Karnataka Breaking News Highlights: ಚುನಾವಣೆ ಮುಗಿದು ಬರೋಬ್ಬರಿ ಆರು ತಿಂಗಳ ಬಳಿಕ ಬಿಜೆಪಿ ತನ್ನ ವಿಪಕ್ಷ ನಾಯಕ ಯಾರು ಅನ್ನೋದನ್ನ ಘೋಷಿಸಿದೆ. ಕೆಲವೇ ದಿನಗಳ ಹಿಂದಷ್ಟೇ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದ ಬಳಿಕ ಯಾರು ವಿಪಕ್ಷ ನಾಯಕರಾಗ್ತಾರೆ ಅನ್ನೋ ಕುತೂಹಲ ಹೆಚ್ಚಾಗಿತ್ತು. ಸದ್ಯ ಬಿಜೆಪಿ ತಂತ್ರಗಾರಿಕೆಯ ಭಾಗವಾಗಿ ಒಕ್ಕಲಿಗ ನಾಯಕ R.ಅಶೋಕ್ಗೆ ವಿಪಕ್ಷ ನಾಯಕನ ಪಟ್ಟ ಕಟ್ಟಿದೆ. ಅಕ್ರಮ ವಿದ್ಯುತ್ ಸಂಪರ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು ಬೆಸ್ಕಾಂಗೆ ದಂಡ ಪಾವತಿ ಮಾಡಿದ್ದಾರೆ. ದೀಪಾವಳಿ ಪ್ರಯುಕ್ತ ಜೆ.ಪಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ದೀಪಾವಳಿ ಅಲಂಕಾರಕ್ಕಾಗಿ ವಿದ್ಯುತ್ ಕಂಬದಿಂದ ನೇರ ಸಂಪರ್ಕ ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಕಾಂಗ್ರೆಸ್ ವಿಡಿಯೋ ಸಮೇತ ‘ವಿದ್ಯುತ್ ಕಳ್ಳ’ ಎನ್ನುವ ಆರೋಪ ಮಾಡಿತ್ತು. ಇದರ ಬೆನ್ನಲ್ಲೆ ಬೆಸ್ಕಾಂ ವಿಧಿಸಿದ 68,526 ರೂಪಾಯಿ ದಂಡದ ಮೊತ್ತವನ್ನು ಕುಮಾರಸ್ವಾಮಿ ಪಾವತಿಸಿದ್ದಾರೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ…..
ಆಪ್ತರ ಜೊತೆಗೆ ನಿನ್ನೆ ತಡರಾತ್ರಿ ಸತೀಶ್ ಜಾರಕಿಹೊಳಿ ದುಬೈಗೆ ತೆರಳಿದ್ದಾರೆ. ನಾಲ್ಕೈದು ಮಂದಿ ಆಪ್ತರ ಜೊತೆಗೆ ನಿನ್ನೆ ರಾತ್ರಿ ಸತೀಶ್ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಕಲಿಯುವುದು ಇನ್ನೂ ಬಹಳಷ್ಟು ಇದೆ. ಹಗುರವಾದ ಮಾತುಗಳು ಬೇಡ ಎಂದು ಸಿ.ಎಸ್.ಪುಟ್ಟರಾಜು ಎಚ್ಚರಿಕೆ ನೀಡಿದ್ದಾರೆ. ಜೆಡಿಎಸ್ ಪಕ್ಷ ಬಿಟ್ಟು ಯಾರೂ ಹೋಗಲ್ಲ, ಒಗ್ಗಟ್ಟಿನಿಂದ ಇದ್ದೇವೆ. ಆದರೂ ನಮ್ಮ ಪಕ್ಷದ ಶಾಸಕರಿಗೆ ಗಾಳ ಹಾಕುವ ಕೆಲಸ ನಡೀತಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಮಾಡಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ವಿಪಕ್ಷ ನಾಯಕ ಆರ್.ಅಶೋಕ್ ಭೇಟಿಯಾಗಿದ್ದಾರೆ. ವಿಪಕ್ಷ ನಾಯಕರಾಗಿ ಆಯ್ಕೆ ಹಿನ್ನೆಲೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್.ಡಿ.ದೇವೇಗೌಡ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಕಾವೇರಿ, ಮಹದಾಯಿ ನದಿ ವಿಚಾರವಾಗಿ ಹೆಚ್‌ಡಿ ದೇವೇಗೌಡರು ಸಲಹೆ ನೀಡಿದ್ದಾರೆ. ಸಂಪೂರ್ಣ ಸಹಕಾರ ನೀಡುವುದಾಗಿ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದರು. ನೀವು ಕುಮಾರಸ್ವಾಮಿ ಒಟ್ಟಾಗಿ ಕೆಲಸಮಾಡಿ ಅಂತಾ ಸಲಹೆ ನೀಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ವಿವೇಕಾನಂದ ಅನ್ನೋರು ಮೈಸೂರು ಬಿಇಒ. ಈಗ ವರ್ಗಾವಣೆ ಆಗಿರುವ ವಿವೇಕಾನಂದ ಪೊಲೀಸ್ ಅಧಿಕಾರಿ. ವಿವಿ ಪುರಂಗೆ ಪೊಲೀಸ್ ಇನ್ಸ್ಪೆಕ್ಟರ್ ವರ್ಗಾವಣೆ ಆಗಿದ್ದಾರೆ. ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಸುಖಾಸುಮ್ಮನೆ ಆರೋಪ ಮಾಡಿದ್ದಾರೆ. ಈ ಇಬ್ಬರೂ ವಿವೇಕಾನಂದಗಳಿಗೆ ಸಂಬಂಧವೇ ಇಲ್ಲ. ವಿಪಕ್ಷಗಳು ಹತಾಶವಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿವೆ ಎಂದಿದ್ದಾರೆ.
