AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Breaking News Highlights: ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸುವ ಕುರಿತು ಸರ್ಕಾರದ ಮಹತ್ವದ ಹೆಜ್ಜೆ: ನಾಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ

Breaking News Today Highlights Updates: ರಾಜ್ಯ ಬಿಜೆಪಿ ನಾಯಕರಿಗೆ ಆಪರೇಷನ್ ಹಸ್ತ ಆತಂಕ ಶರುವಾಗಿದೆ. ಕಮಲ ಪಾಳಯದ ಹಾಲಿ ಮತ್ತು ಮಾಜಿ ಶಾಸಕರು ಕಾಂಗ್ರೆಸ್​​​ನತ್ತ ಒಲವು ಹೊಂದಿದ್ದಾರೆ ಎಂಬ ಸುದ್ದಿ ಗಾಡವಾಗಿದೆ. ಈ ಹಿನ್ನೆಲೆ ನಾಯಕರ ಮುನಿಸು ಶಮನಕ್ಕೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಫೀಲ್ಡಿಗೆ ಇಳಿದಿದ್ದಾರೆ. ಇನ್ನು ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಬಿಜೆಪಿ ನಾಯಕರು ತಯಾರಿ ನಡೆಸಿದ್ದಾರೆ. ಇರೊಂದಿಗೆ ಕರ್ನಾಟಕದ ವಿದ್ಯಮಾನಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.

Karnataka Breaking News Highlights: ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸುವ ಕುರಿತು ಸರ್ಕಾರದ ಮಹತ್ವದ ಹೆಜ್ಜೆ: ನಾಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ
ಸಿಎಂ ಸಿದ್ದರಾಮಯ್ಯ
ವಿವೇಕ ಬಿರಾದಾರ
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 20, 2023 | 10:38 PM

Share

ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗಲೇ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತ ಸಾಧ್ಯತೆ ಇದೆ. ಬೆಂಬಲಿಗರ ಸಹಿತ ಬಿಜೆಪಿ ಹಾಲಿ ಮತ್ತು ಮಾಜಿ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಯತ್ನ ನಡೆಸಲಾಗುತ್ತಿದೆ. ಬಿಜೆಪಿ ಶಾಸಕರಾದ ಎಸ್​.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸೇರಿದಂತೆ ಕೆಲವು ಶಾಸಕರು ಮತ್ತೆ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಹೈ ಅಲರ್ಟ್ ಆದ ಬಿಜೆಪಿ ಶಾಸಕರ ಮುನಿಸು ಶಮನಕ್ಕೆ ಶತಪ್ರಯತ್ನ ನಡೆಸುತ್ತಿದೆ. ಇನ್ನು ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕರು ಮತ್ತು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನಿನ್ನೆ (ಆ.19) ಬಿಜೆಪಿ ಮಂಡ್ಯದಲ್ಲಿ ಸಭೆ ನಡೆಸಿದ್ದು, ಬೃಹತ್​ ಪ್ರತಿಭಟನೆಗೆ ನಿರ್ಧರಿಸಿದೆ. ಹಾಗೆ 20 ದಿನಗಳ ಬಳಿಕ ರಾಜ್ಯದಲ್ಲಿ ಮತ್ತೆ ಮಳೆಯಾಗಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್​ ಅಪ್ಡೇಟ್ಸ್​ ಇಲ್ಲಿದೆ.

LIVE NEWS & UPDATES

The liveblog has ended.
  • 20 Aug 2023 09:56 PM (IST)

    Karnataka Breaking News Live: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಳೆ ಎನ್​ಇಪಿ ಬಗ್ಗೆ ಮಹತ್ವದ ಸಭೆ

    ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸುವ ಕುರಿತು ಸರ್ಕಾರದ ಮಹತ್ವದ ಹೆಜ್ಜೆ ಇಟ್ಟಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಭಾಗಿಯಾಗಲಿರುವ ರಾಜ್ಯದ ವಿವಿಧ ವಿವಿಗಳ ಕುಲಪತಿಗಳು, ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡ ಪಾಲ್ಗೊಳ್ಳಲಿದ್ದಾರೆ.

