ಆತ್ಮಗೌರವಕ್ಕೆ ಧಕ್ಕೆ: ರಾತ್ರಿ 2 ಗಂಟೆಯಾದರೂ ಪೊಲೀಸ್ ಠಾಣೆಯಲ್ಲಿ ಧರಣಿ ಕುಳಿತು, ಮಗುವಿಗೆ ಊಟ ಮಾಡಿಸಿ, ದೂರು ದಾಖಲಿಸಿದ ಮಹಿಳೆ! ನಡೆದಿದ್ದೇನು?
kudremukh police apathy: ವಿಷಯ ದೊಡ್ಡದಾಗುತ್ತಿದೆ ಎಂದು ತಿಳಿದು ಸರ್ಕಲ್ ಇನ್ಸ್ಪೆಕ್ಟರ್, ಠಾಣೆಗೆ ಬರುತ್ತಿದ್ದಂತೆ ಸ್ಥಳಕ್ಕೆ ಬಂದ ಸಬ್ ಇನ್ಸ್ಪೆಕ್ಟರ್ ಶಂಭುಲಿಂಗ ರಾತ್ರಿ 2 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ವಾಭಿಮಾನ ಹಾಗೂ ಆತ್ಮಗೌರವಕ್ಕೆ ಧಕ್ಕೆ ಬಂದರೆ ಮನುಷ್ಯ ಯಾವ ಹೋರಾಟಕ್ಕೆ ಬೇಕಾದರೂ ಇಳಿಯುತ್ತಾನೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್. ಮಹಿಳೆಯಾದರೂ ಆಕೆ ಪೊಲೀಸ್ ವ್ಯವಸ್ಥೆಯ ವಿರುದ್ಧ 24 ಗಂಟೆಗಳ ನಿರಂತರ ಹೋರಾಟ ಮಾಡಿ ಗೆದ್ದಿದ್ದಾಳೆ. ತನ್ನ ನಾಲ್ಕು ವರ್ಷದ ಮಗುವಿನ ಜೊತೆ ಪೊಲೀಸ್ ಠಾಣೆಯಲ್ಲಿ (kalasa police station) ಧರಣಿ (dharana) ಕುಳಿತ ಮಹಿಳೆ, ಮಗುವಿಗೆ ಅಲ್ಲೇ ಊಟ ಮಾಡಿಸಿದಳು. ಮಧ್ಯರಾತ್ರಿ ಎರಡು ಗಂಟೆಯಾದರೂ ಜಾಗ ಬಿಟ್ಟು ಕದಲಲಿಲ್ಲ. ಆಕೆ ಯಾರು ಏಕೆ ಅಂತೀರಾ? ಈ ಸ್ಟೋರಿ ನೋಡಿ. ಈಕೆಯೇ ನೋಡಿ ಆ ಗಟ್ಟಿಗಿತ್ತಿ ಮಹಿಳೆ. ಹೆಸರು ಸುನಿತಾ. ಚಿಕ್ಕಮಗಳೂರು ಜಿಲ್ಲೆ (chikkamagaluru) ಕಳಸ ತಾಲೂಕಿನ ಸಂಸೆ ನಿವಾಸಿ. ಈಕೆಯ ಕುಟುಂಬಕ್ಕೂ ಪಕ್ಕದ ಮನೆಯವರಿಗೂ ಆಗುತ್ತಿರಲಿಲ್ಲ. ಈಕೆಯ ಪತಿ ರಾಜೇಂದ್ರ ಗಲಾಟೆಯೊಂದರ ವಿಡಿಯೋ ಮಾಡುತ್ತಿದ್ದ ಎಂಬ ಕಾರಣಕ್ಕೆ ಪಕ್ಕದ ಮನೆಯವರು ಇವರ ವಿರುದ್ಧ ಹಾಗೆ ಸಾಧಿಸುತ್ತಿದ್ದರು. ಈಕೆ ಅಡುಗೆ ಮಾಡುವಾಗ ಮನೆಯ ಕಿಟಕಿ ಬಳಿ ಬಂದು ಅಶ್ಲೀಲ ಸನ್ನೆ ಮೂಲಕ ಅಸಭ್ಯವಾಗಿ ವರ್ತಿಸಿ ನಿನ್ನ ಗಂಡನನ್ನ ಬಿಡೋದಿಲ್ಲ ಎಂದಿದ್ದರು.