ವರ್ಗಾವಣೆ ದಂಧೆ ಸಾಬೀತುಪಡಿಸಿದರೆ ಸಿಎಂ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಎಂದಿದ್ದರು. ಪೊಲೀಸ್ ವರ್ಗಾವಣೆ ಪಟ್ಟಿಯಿಂದ ಸಿಎಂ ಸುಳ್ಳು ಹೇಳಿದ್ದೆಂದು ಗೊತ್ತಾಗಿದೆ. ಹಾಗಾದ್ರೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಯಾವಾಗ ರಾಜೀನಾಮೆ ಕೊಡುತ್ತಾರೆ ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ವರ್ಗಾವಣೆ ದಂಧೆ ಸಾಬೀತುಪಡಿಸಿದ್ರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ ನಿವೃತ್ತಿ ಯಾವಾಗ: ಛಲವಾದಿ ನಾರಾಯಣಸ್ವಾಮಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರಿಂದ ಟೆಂಪಲ್ ರನ್ ಮುಂದುವರೆದಿದ್ದು, ನಾಳೆಯಿಂದ 2 ದಿನಗಳ ಕಾಲ ಮೈಸೂರು ಪ್ರವಾಸ ಮಾಡಲಿದ್ದಾರೆ. ಚಾಮುಂಡಿಬೆಟ್ಟ, ಸುತ್ತೂರು ಮಠ, ಗಣಪತಿ ಸಚ್ಚಿದಾನಂದ ಆಶ್ರಮ, ರಾಮಕೃಷ್ಣ ಆಶ್ರಮ, ಆದಿಚುಂಚನಗಿರಿ ಶಾಖಾ ಮಠ, ಭೈರಪ್ಪ ನಿವಾಸ, RSS ಕಚೇರಿ, ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಸೋಮವಾರ ಮೈಸೂರು ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಕನಕಪುರದಲ್ಲಿ ಸೋತವರಿಗೆ ವಿಪಕ್ಷ ಸ್ಥಾನ ಎಂದು ಕಾಂಗ್ರೆಸ್ ಟ್ವೀಟ್ಗೆ ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದು, ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋತಿದ್ದಾರಲ್ವೇ? ಅವರನ್ನು
ಎಐಸಿಸಿ ಅಧ್ಯಕ್ಷರಾಗಿ ಮಾಡಿದ್ದೀರಲ್ಲಾ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಯತೀಂದ್ರ ಮಾತನಾಡಿದ ಆಡಿಯೋ, ವಿಡಿಯೋ ರಿಲೀಸ್ ಆಗಿದೆ. ಯತೀಂದ್ರ ನಡೆ ಬಹಳ ಅನುಮಾನ ಮೂಡಿಸುತ್ತಿದೆ ಎಂದು ಉಡುಪಿಯಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಶಾಸಕ ಸಿ.ಟಿ.ರವಿ ವಾಗ್ದಾಳಿ ಮಾಡಿದ್ದಾರೆ. ಸಿದ್ದರಾಮಯ್ಯ ಯತೀಂದ್ರ ಮಾತಿಗೆ ಹೆಚ್ಚು ಬೆಲೆ, ಮನ್ನಣೆ ಕೊಡ್ತಿದ್ದಾರೆ. ಶ್ಯಾಡೋ ಸಿಎಂ ಗುಟ್ಟಾಗಿ ಉಳಿದಿಲ್ಲ ಎಂದಿದ್ದಾರೆ.
