಿಸಿದ್ದು, ಇದಕ್ಕಿಂತ ಹೆಚ್ಚು ಹರಾಜು ಕೂಗಿದವರಿಗೆ ಈ ಕಾರು ಸಿಗಲಿದೆ.
ಇದಿಷ್ಟೇ ಅಲ್ಲದೇ, ಕರ್ನಾಟಕ ಭವನದಲ್ಲಿ ಈ ಹಿಂದೆಯೂ 2009 ಹಾಗೂ 2011ರ ಮಾಡೆಲ್ಗಳ ಇನ್ನೂ 4 ಮಾರುತಿ ಸುಜುಕಿ SX4 ಕಾರುಗಳನ್ನು ಸಹ ಹರಾಜು ಮಾಡಲಾಗಿದ್ದು ಸರಕಾರ ನಿಗದಿ ಪಡಿಸಿದ ಬೆಲೆಗಿಂತ 2 ರಿಂದ 3 ಪಟ್ಟು ಹೆಚ್ಚು ಬೆಲೆಗೆ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಲಾಗಿದೆ. ಅಂದಹಾಗೆ, ಸರ್ಕಾರ ಇವುಗಳನ್ನು ಮಾರಾಟ ಮಾಡಿ, ಈ ಕಾರುಗಳ ಬದಲಿಗೆ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿದೆ.
– ಜಿ.ಆರ್. ಹರೀಶ್, ನವದೆಹಲಿ
(Karnataka Bhavan in delhi want sell car used by governor to licensed sellers)
ತಿಹಾರ್ ಜೈಲಿನಲ್ಲಿ ನೆರವಿಗೆ ನಿಂತವನ ಕೈಬಿಡದ ಕಾಂಗ್ರೆಸ್ ನಾಯಕ; ಡಿ.ಕೆ. ಶಿವಕುಮಾರ್ ಮಾನವೀಯ ಮುಖ ಇಲ್ಲಿದೆ ನೋಡಿ!
Published On - 1:55 pm, Wed, 23 June 21