ಕರ್ನಾಟಕದಲ್ಲಿ ಕಾಮಗಾರಿಗಳ ಬಿಲ್ ಬಾಕಿ ಬಿಡುಗಡೆಗೆ ಕಮಿಷನ್ ಕೇಳಲಾಗುತ್ತಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘವು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೇಲೆ ಆರೋಪ ಮಾಡಿದ್ದಾರೆ. ಇದನ್ನು ರಾಜ್ಯ ಕಾಂಗ್ರೆಸ್ ನಾಯಕರು ತಳ್ಳಿಹಾಕಿದ್ದು, ಈ ಆರೋಪ ಸುಳ್ಳು ಎಂದಿದ್ದಾರೆ. ಇನ್ನು ಇದನ್ನೇ ಅಸ್ತ್ರವಾಗಿಟ್ಟುಕೊಂಡ ರಾಜ್ಯ ಬಿಜೆಪಿ ನಾಯಕರು ಕಮಿಷನ್ ಕೇಳಲಾಗುತ್ತಿದೆ ಎಂದು ಗುತ್ತಿಗೆದಾರರು ದೂರಿದ್ದಾರೆ. ರಾಹುಲ್ ಗಾಂಧಿ ಮಧ್ಯಪ್ರವೇಶಿಸಿ ಬಾಕಿ ಬಿಲ್ ಬಿಡುಗಡೆಗೆ ಸೂಚಿಸಲಿ. ಇಲ್ಲದಿದ್ದರೆ ಕರ್ನಾಟಕ ಕಾಂಗ್ರೆಸ್‌ನ ಎಟಿಎಂ ಎಂಬುದು ಸಾಬೀತಾಗಲಿದೆ ವಾಗ್ದಾಳಿ ಮಾಡಿದ್ದಾರೆ. ಇನ್ನು ಸಚಿವ ಚಲುವರಾಯಸ್ವಾಮಿ ವಿರುದ್ಧ ಬಿಜೆಪಿ ಕಾರ್ಯಕರ್ತು PayCS ಅಭಿಯಾನ ನಡೆಸಿದ್ದರು. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪಡೇಟ್ಸ್ ಇಲ್ಲಿದೆ…
ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಬೆಂಕಿ ಪ್ರಕರಣ ಬಗ್ಗೆ ಪ್ರತ್ಯೇಕವಾಗಿ ತನಿಖೆ ಮಾಡಿಸುತ್ತೇವೆ ಎಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಗುಣಮಟ್ಟದ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಹೇಳಿದರು.
ಬಿಜೆಪಿ ಅವಧಿಯಲ್ಲಿ ಕಾಮಗಾರಿಯನ್ನೇ ನಡೆಸದೆ, ಹಳೆಯ ಕಾಮಗಾರಿಗಳಿಗೆ, ಇನ್ನು ಕೆಲವು ಕಡೆ ಅರ್ಧಂಬರ್ದ ಕೆಲಸ ಮಾಡಿ ಬಿಲ್ ಹಣ ಪಡೆಯಲಾಗಿದೆ. ಈ ಎಲ್ಲಾ ಹಗರಣಗಳ ಕುರಿತು ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣವಾಗಿ ವರದಿ ಬರುವ ಮೊದಲೇ ಬಾಕಿಯಿರುವ ಬಿಲ್ ಹಣ ಬಿಡುಗಡೆ ಮಾಡುವುದು ಸಮಂಜಸವಲ್ಲ.
ನ್ಯಾಯಯುತವಾಗಿ ಕಾಮಗಾರಿ ಮಾಡಿದ ಯಾವೊಬ್ಬ…— Siddaramaiah (@siddaramaiah) August 11, 2023
ಸಲಿಂಗಕಾಮ ವ್ಯಾಖ್ಯಾನಿಸುವ ಸೆಕ್ಷನ್ 377 ರದ್ದಿಗೆ ಕೇಂದ್ರ ಮುಂದಾಗಿದೆ. ಸೆಕ್ಷನ್ 377ರ ಅಡಿ ಬರಲಿರುವ ಸಲಿಂಗಕಾಮ, ಮಾನವ-ಪ್ರಾಣಿ ಸಂಬಂಧಗಳನ್ನು ಕಾನೂನಿನ ಅಡಿಯಲ್ಲಿ ಅಸ್ವಾಭಾವಿಕ ಸಂಬಂಧಗಳೆಂದು ಪರಿಗಣಿಸಲಾಗುತ್ತೆ. ಆದರೆ ಈ ಕಾನೂನು ರದ್ದು ಮಾಡುವಂತೆ ಕೇಂದ್ರ ಮಸೂದೆ ಮಂಡಿಸಿತ್ತು. ಸಲಿಂಗಕಾಮ ಅಪರಾಧವಲ್ಲ ಎಂದು 2018ರಲ್ಲಿ ಸುಪ್ರೀಂಕೋರ್ಟ್ ಸಂವಿದಾನಿಕ ಪೀಠ ತೀರ್ಪು ನೀಡಿತ್ತು. ಅದರಂತೆಯೇ ಸಲಿಂಗಕಾಮ ವ್ಯಾಖ್ಯಾನಿಸುವ ಕಾನೂನು ರದ್ದಿಗೆ ಮೂಸೂದೆ ಮಂಡಿಸಲಾಗಿದೆ.
