Breaking News Today Highlights: ಒಡಿಶಾ ರೈಲು ದುರಂತ: ಬೋಗಿಗಳ ತೆರವು ಕಾರ್ಯಾಚರಣೆಗೆ ಮುಂದಾದ ರೈಲ್ವೆ ಇಲಾಖೆ ಸಿಬ್ಬಂದಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 03, 2023 | 10:55 PM

Karnataka Guarantee Implementation Highlights​​: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ನಿನ್ನೆ(ಜೂ.2) ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತ ಘೋಷಣೆ ಮಾಡಿದರು. ನಿನ್ನೆ ಒಡಿಶಾದಲ್ಲಿ ರೈಲು ಅಪಘಾತವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುತ್ತಲೆ ಇದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Breaking News Today Highlights: ಒಡಿಶಾ ರೈಲು ದುರಂತ: ಬೋಗಿಗಳ ತೆರವು ಕಾರ್ಯಾಚರಣೆಗೆ ಮುಂದಾದ ರೈಲ್ವೆ ಇಲಾಖೆ ಸಿಬ್ಬಂದಿ
3 ರೈಲುಗಳ ನಡುವೆ ಡಿಕ್ಕಿ

ಬೆಂಗಳೂರು: ಒಡಿಶಾ ರೈಲು ದುರಂತಕ್ಕೆ ಸಂಬಂಧಿಸಿದಂತೆ ‘ಕನ್ನಡಿಗರನ್ನ ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ‘​ವಿಶೇಷ ಏರ್ ಕ್ರಾಫ್ಟ್ ಮೂಲಕ ಮಧ್ಯಾಹ್ನ 2.30 ಕ್ಕೆ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳ ಜೊತೆ ಭುವನೇಶ್ವರಕ್ಕೆ ಹೋಗುತ್ತಿದ್ದೇನೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಸ್ಥಳಕ್ಕೆ ತೆರಳಬೇಕಾಗಿದೆ. ಸಂಜೆ 6-7 ಗಂಟೆಗೆ ನಾನು ದುರಂತ ಸ್ಥಳಕ್ಕೆ ತಲುಪಬಹುದು. ಅಲ್ಲಿ ಹೋದ ಮೇಲೆ ವ್ಯವಸ್ಥೆಗೆ ಏನು ಲಭ್ಯ ಇದೆ ಅಂತಾ ನೋಡಬೇಕಾಗುತ್ತದೆ. ಕನ್ನಡಿಗರಿಗೆ ಯಾವುದೇ ತೊಂದರೆ ಇದ್ದರೆ ಚಿಕಿತ್ಸೆ, ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿ ಆಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಕನ್ನಡಿಗರಿಗೆ ಈಗ ಯಾರಿಗೂ ಯಾವುದೇ ಸಮಸ್ಯೆ ಆಗಿಲ್ಲ. ಯಾವ ರೀತಿ ಕರೆತರುವುದು ಎಂಬ ಬಗ್ಗೆ ಅಲ್ಲಿನ ಪರಿಸ್ಥಿತಿ ನೋಡಿ ನಿರ್ಧಾರ ಮಾಡುತ್ತೇನೆ. ದುರಂತ ಸ್ಥಳದಲ್ಲಿರುವ ಕನ್ನಡಿಗರು ನನ್ನ ಮೊಬೈಲ್ ಸಂಖ್ಯೆಗೆ 9845739999 ಸಂಪರ್ಕಿಸಬಹುದು. ನಾನು ವೈಯಕ್ತಿಕವಾಗಿ ಅಲ್ಲಿ ಅವರನ್ನು ಅಟೆಂಡ್ ಮಾಡುತ್ತೇನೆ ಎಂದರು.

LIVE NEWS & UPDATES

The liveblog has ended.
  • 03 Jun 2023 10:30 PM (IST)

    Breaking News Today Live: ಈಶಾನ್ಯ ರಾಜ್ಯಗಳ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ

    ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತ ಸಂಬಂಧ ಬೆಂಗಳೂರಿನಿಂದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ತೆರಳಬೇಕಾಗಿದ್ದ ರೈಲುಗಳ ಪ್ರಯಾಣ ರದ್ದಾಗಿದೆ. ಈ ಹಿನ್ನೆಲೆ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಯಶವಂತಪುರ ಜಂಕ್ಷನ್ ಗಳಲ್ಲಿಯೇ ಪ್ರಯಾಣಿಕರು ಉಳಿದುಕೊಂಡಿದ್ದಾರೆ. ಸಿಎಂ ಹಾಗೂ ಡಿಸಿಎಂ ನಿರ್ದೇಶನದಂತೆ ಬಿಬಿಎಂಪಿ ವತಿಯಿಂದ ಈಶಾನ್ಯ ರಾಜ್ಯಗಳ ಪ್ರಯಾಣಿಕರಿಗೆ ತಿಂಡಿ, ಊಟ, ವಸತಿ ಸೇರಿದಂತೆ ಚಿಕ್ಕ ಮಕ್ಕಳಿಗೆ ಬಿಸಿಹಾಲು ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಪ್ರಯಾಣಿಕರಿಗೆ ಅಗತ್ಯವಾದ ತುರ್ತು ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತರಿಂದ ಮಾಹಿತಿ ನೀಡಲಾಗಿದೆ.