  • 20 Aug 2023 09:29 PM (IST)

    Karnataka Breaking News Live: ಕಾಂಗ್ರೆಸ್​ನವರು ಹೇಳಿದ ಮಾತು ಕೇಳದಿದ್ದರೆ ವರ್ಗಾವಣೆ ಧಮ್ಕಿ ಹಾಕ್ತಾರೆ

    ಕಾಂಗ್ರೆಸ್​ನವರು ಹೇಳಿದ ಮಾತು ಕೇಳದಿದ್ದರೆ ವರ್ಗಾವಣೆ ಧಮ್ಕಿ ಹಾಕುತ್ತಾರೆ. ಕೋಲಾರ ಜಿಲ್ಲೆಯಲ್ಲೂ ಅಧಿಕಾರಿಗಳು ಶಿಷ್ಟಾಚಾರದ ಪ್ರಕಾರ ನಡೆದುಕೊಳ್ಳುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನಂಬಿಕೆಯಿಟ್ಟು ಬಿಜೆಪಿಗೆ ಬಂದಿದ್ದಾರೆ. ಬಲವಂತವಾಗಿ ಅವರನ್ನು ಪಕ್ಷಕ್ಕೆ ಸೆಳೆಯುವ ಕೆಲಸವನ್ನು ಕೈಬಿಡಬೇಕು. ಗ್ಯಾರಂಟಿ ಘೋಷಣೆ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದೆ ಎಂದು ಕೋಲಾರ ಕ್ಷೇತ್ರದ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.

  • 20 Aug 2023 08:34 PM (IST)

    Karnataka Breaking News Live: ಆಪರೇಷನ್ ಹಸ್ತದ ಕುರಿತು ಎಂಪಿ ಮುನಿಸ್ವಾಮಿ ಹೇಳಿದ್ದಿಷ್ಟು

    ಕಾಂಗ್ರೆಸ್​ನವರು ದ್ವೇಷದ ರಾಜಕಾರಣ ಮಾಡುತಿದ್ದಾರೆ. ಕಾಂಗ್ರೆಸ್ ಬಿಟ್ಟಿರುವ 17 ಮಂದಿ ಶಾಸಕರಿಗೆ ಕಿರುಕುಳ ನೀಡುವ ಉದ್ದೇಶ‌ ಪಕ್ಷ ಇಟ್ಟುಕೊಂಡಿದೆ ಎಂದು ಆಪರೇಷನ್ ಹಸ್ತ ಕುರಿತು ಕೋಲಾರದಲ್ಲಿ ಎಂ.ಪಿ ಮುನಿಸ್ವಾಮಿ ಹೇಳಿದರು.

  • 20 Aug 2023 08:02 PM (IST)

    Karnataka Breaking News Live: ಕೋಲಾರ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಎದುರಿಸಲು ಸಿದ್ಧ

    ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನ ವಿಚಾರವಾಗಿ ಕೋಲಾರ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಎದುರಿಸಲು ಸಿದ್ಧ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಸದಸ್ಯ ಮುನಿಸ್ವಾಮಿ ಹೇಳಿದರು.

  • 20 Aug 2023 07:48 PM (IST)

    Karnataka Breaking News Live: ಸಿಎಂರವರಿಗೆ ಕಳೆದ ಒಂದು ವಾರದಿಂದ ಅಪಾಯಿಂಟ್ಮೆಂಟ್ ಕೇಳಿದ್ದೆ

    ಸಿಎಂ ಸಿದ್ದರಾಮಯ್ಯ ರವರಿಗೆ ಕಳೆದ ಒಂದು ವಾರದಿಂದ ಅಪಾಯಿಂಟ್ಮೆಂಟ್ ಕೇಳಿದ್ದೆ. ಯಶವಂತಪುರ ಕ್ಷೇತ್ರದ ಸಮಸ್ಯೆ ವಿಚಾರವಾಗಿ ಮಾತನಾಡಲು ಕೇಳಿದ್ದೆ. ಇಂದು ಬರಲು ಹೇಳಿದ್ದರು, ಹೀಗಾಗಿ ಸಿಎಂರನ್ನು ನಾನು ಭೇಟಿಯಾಗಿದ್ದೆ ಎಂದು ಶಾಸಕ ಸೋಮಶೇಖರ್ ಹೇಳಿದ್ದಾರೆ.

  • 20 Aug 2023 07:27 PM (IST)

    Karnataka Breaking News Live: ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿದ ಹಾವು

  • 20 Aug 2023 07:01 PM (IST)