ಮುಖ, ಕೈಗೆ ಅಪಾಯವಾಗಿದೆ, ಅದೃಷ್ಟವಶಾತ್ ಕಣ್ಣುಗಳಿಗೆ ಹಾನಿಯಾಗಿಲ್ಲ. ಮೇಲ್ನೋಟಕ್ಕೆ ಎಲ್ಲರೂ ಬದುಕುಳಿಯುತ್ತಾರೆಂಬ ವಿಶ್ವಾಸವಿದೆ. ಆದಷ್ಟು ಬೇಗ ಗುಣಮುಖರಾಗಲಿ ಅಂತಾ ಪ್ರಾರ್ಥಿಸುವೆ ಸಿಎಂ ಸಿದ್ಧರಾಮಯ್ಯ ಹೇಳಿದರು. ಘಟನೆ ಹೇಗಾಯ್ತು ಎಂದು ತನಿಖೆ ನಡೆಸಲು ಆಯುಕ್ತರಿಗೆ ಸೂಚಿಸಿದ್ದೇನೆ. ಬೆಂಕಿ ಪ್ರಕರಣದ ಬಗ್ಗೆ ಎಫ್‌ಐಆರ್ ಸಹ ದಾಖಲಾಗಿದೆ ಎಂದು ಹೇಳಿದರು.
ಒಬ್ಬರಿಗೆ ಶೇ.38ರಷ್ಟು ಸುಟ್ಟು ಗಾಯಗಳಾಗಿವೆ ಎಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿದರು. 48 ಗಂಟೆ ಕಾಲ ಅಬ್ಸರ್ವೇಷನ್‌ನಲ್ಲಿ ಇಟ್ಟಿರುವುದಾಗಿ ಹೇಳಿದ್ದಾರೆ. ಎಲ್ಲರನ್ನೂ ಐಸಿಯುಗೆ ಶಿಫ್ಟ್ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಕಿ ಹೊತ್ತಿಕೊಂಡಿರೋದಾ? ಹಚ್ಚಿರೋದಾ ಅನ್ನೋ ಬಗ್ಗೆ ತನಿಖೆಯಾಗಲಿ ಎಂದು ಬೆಂಗಳೂರಿನಲ್ಲಿ ಪರಿಷತ್ನ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ. ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಪ್ರಕರಣದ ಬಗ್ಗೆ ತನಿಖಾ ವರದಿ ಬರಬೇಕು ಎಂದಿದ್ದಾರೆ.
ಐಎಎಸ್ ಅಧಿಕಾರಿ ಪ್ರಕಾಶ್.ಜಿ.ಸಿ ವರ್ಗಾವಣೆಗೊಳಿಸಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ಹಿನ್ನೆಲೆ ಲಾಲ್ಬಾಗ್ನಿಂದ ಪ್ರಯಾಣಿಸಲು ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಬಳಕೆ ಮಾಡಲಾಗುತ್ತಿದೆ. ಆಗಸ್ಟ್ 15ರಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬಳಕೆ ಮಾಡಬಹುದಾಗಿದೆ. ಲಾಲ್ಬಾಗ್ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ಪ್ರಯಾಣಿಸಬಹುದಾಗಿದೆ.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 9 ಜನರಿಗೆ ಗಾಯವಾಗಿದೆ. ಗುಣಮಟ್ಟ ನಿಯಂತ್ರಣ ವಿಭಾಗದ ಲ್ಯಾಬ್ & ಕಚೇರಿ ಕಟ್ಟಡದಲ್ಲಿ ಘಟನೆ ಸಂಭವಿಸಿದೆ. ಚೀಫ್ ಇಂಜಿನಿಯರ್ ಶಿವಕುಮಾರ್, ಇಇಗಳಾದ ಕಿರಣ್, ವಿಜಯಲಕ್ಷ್ಮೀ, ಎಇಇಗಳಾದ ಸಂತೋಷ್ ಕುಮಾರ್, ಶ್ರೀಧರ್, ಜೆಇಗಳಾದ ಶ್ರೀನಿವಾಸ್, ಜ್ಯೋತಿ, ಕಂಪ್ಯೂಟರ್ ಆಪರೇಟರ್ ಮನೋಜ್, ಎಫ್ಡಿಎ ಸಿರಾಜ್ ಅಹ್ಮದ್ಗೆ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದಿದೆ ಎಂದು ಹೇಳುತ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಆಕಸ್ಮಿಕ ಬೆಂಕಿಯಿಂದ ಕೆಲವರಿಗೆ ಗಾಯವಾಗಿದೆ. ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಬೆಂಕಿ ಬಿದಿದ್ದೆ. ನಾವು ಅಲ್ಲಿಗೆ ಹೋಗಿ ನೋಡಿದ ಮೇಲೆ ಎಲ್ಲಾ ಗೊತ್ತಾಗುತ್ತದೆ ಎಂದಿದ್ದಾರೆ.