  • 03 Jun 2023 10:07 PM (IST)

    Breaking News Today Live: ಎದೆ ಝಲ್ ಎನಿಸೋ ಏರಿಯಾಲ್ ವೀವ್

    ಗೂಡ್ಸ್​ ರೈಲಿಗೆ ಕೋಡಮಂಡಲ್ ಎಕ್ಸ್​ಪ್ರೆಸ್ ಟ್ರೈನ್ ಡಿಕ್ಕಿ ಹೊಡೆದಿದ್ದು, ಪಕ್ಕದ ಹಳಿ ಮೇಲೆ ಬಿದ್ದಿದೆ. ಇದೇ ವೇಳೆ ಅದೇ ಟ್ರ್ಯಾಕ್​ನಲ್ಲಿ ಬಂದ ಬೆಂಗಳೂರು ಹೌರಾ ಎಕ್ಸ್​ಪ್ರೆಸ್ ರೈಲು ಬಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೋರಮಂಡಲ್ ಎಕ್ಸ್​ಪ್ರೆಸ್​ ಟ್ರೈನ್​ನಲ್ಲಿದ್ದ ಜನರು ಮೃತಪಟ್ಟಿದ್ದಾರೆ. ರೈಲು ಅಪಘಾತ ಪ್ರಕರಣದ ಎದೆ ಝಲ್ ಎನಿಸೋ ಏರಿಯಾಲ್ ವೀವ್ ದೃಶ್ಯ ಇಲ್ಲಿದೆ ನೋಡಿ.


  • 03 Jun 2023 09:38 PM (IST)

    Breaking News Today Live: ರೈಲ್ವೆ ದುರಂತ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಸಂತೋಷ್ ಲಾಡ್

    ರೈಲು ದುರಂತ ಪ್ರಕರಣ ಸಂಬಂಧ ಕನ್ನಡಿಗರ ಸುರಕ್ಷತೆ ಹೆಗಲ ಮೇಲೆ ಹೊತ್ತುಕೊಂಡಿರುವ ಸಚಿವ ಸಂತೋಷ್ ಲಾಡ್ ಅವರು ಪಶ್ಚಿಮ ಬಂಗಾಳದ ಹೌರಾದಲ್ಲಿ ಸಿಲುಕಿರುವ ಕರ್ನಾಟಕದ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಸದ್ಯ ಭೀಕರ ರೈಲು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ಸಚಿವ ಸಂತೋಷ್ ಲಾಡ್​ ಪರಿಶೀಲನೆ ಮಾಡಿದ್ದಾರೆ.

  • 03 Jun 2023 08:41 PM (IST)

    Breaking News Today Live: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದಿಷ್ಟು

    ಬಹಾನಾಗ ರೈಲ್ವೆ ದುರಂತ ಹಿನ್ನೆಲೆ ಹಳಿ‌ ಮೇಲೆ ಬಿದ್ದಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ರೈಲನ್ನು ಎರಡು ಚೈನ್ ಪೋನ್ ಲೈನ್​ಗಳಿಂದ ತೆರವು ಮಾಡಲಾಗುತ್ತಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

  • 03 Jun 2023 08:14 PM (IST)

    Breaking News Today Live: ಒಡಿಶಾದ ಭದ್ರಕ್​ ಜಿಲ್ಲಾ ಆಸ್ಪತ್ರೆಗೆ ಸಚಿವ ಸಂತೋಷ್ ಲಾಡ್‌ ಭೇಟಿ

    ಬಹನಾಗ ರೈಲು ನಿಲ್ದಾಣದ ಬಳಿ 3 ರೈಲುಗಳ ನಡುವೆ ಡಿಕ್ಕಿ ಪ್ರಕರಣ ಹಿನ್ನೆಲೆ ಒಡಿಶಾದ ಭದ್ರಕ್​ ಜಿಲ್ಲಾ ಆಸ್ಪತ್ರೆಗೆ ಸಚಿವ ಸಂತೋಷ್ ಲಾಡ್‌ ಭೇಟಿ ನೀಡಿದ್ದಾರೆ. ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.

  • 03 Jun 2023 08:01 PM (IST)

    Breaking News Today Live: ನೌಕಾಪಡೆಯಿಂದ 43 ಸಿಬ್ಬಂದಿಗಳ ರವಾನೆ

    ಭಾರತೀಯ ನೌಕಾಪಡೆಯು ವೈದ್ಯಕೀಯ ಮತ್ತು ಸಹಾಯಕರ ತಂಡವನ್ನು ಒಳಗೊಂಡತೆ 43 ಸಿಬ್ಬಂದಿಗಳನ್ನು ದುರಂತ ಸ್ಥಳಕ್ಕೆ ರವಾನಿಸಿದೆ. ಪ್ರಸ್ತುತ ಬಾಲಸೋರ್​ನ ಜಿಲ್ಲಾ ಪ್ರಧಾನ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  • 03 Jun 2023 07:22 PM (IST)

    Breaking News Today Live: ರೈಲ್ವೆ ಬೋಗಿಗಳ ತೆರವು ಕಾರ್ಯಾಚರಣೆ

    ಬಹನಾಗ ರೈಲು ನಿಲ್ದಾಣದ ಬಳಿ 3 ರೈಲುಗಳ ನಡುವೆ ಡಿಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಕ್ತಾಯ ಆಗಿದೆ. ರೈಲ್ವೆ ಇಲಾಖೆ ಸಿಬ್ಬಂದಿಗಳು ಬೋಗಿಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಹಿಟಾಚಿಗಳ ಮೂಲಕ ರೈಲ್ವೆ ಬೋಗಿಗಳ ತೆರವು ಕಾರ್ಯಾಚರಣೆ ಮಾಡಲಾಗಿದೆ.

  • 03 Jun 2023 06:27 PM (IST)

    Breaking News Today Live: ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆ

    ಬಹನಾಗ ರೈಲು ನಿಲ್ದಾಣದ ಬಳಿ 3 ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆ ಆಗಿದೆ. 1 ಸಾವಿರಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು,  ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • 03 Jun 2023 05:36 PM (IST)

    Breaking News Today Live: ಕೇಂದ್ರ ಸರ್ಕಾರ ನೊಂದವರ ಜೊತೆ ಇದೆ: ಪ್ರಧಾನಿ ಮೋದಿ

    ದುರಂತ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಕೇಂದ್ರ ಸರ್ಕಾರ ನೊಂದವರ ಜೊತೆ ಇದೆ. ರೈಲು ದುರಂತವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ದುರಂತಕ್ಕೆ ಕಾರಣರಾದವರನ್ನು ಶಿಕ್ಷೆಗೆ ಒಳಪಡಿಸುತ್ತೇವೆ. ದುರಂತ ಪಾಠ ಕಲಿಸಿದೆ, ಮುಂದೆ ಹೀಗೆ ಆಗದಂತೆ ಎಚ್ಚರಿಕೆ ವಹಿಸ್ತೇವೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆಯನ್ನು ಒದಗಿಸುತ್ತೇವೆ. ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಹೇಳಿದ್ದಾರೆ.