    Karnataka Breaking News Live: ಮೆಟ್ರೋ ನಿಲ್ದಾಣಗಳಲ್ಲಿ ಎನ್​ಸಿಎಂಸಿ ಕಾರ್ಡ್‌ ಲಭ್ಯ

    ಸೋಮವಾರದಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಎನ್​ಸಿಎಂಸಿ ಕಾರ್ಡ್‌ ಲಭ್ಯವಿರಲಿದೆ. ದೇಶದ ಎಲ್ಲಾ ಸಾರಿಗೆ ವ್ಯವಸ್ಥೆ, ಪೆಟ್ರೋಲ್ ಬಂಕ್‌, ಮಾಲ್‌ಗಳಲ್ಲಿ ಬಳಸಬಹುದಾಗಿದೆ. NAMMAMETRO.AGSINDIA.COM ವೆಬ್‌ಸೈಟ್ ಅಥವಾ BMRCL RBL Bank NCMC ಆ್ಯಪ್​ ಮೂಲಕ ನೋಂದಣಿಗೆ ಅವಕಾಶ ಇದೆ. ನಿಲ್ದಾಣಗಳಲ್ಲಿ ನೋಂದಣಿ ನಂಬರ್‌, ಒಟಿಪಿ ನೀಡಿ ಕಾರ್ಡ್‌ ಖರೀದಿಸಬಹುದು. NCMC ಕಾರ್ಡ್ 50 ರೂ.ಗೆ ಲಭ್ಯವಿದ್ದು ಪ್ರಯಾಣದರಕ್ಕೆ 5% ರಿಯಾಯಿತಿ ಇದೆ.

  • 20 Aug 2023 06:45 PM (IST)

    Karnataka Breaking News Live: ಮಹಿಳೆಯರ ಖಾತೆಗೆ 2 ಸಾವಿರ ಹಣ ಹಾಕಲಿರುವ ಸರ್ಕಾರ

    ಮೈಸೂರು, ಆಗಸ್ಟ್​ 20: ಆಗಸ್ಟ್ 30ರಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ದೊರೆಯಲಿದ್ದು, ಸರ್ಕಾರ ಅಂದೇ ಮಹಿಳೆಯರ ಖಾತೆಗೆ 2 ಸಾವಿರ ರೂ. ಹಣ ಹಾಕಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು 4 ಜಿಲ್ಲೆಗಳಲ್ಲಿ 13,81,430 ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ.

  • 20 Aug 2023 06:44 PM (IST)

    Karnataka Breaking News Live: ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿದ ಹಾವು

  • 20 Aug 2023 06:42 PM (IST)

    Karnataka Breaking News Live: ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿದ ಹಾವು

  • 20 Aug 2023 05:50 PM (IST)

    Karnataka Breaking News Live: ಅಭಿವೃದ್ಧಿ ಕಾರ್ಯಗಳ ಕುರಿತು ಸಿಎಂಗೆ ಮನವಿ

    ಯಶವಂತಪುರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಬೆಂಗಳೂರಿನಲ್ಲಿ ಸಿಎಂ ಅಧಿಕೃತ ‌ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಶಾಸಕ ಎಸ್‌.ಟಿ.ಸೋಮಶೇಖರ್‌ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

  • 20 Aug 2023 05:31 PM (IST)

    Karnataka Breaking News Live: ಮೈಸೂರಿನಲ್ಲಿ ಆಗಸ್ಟ್‌ 30ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ

    ಮೈಸೂರಿನಲ್ಲಿ ಆಗಸ್ಟ್‌ 30ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಹಿನ್ನೆಲೆ ಮೈಸೂರಿಗೆ ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಆಗಮಿಸಿದ್ದಾರೆ. ಜಿ.ಪಂ ಸಭಾಂಗಣದಲ್ಲಿ ಮೈಸೂರು ವಿಭಾಗೀಯ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಒಗಳು ಸಭೆಯಲ್ಲಿ ಉಪಸ್ಥಿತರಿದ್ದರು.

  • 20 Aug 2023 04:53 PM (IST)

    Karnataka Breaking News Live: ಎಸ್​ಸಿ, ಎಸ್​ಟಿ ಅನುದಾನ ದುರುಪಯೋಗವಾಗಲು ಬಿಡುವುದಿಲ್ಲ

    ಎಸ್​ಸಿ, ಎಸ್​ಟಿ ಅನುದಾನ ದುರುಪಯೋಗವಾಗಲು ಬಿಡುವುದಿಲ್ಲ ಎಂದು ಚಾಮರಾಜನಗರದಲ್ಲಿ ಸಮಾಜಕಲ್ಯಾಣ ಸಚಿವ ಮಹದೇವಪ್ಪ ಹೇಳಿದರು. ಸಂವಿಧಾನ ಉಳಿವಿಗಾಗಿ ಭೀಮಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಬೇರೆ ಯೋಜನೆಗಳಿಗೆ ಬಳಸಿಕೊಳ್ಳಲು ನಿಯಮ 7ಡಿ ಅಡಿ ಅವಕಾಶವಿದೆ. ಈ ನಿಯಮವನ್ನು ಬಿಜೆಪಿ ಸರ್ಕಾರ ದುರುಪಯೋಗ ಮಾಡಿಕೊಂಡಿತ್ತು ಎಂದರು.