ಬೆಳಗಾವಿ: ಬಿಬಿಎಂಪಿ ಕಚೇರಿಯ ದಾಖಲೆ ಕೊಠಡಿಗೆ ಬೆಂಕಿ ವಿಚಾರವಾಗಿ ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ನಮಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಾಕೆ, ಏನು ಎಂಬುದು ಈ ಬಗ್ಗೆ ತನಿಖೆ ಮಾಡಬೇಕು. ಯಾವುದೇ ದಾಖಲೆ ಇಲ್ಲದೇ ಏನನ್ನೂ ಹೇಳಲ್ಲ ಎಂದಿದ್ದಾರೆ.
ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಬಿಜೆಪಿ ಕಾರ್ಯಕರ್ತ ಪ್ರಜ್ವಲ್ ವಿರುದ್ಧ ದೂರು ದಾಖಲಾಗಿದೆ. ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ದೂರು ನೀಡಲಾಗಿದೆ. ಹಿಂದೂ ಸಾಮ್ರಾಜ್ಯ ಮೂಡಿಗೆರೆ ಫೇಸ್ಬುಕ್ ಪೇಜ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮುಖ್ಯ ಇಂಜಿನಿಯರ್ ಶಿವಕುಮಾರ್ ಸೇರಿ 8-10 ಸಿಬ್ಬಂದಿಗೆ ಗಾಯಗಳಾಗಿವೆ. ಮುಖ, ಕೈ ಕಾಲು ಸೇರಿದಂತೆ ದೇಹದ ಕೆಲವೆಡೆ ಸುಟ್ಟು ಗಾಯಗಳಾಗಿವೆ. ಬೆಂಜೀನ್ ರಾಸಾಯನಿಕ ಸ್ಫೋಟದಿಂದ ದುರಂತ ಸಂಭವಿಸಿದೆ.
5 ಗ್ಯಾರಂಟಿಗಳಿಂದ ಬಡವರಿಗೆ ತಿಂಗಳಿಗೆ 4ರಿಂದ 5 ಸಾವಿರ ಸಿಗುತ್ತದೆ. ಶಕ್ತಿ ಯೋಜನೆಯಿಂದ ಮಹಿಳೆಯರು ಉಚಿತ ಪ್ರಯಾಣ ಮಾಡ್ತಿದ್ದಾರೆ. ಇದರಿಂದ ಉದ್ಯೋಗ ಸೃಷ್ಟಿಯಾಗಿ ಸರ್ಕಾರಕ್ಕೆ ಆದಾಯ ಬರುತ್ತದೆ. ಯಾವ ಸರ್ಕಾರವೂ ಇಂತಹ ಯೋಜನೆಗಳನ್ನು ಜಾರಿ ಮಾಡಿಲ್ಲ. ಬಿಜೆಪಿಯವ್ರು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಲು ಶುರು ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅಧಿಕಾರಕ್ಕೆ ಬಂದ ಮೇಲೆ 5 ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದಿದ್ದೆವು. ಗ್ಯಾರಂಟಿ ಜಾರಿ ಬಳಿಕ JDS, ಬಿಜೆಪಿಯವರಿಗೆ ಹೊಟ್ಟೆ ಉರಿ ಶುರುವಾಗಿದೆ ಎಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸಿಎಂ ಹೇಳಿದರು. ಈಗ ನಮ್ಮ ಮೇಲೆ ಸುಳ್ಳು ಆರೋಪ ಮಾಡಲು ಶುರು ಮಾಡಿದ್ದಾರೆ ಎಂದರು.
ಲಕ್ಷ್ಮಣ ಸವದಿ ಬಿಜೆಪಿಯಲ್ಲಿದ್ದಾಗಲೂ ನನಗೆ ಒಳ್ಳೆಯ ಸ್ನೇಹಿತರು. ಬೇರೆ ಕೆಲಸ ಇದ್ದರೂ ಅಥಣಿಗೆ ಬಂದು ಕಾಮಗಾರಿಗೆ ಚಾಲನೆ ನೀಡಿದೆ. ಲಕ್ಷ್ಮಣ ಸವದಿಯಿಂದ ಕೆಲವು ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ಹಾಗಾಗಿ ಅವರಿಗೆ ಕಾಂಗ್ರೆಸ್ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಲಕ್ಷ್ಮಣ ಸವದಿ ಕಾಂಗ್ರೆಸ್ಗೆ ಬಂದ ಮೇಲೆ ನಮ್ಮ ಪಕ್ಷಕ್ಕೆ ಶಕ್ತಿ ಬಂದಿದೆ ಎಂದು ವಿವಿಧ ಆಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸಿಎಂ ಸಿದ್ಧರಾಮಯ್ಯ ಹೇಳಿದರು.
ಅಥಣಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಏನಾಗುತ್ತೆಂದು ಜನ ನೋಡುತ್ತಿದ್ದಾರೆ. ಮತದಾರರ ಮುಂದೆ ಏನೂ ನಡೆಯಲ್ಲ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ನೀಡದ್ದಾರೆ. ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವಾಗ ಯಾವುದೇ ಬೇಡಿಕೆ ಇಡಲಿಲ್ಲ ಎಂದಿದ್ದಾರೆ.
ಹಣ ಸಿಗದಿದ್ದಕ್ಕೆ ಗುತ್ತಿಗೆದಾರರು ರಾಜ್ಯಪಾಲರ ಬಳಿ ಹೋಗಿದ್ದಾರೆ. ಗುತ್ತಿಗೆದಾರರು ದಯಾಮರಣ ಕೋರುವ ಸಂದರ್ಭ ಬಂದಿರಲಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮಧ್ಯಪ್ರವೇಶಿಸುವ ಮನಸ್ಸಿಲ್ಲ. ಹಾಗಾಗಿ ಇದು ಎಟಿಎಂ ಸರ್ಕಾರ ಎನ್ನುವುದು ನಿಜವಾಗುತ್ತದೆ. ಬಿಬಿಎಂಪಿ ಬಿಲ್ ಬಾಕಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಅವಧಿಯಲ್ಲೇ ಬಿಲ್ ಪಾವತಿ ಆಗಿಲ್ಲ ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಮಾಜಿ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದು, ಸರ್ಕಾರ ಏನೇನು ಮಾಡಿದೆ ಎಂಬುದು ಗುತ್ತಿಗೆದಾರರಿಗೆ ಗೊತ್ತಿದೆ. ಸರ್ಕಾರ ಹಣ ಬಿಡುಗಡೆ ಮಾಡಿದ್ದರೆ ಅನುಮಾನವೇ ಇರುತ್ತಿರಲಿಲ್ಲ. ಈ ಹಿಂದೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದರು. ಈಗ ಯೂಟರ್ನ್ ಹೊಡೆದ್ರೆ ಕ್ಲೀನ್‌ಚಿಟ್ ಕೊಟ್ಟರೆ ಬಿಲ್ ಸಿಗುತ್ತಾ ಎಂದದಿದ್ದಾರೆ.
ನಾನು ಸಿಎಂ, ಡಿಸಿಎಂಗೆ ಏನು ಕೇಳಬೇಕು, ಕೇಳಬಾರದು ಗೊಂದಲದಲ್ಲಿ ಇದ್ದೇನೆ. ನಿಮ್ಮ ಪ್ರಸನ್ನತೆ ನೋಡಿದ್ರೆ ನಾನು ಏನ್ ಕೇಳ್ತೀನಿ ಅದನ್ನೆಲ್ಲ ಕೊಡ್ತೀರಾ ಭಾವನೆ ಕಾಡುತ್ತಿದೆ. ನಮ್ಮ ಕಷ್ಟ ನೋಡಿದೀನಿ ನಿಮ್ಮ ಎಲ್ಲರ ಪರಿಶ್ರಮದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣದ ವೇಳೆ ಭದ್ರತಾ ಲೋಪ ಉಂಟಾಗಿರುವಂತಹ ಘಟನೆ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಶಾಸಕ ಲಕ್ಷ್ಮಣ್ ಸವದಿ ಮನೆಯಿಂದ ಬಸವೇಶ್ವರ ವೃತ್ತಕ್ಕೆ ಸಿದ್ಧರಾಮಯ್ಯ ತೆರಳುತ್ತಿದ್ದ ವೇಳೆ ಸಿಎಂ ಕಾರಿನ ಹಿಂದೆಯೇ ಬೆಂಗಾವಲು ವಾಹನದ ಮುಂಚೆಯೇ ಸವಾರರು ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿದುಕೊಂಡು ಹೋಗಿದ್ದಾರೆ.
ಕಾಮಗಾರಿಗಳ ಕುರಿತು 4 ತಂಡ ರಚಿಸಿ ತನಿಖೆ ಮಾಡಿಸುತ್ತಿದ್ದೇವೆ ಎಂದು ಬೆಳಗಾವಿ ಸಾಂಬ್ರಾ ಏರ್ಪೋರ್ಟ್ನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು. ಗುಣಮಟ್ಟದ ಕಾಮಗಾರಿಗೆ ಆಗಿದೆಯಾ ಇಲ್ವಾ ಗೊತ್ತಾಬೇಕು. ಬೆಂಗಳೂರಿನಲ್ಲಿ 4 ತಂಡ ರಚನೆ ಮಾಡಿ ತನಿಖೆ ಮಾಡಿಸುತ್ತಿದ್ದೇವೆ. ವರದಿ ಕೊಟ್ಟ ಬಳಿಕ ತಪ್ಪು ಮಾಡಿಲ್ಲ ಅಂದ್ರೆ ಬಿಲ್ ಕೊಡುತ್ತೇವೆ. ಈ ರಾಜ್ಯವನ್ನು ಬಿಜೆಪಿಯವರು ಹಾಳು ಮಾಡಿದ್ದಾರೆ ಎಂದರು.