  • 03 Jun 2023 05:28 PM (IST)

    Breaking News Today Live: ಗಾಯಾಳುಗಳ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

    ಸದ್ಯ ಪ್ರಧಾನಿ ಮೋದಿ ರೈಲು ದುರಂತ ಸ್ಥಳದಿಂದ ಒಡಿಶಾದ ಬಾಲಸೋರ್‌ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬಾಲಸೋರ್‌ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್ ಸಾಥ್‌ ನೀಡಿದರು.

  • 03 Jun 2023 04:52 PM (IST)

    Breaking News Today Live: ದುರಂತ ಸ್ಥಳದಲ್ಲಿ ಪರಿಶೀಲಿಸಿ ಹೊರಟ ಪ್ರಧಾನಿ ಮೋದಿ

    ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಪರಿಶೀಲನೆ ಮಾಡಿದರು. ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಶೀಘ್ರದಲ್ಲೇ ಸಂತ್ರಸ್ತರನ್ನು ಭೇಟಿ ಮಾಡಲಿದ್ದಾರೆ.

  • 03 Jun 2023 03:56 PM (IST)

    Breaking News Today Live: ರೈಲು ಅಪಘಾತ ಸ್ಥಳಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

    ಪ್ರಧಾನಮಂತ್ರಿ ನರೇಂದ್ರ ಮೋದಿ ಸದ್ಯ ಒಡಿಶಾ ತಲುಪಿದ್ದು, ಕೆಲವೇ ಕ್ಷಣಗಳಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ದುರಂತ ನಡೆದ ಬಹನಾಗ ನಿಲ್ದಾಣ ಪರಿಶೀಲಿಸಲಿದ್ದಾರೆ. ನಂತರ ಕಟಕ್ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಲಿದ್ದಾರೆ.

  • 03 Jun 2023 03:42 PM (IST)

    Breaking News Today Live: ಅಪಘಾತದ ಕುರಿತಾಗಿ ಮಲ್ಲಿಕಾರ್ಜುನ ಖರ್ಗೆ ಹೇಳಿದಿಷ್ಟು

    ಒಡಿಶಾ ರೈಲು ದುರಂತಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ಮತ್ತು ಮಾಜಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ರೀತಿಯಲ್ಲಿ ಅಗತ್ಯವಿರುವ ಸಹಾಯವನ್ನು ಮಾಡುವಂತೆ ನಾನು ಇಡೀ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಸೂಚನೆ ನೀಡಿದ್ದೇನೆ. ಆದರೆ ಘಟನೆ ಕುರಿತಾಗಿ ನಾವು ಪ್ರಧಾನಿ ಮೋದಿ ಮತ್ತು  ರೈಲ್ವೆ ಸಚಿವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುವುದಿದೆ ಎಂದಿದ್ದಾರೆ.

  • 03 Jun 2023 03:36 PM (IST)

    Breaking News Today Live: ರೈಲು ಅಪಘಾತಕ್ಕೆ ಕಂಬನಿ ಮಿಡಿದ ವಿಶ್ವ ನಾಯಕರು

    ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ಅಪಘಾತದಿಂದ ಸಾವಿನ ಸಂಖ್ಯೆ 261ಕ್ಕೆ ಏರಿಕೆ ಆಗಿದೆ. ಘಟನೆ ಕುರಿತಾಗಿ ವಿಶ್ವದ ಹಲವಾರು ನಾಯಕರು ಕಂಬನಿ ಮಿಡಿದಿದ್ದಾರೆ.

    Balasore Train Accident: ಒಡಿಶಾ ರೈಲು ದುರಂತಕ್ಕೆ ಸಂತಾಪ ಸೂಚಿಸಿದ ಜಾಗತಿಕ ನಾಯಕರು
     

  • 03 Jun 2023 03:10 PM (IST)

    Breaking News Today Live: ದುರಂತಕ್ಕೆ ಸಂತಾಪ ಸೂಚಿಸಿದ ಬ್ರಿಟನ್​ ಪ್ರಧಾನಿ

    ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ಅಪಘಾತ ಕುರಿತಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಟ್ವೀಟ ಮೂಲಕ ಸಂತಾಪ ಸೂಚಿಸಿದ್ದಾರೆ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆ ಪ್ರಧಾನಿ ನರೇಂದ್ರ ಮೋದಿ ಮತ್ತು ದುರಂತದಲ್ಲಿ ಮೃತಪಟ್ಟವರೊಂದಿಗಿದೆ. ಮೃತರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳನ್ನು ತಿಳಿಸಿದ್ದಾರೆ. ಮತ್ತು ಬದುಕುಳಿದವರಿಗೆ, ಕೆಲಸ ಮಾಡುವವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.

