Karnataka Budget 2021: ಶೇಷಾದ್ರಿಪುರಂನ ರಾಘವೇಂದ್ರ ಮಠಕ್ಕೆ ತೆರಳಿ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ

|

Updated on: Mar 08, 2021 | 11:19 AM

Karnataka State Budget 2021: ಬಜೆಟ್ ಪ್ರತಿಗೆ ಪೂಜೆ ಮಾಡಿಸಿದ ಬಿ.ಎಸ್ . ಯಡಿಯೂರಪ್ಪ, ಕಾವೇರಿ ನಿವಾಸದಿಂದ ಹೊರಟ ಬಳಿಕ ನಿವಾಸದ ಗೇಟ್ ದಾಟುವವರೆಗೂ ಕಾರಿನೊಳಗೆ ಕೈ ಜೋಡಿಸಿಕೊಂಡೇ ಕುಳಿತಿದ್ದಿದ್ದು ವಿಶೇಷವಾಗಿತ್ತು.

Karnataka Budget 2021: ಶೇಷಾದ್ರಿಪುರಂನ ರಾಘವೇಂದ್ರ ಮಠಕ್ಕೆ ತೆರಳಿ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ
ರಾಘವೇಂದ್ರ ಮಠದಲ್ಲಿ ಬೃಂದಾವನ ದರ್ಶನ ಪಡೆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Follow us on

ಬೆಂಗಳೂರು: ಕರ್ನಾಟಕ  ಬಜೆಟ್ 2021​ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಬೆಂಗಳೂರಿನ ಶೇಷಾದ್ರಿಪುರಂನ ರಾಘವೇಂದ್ರ ಮಠಕ್ಕೆ ತೆರಳಿ ಬೃಂದಾವನದ ದರ್ಶನ ಪಡೆದಿದ್ದಾರೆ. ದೈವಭಕ್ತರಾದ ಅವರು ಇಂದು ಮಧ್ಯಾಹ್ನ 12.05ರ ಅಭಿಜಿನ್​ ಮಹೂರ್ತದಲ್ಲಿ ಬಜೆಟ್​ ಮಂಡಿಸಲಿದ್ದಾರೆ. ಶೇಷಾದ್ರಿಪುರಂನಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ, ವಿಶೇಷ ಪೂಜೆ ಸಲ್ಲಿಸಿದ್ಧಾರೆ. ಮುಖ್ಯಮಂತ್ರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಆರ್.ಅಶೋಕ್ ಸಾಥ್ ನೀಡಿದ್ದಾರೆ. ಬಜೆಟ್ ಪ್ರತಿಗೆ ಪೂಜೆ ಮಾಡಿಸಿದ ಬಿ.ಎಸ್ . ಯಡಿಯೂರಪ್ಪ, ಕಾವೇರಿ ನಿವಾಸದಿಂದ ಹೊರಟ ಬಳಿಕ ನಿವಾಸದ ಗೇಟ್ ದಾಟುವವರೆಗೂ ಕಾರಿನೊಳಗೆ ಕೈ ಜೋಡಿಸಿಕೊಂಡೇ ಕುಳಿತಿದ್ದಿದ್ದು ವಿಶೇಷವಾಗಿತ್ತು.

ಬಜೆಟ್ ಪ್ರಯುಕ್ತ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಆರಂಭವಾಗಿರುವ ಸಂಪುಟ ಸಭೆಯಲ್ಲಿ ಬಜೆಟ್‌ಗೆ ಅನುಮೋದನೆ ಪಡೆಯಬೇಕಿದೆ.

ಇಂದು ಮಧ್ಯಾಹ್ನ 12:05ಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಲಿರುವ ಬಜೆಟ್​​ ಗಾತ್ರ ಅಂದಾಜು ₹2.40 ಲಕ್ಷ ಕೋಟಿ ತಲುಪುವ ಅಂದಾಜು ವ್ಯಕ್ತವಾಗಿದೆ. ಈಗಾಗಲೇ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಹೀಗಾಗಿ ಈ ಬಜೆಟ್​ನಲ್ಲಿ ತೆರಿಗೆ ಹೊರೆ ಕಡಿಮೆ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಪೆಟ್ರೋಲ್​, ಡೀಸೆಲ್​ ಮೇಲಿನ ತೆರಿಗೆ ಯಥಾಸ್ಥಿತಿಯಷ್ಟೇ ಇರುವ ಸಾಧ್ಯತೆಯಿದೆ. ಆದರೆ ಈ ಬಾರಿಯ ಬಜೆಟ್​ನಲ್ಲಿ ಅಬಕಾರಿ ತೆರಿಗೆ ಹೆಚ್ಚಿಸುವ ಸಾಧ್ಯತೆ ಇದೆ. ಇತರ ತೆರಿಗೆ ಮೂಲಗಳಾದ ಮೋಟಾರು ವಾಹನ ತೆರಿಗೆ, ನೋಂದಣಿ, ಮುದ್ರಾಂಕ ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆ ಇಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Karnataka Budget 2021: ದೇಶದಲ್ಲೇ ಅತಿ ದೊಡ್ಡ ಗಾತ್ರದ ಬಜೆಟ್ ನೀಡಿರುವ ರಾಜ್ಯ ಯಾವುದು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

Karnataka Budget 2021 LIVE: ಕರ್ನಾಟಕ ಬಜೆಟ್ 2021-22;​ ಸರ್ಕಾರದ ಮೇಲೆ ಆರ್ಥಿಕ ಬವಣೆ ಸುಧಾರಿಸುವ ಹೊಣೆ

Published On - 11:15 am, Mon, 8 March 21