ಕಲಬುರಗಿ: ಕಮಿಷನ್ ಪಡೆದಿಲ್ಲಾ ಅಂದರೇ ಪ್ರಮಾಣ ಮಾಡಲಿ ಅನ್ನೋ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಯಾರು ನಂಬುತ್ತಾರೆ ಅವರು ಆಣೆ ಪ್ರಮಾಣ ಮಾಡುತ್ತಾರೆ. ಬಿಜೆಪಿಯವರು ಕೇಳಿದ್ದಕ್ಕೆಲ್ಲಾ ಉತ್ತರ ಕೊಡಲು ಆಗಲ್ಲ. ನಾವು ಹಗರಣಗಳ ಬಗ್ಗೆ ಸಾಕ್ಷಿ ಇಟ್ಟು ಮಾತನಾಡಿದ್ದೇವು. ಪ್ರಮಾಣ ಮಾಡಿ ಏನು ಮಾಡುವುದು ಇದೆ. ದೇವಸ್ಥಾನಕ್ಕೆ ಯಾಕೆ ಕೋರ್ಟ್ಗೆ ಹೋಗೋಣ ಬನ್ನಿ. ಸಂವಿಧಾನವಿದೆ, ಕಾನೂನು ಇದೆ
ಅದನ್ನು ಬಿಟ್ಟು ಈ ದೇವಸ್ಥಾನಕ್ಕೆ ಬನ್ನಿ, ಆ ದೇವಸ್ಥಾನಕ್ಕೆ ಬನ್ನಿ ಅಂದರೆ ಜನರಿಗೆ ಅದರಿಂದ ನೆಮ್ಮದಿ ಸಿಗುತ್ತಾ. ನ್ಯಾಯ ಕೊಡಿಸಬೇಕು ಅಂದರೆ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ನಾವು ಹೇಗೆ ದಾಖಲೆ ಇಟ್ಟು ಕೋರ್ಟ್ ಗೆ ಹೋಗಿದ್ದೇವೋ ಅದೇ ರೀತಿ ಬಿಜೆಪಿ ದಾಖಲೆ ಇಟ್ಟುಕೊಂಡು ಕೋರ್ಟ್ಗೆ ಹೋಗಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಳಗಾವಿ: ಕಾಮಗಾರಿಗಳ ಕುರಿತು 4 ತಂಡ ರಚಿಸಿ ತನಿಖೆ ಮಾಡಿಸುತ್ತಿದ್ದೇವೆ. ಗುಣಮಟ್ಟದ ಕಾಮಗಾರಿಗೆ ಆಗಿದೆಯಾ ಇಲ್ವಾ ಗೊತ್ತಾಬೇಕು. ಈ ರಾಜ್ಯವನ್ನು ಬಿಜೆಪಿಯವರು ಹಾಳು ಮಾಡಿದ್ದಾರೆ. ನಾವು 135 ಸ್ಥಾನ ಗೆದ್ದಿದ್ದಕ್ಕೆ ಬಿಜೆಪಿಯವರಿಗೆ ಭಯ ಶುರುವಾಗಿದೆ. ಎಷ್ಟೇ ದುಡ್ಡು ಖರ್ಚು ಮಾಡಿದರೂ ಬಿಜೆಪಿಯವರು ಗೆಲ್ಲಲಿಲ್ಲ. ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ 20 ಕ್ಷೇತ್ರ ಗೆಲ್ಲುವ ಗುರಿ ಇದೆ ಎಂದು ಬೆಳಗಾವಿ ಏರ್ಪೋರ್ಟ್ನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ: ಬಿಜೆಪಿಯವರಿಗೆ ಪ್ರಚಾರ ಮಾಡಲು ಏನು ಇಲ್ಲ. ಹೀಗಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮೂರು ವರ್ಷ ಅವರು ಬಿಲ್ ಕೊಟ್ಟಿಲ್ಲ. ಸುಮ್ಮನೆ ಇರದವರು ಮೈ ಪರಚಿಕೊಂಡರಂತೆ. ಬಿಜೆಪಿಯವರಿಗೆ ಹೊಟ್ಟೆ ಊರಿ ಶುರುವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಸರ್ಕಾರದ ಮೇಲೆ ಜವಾಬ್ದಾರಿ ಇದೆ. ನಿಮ್ಮ ಪರವಾಗಿ ಇರ್ತೀವಿ ಅಂತ ಗುತ್ತಿಗೆದಾರರಿಗೆ ನಾವು ಹೇಳುವುದಿಲ್ಲ. ಯಾರನ್ನೂ ನಾವು ಎತ್ತಿ ಕಟ್ಟುವ ಕೆಲಸ ಮಾಡುವುದಿಲ್ಲ. ನಮ್ಮ ಸರ್ಕಾರದಲ್ಲಿ ಇಂತ ವ್ಯಕ್ತಿ ಅಂತ ಎಲ್ಲೂ ಹೇಳಿಲ್ಲ. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಹಣಕ್ಕೆ ಡಿಮ್ಯಾಂಡ್ ಇಟ್ಟಿರೋದನ್ನು ಗುತ್ತಿಗೆದಾರರು ನೇರವಾಗಿ ಆಪಾದನೆ ಮಾಡುತ್ತಿದ್ದಾರೆ. ನಮ್ಮ ಮೇಲೆ ಮಾಡಿದ್ದ 40% ಆರೋಪವನ್ನೂ ತನಿಖೆಗೆ ಕೊಡಲಿ. ಇವರ ಕಾಲದಲ್ಲಿ ಆಗುತ್ತಿರುವ ಇರುವ ಆರೋಪಗಳಿಗೂ ತನಿಖೆಗೆ ಮುಂದಾಗಲಿ ಮಾಜಿ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಬೆಂಗಳೂರು: ಆಗಸ್ಟ್ 31ರೊಳಗೆ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇವೆ. ಆತ್ಮಹತ್ಯೆ ಮಾತ್ರ ದಾರಿ ಅನ್ನೋ ಪರಿಸ್ಥಿತಿ ಬಂದಿದೆ. ಸಿದ್ದರಾಮಯ್ಯ ಅವರಿಗೆ ನಿನ್ನೆ ಕೂಡ ಪತ್ರ ಬರೆದಿದ್ದೇನೆ. ಎಲ್ಲರನ್ನೂ ಕರೆದು ಸಭೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಕೆಲ ಬಿಬಿಎಂಪಿ ಗುತ್ತಿಗೆದಾರರು ಬಿಜೆಪಿ ನಾಯಕರ ಬಳಿ ಯಾಕೆ ಹೋದರು ? ನನಗೆ ಅನಿಸುತ್ತಿದೆ ಇದು ರಾಜಕೀಯ ಪ್ರೇರಿತ ಅಂತ ಎಂದು ಕೆಂಪಣ್ಣ ಹೇಳಿದರು.
ಬೆಂಗಳೂರು: ಬಾಕಿ ಬಿಲ್ ಪಾವತಿಗೆ ಮೊದಲಿ ನಾವು ಮೊದಲು ಆರಂಭ ಮಾಡಿದಾಗ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆಗೆ ಪತ್ರ ಕೊಟ್ಟೆವು. ಬಳಿಕ ಪ್ರಧಾನಿಗೆ ಪತ್ರ ಕೊಟ್ಟೆವು. ಸಿದ್ದರಾಮಯ್ಯ, ಕುಮಾರಸ್ವಾಮಿ ಪತ್ರ ಕೊಟ್ಟೆವು. ಕುಮಾರಸ್ವಾಮಿ ನಮ್ಮ ಕೇಸ್ ತಗೋಳಲಿಲ್ಲ. ಸಿದ್ದರಾಮಯ್ಯ ಕೂಡ ಕೇಸ್ ತೆಗೆದುಕೊಳ್ಳಲಿಲ್ಲ. ಲೀಡರ್ ಆಫ್ ಆಪೋಸೀಷನ್ ಆಗಿ ಸಿದ್ದರಾಮಯ್ಯ ಕರೆದರು ಹೋದೆ. ವಿಪಕ್ಷ ನಾಯಕ ಕರೆದರೆ ಹೋಗಲ್ಲ ಅನ್ನೋದಕ್ಕೆ ಆಗಲ್ಲ ಎಂದು ಕೆಂಪಣಗಣ ಹೇಳಿದರು.