  • 03 Jun 2023 02:52 PM (IST)

    Breaking News Today Live: ಒಡಿಶಾ ರೈಲು ಅಪಘಾತ, ಸಾವಿನ ಸಂಖ್ಯೆ 261ಕ್ಕೆ ಏರಿಕೆ

    ದೆಹಲಿ: ಒಡಿಶಾದಲ್ಲಿ ಕಳೆದ ರಾತ್ರಿ ಸಂಭವಿಸಿರುವ ಮೂರು ರೈಲು ಅಪಘಾತಲ್ಲಿ ಸಾವಿನ ಸಂಖ್ಯೆ 261ಕ್ಕೆ ಏರಿಕೆ ಆಗಿದೆ. ಗಾಯಗೊಂಡ ಪ್ರಯಾಣಿಕರನ್ನು ಗೋಪಾಲ್‌ಪುರ, ಖಾಂತಪಾರಾ, ಬಾಲಸೋರ್, ಭದ್ರಕ್ ಮತ್ತು ಸೊರೊ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

  • 03 Jun 2023 02:35 PM (IST)

    Breaking News Today Live: 3 ರೈಲುಗಳ ನಡುವೆ ಡಿಕ್ಕಿ: ರಕ್ಷಣಾ ಕಾರ್ಯ ಅಂತ್ಯ

    ದೆಹಲಿ: ಒಡಿಶಾದ ಬಾಲಸೋರ್‌ನಲ್ಲಿ ಕಳೆದ ರಾತ್ರಿ ಮೂರು ರೈಲುಗಳು ಡಿಕ್ಕಿ ಹೊಡೆದು 230 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 900 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳ ಚಿಕಿತ್ಸೆಗೆ ಭುವನೇಶ್ವರ ಏಮ್ಸ್​ ವೈದ್ಯರ ನಿಯೋಜನೆ ಮಾಡಲಾಗಿದೆ. ಸದ್ಯ ರಕ್ಷಣಾ ಕಾರ್ಯಚರಣೆ ಮುಕ್ತಾಯವಾಗಿದೆ.

     

  • 03 Jun 2023 01:15 PM (IST)

    Breaking News Today Live: ಒಡಿಶಾದಲ್ಲಾದ ರೈಲು ಅಪಘಾತ ಅತ್ಯಂತ ನೋವಿನ ಸಂಗತಿ ಎಂದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್

    ಬೆಂಗಳೂರು: ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ನಡುವೆ ಅಪಘಾತಕ್ಕೆ ಸಂಬಂಧಿಸಿದಂತೆ ‘ರೈಲು ಅಪಘಾತ ಅತ್ಯಂತ ನೋವಿನ ಸಂಗತಿ ಎಂದು ನೂತನ ಸ್ಪೀಕರ್​ ಯು.ಟಿ.ಖಾದರ್ ಹೇಳಿದ್ದಾರೆ. ಈ ಅಪಘಾತ ಎಲ್ಲಾ ಇಲಾಖೆಗಳ ಕಣ್ಣು ತೆರೆಸುವಂತೆ ಮಾಡಿದೆ. ರೈಲು ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಮುಂದೆ ಈ ರೀತಿಯ ಅಪಘಾತ ಆಗದಂತೆ ತಡೆಯಬೇಕಿದೆ ಎಂದರು.

  • 03 Jun 2023 12:46 PM (IST)

    Breaking News Today Live: ಒಡಿಸ್ಸಾದಲ್ಲಿ ರೈಲು ಅಪಘಾತ ಪ್ರಕರಣ; ಚಿಕ್ಕಮಗಳೂರಿನ 110 ಮಂದಿ ಪ್ರಯಾಣಿಕರು ಸೇಫ್​​

    ಚಿಕ್ಕಮಗಳೂರು: ಒಡಿಸ್ಸಾದಲ್ಲಿ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತದ ರೈಲಿನಲ್ಲಿದ್ದ ಕಳಸದ 110 ಮಂದಿ ಪ್ರಯಾಣಿಕರು ಸೇಫ್​ ಆಗಿದ್ದಾರೆಂದು, ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಯಾತ್ರಿಕರ ಸಂಬಂಧಿ ಸತೀಶ್ ಜೈನ್ ಹೇಳಿದ್ದಾರೆ. ‘ನಮ್ಮ ಸಂಬಂಧಿಕರು 9 ಜನ ಯಾತ್ರೆಗೆ ತೆರಳಿದ್ರು. ಅಫಘಾತದ ವಿಚಾರ ತಿಳಿದು ನಮಗೆ ಗಾಬಾರಿಯಾಗಿತ್ತು. ಕರೆ ಮಾಡಿ ಮಾತನಾಡಿದಾಗ ಕ್ಷೇಮವಾಗಿರುವ ವಿಚಾರ ತಿಳಿದಾಗ ಸ್ವಲ್ಪ ಸಮಾಧಾನವಾಯ್ತು ಎಂದರು.

  • 03 Jun 2023 12:44 PM (IST)

    Breaking News Today Live: ದುರಂತ ಸ್ಥಳದಲ್ಲಿರುವ ಕನ್ನಡಿಗರು ನನ್ನ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು ಸಚಿವ ಸಂತೋಷ್ ಲಾಡ್

    ಬೆಂಗಳೂರು: ಒಡಿಶಾ ರೈಲು ದುರಂತಕ್ಕೆ ಸಂಬಂಧಿಸಿದಂತೆ ‘ ಕನ್ನಡಿಗರನ್ನ ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ‘​ವಿಶೇಷ ಏರ್ ಕ್ರಾಫ್ಟ್ ಮೂಲಕ ಮಧ್ಯಾಹ್ನ 2.30 ಕ್ಕೆ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳ ಜೊತೆ ಭುವನೇಶ್ವರಕ್ಕೆ ಹೋಗುತ್ತಿದ್ದೇನೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಸ್ಥಳಕ್ಕೆ ತೆರಳಬೇಕಾಗಿದೆ. ಸಂಜೆ 6-7 ಗಂಟೆಗೆ ನಾನು ದುರಂತ ಸ್ಥಳಕ್ಕೆ ತಲುಪಬಹುದು. ಅಲ್ಲಿ ಹೋದ ಮೇಲೆ ವ್ಯವಸ್ಥೆಗೆ ಏನು ಲಭ್ಯ ಇದೆ ಅಂತಾ ನೋಡಬೇಕಾಗುತ್ತದೆ. ಕನ್ನಡಿಗರಿಗೆ ಯಾವುದೇ ತೊಂದರೆ ಇದ್ದರೆ ಚಿಕಿತ್ಸೆ, ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿ ಆಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಕನ್ನಡಿಗರಿಗೆ ಈಗ ಯಾರಿಗೂ ಯಾವುದೇ ಸಮಸ್ಯೆ ಆಗಿಲ್ಲ. ಯಾವ ರೀತಿ ಕರೆತರುವುದು ಎಂಬ ಬಗ್ಗೆ ಅಲ್ಲಿನ ಪರಿಸ್ಥಿತಿ ನೋಡಿ ನಿರ್ಧಾರ ಮಾಡುತ್ತೇನೆ. ದುರಂತ ಸ್ಥಳದಲ್ಲಿರುವ ಕನ್ನಡಿಗರು ನನ್ನ ಮೊಬೈಲ್ ಸಂಖ್ಯೆಗೆ 9845739999 ಸಂಪರ್ಕಿಸಬಹುದು. ನಾನು ವೈಯಕ್ತಿಕವಾಗಿ ಅಲ್ಲಿ ಅವರನ್ನು ಅಟೆಂಡ್ ಮಾಡುತ್ತೇನೆ ಎಂದರು.

  • 03 Jun 2023 12:38 PM (IST)

    Breaking News Today Live: ಕನ್ನಡಿಗರ ರಕ್ಷಣೆಗೆ ಮಧ್ಯಾಹ್ನ 2.30 ಕ್ಕೆ ಒಡಿಶಾಕ್ಕೆ ಹೊರಟ ಸಚಿವ ಸಂತೋಷ್ ಲಾಡ್

    ಬೆಂಗಳೂರು: ಒಡಿಶಾದ ಬಾಲಸೋರ್​​ನಲ್ಲಿ ಭೀಕರ ರೈಲು ದುರಂತ ಹಿನ್ನೆಲೆ, ಮಧ್ಯಾಹ್ನ 2.30ಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭುವನೇಶ್ವರಕ್ಕೆ ತೆರಳಲಿದ್ದಾರೆ. ಹೌದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ತಂಡದ ಜೊತೆ ಚಾರ್ಟರ್ಡ್ ಫ್ಲೈಟ್​​ನಲ್ಲಿ ಒಡಿಶಾಗೆ ತೆರಳಲಿದ್ದಾರೆ. ಕನ್ನಡಿಗರ ಸುರಕ್ಷತೆ ಬಗ್ಗೆ ರೈಲ್ವೆ ಡಿಐಜಿಯಿಂದ ಮಾಹಿತಿ ಪಡೆದಿರುವ ಕಾರ್ಮಿಕ ಖಾತೆ ಸಚಿವ ಸಂತೋಷ್ ಲಾಡ್, ದೂರವಾಣಿ ಮೂಲಕ ರೈಲ್ವೆ ಡಿಐಜಿ ಶಶಿಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ.

  • 03 Jun 2023 12:20 PM (IST)

    Breaking News Today Live: ಪ್ರತಿಯೊಬ್ಬ ಕನ್ನಡಿಗನನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ಸರ್ಕಾರ ಬದ್ಧವಿದೆ ಸಿಎಂ

    ಬೆಂಗಳೂರು: ಒಡಿಶಾದ ಬಾಲಸೋರ್​ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆ, ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಹಾಗೂ ಅವರಿಗೆ ಅಗತ್ಯ ನೆರವನ್ನು ಒದಗಿಸಲು ಸಚಿವ ಸಂತೋಷ್ ಲಾಡ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನಿಯೋಜಿಸಿದ್ದಾರೆ. ಅದರಂತೆ ಘಟನೆಯಲ್ಲಿ ಗಾಯಗೊಂಡ ಅಥವಾ ಇತರೆ ಯಾವುದೇ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗರ ರಕ್ಷಣೆಗೆ ಸಂಪೂರ್ಣ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

  • 03 Jun 2023 12:16 PM (IST)

    Breaking News Today Live: ಒಡಿಶಾದಲ್ಲಿ ದುರಂತ; ಪ್ರಲ್ಹಾದ್​ ಜೋಶಿ ಉದ್ಘಾಟಿಸಲಿದ್ದ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ರದ್ದು

    ಧಾರವಾಡ: ಓಡಿಸ್ಸಾ ರೈಲು ದುರಂತ ಹಿನ್ನೆಲೆ, ಧಾರವಾಡದ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ರದ್ದು ಮಾಡಲಾಗಿದೆ. ಹೌದು ನಗರದ ಕಲ್ಯಾಣ ನಗರದಲ್ಲಿ ನಿರ್ಮಾಣಗೊಂಡಿರುವ ಸೇತುವೆ ರೈಲ್ವೆ ಮೇಲ್ಸೇತುವೆ ಉದ್ಘಾಟನೆಯನ್ನ ಇಂದು(ಜೂ.3)ಸಂಜೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಉದ್ಘಾಟಿಸಿಬೇಕಿತ್ತು. ಜೊತೆಗೆ ಕಾರ್ಯಕ್ರಮ ಹಿನ್ನೆಲೆ ತಯಾರಿ ಕೂಡ ಮಾಡಕೊಳ್ಳಲಾಗಿತ್ತು. ಆದರೆ ರೈಲು ದುರಂತ ಹಿನ್ನೆಲೆ ಇಡೀ ಕಾರ್ಯಕ್ರಮವನ್ನ ರದ್ದು ಮಾಡಲಾಗಿದೆ.

  • 03 Jun 2023 12:06 PM (IST)

    Breaking News Today Live: ಒಡಿಸ್ಸಾ ರೈಲು ದುರಂತ; ಹಿರಿಯ ಅಧಿಕಾರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ

    ದೆಹಲಿ: ಒಡಿಶಾದ ಬಹನಾಗ ನಿಲ್ದಾಣದ ಬಳಿ ನಿನ್ನೆ(ಜೂ.2) 3 ರೈಲುಗಳ ನಡುವೆ ಡಿಕ್ಕಿಯಾಗಿದ್ದು, ಸಾವಿನ ಸಂಖ್ಯೆ 280 ಕ್ಕೆ ಎರಿದೆ. ಈ ಕುರಿತು ಹಿರಿಯ ಅಧಿಕಾರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಸಿದ್ದು, ಕೇಂದ್ರ ಸಚಿವ ಅಮಿತ್ ಶಾ, NDRF ಐಜಿ ನರೇಂದ್ರ ಸಿಂಗ್​​ ಭಾಗಿಯಾಗಿದ್ದಾರೆ.