ಹೇ ಜಗನ್ನಾಥ ಪ್ರಭು, ನೀನೆಷ್ಟು ಕ್ರೂರಿ..?! “ಜಾರಿದವರ ಯತ್ನ ಬೆಲ್ಲ” ಆಗ್ಲಿಲ್ಲವಲ್ಲಪ್ಪ..! ಎಂದು ಕಾಂಗ್ರೆಸ್ ಟೀಕೆ ಮಾಡಿದೆ. ಜೊತೆಗೆ ಬಿ.ವೈ. ವಿಜಯೇಂದ್ರ ಬಳಸಿ ಬೀಸಾಡಲು ತಂದಿರುವ ಹೊಸ “ಹರಕೆಯ ಕುರಿ” ಎಂದು ವಾಗ್ದಾಳಿ ಮಾಡಿದೆ.
ಬಿಜೆಪಿಗೆ ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಇಲ್ಲ ಅಂತಾ ಟೀಕಿಸ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬಿಜೆಪಿ ಟೀಕೆ ಮಾಡುತ್ತಿದ್ದರು. ಈಗ ನಾನು, ಅಶೋಕಣ್ಣ ಜೋಡೆತ್ತಿನ ರೀತಿ ಕೆಲಸ ಮಾಡುತ್ತೇವೆ.ಅವರನ್ನು ತಡೆಯೋದು ಹೇಗೆ ಎಂದು ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಮುಂದೆ ಆರ್.ಅಶೋಕ್ ಗುಡುಗಿದರೆ ವಿಧಾನಸಭೆ ನಡುಗಬೇಕು. ಆ ರೀತಿಯಲ್ಲಿ ಅಶೋಕ್ ಹೋರಾಟ ಮಾಡುತ್ತಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ ಭೇಟಿ ವಿಚಾರ ಸಂಬಂಧ ಸದಾಶಿವನಗರದಲ್ಲಿ ಅವರೇ ಬಂದು ನನ್ನನ್ನು ಭೇಟಿ ಮಾಡಿದ್ರು. ಭೇಟಿ ವೇಳೆ ಎಸ್.ಟಿ.ಸೋಮಶೇಖರ್ ಸೇರಿ ಹಲವರು ಇದ್ದರು ಎಂದು ಬೆಂಗಳೂರಿನಲ್ಲಿ ಟಿವಿ9ಗೆ JDS ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಈ ಹಿಂದೆ ಪಕ್ಷಕ್ಕೆ ಕರೆದರೂ ಯಾಕೆ ಬರಲಿಲ್ಲ ಎಂದು ಹೇಳಿದ್ರು. ಅದೃಷ್ಟ ಇರುವವರಿಗೆ ಅಧಿಕಾರ ಸಿಗುತ್ತೆ, ಇಲ್ಲಂದ್ರೆ ಸಿಗಲ್ಲ ಅಂದೆ. ನಾನು ಕಾಂಗ್ರೆಸ್ಗೆ ಹೋಗುವ ಪರಿಸ್ಥಿತಿ ಇಲ್ಲ. ನಾನು ಕಾಂಗ್ರೆಸ್ಗೆ ಬರಲ್ಲ ಅಂತಾ ಡಿ.ಕೆ.ಶಿವಕುಮಾರ್ಗೆ ಹೇಳಿದ್ದೇನೆ. ಜೆಡಿಎಸ್ನ 19 ಶಾಸಕರೂ ಒಟ್ಟಾಗಿ ಇದ್ದೇವೆ. ಯಾವುದೇ ರೀತಿಯಲ್ಲಿ ಪಕ್ಷವನ್ನು ಒಡೆಯುವ ಕೆಲಸ ಮಾಡಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ವಿಚಾರ ಸಂಬಂಧ ಉಡುಪಿಯಲ್ಲಿ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಪ್ರತಿಕ್ರಿಯೆ ನೋಡಿದ್ದು, ವಿಜಯೇಂದ್ರ, ಅಶೋಕ್ ಇಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಇಬ್ಬರ ನೇತೃತ್ವದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿ. ಕಾರ್ಯಕರ್ತರ ಭಾವನೆ, ಜನರ ಆಶೋತ್ತರ ಗಮನಿಸಿ ಪಕ್ಷ ಬೆಳೆಸಲಿ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಲಿ ಎಂದು ಹಾರೈಸುವೆ ಎಂದರು.