ಬೆಂಗಳೂರು: ನಾವು 40% ಭ್ರಷ್ಟಾಚಾರ ನಡೆಯುತ್ತಿದೆ ಅಂತ ಆರೋಪ ಮಾಡಿದ್ದೇವು. ನಮ್ಮ ಬಳಿ ದಾಖಲೆ ಇದೆ. ಒನ್ ಮ್ಯಾನ್ ಕಮೀಷನ್ ಬಳಿ ಹೋಗಿ ದಾಖಲೆ ಕೊಡುತ್ತೇನೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಭೇಟಿಯಾಗಲು ಸಾಕಷ್ಟು ಪ್ರಯತ್ನ ಮಾಡಿದೇವು. ಆದರೆ ಅವರು ನಮಗೆ ಭೇಟಿಗೆ ಅವಕಾಶ ಕೊಡಲಿಲ್ಲ. ಅವರಿಗೆ ಚೀಟಿ ಕೊಟ್ಟೆವು, ಜೇಬಲ್ಲಿ ಇಟ್ಟುಕೊಂಡರು. ಕರೆದು ಮಾತಾಡುವ ಕೆಲಸ ಮಾಡಲಿಲ್ಲ. ಅವರಿಗೆ ಬೇಕಾದವರಿಗೆ ಮಾತ್ರ ಹಣ ಬಿಡುಗಡೆ ಮಾಡಿದ್ದಾರೆ. ಆದರೆ ನಮಗೆ ಈಗಲೂ ಅವರ ಮೇಲೆ ಗೌರವ ಇದೆ. ನಮ್ಮ ಪರಿಸ್ಥಿತಿ ಇದೀಗ ಬಾಂಡ್ಲಿಯಿಂದ ಬೆಂಕಿಗೆ ಬಿದ್ದಂತಾಗಿದೆ. ನಮಗೆ ಪೇಮೆಂಟ್ ಕೊಡಿ. ಕಂಟ್ರಾಕ್ಟರ್ಗಳಿಗೂ ಭಾಗ್ಯ ಕೊಡಿ ಸ್ವಾಮಿ. ಸರ್ಕಾರ ಎಲ್ಲರಿಗೂ ಭಾಗ್ಯಗಳನ್ನು ಕೊಡುತ್ತಿದೆ. ನಮಗೆ ಕೆಲಸ ಮಾಡಿರೋವುದಕ್ಕೆ ಭಾಗ್ಯ ಕೊಡಿ. ಸರ್ಕಾರ ಬಂದು ಮೂರು ತಿಂಗಳಾದರೂ ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಸಿಎಂಗೆ ಪತ್ರ ಬರೆಯುತ್ತೇವೆ . ನಾವು ಡೆಡ್ ಲೈನ್ ಕೊಡ್ತಿಲ್ಲ ನಮಗೆ ಈಗಲೆ ಹಣ ಬಿಡುಗಡೆ ಆಗಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು: ಸರ್ಕಾರದ ವಿರುದ್ಧ ನಾವು ಯಾರೂ ಕಮಿಷನ್ ಆರೋಪ ಮಾಡಿಲ್ಲ. ಏಳು ತಿಂಗಳಿಂದ ಹಣ ಬಾಕಿ ಇದೆ. ಇದರಲ್ಲಿ ಸ್ವಲ್ಪ ಹಣ ಬಿಡುಗಡೆಯಾಗಿದೆ. ನೂರು ಕೋಟಿ ಸಾಲಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದೇವೆ. ಅವರು ಎಷ್ಟು ತಿಂಗಳು ಅಂತ ಕೇಳಿದರು. ಅದಕ್ಕೆ ಮೂರು ವರ್ಷದಿಂದ ಅಂತ ಹೇಳಿದ್ದೇವೆ. ಅದಕ್ಕೆ ನಾನು ಬಂದು ಮೂರು ತಿಂಗಳಾಗಿದೆ. ನಮ್ಮ ಕುತ್ತಿಗೆ ಮೇಲೆ ಕೂತಿದ್ದೀರಿ ಅಂದರು. ಕಂಟ್ರಾಕ್ಟರ್ಸ್ ಸೂಸೈಡ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಅಂತ ಹೇಳಿದ್ದೇವೆ. ಯಾವ ಸಚಿವರು ಕಮಿಷನ್ ಕೇಳಿಲ್ಲ. ನಮಗೆ ರಾಜ್ಯಾದ್ಯಂತ ಮಾಹಿತಿ ಬಂದಿದೆ. ಯಾವುದೇ ಗುತ್ತಿಗಾರರು ಬಂದು ನನ್ನ ಬಳಿ ದೂರು ಹೇಳಿಲ್ಲ. ಯಾರೂ ಕೊಟ್ಟಿರಬಹುದು. ಮೂರನೇ ವ್ಯಕ್ತಿ ಆರೋಪ ಮಾಡಿರಬಹುದು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ.
ಬೆಂಗಳೂರು: ನಾವು ಕಮಿಷನ್ ಹಿಂದೆ ಬಿದ್ದವರಲ್ಲ. ಕಮಿಷನ್ ಹಗರಣಗಳ ಹಿಂದಿರುವ ಭ್ರಷ್ಟರ ಬೆನ್ನು ಬಿದ್ದಿದ್ದೇವೆ. ಈಗಾಗಲೇ ಗುತ್ತಿಗೆದಾರರು ಬಾಕಿ ಬಿಲ್ ಕುರಿತು ಚರ್ಚಿಸಿದ್ದಾರೆ. P.O.W ಕಾಮಗಾರಿಗಳ ಬಿಲ್ ಬಿಡುಗಡೆಗೆ ಸೂಚನೆ ನೀಡಲಾಗಿದೆ. ಕೆಲವು ಪ್ರಕ್ರಿಯೆ ಮುಗಿದ ಕೂಡಲೆ ಹಣ ಬಿಡುಗಡೆ ಮಾಡುತ್ತೇವೆ. ಕೆಲವು ಗುತ್ತಿಗೆದಾರರು ಸ್ವಾರ್ಥ, ದುರುದ್ದೇಶಕ್ಕೆ ಆರೋಪ ಮಾಡುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ: ಸರ್ವೆಗೆ ತೆರಳಿದ್ದ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಕುಟುಂಬವೊಂದರ ಸದಸ್ಯರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ. ಗಣಿ ಇಲಾಖೆ ಅಧಿಕಾರಿಗಳು ಕಲ್ಲುಕ್ವಾರಿ ಬಗ್ಗೆ ಸರ್ವೆಗೆ ಮುಂದಾಗಿದ್ದರು. ಈ ವೇಳೆ ಬಂಕಾಪುರ ಗ್ರಾಮದ ಬೋರೇಗೌಡ ಕುಟುಂಬಸ್ಥರು ಸರ್ವೆ ವಿರೋಧಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ.