  • 03 Jun 2023 12:02 PM (IST)

    Breaking News Today Live: ಒಡಿಸ್ಸಾ ರೈಲು ದುರಂತ; ರೈಲ್ವೆ ಇಲಾಖೆಯಿಂದ ಸಹಾಯವಾಣಿ ಆರಂಭ

    ಭುವನೇಶ್ವರ: ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ನಡುವೆ ಡಿಕ್ಕಿಯಾಗಿದ್ದು, ಸಾವಿನ ಸಂಖ್ಯೆ 280 ಕ್ಕೆ ಎರಿದೆ. ಇದೀಗ ಸರ್ಕಾರ, ರೈಲ್ವೆ ಇಲಾಖೆಯಿಂದ ಸಹಾಯವಾಣಿ ಆರಂಭವಾಗಿದ್ದು, ಹೀಗಿದೆ.

    1) ಒಡಿಶಾ ರಾಜ್ಯ ಸರ್ಕಾರದ ಸಹಾಯವಾಣಿ ಸಂಖ್ಯೆ: 06782 262286
    2) ಹೌರಾ ಸಹಾಯವಾಣಿ ಸಂಖ್ಯೆ: 033-26382217
    3) ಖರಗ್​ಪುರ ಸಹಾಯವಾಣಿ ಸಂಖ್ಯೆ: 89720 7395, 93323 92339
    4) ಬಾಲಸೋರ್ ಸಹಾಯವಾಣಿ ಸಂಖ್ಯೆ: 82495 91559, 79784 18322
    5) ಶಾಲಿಮರ್​ ಸಹಾಯವಾಣಿ ಸಂಖ್ಯೆ: 99033 70746
    6) ಭದ್ರಕ್ ಸಹಾಯವಾಣಿ ಸಂಖ್ಯೆ: 84558 89900
    7) ಜಜ್ಪುರ್ ಕೆನೊಝಾರ್​ ರಸ್ತೆ ಸಹಾಯವಾಣಿ ಸಂಖ್ಯೆ: 84558 89906
    8) ಕಟಕ್​ ಸಹಾಯವಾಣಿ ಸಂಖ್ಯೆ: 84558 89917
    9) ಭುವನೇಶ್ವರ ಸಹಾಯವಾಣಿ ಸಂಖ್ಯೆ: 84558 89922
    10)ಬೆಂಗಳೂರು 080-22356409

  • 03 Jun 2023 11:54 AM (IST)

    Breaking News Today Live: ಒಡಿಸ್ಸಾ ರೈಲು ದುರಂತ ಬಹಳ ದುರ್ದೈವ ಎಂದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

    ಹುಬ್ಬಳ್ಳಿ: ಒಡಿಸ್ಸಾ ರೈಲು ದುರಂತ ಬಹಳ ದುರ್ದೈವ, ಈ ದುರಂತದಿಂದ ಮನಸ್ಸಿಗೆ ಬಹಳ ಆಘಾತವಾಗಿದೆ. ಭಾರತ ಸರ್ಕಾರ ಎಲ್ಲ ಸಹಕಾರ ಕೊಡೋ ಕೆಲಸ ನಡೀತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು. ಮುಂದೆ ಈ ರೀತಿ ಆಗದಂತೆ ಹೆಚ್ಚಿನ ಕ್ರಮ ಕೈಗೊಳ್ತೀವಿ ಎಂದರು.

  • 03 Jun 2023 11:30 AM (IST)

    Breaking News Today Live: ಒಡಿಶಾ ರೈಲು ಅಪಘಾತ ಸ್ಥಳಕ್ಕೆ ತೆರಳಿದ ಕಾರ್ಮಿಕ ಸಚಿವ ಸಂತೋಷ್ ಲಾಡ್

    ಬೆಂಗಳೂರು: ಒಡಿಶಾದ ಬಹನಾಗ ನಿಲ್ದಾಣದ ಬಳಿ ನಿನ್ನೆ(ಜೂ.2) 3 ರೈಲುಗಳ ನಡುವೆ ಡಿಕ್ಕಿಯಾಗಿದ್ದು, ದುರಂತ ಸ್ಥಳಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ತೆರಳಿದ್ದಾರೆ. ಹೌದು ರಾಜ್ಯದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲು ಸಿಎಂ ಸಿದ್ದರಾಮಯ್ಯ ಅವರು ಸಂತೋಷ್ ಲಾಡ್ ಅವರನ್ನ ಒಡಿಶಾಗೆ ಕಳುಹಿಸಿದ್ದಾರೆ.

  • 03 Jun 2023 11:26 AM (IST)

    Breaking News Today Live: ಒಡಿಶಾ ರೈಲು ಅಪಘಾತ ಪ್ರಕರಣ ದುರದೃಷ್ಟಕರ; ಡಿಸಿಎಂ ಡಿಕೆ ಶಿವಕುಮಾರ್

    ಬೆಂಗಳೂರು: ಒಡಿಶಾ ರೈಲು ಅಪಘಾತ ಪ್ರಕರಣ ಕುರಿತು ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ‘ರೈಲು ಅಪಘಾತ ದುರದೃಷ್ಟಕರ, ಕರ್ನಾಟಕ ಜನರ ದುಃಖ ಜೊತೆಯಲ್ಲಿದೆ. ಅಪಘಾತದ ಕಾರಣ ಹುಡುಕೋದು ಕಷ್ಟ. ಆದರೆ, ಮುಂದೆ ಈ ರೀತಿ ಆಗದ ಹಾಗೇ ನೋಡಿಕೊಳ್ಳಬೇಕು ಅಂದರೆ ಕಾರಣ ಹುಡುಕಬೇಕು ಎಂದಿದ್ದಾರೆ.

