Karnataka Budget 2021: ‘ಅಭಿಜಿನ್ ಮುಹೂರ್ತದಲ್ಲಿ ಬಜೆಟ್ ಮಂಡನೆ; ಮಹಿಳೆಯರಿಗೆ ಹೆಚ್ಚಿನ ಆದ್ಯತೆ‘: ಸಿಎಂ ಬಿ.ಎಸ್. ಯಡಿಯೂರಪ್ಪ
Karnataka State Budget 2021: ಅಭಿಜಿನ್ ಮುಹೂರ್ತದಲ್ಲಿ ಬಜೆಟ್ ಮಂಡನೆ; ಮಹಿಳೆಯರಿಗೆ ಹೆಚ್ಚಿನ ಆದ್ಯತೆ‘: ಸಿಎಂ ಬಿ.ಎಸ್. ಯಡಿಯೂರಪ್ಪ
ಬೆಂಗಳೂರು: ಪ್ರಸ್ತುತ 2021-22ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. 8ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಸಹಜವಾಗಿಯೇ ನಿರೀಕ್ಷೆಗಳು ಹೆಚ್ಚಿವೆ. ಕೊರೊನಾ ನಂತರ ಮಂಡಿಸುತ್ತಿರುವ ಈ ಬಜೆಟ್ಗೆ ಪ್ರಾಮುಖ್ಯತೆ ಹೆಚ್ಚಿದ್ದು, ಸೊರಗಿರುವ ಆರ್ಥಿಕತೆಗೆ ಶಕ್ತಿ ತುಂಬುವ ಕೆಲಸವನ್ನು ನಿರ್ವಹಿಸಬೇಕಾದ ಹೊಣೆಗಾರಿಕೆ ಇದೆ. ಜ್ಯೋತಿಷ್ಯ, ಘಳಿಗೆ, ಕಾಲಗಳನ್ನು ನಂಬುವ ಮುಖ್ಯಮಂತ್ರಿಗಳು ಇಂದು ಅಭಿಜಿನ್ ಮುಹೂರ್ತದಲ್ಲಿ ಅಪರಾಹ್ನ 12.05ಕ್ಕೆ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಮಂಡಿಸುತ್ತಿದ್ದಾರೆ. ಈ ಮೂಲಕ ಕೊರೊನಾದಿಂದ ರಾಜ್ಯಕ್ಕೆ ಎದುರಾದ ಗಂಡಾಂತರಗಳು ಕೊನೆಯಾಗಲಿ ಎಂಬ ಆಶಯ ಎದ್ದುಕಾಣುತ್ತಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಶುಭಾಶಯ ಕೋರಿದ್ದಾರೆ. 12.05ಕ್ಕೆ ಬಜೆಟ್ ಮಂಡನೆ ಮಾಡುತ್ತೇನೆ. ಬಜೆಟ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ಎಂದು ಅವರು ಬಜೆಟ್ ಮಂಡನೆಗೂ ಮುನ್ನ ಸಚಿವ ಸಂಪುಟ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.
ಇಂದು ಮಧ್ಯಾಹ್ನ 12:05ಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಲಿರುವ ಬಜೆಟ್ ಗಾತ್ರ ಅಂದಾಜು ₹2.40 ಲಕ್ಷ ಕೋಟಿ ತಲುಪುವ ಅಂದಾಜು ವ್ಯಕ್ತವಾಗಿದೆ. ಈಗಾಗಲೇ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಹೀಗಾಗಿ ಈ ಬಜೆಟ್‌ನಲ್ಲಿ ತೆರಿಗೆ ಹೊರೆ ಕಡಿಮೆ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಯಥಾಸ್ಥಿತಿಯಷ್ಟೇ ಇರುವ ಸಾಧ್ಯತೆಯಿದೆ. ಆದರೆ ಈ ಬಾರಿಯ ಬಜೆಟ್‌ನಲ್ಲಿ ಅಬಕಾರಿ ತೆರಿಗೆ ಹೆಚ್ಚಿಸುವ ಸಾಧ್ಯತೆ ಇದೆ. ಇತರ ತೆರಿಗೆ ಮೂಲಗಳಾದ ಮೋಟಾರು ವಾಹನ ತೆರಿಗೆ, ನೋಂದಣಿ, ಮುದ್ರಾಂಕ ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆ ಇಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲ ಇಲಾಖೆಗಳ ಅನುದಾನ ಕಡಿತ? ಈ ಬಾರಿ ಬಜೆಟ್‌ನಲ್ಲಿ ಕೆಲ ಇಲಾಖೆಗಳ ಅನುದಾನ ಕಡಿತ ಮಾಡುವ ಸಾಧ್ಯತೆಯಿದೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕಡಿತದ ಬಗ್ಗೆ ಮುನ್ಸೂಚನೆ ನೀಡಲಾಗಿದ್ದು, ಅದರಂತೆ ಕೆಲವು ಇಲಾಖೆಗಳ ಅನುದಾನ ಶೇ.15-30ರಷ್ಟು ಕಡಿತ ಸಾಧ್ಯತೆ ಇದೆ.