ಚಿಕ್ಕಮಗಳೂರು: ಚುನಾವಣೆ ವೇಳೆ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿದ್ದರು. ಪೇಸಿಎಂ, 40% ಸರ್ಕಾರ ಎಂದು ಆರೋಪಿಸಿ ಪ್ರಚಾರ ಮಾಡಿದ್ದರು. ಈಗ ಸರ್ಕಾರದ ವಿರುದ್ಧ ಶೇ 15 ರಷ್ಟು ಕಮಿಷನ್ ಆರೋಪ ಕೇಳಿ ಬಂದಿದೆ. ಹಿಂದಿನ ಮತ್ತು ಮುಂದಿನ ಕೆಲಸಗಳಿಗೂ ಶೇ 15 ರಷ್ಟು ಕಮಿಷನ್ ಕೇಳುತ್ತಿದ್ದಾರೆ. ನೀರಾವರಿ ಇಲಾಖೆಯಲ್ಲಿ 25 ಸಾವಿರ ಕೋಟಿ ರೂ. ಬಾಕಿ ಇದೆ. ನನಗೆ ಬಂದಿದ್ದು ಬರೀ 600 ಕೋಟಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಸಹಾಯಕತೆ ತೋರಿಕೊಂಡಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ಮಾಡಿದರು.
ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಖಾಸಗಿ ಶಾಲೆಗಳ ಸಂಘನೆಗಳ ಸಭೆ ಕರೆದಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಸಭೆ ನಿಗದಿಪಡಿಸಲಾಗಿದೆ. ಖಾಸಗಿ ಶಾಲೆ ಒಕ್ಕೂಟ ರುಪ್ಸಾ, ಕುಸುಮ, ಕ್ಯಾಮ್ಸ್ ಸೇರಿದಂತೆ ಹಲವು ಸಂಘಟನೆಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಯಾದಗಿರಿ: ಅಂಗನವಾಡಿ ಮೇಲ್ಛಾವಣಿ ಪ್ಲಾಸ್ಟರ್ ಕುಸಿತವಾಗಿ ಮೂವರು ಮಕ್ಕಳು ಗಾಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮರಕಲ್ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ 24 ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2011ರಿಂದ ದೇಶದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ನೆಲೆಸಿರುವ ಮಾಹಿತಿ ದೊರೆತಿದೆ. ಬ್ರೋಕರ್ಗೆ ತಲಾ 20 ಸಾವಿರ ಹಣ ನೀಡಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಮಾಹಿತಿ ದೊರೆತಿದೆ.
ಚಿತ್ರದುರ್ಗ: ರಾಜ್ಯ ಲೋಕಾಯುಕ್ತ ನ್ಯಾಯಾದೀಶ ಬಿ.ಎಸ್.ಪಾಟೀಲ್ ಬೆಳ್ಳಂಬೆಳಿಗ್ಗೆ ನಗರದ ಮೆದೇಹಳ್ಳಿ ರಸ್ತೆ, ಗೋಪಾಲಪುರ ರಸ್ತೆ ಪರಿಶೀಲನೆ ಮಾಡಿದರು. ಲೋಕಾಯುಕ್ತ ಎಸ್ಪಿ ವಾಸುದೇವರಾಮ, ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಸಾಥ್ ನೀಡಿದರು. ಇನ್ನು ನಗರದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳದ ನಗರಸಭೆ ಪೌರಾಯುಕ್ತರಿಗೆ ತರಾಟೆಗೆ ತೆಗೆದುಕೊಂಡರು.
ಬಿಬಿಎಂಪಿ ಬಾಕಿ ಬಿಲ್ ಬಿಡುಗಡೆಯಾಗದ ಹಿನ್ನಲೆ ಇವತ್ತು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇಂದು (ಆ.11) ಬೆಳಗ್ಗೆ 11:30 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಚಾಮರಾಜಪೇಟೆಯ ಬಿಬಿಎಂಪಿ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಯಲಿದೆ.
ಬೆಳಗಾವಿ: ಇಂದು (ಆ.11) ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಯಲಿದೆ. ಅಥಣಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರು ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ
Published On - 8:22 am, Fri, 11 August 23