  • 03 Jun 2023 11:18 AM (IST)

    Breaking News Today Live: ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ

    ದೆಹಲಿ: ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಸಾಧ್ಯತೆಯಿದ್ದು, ಸ್ಥಳ ಪರಿಶೀಲಿಸಿದ ಬಳಿಕ ಕಟಕ್​ನ ಆಸ್ಪತ್ರೆಗೆ ಪ್ರಧಾನಿ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸುವ ಸಾಧ್ಯತೆಯಿದೆ.

  • 03 Jun 2023 11:05 AM (IST)

    Breaking News Today Live: ​ಒಡಿಶಾದ ರೈಲು ಡಿಕ್ಕಿ ಪ್ರಕರಣ; ಟ್ವೀಟ್​ ಮೂಲಕ ಸಂತಾಪ ಸೂಚಿಸಿದ ಕ್ರಿಕೆಟಿಗ ವಿರಾಟ್​ ಕೊಹ್ಲಿ

    ಭುವನೇಶ್ವರ: ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ನಡುವೆ ಡಿಕ್ಕಿಗೆ ಸಂಬಂಧಿಸಿದಂತೆ ಟ್ವೀಟ್​ ಮೂಲಕ ಕ್ರಿಕೆಟಿಗ ವಿರಾಟ್​ ಕೊಹ್ಲಿ ಸಂತಾಪ ಸೂಚಿಸಿದ್ದಾರೆ. ‘ಒಡಿಶಾದಲ್ಲಿ ರೈಲು ಅಪಘಾತದ ಸುದ್ದಿ ಕೇಳಿ ದುಃಖವಾಯಿತು
    ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುವೆ ಎಂದಿದ್ದಾರೆ.
    ​​​​

  • 03 Jun 2023 10:55 AM (IST)

    Breaking News Today Live: ​ಒಡಿಶಾದ ರೈಲು ಅಪಘಾತ ಪ್ರಕರಣ; ಬಹನಾಗ ಬಜಾರ್​​ ಮಾರ್ಗದಲ್ಲಿ ರೈಲುಗಳ ಸಂಚಾರ ರದ್ದು

    ಭುವನೇಶ್ವರ: ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ನಡುವೆ ಡಿಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹನಾಗ ಬಜಾರ್​​ ಮಾರ್ಗದಲ್ಲಿ ಸಂಚರಿಸುವ ಒಟ್ಟು 49 ಪ್ರಮುಖ ರೈಲುಗಳ ಸಂಚಾರವನ್ನ ಸ್ಥಗಿತ ಮಾಡಲಾಗಿದೆ. ಹೌದು 38 ರೈಲುಗಳ ಸಂಚಾರಕ್ಕೆ ರೈಲ್ವೆ ಇಲಾಖೆ ಮಾರ್ಗವನ್ನ ಬದಲಿಸಿದೆ. ಜೊತೆಗೆ ತಾತ್ಕಾಲಿಕವಾಗಿ ಹೌರಾ-ಚೆನ್ನೈ ಎಕ್ಸ್​ಪ್ರೆಸ್​​​​​​​​​ ರೈಲು ಸಂಚಾರವನ್ನ ರದ್ದು ಮಾಡಲಾಗಿದೆ.

  • 03 Jun 2023 10:24 AM (IST)

    Breaking News Today Live: ಒಡಿಶಾ ರೈಲ ಅಪಘಾತ: ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ

    ನವದೆಹಲಿ: ಒಡಿಶಾದ ಬಾಲಸೋರ್​ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿ ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿಯವರು ಉನ್ನತಮಟ್ಟದ ಸಭೆ ಕರೆದಿದ್ದಾರೆ.

  • 03 Jun 2023 10:01 AM (IST)

    Breaking News Today Live: ​ಒಡಿಶಾದ ರೈಲು ಅಪಘಾತ ಪ್ರಕರಣ; ಚೆನ್ನೈನ ತುರ್ತು ಕಾರ್ಯಾಚರಣೆ ಕೇಂದ್ರಕ್ಕೆ ಸಿಎಂ ಸ್ಟಾಲಿನ್ ಭೇಟಿ

    ಚೆನ್ನೈ: ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ನಡುವೆ ಡಿಕ್ಕಿಗೆ ಸಂಬಂಧಿಸಿದಂತೆ ಚೆನ್ನೈನ ತುರ್ತು ಕಾರ್ಯಾಚರಣೆ ಕೇಂದ್ರಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ಭೇಟಿ ನೀಡಿದ್ದಾರೆ. ಈ ವೇಳೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ರೈಲು ದುರಂತದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.​

  • 03 Jun 2023 09:48 AM (IST)

    Breaking News Today Live: ​ ರೈಲು ದುರಂತ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆ ವಿಕ್ಷಿಸಿದ ಒಡಿಶಾ ಸಿಎಂ

    ಭುವನೇಶ್ವರ: ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ನಡುವೆ ಡಿಕ್ಕಿಯಾದ ಸ್ಥಳಕ್ಕೆ ಒಡಿಶಾ ಸಿಎಂ ನವೀನ್ ಪಟ್ನಾಯಕ್​ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನ ವೀಕ್ಷಿಸಿದ್ದಾರೆ. 7 NDRF, 5 ಒಡಿಆರ್​ಎಫ್​, 24 ಅಗ್ನಿಶಾಮಕ ಸೇವಾ ಘಟಕ, ಸ್ಥಳೀಯ ಪೊಲೀಸ್ ಸಿಬ್ಬಂದಿ ಸೇರಿ ಸ್ವಯಂಸೇವಕರಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

  • 03 Jun 2023 09:18 AM (IST)