ನನ್ನ ಅಸಮಾಧಾನದ ಬಗ್ಗೆ ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ದೇನೆ ಎಂದು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ಟಿವಿ9ಗೆ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ತಿಳಿಸಿದರು. ನಾಯಕತ್ವ ಆಧಾರದ ಮೇಲೆ ರಾಜಕೀಯ ಮಾಡುತ್ತಿಲ್ಲ. ನನ್ನ ಕ್ಷೇತ್ರದ ಜನರ ಜೊತೆಗೆ ಜನರಿಂದ ರಾಜಕೀಯ ಮಾಡ್ತಿದ್ದೇನೆ. ನನ್ನ ಭಾವನೆಗಳಿಗೆ ಧಕ್ಕೆ ಬಂದಾಗ ಸಹಿಸಿಕೊಳ್ಳುವುದಿಲ್ಲ. ಮುಂದಿನ ಸಭೆಯಲ್ಲಿ ಭಾಗವಹಿಸಬೇಕೋ ಬೇಡವೋ ನೋಡೋಣ. ಈಗಲೇ ಎಲ್ಲವನ್ನೂ ನಿರ್ಧಾರ ಮಾಡುವುದು ಬೇಡ ಎಂದರು.
ವಿಪಕ್ಷದವರ ಟೀಕೆ ಜನರ ಅಭಿವೃದ್ಧಿಗೆ ಪೂರಕವಾಗಿ ಇರಬೇಕು ಎಂದು ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ಯತೀಂದ್ರ ವರುಣ ಕ್ಷೇತ್ರದ ಮಾಜಿ ಶಾಸಕ, ಅವರ ತಂದೆ ಸಿಎಂ. ಹೀಗಿರುವಾಗ ಆ ಕ್ಷೇತ್ರದ ಕೆಲಸವನ್ನು ನೋಡಿಕೊಂಡರೆ ತಪ್ಪೇನು? ನಮ್ಮ ಕ್ಷೇತ್ರಕ್ಕೆ ಇಂತಹ ಅಧಿಕಾರಿ ಹಾಕಿ ಅನ್ನೋದರಲ್ಲಿ ತಪ್ಪೇನು? ಸಾರ್ವಜನಿಕರೇ ನಮ್ಮ ಕ್ಷೇತ್ರಕ್ಕೆ ಇಂತಹ ಅಧಿಕಾರಿ ಬೇಕು ಅಂತಾರೆ. ಕುಮಾರಸ್ವಾಮಿ ಕುಟುಂಬದವರು ಅಧಿಕಾರದಲ್ಲಿದ್ದಾಗ ಏನು ಮಾಡಿಲ್ವೇ? ಮಾಜಿ ಸಿಎಂ ಕುಮಾರಸ್ವಾಮಿಗೆ ಅಧಿಕಾರ ಬಿಟ್ಟು ಇರೋಕೆ ಆಗಲ್ಲ. ಹೆಚ್.ಡಿ.ಕುಮಾರಸ್ವಾಮಿಗೆ ಅಧಿಕಾರ ಕೊಟ್ಟರೆ ನಿಭಾಯಿಸಲು ಆಗಲ್ಲ. ಕುಮಾರಸ್ವಾಮಿ ನೆಮ್ಮದಿಯಿಂದ ಇರಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಕೊಪ್ಪ ಗ್ರಾಮದಲ್ಲಿ ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಕಿಡಿ ಕಾರಿದ್ದಾರೆ.
ನಾಳೆ ಭಾರತ VS ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಮ್ಯಾಚ್ ಹಿನ್ನಲೆ ವಿಶ್ವಕಪ್ ನಲ್ಲಿ ಭಾರತ ಗೆಲವು ಸಾಧಿಸುವಂತೆ ಬಂಗಾರದಲ್ಲಿ ಟ್ರೋಫಿ ಸಿದ್ಧಪಡಿಸಿ ಬಂಗಾರದ ಅಂಗಡಿ ಮಾಲೀಕ ಶುಭ ಕೋರಿದ್ದಾರೆ. ಗಾಯತ್ರಿ ನಗರದ ಗೋಲ್ಡ್ ಸ್ಮಿತ್ ಕೈಯಲ್ಲಿ ಭಾರತ ಮೂರು ವಿಶ್ವಕಪ್ ಟ್ರೋಫಿ ಸಿದ್ದವಾಗಿದೆ. ಮೂರನೇ ವಿಶ್ವಕಪ್ ಟ್ರೋಫಿಗೆ ALL THE BEST INDIA ಅಂತಾ ಶುಭಾಷಯ ಕೋರಿದ್ದಾರೆ.