  • 20 Aug 2023 04:32 PM (IST)

    Karnataka Breaking News Live: ಸುತ್ತೂರು ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ

    ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಮಾಜಿ ಸಿಎಂ ಹೆಚ್​​​.ಡಿ.ಕುಮಾರಸ್ವಾಮಿ ಭೇಟಿ ನೀಡಿ, ಸ್ವಾಮೀಜಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಮಾಜಿ ಸಿಎಂ ಹೆಚ್​​​.ಡಿ.ಕುಮಾರಸ್ವಾಮಿಗೆ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕ ಸಾರಾ ಮಹೇಶ್, ಎಂಎಲ್​ಸಿ ಮಂಜೇಗೌಡ ಸಾಥ್​ ನೀಡಿದ್ದಾರೆ.

  • 20 Aug 2023 03:53 PM (IST)

    Karnataka Breaking News Live: ರಾಜ್ಯ ಬಿಜೆಪಿ ನಡೆಗೆ ಗರಂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ

    ಕಾವೇರಿ ವಿಚಾರವಾಗಿ ನಾಳೆ ಮಂಡ್ಯದಲ್ಲಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ರಾಜ್ಯ ಬಿಜೆಪಿ ನಡೆಗೆ ಗರಂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರಿಗೆ ಯಾವ ನೈತಿಕತೆ ಇದೆ. ರಾಜ್ಯವನ್ನು ಲೂಟಿ‌ ಹೊಡೆದು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

  • 20 Aug 2023 03:26 PM (IST)

    Karnataka Breaking News Live: ನಾಳೆ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡುವುದಿಲ್ಲ

    ನಾಳೆ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡುವುದಿಲ್ಲ ಮತ್ತು ಮಾಡುವುದು ತಪ್ಪಾಗುತ್ತದೆ. ಮಂಡ್ಯದ ಸಂಜಯ್ ಸರ್ಕಲ್ ನಲ್ಲಿ ಪ್ರತಿಭಟನೆ ಇದೆ ಎಂದು ಟ್ವಿಟರ್​ ಮೂಲಕ ಬಿಜೆಪಿ ಸಂಸದ ಪ್ರತಾಪ್​ ಸಿಂಹ ಸ್ಪಷ್ಟನೆ ನೀಡಿದ್ದಾರೆ.

  • 20 Aug 2023 03:01 PM (IST)

    Karnataka Breaking News Live: ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾಣಿಸಿಕೊಂಡ ಹಾವು

    ವಿಧಾನಸೌಧದ ಪಶ್ಚಿಮ ದ್ವಾರದ ಮೆಟ್ಟಿಲುಗಳ ಮೇಲೆ ಹಾವು ಕಾಣಿಸಿಕೊಂಡಿದೆ. ನಿನ್ನೆಯೂ ಕೂಡಾ ಕೆಂಗಲ್ ಹನುಮಂತಯ್ಯ ಪ್ರತಿಮೆ ಸಮೀಪ ಹಾವು ಕಾಣಿಸಿಕೊಂಡಿತ್ತು.

  • 20 Aug 2023 02:47 PM (IST)

    Karnataka Breaking News Live: ಸಚಿವ ಚಲವರಾಯಸ್ವಾಮಿ ವಿರುದ್ಧ ಮಾಜಿ ಸಿಎಂ ಕಿಡಿ

  • 20 Aug 2023 02:25 PM (IST)

    Karnataka Breaking News Live: ಕಾವೇರಿ ನೀರು ಹರಿಬಿಟ್ಟಿದ್ದಕ್ಕೆ ಕಾಂಗ್ರೆಸ್​​ ವಿರುದ್ಧ ಕಿಡಿ

    ತಮಿಳುನಾಡಿಗೆ ಕಾವೇರಿ ನೀರು ಹರಿಬಿಟ್ಟಿದ್ದಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬೆಂಗಳೂರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

  • 20 Aug 2023 01:56 PM (IST)

    Karnataka News Live: ಒಂದು ಪಕ್ಷ ಬಿಟ್ಟು ಇನ್ನೊಂದು ಪಕ್ಷ ಸೇರಿದಾಗ ಅಸಮಾಧಾನ ಇರುತ್ತೆ; ಉಮೇಶ್ ಜಾಧವ್