ಅದಕ್ಕೆ ದೂರು (FIR) ನೀಡಲು ಹೋದರೆ ಕುದುರೆಮುಖ ಪೊಲೀಸರು (kudremukh police) ಎಲ್ಲಾ ದಾಖಲೆಗಳನ್ನು ಕೊಟ್ಟರೂ ಕೂಡ ಪ್ರಕರಣ ದಾಖಲಿಸಿಕೊಳ್ಳದೆ ಎರಡು ದಿನಗಳ ಕಾಲ ಅಲೆಸಿದ್ದಾರೆ. ಆಮೇಲೆ ಕರೆಂಟ್ ಇಲ್ಲ, ಕಳಸ ಠಾಣೆಯಲ್ಲಿ ಇರಿ ಬರುತ್ತೇನೆ ಎಂದು ಹೇಳಿದ ಪಿ.ಎಸ್.ಐ. ಇಡೀ ದಿನ ಬರಲೇ ಇಲ್ಲ. ಮಧ್ಯ ರಾತ್ರಿ ಒಂದು ಗಂಟೆಯಾದರೂ ಸಬ್ ಇನ್ಸ್ಪೆಕ್ಟರ್ ಬರಲೇ ಇಲ್ಲ. ಆದರೆ, ಎಫ್.ಐ.ಆರ್ ಆಗುವತನಕ ಇಲ್ಲಿಂದ ಹೋಗುವುದಿಲ್ಲ ಎಂದು ಸುನಿತಾ ಅಲ್ಲೇ ಕೂತಿದ್ದರು. ರಾತ್ರಿ 2 ಗಂಟೆಗೆ ಠಾಣೆಗೆ ಬಂದ ಪಿಎಸ್ಐ ಶಂಭುಲಿಂಗ ಮಧ್ಯರಾತ್ರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ!
ಯಾವಾಗ ಕುದುರೆಮುಖ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದರೋ ಸುನಿತಾ ಸ್ಟೇಷನ್ ಬಿಟ್ಟು ಕದಲಲಿಲ್ಲ. ಇಡೀ ದಿನ ಠಾಣೆಯಲ್ಲಿ ಕೂತ ಸುನಿತಾ ರಾತ್ರಿ 11.30ಕ್ಕೆ ತನ್ನ ನಾಲ್ಕು ವರ್ಷದ ಮಗುವಿಗೆ ಠಾಣೆಯಲ್ಲಿ ಊಟ ಮಾಡಿಸಿ ಅಲ್ಲೇ ಮಲಗಿದ್ದಾಳೆ. ವಿಷಯ ತಿಳಿದ ಸರ್ಕಲ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಕರೆ ಮಾಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದರೂ ಕೂಡ ಸಬ್ಇನ್ಸ್ಪೆಕ್ಟರ್ ಶಂಭುಲಿಂಗ ಪ್ರಕರಣ ದಾಖಲಿಸಿಕೊಂಡಿಲ್ಲ.
ವಿಷಯ ದೊಡ್ಡದಾಗುತ್ತಿದೆ ಎಂದು ತಿಳಿದು ಸರ್ಕಲ್ ಇನ್ಸ್ಪೆಕ್ಟರ್, ಠಾಣೆಗೆ ಬರುತ್ತಿದ್ದಂತೆ ಸ್ಥಳಕ್ಕೆ ಬಂದ ಸಬ್ ಇನ್ಸ್ಪೆಕ್ಟರ್ ಶಂಭುಲಿಂಗ ರಾತ್ರಿ 2 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ದಾಖಲೆ ಇದ್ದರೂ ಕೂಡ ಎರಡು ದಿನಗಳ ಕಾಲ ಪ್ರಕರಣ ದಾಖಲಿಸಿಕೊಳ್ಳಲು ಕುದುರೆಮುಖ ಪೊಲೀಸರು ಏಕೆ ಹಿಂದೇಟು ಹಾಕಿದರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಒಟ್ಟಾರೆ, ಜನಸಾಮಾನ್ಯರಿಗೆ ಅನ್ಯಾಯವಾದರೆ ಪೊಲೀಸರ ಬಳಿ ಹೋಗುತ್ತಾರೆ. ಆದರೆ ಆ ಪೊಲೀಸರು ಹೀಗೆ ಅನ್ಯಾಯ ಮಾಡಿದರೆ ಜನ ಯಾರ ಬಳಿ ಹೋಗಬೇಕು. ಕಾಫಿನಾಡಿನ ಎಸ್ಪಿ ಉಮಾ ಪ್ರಶಾಂತ್ ಅವರು ಜಿಲ್ಲೆಯ ಇತರೆ ಠಾಣೆಗಳಲ್ಲಿ ಏನು ನಡೆಯುತ್ತಿದೆ ಎಂದು ಗಮನ ಹರಿಸಬೇಕಿದೆ. ಇಲ್ಲವಾದರೆ ಠಾಣೆಗಳಲ್ಲಿ ಸಣ್ಣವರು ಮಾಡುವ ತಪ್ಪಿಗೆ ದೊಡ್ಡವರು ತಲೆಕೊಡಬೇಕಾದ ಪರಿಸ್ಥಿತಿ ಬಂದರೂ ಬರಬಹುದು.
ವರದಿ: ಅಶ್ವಿತ್, ಟಿವಿ9, ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:36 am, Sat, 3 June 23