ಬೆಂಗಳೂರಿನಲ್ಲಿ ಬೀದಿಬದಿ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಹಲಸೂರಿನ ಬಜಾರ್ ಸ್ಟ್ರೀಟ್ನಲ್ಲಿ ಬಿಬಿಎಂಪಿ ಸಿಬ್ಬಂದಿಯಿಂದ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಪಾದಚಾರಿ ಮಾರ್ಗದಲ್ಲಿರುವ ಅಂಗಡಿಗಳ ತೆರವು ಮಾಡಲಾಗುತ್ತಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆ ನಡೆಯಲಿರೋ ವಲ್ಡ್ ಕಪ್ ಪಂದ್ಯಾವಳಿಗೆ ಹಾವೇರಿಯಲ್ಲಿ ಕ್ರೀಡಾಭಿಮಾನಿಗಳು ತೇರು ಬೀದಿ ಆಂಜನೇಯ ಸ್ವಾಮೀಗೆ ಪೂಜೆ ಸಲ್ಲಿಸಿದರು. ನಗರದ ಆಂಜನೇಯ ಸ್ವಾಮೀಗೆ ಪೂಜೆ ಸಲ್ಲಿಸಿ, ಭಾರತ ಗೆಲ್ಲುವಂತೆ ಪ್ರಾರ್ಥನೆ ಸಲ್ಲಿಸಿದರು. ಭಾರತ ಪರ ಘೋಷಣೆ ಕೂಗಿ, ಜೈಕಾರ ಹಾಕಿದ್ದಾರೆ. ಜೊತೆಗೆ ವಿರಾಟ್ ಕೋಹ್ಲಿಯ ಅಭಿಮಾನಿ ಪ್ರವೀಣ ಬೆನ್ನಿನ ಹಿಂಭಾಗದಲ್ಲಿ ಹಚ್ಚೆ ಹಾಕಿಕೊಂಡಿದ್ದಾರೆ. ಈ ಭಾರಿ ನಮ್ಮ ಭಾರತ ತಂಡ ವಲ್ಡ್ ಕಪ್ ಗೆದ್ದೆ ಗೆಲ್ಲುತ್ತೆ, ಎಲ್ಲಾ ವಿಭಾಗದಲ್ಲಿ ಉತ್ತಮವಾದ ಪ್ರದರ್ಶನವನ್ನ ಭಾರತ ನೀಡುತ್ತಿದೆ. ಟೀಂ ಇಂಡೀಯಾ ಈ ಭಾರಿ ವಲ್ಡ್ ಕಪ್ ಗೆಲ್ಲುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಪೀಕರ್ ಸ್ಥಾನದ ಬಗ್ಗೆ ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರ ಸಂಬಂಧ ಮಂಗಳೂರಿನಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ, ಜಾತಿ ಧರ್ಮದಿಂದ ಸ್ಪೀಕರ್ ಸ್ಥಾನ ನೋಡುವಂತಿಲ್ಲ. ನನಗೆ ಗೌರವ ಕೊಡುವುದು ಖಾದರ್ಗೆ ಗೌರವ ಕೊಟ್ಟಂತೆ ಅಲ್ಲ. ಸಂವಿಧಾನ ಪೀಠ ಮತ್ತು ಸಭಾಧ್ಯಕ್ಷ ಸ್ಥಾನಕ್ಕೆ ಸಿಕ್ಕಂತಹ ಗೌರವ. ಯಾರ ಹೇಳಿಕೆಗೂ ನಾನು ಪ್ರತಿಕ್ರಿಯೆ ಕೊಡಲ್ಲ. ಸಂವಿಧಾನಕ್ಕೆ ಅನುಗುಣವಾಗಿ ನಾನು ಕೆಲಸ ಮಾಡುತ್ತೇನೆ. ನಾನು ಎಲ್ಲರಿಗೂ ಗೌರವ ಕೊಟ್ಟು ಗೌರವ ಪಡೆಯುತ್ತೇನೆ. ಜಾತಿ, ಧರ್ಮ ಬಿಟ್ಟು ಸ್ಪೀಕರ್ ಸ್ಥಾನ ನೋಡಬೇಕು ಎಂದರು.
ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷದ ತೀರ್ಮಾನ, ಶಾಸಕರ ಅಭಿಪ್ರಾಯವನ್ನು ನಾವು ಒಪ್ಪಬೇಕು. ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು. ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಂದ್ರೆ ಪಕ್ಷದ ಘನತೆಗೆ ಧಕ್ಕೆ ಬರುತ್ತೆ. ನಾವೆಲ್ಲರೂ ಅಶೋಕ್ಗೆ ಸಹಕಾರ ಕೊಡುತ್ತೇವೆ. ಯತ್ನಾಳ್ ಸೇರಿದಂತೆ ಒಂದಿಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹಿರಂಗವಾಗಿ ಯತ್ನಾಳ್ ಆ ರೀತಿ ಮಾತನಾಡುವುದು ಸರಿಯಲ್ಲ. ಯಡಿಯೂರಪ್ಪ ಸಿಎಂ ಆಗಿದ್ರೆ ನಮಗೆ ಈ ದುಸ್ಥಿತಿ ಬರುತ್ತಿರಲಿಲ್ಲ. ರಾಜ್ಯಾಧ್ಯಕ್ಷರ ವಿರುದ್ಧ ಮಾತನಾಡಿದಷ್ಟು ಡ್ಯಾಮೇಜ್ ಆಗುತ್ತದೆ ಎಂದರು.