    Breaking News Today Live: ​ಒಡಿಶಾದ ರೈಲು ಅಪಘಾತ ಪ್ರಕರಣ; ಸಂತಾಪ ಸೂಚಿಸಿದ ತಮಿಳುನಾಡು ಸಿಎಂ

    ಚೆನ್ನೈ: ಒಡಿಶಾದ ಬಾಲಸೋರ್​ ಜಿಲ್ಲೆಯ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ನಡುವೆ ಡಿಕ್ಕಿ-ದುರಂತದಲ್ಲಿ ಮೃತಪಟ್ಟವರಿಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​ ಸಂತಾಪ ಸೂಚಿಸಿದ್ದಾರೆ. ಜೊತೆಗೆ ತಮಿಳುನಾಡು ಸರ್ಕಾರದಿಂದ ಒಂದು ದಿನ ಶೋಕಾಚರಣೆಗೆ ಘೋಷಣೆ ಮಾಡಿದ್ದಾರೆ.

  • 03 Jun 2023 09:06 AM (IST)

    Breaking News Today Live: ಒಡಿಶಾ ರೈಲು ಅಪಘಾತ ಪ್ರಕರಣ, ಕರ್ನಾಟಕದ ಪ್ರಯಾಣಿಕರು ಸೇಫ್;​​ ರೈಲ್ವೆ ಡಿಐಜಿ ಶಶಿಕುಮಾರ್

    ಬೆಂಗಳೂರು: ​ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ಡಿಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ. ಕರ್ನಾಟಕದಿಂದ ಪ್ರಯಾಣ ಬೆಳಸಿದ್ದ ಕನ್ನಡಿಗರು ಸೇಫ್​ ಆಗಿದ್ದು, ಘಟನಾ ಸ್ಥಳಕ್ಕೆ ರಾಜ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ರೈಲ್ವೆ ಡಿಐಜಿ ಶಶಿಕುಮಾರ್ ಹೇಳಿದ್ದಾರೆ.

  • 03 Jun 2023 08:46 AM (IST)

    Breaking News Today Live: ಒಡಿಶಾ 3 ರೈಲುಗಳ ಡಿಕ್ಕಿ ಪ್ರಕರಣ; ಘಟನಾ ಸ್ಥಳಕ್ಕೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಭೇಟಿ

    ಭುವನೇಶ್ವರ: ​ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ಡಿಕ್ಕಿ ಪ್ರಕರಣ ಹಿನ್ನಲೆ ಘಟನಾ ಸ್ಥಳಕ್ಕೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಭೇಟಿ ನೀಡಿದ್ದಾರೆ. ದುರಂತದ ಬಗ್ಗೆ ಅಧಿಕಾರಿಗಳಿಂದ ಸಿಎಂ ಪಟ್ನಾಯಕ್ ಮಾಹಿತಿ ಪಡೆಯುತ್ತಿದ್ದಾರೆ.​

  • 03 Jun 2023 08:43 AM (IST)

    Breaking News Today Live: ಒಡಿಶಾ ರೈಲು ಅಪಘಾತ ಪ್ರಕರಣ; ಬಯ್ಯಪ್ಪನಹಳ್ಳಿ SMVTನಿಂದ 1294 ಮಂದಿ ಪ್ರಯಾಣ

    ಭುವನೇಶ್ವರ:  ಒಡಿಶಾ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಯ್ಯಪ್ಪನಹಳ್ಳಿ SMVTನಿಂದ 994 ಮಂದಿ ರಿಸರ್ವ್ಡ್ ಪ್ಯಾಸೆಂಜರ್​ಗಳು, 300 ಅನ್ ರಿಸರ್ವ್ಡ್ ಪ್ಯಾಸೆಂಜರ್ ಗಳು ಸೇರಿ ಒಟ್ಟು 1294 ಮಂದಿ ಪ್ರಯಾಣ ಮಾಡಿದ್ದರು. ಇದೀಗ ಅಪಘಾತ ಹಿನ್ನಲೆ ಇಂದಿನ ರೈಲುಗಳ ಪ್ರಯಾಣವನ್ನ ರದ್ದು ಮಾಡಲಾಗಿದೆ.

  • 03 Jun 2023 08:38 AM (IST)

    Breaking News Today Live: ಒಡಿಶಾದ ಬಾಲಸೋರ್​​ನಲ್ಲಿ ಭೀಕರ ರೈಲು ದುರಂತ, ಸಾವಿನ ಸಂಖ್ಯೆ 280ಕ್ಕೆ ಏರಿಕೆ

    ಭುವನೇಶ್ವರ: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ರೈಲು ನಿಲ್ದಾಣದ ಬಳಿ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೀಡಾಗಿದ್ದು,(Odisha Train Accident) ಮೃತಪಟ್ಟವರ ಸಂಖ್ಯೆ 280ಕ್ಕೆ ಏರಿಕೆಯಾಗಿದೆ. ಈಗಾಗಲೇ ಸ್ಥಳಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

  • 03 Jun 2023 08:26 AM (IST)

    Breaking News Today Live: ಒಡಿಶಾದ ಬಾಲಸೋರ್​​ನಲ್ಲಿ ಭೀಕರ ರೈಲು ದುರಂತ, ಘಟನಾ ಸ್ಥಳಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭೇಟಿ

    ಭುವನೇಶ್ವರ: ಒಡಿಶಾದ ಬಾಲಸೋರ್(Balasore)ಜಿಲ್ಲೆಯ ಬಹನಾಗ ರೈಲು ನಿಲ್ದಾಣದ ಬಳಿ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೀಡಾಗಿದ್ದು,(Odisha Train Accident) ಮೃತಪಟ್ಟವರ ಸಂಖ್ಯೆ 240ಕ್ಕೆ ಏರಿಕೆಯಾಗಿದೆ. ಇದೀಗ ಘಟನಾ ಸ್ಥಳಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.

Published On - 8:22 am, Sat, 3 June 23

Follow us on