    ಬೆಂಗಳೂರು: ವಲಸಿಗ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಮರು ಸೇರ್ಪಡೆ ಸಂಬಂಧಿಸಿದಂತೆ ಅಧಿಕೃತವಾಗಿ ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಯಾರೂ ಹೇಳಿಲ್ಲ. ನನಗೂ ಯಾವುದೇ ಕರೆ ಬಂದಿಲ್ಲ. ಒಂದು ಪಕ್ಷ ಬಿಟ್ಟು ಇನ್ನೊಂದು ಪಕ್ಷ ಸೇರಿದಾಗ ಅಸಮಾಧಾನ ಇರುತ್ತೆ. ಬೇರೆ ಪಕ್ಷ ಸೇರಿದಾಗ ಕಾರ್ಯಕರ್ತರ ಮಧ್ಯೆ ಅಸಮಾಧಾನ ಇರುತ್ತದೆ. ಸೋಮಶೇಖರ್ ಕರೆದು ಬಿಎಸ್​ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ನಾನು ಬಾಂಬೆ ಟೀಂನಲ್ಲಿ ಇಲ್ಲ, ಯಡಿಯೂರಪ್ಪ ಟೀಂನಲ್ಲಿ ಇದ್ದೇನೆ. ಪಕ್ಷದಿಂದ ಲೀಡರ್ ಹೊರ ಹೋದರೂ ಮತದಾರರು ಹೋಗುವುದಿಲ್ಲ ಎಂದು ಕಲಬುರಗಿಯಲ್ಲಿ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್ ಹೇಳಿದರು.

  • 20 Aug 2023 01:32 PM (IST)

    Karnataka News Live: ಕಾವೇರಿ ನದಿ ನೀರು ಹಂಚಿಕೆ ವಿಚಾರ ಸಿಎಂಗೆ ಮುಖ್ಯಮಂತ್ರಿ ಚಂದ್ರು ಪತ್ರ

    ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪತ್ರ ಬರೆದಿದ್ದಾರೆ. ಸಿಎಂ ಸರ್ವಪಕ್ಷ ಸಭೆ ನಡೆಸಬೇಕು. ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿ ಭೇಟಿಗೆ ಕಳುಹಿಸಬೇಕು. ಸುಪ್ರೀಂಕೋರ್ಟ್ ಮುಂದೆ ಕಾವೇರಿ ವಿಚಾರವಾಗಿ ಕರ್ನಾಟಕದ ಪರವಾಗಿ ನ್ಯಾಯ ಮಂಡಿಸಿದ ಹಿರಿಯ ವಕೀಲರು ಎಎಪಿ ಪಕ್ಷದಲ್ಲಿ ಇದ್ದಾರೆ. ಸರ್ವಪಕ್ಷ ಸಭೆ ಹಾಗೂ ನಿಯೋಗದಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಲು ಸಿದ್ಧರಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  • 20 Aug 2023 12:51 PM (IST)

    Karnataka News Live: ಒಟ್ಟು 20 ಶಾಸಕರು ಸಂಪರ್ಕದಲ್ಲಿದ್ದಾರೆ; ಸತೀಶ್​ ಜಾರಕಿಹೊಳಿ

    ಚಾಮರಾಜನಗರ: ಒಟ್ಟು 20 ಶಾಸಕರು ಸಂಪರ್ಕದಲ್ಲಿದ್ದಾರೆ. ಬಿಜೆಪಿಯವರಿಂದ ನಮಗೆ ಭಯ ಇದೆ 24 ಗಂಟೆಯೂ ನಾವು ಎಚ್ಚರದಿಂದ ಇರಬೇಕು. ಪಕ್ಷದ ತತ್ವ ಸಿದ್ದಾಂತಕ್ಕೆ ಒಪ್ಪಿ ಬರುವವರು ಖಂಡಿತ ಬರಬಹುದು. ಸಹೋದರ ರಮೇಶ್ ಜಾರಕಿಹೊಳಿಯನ್ನ ಮತ್ತೆ ಪಾಪಸ್ಸು ಕಾಂಗ್ರೆಸ್​​ಗೆ ಕರೆತರುವ ವಿಚಾರವಾಗಿ ಮಾತನಾಡಿದ ಅವರು ನನಗೆ ಆ ಕುರಿತು ತಿಳಿದಿಲ್ಲ ಪಕ್ಷದ ಹಿರಿಯರು ಏನು ಹೇಳುತ್ತಾರೆ ಅದಕ್ಕೆ ನಾವು ಬದ್ಧ ಎಂದರು.