ಮಂಗಳೂರಿನ ಕೊಟ್ಟಾರ ಬಳಿಯ ಕೋಸ್ಟಲ್ ಬಾರ್‌ನಲ್ಲಿ ಕುಡಿತದ ಮತ್ತಿನಲ್ಲಿ ಯುವಕರ ಮಧ್ಯೆ ಮಾರಾಮಾರಿಯಾಗಿದೆ. ಬಿಯರ್ ಬಾಟಲಿ, ಸೋಡಾ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಬಾರ್ ನ ಕೌಂಟರ್ ಬಳಿಯೇ ರಕ್ತ ಚಿಮ್ಮುವಂತೆ ಯುವಕರು ಹೊಡೆದಾಡಿಕೊಂಡಿದ್ದಾರೆ. ಅಶೋಕ್ ಪೂಜಾರಿ ಎಂಬಾತನ ಮೇಲೆ ಬಿಯರ್ ಮತ್ತು ಸೋಡಾ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ.
ಪಿಐ ವಿವೇಕಾನಂದ ವರ್ಗಾವಣೆ ವಿಚಾರವಾಗಿ ಆರೋಪ ವಿಚಾರ ಸಂಬಂಧ ಹೆಚ್‌ಡಿ ಕುಮಾರಸ್ವಾಮಿ ಆರೋಪಕ್ಕೆ ಸಚಿವ ಡಾ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ವರ್ಗಾವಣೆ ದಂಧೆ ಆಗಿದ್ದರೆ ವಿಪಕ್ಷಗಳು ಅಧಿವೇಶನದಲ್ಲಿ ಪ್ರಸ್ತಾಪಿಸಲಿ. ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿರುವ ವಿವೇಕಾನಂದಗೂ ಪೊಲೀಸ್ ಇಲಾಖೆಯಲ್ಲಿನ ವಿವೇಕಾನಂದಗೂ ಸಂಬಂಧ ಇಲ್ಲ. ಅವರು ಹೇಳಿದ್ದು ಕಾಕತಾಳೀಯ ಆಗಿರಬೇಕು. ಸಮಾಧಾನ ಆಗುವ ರೀತಿಯಲ್ಲೇ ಸದನದಲ್ಲಿ ಉತ್ತರ ಕೊಡುತ್ತೇವೆ ಎಂದರು.
ನಾನು ಆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವೇ ಇಲ್ಲ. ನಾನು ಹತ್ತಾರು ವಿಚಾರಗಳ ಕುರಿತು ಸಿಎಂ ಜೊತೆ ಮಾತನಾಡುತ್ತೇನೆ. ಹಲವು ಕೆಲಸ ಮಾಡಿಕೊಡುವಂತೆ ಪಟ್ಟಿ ಕೊಡುತ್ತೇನೆ. ನಾನು ದುಡ್ಡಿನ ಬಗ್ಗೆ ಮಾತನಾಡಿದ್ದರೆ ಸ್ಪಷ್ಟನೆ ಕೊಡಬಹುದಿತ್ತು. ನಾನು ಸಿಎಸ್ಆರ್ ಫಂಡ್ ವಿಚಾರದ ಬಗ್ಗೆ ಮಾತನಾಡಿರುವುದು. ಲಿಸ್ಟ್ ಎಂದ ಕೂಡಲೇ ವರ್ಗಾವಣೆಗೆ ಅಂತಾ ಯಾಕೆ ಹೇಳುತ್ತೀರಿ? ಇವರ ಅವಧಿಯಲ್ಲಿ ಲಿಸ್ಟ್, ವರ್ಗಾವಣೆ ಅಂದರೆ ದಂಧೆಯಾಗಿತ್ತಾ? ಇವರ ಪತ್ನಿ, ಮಗ ಮತ್ತು ಇಡೀ ಕುಟುಂಬವೇ ರಾಜಕಾರಣದಲ್ಲಿದೆ. ಅವರ ಮೇಲೂ ನಾವೂ ಅದೇ ರೀತಿ ಮಾತನಾಡಲು ಆಗುತ್ತದಾ? ಇವರ ಅವಧಿಯಲ್ಲಿ ಮಾಡಿದ ವರ್ಗಾವಣೆಯಲ್ಲಾ ದಂಧೆಯೇ? ಹಣ ಪಡೆದೇ ವರ್ಗಾವಣೆ ಮಾಡಿದ್ದಾರಾ ಎಂದು ಯತೀಂದ್ರ ಪ್ರಶ್ನೆ ಮಾಡಿದ್ದಾರೆ.
ಲಿಸ್ಟ್ ಬಗ್ಗೆ ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್ ವಿಚಾರ ಸಂಬಂಧ ಯತೀಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ. ಸಿಎಸ್ಆರ್ ಫಂಡ್ ಬಗ್ಗೆ ನಾನು ಅವತ್ತು ಮಾತನಾಡಿದ್ದು ಎಂದು ಮೈಸೂರಿನಲ್ಲಿ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಒಬ್ಬ ಸಿಎಂ ಮೇಲೆ ಆರೋಪ ಮಾಡಬೇಕಾದ್ರೆ ಸಾಕ್ಷ್ಯ ಇಟ್ಟುಕೊಳ್ಳಬೇಕು. ನಮ್ಮ ತಂದೆ ಆಗಲಿ, ನಾನಾಗಲಿ ಯಾವುದೇ ದಂಧೆ ನಡೆಸುತ್ತಿಲ್ಲ. ವಿವೇಕಾನಂದ ಯಾರು ಅಂತಾ ನನಗೆ ಗೊತ್ತಿಲ್ಲ. ಇನ್ಸ್ಪೆಕ್ಟರ್ ವಿವೇಕಾನಂದ ವರ್ಗಾವಣೆಗೂ ನನಗೂ ಸಂಬಂಧವಿಲ್ಲ. ನಮ್ಮ ಕ್ಷೇತ್ರದಲ್ಲಿ ವಿವೇಕಾನಂದ ಅಂತಾ ಬಿಇಒ ಕೂಡ ಇದ್ದಾರೆ. ವಿಪಕ್ಷಗಳು ಹತಾಶರಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿವೆ. ಇವರು ಅಧಿಕಾರದಲ್ಲಿದ್ದರು, ಸಿಎಂ ಆಗಿಯೂ ಕೆಲಸ ಮಾಡಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ದಂಧೆಯನ್ನೇ ಮಾಡುತ್ತಿದ್ರಾ? ಭ್ರಷ್ಟಾಚಾರ, ದಂಧೆ ಆಗ್ತಿದೆ ಎಂದು ಸುಳ್ಳು ಆರೋಪ ಮಾಡಬಾರದು ಎಂದರು.
ಮೈಸೂರು ಪ್ರವಾಸದ ವೇಳೆ ಆಪ್ತನ ಮನೆಯಲ್ಲಿ ಸಿಎಂ ಭೋಜನ ಸವಿದಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದು ಭೋಜನಕೂಟದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಹಿರಿಯ ಸಾಹಿತಿ ದೇವನೂರು ಮಹಾದೇವ ಕೂಡ ಭಾಗಿಯಾಗಿದ್ದಾರೆ.
ನವೆಂಬರ್ 24ರಿಂದ ನ.26ರವರೆಗೆ ಎಸ್ಕಾಂ ಆನ್‌ಲೈನ್ ಸೇವೆ ಸ್ಥಗಿತಗೊಳ್ಳಲಿದೆ. ನ.24ರಂದು ಮಧ್ಯಾಹ್ನ 12ರಿಂದ ನ.26ರ ಬೆಳಗ್ಗೆ 11.59ರವರೆಗೆ ಬಂದ್ ಆಗಿರಲಿದೆ. ರಾಜ್ಯದ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ವೆಬ್ ಪೋಟರ್ಲ್ ಗೆ ಸಂಬಂಧಿಸಿದಂತೆ ತುರ್ತು ತಾಂತ್ರಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆ 2 ದಿನ 'ಎಸ್ಕಾಂ' ಆನ್ ಲೈನ್ ಸೇವೆ ಸ್ಥಗಿತಗೊಳಿಸಲಾಗಿದೆ. ವಿವಿಧ ಪೋರ್ಟಲ್ ಗಳಲ್ಲಿರುವ ಡಾಟಾವನ್ನು ನೂತನ ಪೋರ್ಟಲ್ ಗೆ ವರ್ಗಾವಣೆ ಮಾಡುವ ಕೆಲಸ ನಡೆಯುವ ಹಿನ್ನೆಲೆ ಆನ್ ಲೈನ್ ಸೇವೆ ಸ್ಥಗಿತಗೊಳಿಸಲಾಗಿದೆ. 2 ದಿನ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ಸೇವೆ ಇರಲ್ಲ.
ಬಾಯಿ ತೆರೆದರೆ ಭಗವದ್ಗೀತೆ, ನಾಲಗೆ ಮೇಲೆ ನೈತಿಕತೆಯ ನಾಟ್ಯ. ಮಾತಿನಲ್ಲೂ ಮೌಲ್ಯಗಳದ್ದೇ ಮಥನ, ಕೊನೆಗೆ, ಝಣ ಝಣ ಕಾಂಚಾಣ. ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ. ಥೂ.. ನಾಚಿಕೆ ಆಗಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ವಾಗ್ದಾಳಿ ಮಾಡಿದ್ದಾರೆ.