  • 20 Aug 2023 12:35 PM (IST)

    Karnataka News Live: ಪ್ರಚೋದನಕಾರಿ ಭಾಷಣ ಆರೋಪ; ಹಿಂದೂ ಜಾಗರಣೆ ವೇದಿಕೆ ಮುಖಂಡನ ಬಂಧನ

    ಚಿಕ್ಕಬಳ್ಳಾಫುರ: ಪ್ರಚೋದನಕಾರಿ ಭಾಷಣ ಆರೋಪ ಹಿಂದೂ ಜಾಗರಣೆ ವೇದಿಕೆ ಮುಖಂಡನನ್ನು  ಗೌರಿಬಿದನೂರು ನಗರ ಠಾಣೆ ಪೊಲೀಸರು ಬಂಧಸಿದ್ದಾರೆ. ದಾವಣಗೇರಿ ಮೂಲದ ಸತೀಶ ಬಂಧಿತ. ಹಿಂದೂ ಜಾಗರಣೆ ವೇದಿಕೆ ಕರ್ನಾಟಕ ದಕ್ಷಿಣ ಸಂಚಾಲಕ ಸತೀಶ್​​  ಸ್ವಾತಂತ್ರ್ಯ ದಿನಾಚರಣೆಯೆಂದು ಪ್ರಚೋದನಕಾರಿ ಬಾಷಣ ಮಾಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಗೌರಿಬಿದನೂರು ನಗರ ಠಾಣೆಯಲ್ಲಿ ಪೊಲೀಸರು ಸುಮೊಟೊ ಅಡಿ ಐ.ಪಿ.ಸಿ ಸೆಕ್ಷನ್ 153A,  295A ಪ್ರಕರಣ ದಾಖಲಿಸಿದ್ದಾರೆ.

  • 20 Aug 2023 12:24 PM (IST)

    Karnataka News Live: ನನ್ನ ಒತ್ತಾಯದ ಮೇಲೆ ಸರ್ವಪಕ್ಷದ ಸಭೆ ಕರೆಯಲು ತಿರ್ಮಾನಿಸಿದ್ದಾರೆ

    ಬೆಂಗಳೂರು: ಸರ್ಕಾರ ಕೆಲವು ಲಘುವಾದ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ಜನತೆ ಬಗ್ಗೆ ಕೆಲ ದುಷ್ಪರಿಣಾಮ ಆಗುತ್ತಿದೆ. ವಿರೋಧ ಪಕ್ಷವರಾಗಿರುವ ನಾವು ದುಷ್ಪರಿಣಾಮದ ಬಗ್ಗೆ ಧ್ವನಿ ಎತ್ತಿದ್ದೇವೆ. ನನ್ನ ಒತ್ತಾಯದ ಮೇಲೆ ಸರ್ವಪಕ್ಷದ ಸಭೆ ಕರೆಯಲು ತಿರ್ಮಾನಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹೇಳಿದರು.

  • 20 Aug 2023 12:21 PM (IST)

    Karnataka News Live: ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ದೇವರಾಜ ಅರಸು ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ. ದೇವರಾಜ ಅರಸು ಕರ್ನಾಟಕದ ಅಪರೂಪದ ರಾಜಕಾರಣಿ. ಅರಸು ಬಡವರು, ಸಾಮಾಜಿಕ ನ್ಯಾಯದ ಪರವಾಗಿ ಇದ್ದರು. ಅರಸು ಅವರು ಅಧಿಕಾರಕ್ಕೆ ಬರುವವರೆಗು ಹಿಂದುಳಿದ ವರ್ಗದವರಿಗೆ ಮೀಸಲಾತಿ ಇರಲಿಲ್ಲ. ಹಾವನೂರು ಆಯೋಗ ವರದಿ ತರಿಸಿ ಮೀಸಲಾತಿ ಜಾರಿ‌ ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

  • 20 Aug 2023 11:44 AM (IST)

    Karnataka News Live: ವಿಧಾನಸೌಧದ ಆವರಣದಲ್ಲಿ ದೇವರಾಜ ಅರಸು ಕಾರಿನಲ್ಲಿ ಸಿಎಂ ರೌಂಡ್ಸ್​​

    ಬೆಂಗಳೂರು: ಮಾಜಿ ಸಿಎಂ ದಿವಂಗತ ಡಿ.ದೇವರಾಜ ಅರಸು 108ನೇ ಜನ್ಮದಿನ ಹಿನ್ನೆಲೆಯಲ್ಲಿ ವಿಧಾನಸೌಧದ ದೇವರಾಜ ಅರಸು ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿದರು. ನಂತರ ದೇವರಾಜ ಅರಸು ಬಳಸುತ್ತಿದ್ದ ಕಾರಿನಲ್ಲಿ ಸಿಎಂ ಸಿದ್ದರಾಮಯ್ಯ ವಿಧಾನಸೌಧದ ಆವರಣದಲ್ಲಿ ರೌಂಡ್ಸ್ ಹಾಕಿದರು. ​​

  • 20 Aug 2023 11:33 AM (IST)

    Karnataka News Live: ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾದ ಆಯನೂರು ಮಂಜುನಾಥ್

    ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರದಿಂದ ಜೆಡಿಎಸ್​​​ನಿಂದ ಸ್ಪರ್ಧಿಸಿದ್ದ ಆಯನಝರು ಮಂಜುನಾಥ್​​ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

  • 20 Aug 2023 10:58 AM (IST)

    Karnataka News Live: ಸರ್ವಪಕ್ಷಗಳ ಸಭೆ ಕರೆದ ಡಿಕೆ ಶಿವಕುಮಾರ್​

    ಬೆಂಗಳೂರು: ಕಾವೇರಿ, ಮಹದಾಯಿ, ಕೃಷ್ಣಾ ನದಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಬೆಳಗ್ಗೆ 11 ಗಂಟೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

  • 20 Aug 2023 10:43 AM (IST)

    Karnataka News Live: ಕಾಂಗ್ರೆಸ್​ನಲ್ಲಿ ಸಮಾಧಾನ; ಎರಡನೇ ಹಂತದ ನಾಯಕರಿಂದ ಗೌಪ್ಯ ಸಭೆ

    ಬೆಂಗಳೂರು: ನಿಗಮ ಮಂಡಳಿಗಳ ಹಂಚಿಕೆ ವಿಳಂಬ ವಿಚಾರ ಹಾಗೂ ಪರಿಷತ್ ಸ್ಥಾನಗಳಿಗೂ ಕಾರ್ಯಕರ್ತರನ್ನು ಪರಿಗಣಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್​​ನಲ್ಲಿ ಅಸಮಾಧಾನ ಹೊಗೆ ಆಡುತ್ತಿದೆ. ರಾಜ್ಯ ಕಾಂಗ್ರೆಸ್ ನಾಯಕರ ನಡೆಗೆ ತೀವ್ರ ಅಸಮಾಧಾನಗೊಂಡಿರುವ ಕಾಂಗ್ರೆಸ್ ಪದಾಧಿಕಾರಿಗಳು, ಎರಡನೇ ಹಂತದ ನಾಯಕರು ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ನಿಗಮಮಂಡಳಿ ಅಧ್ಯಕ್ಷ ಸ್ಥಾನ ನೀಡಲಿ ಎಂದು ಒತ್ತಾಯ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ ಕೆಲ ಸಚಿವರ ವರ್ತನೆ ವಿರುದ್ಧವೂ ಅಸಮಾಧಾನಗೊಂಡಿದ್ದಾರೆ.

  • 20 Aug 2023 10:19 AM (IST)

    Karnataka News Live: ನ್ಯಾಯಕ್ಕಾಗಿ ಪೆಟ್ರೋಲ್ ಕ್ಯಾನ್ ಹಿಡಿದು ಕುಳಿತ ಶನಿ ಭಕ್ತರು

    ಮಂಡ್ಯ: ಶನಿದೇವರ ದೇಗುಲದ ಜಾಗ ಅಕ್ರಮವಾಗಿ ಒತ್ತುವರಿ ಆರೋಪ ಹಿನ್ನೆಲೆ ನ್ಯಾಯಕ್ಕಾಗಿ ಪೆಟ್ರೋಲ್ ಕ್ಯಾನ್ ಹಿಡಿದು ಶ್ರೀರಂಗಪಟ್ಟಣ ತಾಲೂಕಿನ ಹೊಸುಂಡವಾಡಿ ಗ್ರಾಮದ ಶನಿಸಿಂಗಾನಪುರ ದೇಗುಲದ ಬಳಿ ಭಕ್ತರು ಧರಣಿಗೆ ಕುಳಿತಿದ್ದಾರೆ.

  • 20 Aug 2023 09:47 AM (IST)