ಅಬ್ಬಬ್ಬಾ.. ಬಾಯಿ ತೆರೆದರೆ ಭಗವದ್ಗೀತೆ! ನಾಲಿಗೆ ಮೇಲೆ ನೈತಿಕತೆಯ ನಾಟ್ಯ!! ಮಾತಿ ಮಾತಿನಲ್ಲೂ ಮೌಲ್ಯಗಳದ್ದೇ ಮಥನ!! ಕೊನೆಗೆ, ಝಣ ಝಣ ಕಾಂಚಾಣ...
ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ! ಥೂ.. ನಾಚಿಕೆ ಆಗಬೇಕು. 1/6#ಕಾಸಿಗಾಗಿಹುದ್ದೆ #CashForPosting pic.twitter.com/Ss55GDJmr0— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) November 18, 2023
ರೈತರಿಗೆ ನೀಡಬೇಕಿರುವ ಹಣ ನೀಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ದಾವಣಗೆರೆ ಜಿಲ್ಲೆ ಜಗಳೂರು ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಕ್ಷೇತ್ರಕ್ಕೆ ನೀರು ಬಿಡದಿದ್ರೆ ರಾಜೀನಾಮೆ ನೀಡುವುದಾಗಿ ಇಂಡಿ ಶಾಸಕ ಎಚ್ಚರಿಕೆ ನೀಡಿದ್ದರು. ಈಗ ಜಗಳೂರು ಶಾಸಕ ರೈತರಿಗಾಗಿ ರಾಜೀನಾಮೆಯ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು ಕಾಳೇನಹಳ್ಳಿ ಗ್ರಾಮದಲ್ಲಿ ಉಣ್ಣೆ ಜ್ವರದಿಂದ ಕರು ಮೃತಪಟ್ಟ ಘಟನೆ ನಡೆದಿದೆ. ರೈತ ನಟೇಶ್ ಅವರಿಗೆ ಸೇರಿದ 9 ತಿಂಗಳ ಕರು ಕಳೆದ ಮೂರು ದಿನದಿಂದ ಜ್ವರದಿಂದ ಬಳಲುತ್ತಿತ್ತು. ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕರು ಮೃತಪಟ್ಟಿದೆ. ರಕ್ತ ಭೇದಿ ಮಾಡಿಕೊಂಡು ಕರು ಸಾವನ್ನಪ್ಪಿದೆ. ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು: 3 ಪ್ರತ್ಯೇಕ ಪ್ರಕರಣಗಳಲ್ಲಿ 1 ಕೋಟಿಗೂ ಅಧಿಕ ಮೌಲ್ಯದ ಚಿನ್ನ ವಶ
ಕೆಇಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ಕಿಂಗ್ ಪಿನ್ ಆರ್ಡಿ ಪಾಟೀಲ್ಗೆ ಆನ್‌ಲೈನ್ ಗೇಮ್ಗಳಲ್ಲಿ ಹಣ ಹೂಡಿಕೆ ಮಾಡಿ ಆಟ ಆಡೋದಂದ್ರೆ ಪಂಚಪ್ರಾಣ. ಆನ್ ಲೈನ್ ನಲ್ಲಿ ಕ್ಯಾಸಿನೊ ಗೇಮ್ ಅಡ್ತಿದ್ದ, MPC 91 ನಲ್ಲಿ ನಿತ್ಯವು ಆಟವಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಅಕ್ರಮವಾಗಿ ಬಂದ ಹಣವನ್ನ ರಾಜಾರೋಷವಾಗಿ ಖರ್ಚು ಮಾಡ್ತಿದ್ದ. ಆನ್‌ಲೈನ್ ಗೇಮ್‌ಗಾಗಿ ಮೂರು ಮೊಬೈಲ್ ನಂಬರ್ ಮೆಂಟೈನ್ ಮಾಡುತ್ತಿದ್ದನಂತೆ.
ಭ್ರಷ್ಟಾಚಾರದ ಆರೋಪಗಳ ಸುರಿಮಳೆಗೈದು ಪೇಸಿಎಮ್, 40 ಪರ್ಸೆಂಟ್ ಪೋಸ್ಟರ್ ಸೇರಿದಂತೆ ಹಲವು ಪೋಸ್ಟರ್ಗಳನ್ನು ಬಿಜೆಪಿ ಸರ್ಕಾರದ ವಿರುದ್ಧ ಅಂಟಿಸಿ ಚುನಾವಣೆಯಲ್ಲಿ ಲಾಭ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಇದೀಗ ಬಿಜೆಪಿ ಕಾರ್ಯಕರ್ತರು ಪೋಸ್ಟರ್ ವಾರ್ ಆರಂಭಿಸಿದ್ದಾರೆ.
Published On - 8:00 am, Sat, 18 November 23