    Karnataka News Live: ಹೆಚ್​ಎಎಲ್​ ಬಳಿಯ ವಾಯುಸೇನಾ ಜಾಗಕ್ಕೆ ಅಕ್ರಮವಾಗಿ ವ್ಯಕ್ತಿ ಪ್ರವೇಶ

    ಬೆಂಗಳೂರು: ಹೆಚ್​ಎಎಲ್​ ಬಳಿಯ ವಾಯುಸೇನೆಯ ಏರ್​ಫೋರ್ಸ್​ ತಾಂತ್ರಿಕ ಪ್ರದೇಶಕ್ಕೆ ಅಕ್ರಮವಾಗಿ ಅಪರಿಚಿತ ವ್ಯಕ್ತಿ  ಪ್ರವೇಶಿಸಿದ್ದಾನೆ. ಪಶ್ಚಿಮ ಬಂಗಾಳ ಮೂಲದ ರಾಜ್​ಕುಮಾರ್ ಎಂಬಾತ ಬಂದಿದ್ದು, ಈ ಬಗ್ಗೆ ಹೆಚ್​ಎಎಲ್​ ಪೊಲೀಸರಿಗೆ ಅಧಿಕಾರಿಗಳು ದೂರು ನೀಡಿದ್ದಾರೆ. ಸದ್ಯ ಹೆಚ್ಎಎಲ್ ಪೊಲೀಸರು ರಾಜ್​ಕುಮಾರ್​​ನನ್ನು ಬಂಧಿಸಿದ್ದಾರೆ. ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 20 Aug 2023 09:10 AM (IST)

    Karnataka News Live: ವದ್ದಿಕೆರೆ ಗ್ರಾಮದ ಬಳಿ ಪೈಲಟ್​ ರಹಿತ ತಪಸ್ ವಿಮಾನ ಪತನ

    ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ ಪೈಲಟ್​ ರಹಿತ ತಪಸ್ ವಿಮಾನ ಪತನವಾಗಿದೆ. ಡಿಆರ್​​ಡಿಒ ಸಿದ್ಧಪಡಿಸಿದ್ದ ಪೈಲಟ್ ರಹಿತ ಡ್ರೋನ್​​ ಮಾದರಿ ವಿಮಾನವನ್ನು ಪರೀಕ್ಷಾರ್ಥ ಹಾರಾಟ ನಡೆಸಲಾಗುತ್ತು.

  • 20 Aug 2023 08:29 AM (IST)

    Karnataka News Live: ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ಭರ್ಜರಿ ಮಾಸ್ಟರ್ ಪ್ಲ್ಯಾನ್

    ಬೆಂಗಳೂರು: ಕಾಂಗ್ರೆಸ್​ ಲೋಕಸಭೆ ಚುನಾವಣೆಗೆ ಭರ್ಜರಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ.  ಉತ್ತರ ಕರ್ನಾಟಕ ಭಾಗದ ಲಿಂಗಾಯತ ಮತಗಳ ಕ್ರೋಢೀಕರಣಕ್ಕೆ ಆ ಭಾಗದ ಭಾಗದ ಬಿಜೆಪಿ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕೆಲವು ಬಿಜೆಪಿ ನಾಯಕರನ್ನು ಕಾಂಗ್ರೆಸ್ ಕಡೆ ಸೆಳೆಯಲು ಯೋಜನೆ ರೂಪಿಸಿದೆ. 20-25 ಮಂದಿ ಹಿರಿಯ ಬಿಜೆಪಿ ಮಾಜಿ ಶಾಸಕರು, ನಾಯಕರನ್ನು ಕೈ ಪಡೆಗೆ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.

  • 20 Aug 2023 08:12 AM (IST)

    Karnataka News Live: ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೆ ಕಾಮಗಾರಿ ಪೂರ್ಣ ಸ್ಥಗಿತ ?

    ಬೆಂಗಳೂರು:  ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೆ ಕಾಮಗಾರಿ ಪೂರ್ಣ ನಿಲ್ಲಿಸುವುದಾಗಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ನಿರ್ಧರಿಸಲು ಮುಂದಾಗಿದೆ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಮಗಾರಿ ನಿಲ್ಲಿಸುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಹಣ ಬಿಡುಗಡೆ ಮಾಡದಿದ್ದರೆ ಕೆಲಸ ನಿಲ್ಲಿಸೋದು ಅನಿವಾರ್ಯ ಎಂದಿದ್ದಾರಂತೆ.

  • 20 Aug 2023 08:01 AM (IST)

    Karnataka News Live: ಇಂದು ಮೈಸೂರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ

    ಬೆಂಗಳೂರು: ಆ.30ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಹಿನ್ನೆಲೆಯಲ್ಲಿ ಇಂದು (ಆ.20) ಮಧ್ಯಾಹ್ನ 12ಕ್ಕೆ ಮೈಸೂರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಲಿದ್ದಾರೆ. ಯೋಜನೆಯ ಚಾಲನೆಗೆ ರೂಪುರೇಷೆ ಸಂಬಂಧ ಮಧ್ಯಾಹ್ನ 2 ಗಂಟೆಗೆ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಿ, ಸೋಮವಾರ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮದ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಸೋಮವಾರ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ​ವಾಪಸ್ ಆಗಲಿದ್ದಾರೆ.​

Published On - Aug 20,2023 8:00 AM