ಯಾವ ಇಲಾಖೆಗಳು? ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರವಾಸೋದ್ಯಮ ಇಲಾಖೆ ತೋಟಗಾರಿಕೆ ಇಲಾಖೆ ಪಶುಸಂಗೋಪನೆ ಇಲಾಖೆ ಸಕ್ಕರೆ ಇಲಾಖೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಮುಜರಾಯಿ, ಪೌರಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ಕೇಂದ್ರದ ದಾರಿ ಅನುಸರಿಸಲಿದೆಯಾ ರಾಜ್ಯ? ಕೇಂದ್ರದ ಮಾದರಿಯಲ್ಲಿ ಯೋಜನೆಗಳ ಸಮೀಕರಣಗೊಳಿಸಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವ ಚಿಂತನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದ್ದಾರೆ ಎನ್ನಲಾಗಿದೆ. ಈಗಾಗಲೇ ರಾಜ್ಯ ಯೋಜನಾ ಮಂಡಳಿಯಿಂದ 1,745 ರಾಜ್ಯ ಯೋಜನೆಗಳನ್ನ ಸಮೀಕರಿಸಲು ಶಿಫಾರಸು ಮಾಡಲಾಗಿದ್ದು, 2020-21ನೇ ಸಾಲಿನ ಬಜೆಟ್‌ನಲ್ಲಿ 1,863 ಯೋಜನೆಗಳನ್ನು ಘೋಷಿಸಲಾಗಿದೆ. ಈ ಪೈಕಿ 1 ಕೋಟಿಗೂ ಹೆಚ್ಚು ಅನುದಾನಿತ 368 ಯೋಜನೆಗಳು, 1 ರಿಂದ 10 ಕೋಟಿ ಅನುದಾನಿತ 616 ಯೋಜನೆಗಳು,10-100 ಕೋಟಿ ಅನುದಾನಿತ 612 ಯೋಜನೆಗಳು, 100 ಕೋಟಿ ಮೇಲ್ಪಟ್ಟ 267 ಅನುದಾನಿತ ಯೋಜನೆಗಳನ್ನು ಘೋಷಿಸಲಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿ ₹1 ಕೋಟಿಗಿಂತ ಕಡಿಮೆ ಇರುವ ಎಲ್ಲಾ ಯೋಜನೆಗಳನ್ನು ದೊಡ್ಡ ಯೋಜನೆಗಳ ಜತೆ ವಿಲೀನಗೊಳಿಸಲು ಸಿಎಂ ಒಪ್ಪಿಗೆ ನೀಡುವ ಸಾಧ್ಯತೆಗಳು ದಟ್ಟವಾಗಿದೆ.
ತೆರಿಗೆಯೇತರ ಆದಾಯಕ್ಕೆ ಹೆಚ್ಚಿನ ಆದ್ಯತೆ ಸಾಧ್ಯತೆ ಇಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ಕೇಂದ್ರದಂತೆ ರಾಜ್ಯ ಸರ್ಕಾರ ಖಾಸಗಿ ಪಾಲುದಾರಿಕೆಗೆ ಮೊರೆಹೋಗು ಸಾಧ್ಯತೆ ಇದೆ ಎನ್ನಲಾಗಿದೆ. ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆ, ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಸಾಧ್ಯತೆಯಿದೆ. ಈ ಕ್ರಮಗಳಿಂದ ಖಾಸಗಿ ಪಾಲುದಾರಿಕೆಯನ್ನು ಹೆಚ್ಚಿಸಿ ಸರ್ಕಾರದ ಮೇಲೆ ಹೊರೆ ಕಡಿಮೆಗೊಳಿಸಲು ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೆಚ್ಚು ಆದಾಯ ಗಳಿಸುವತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಈ ಕ್ರಮಗಳಿಂದ ಹೆಚ್ಚಿನ ಆದಾಯ ಕ್ರೋಢೀಕರಣ ಮಾಡುವ ಚಿಂತನೆ ಇರುವ ಕಾರಣ, ಈ ಬಾರಿ ಸರ್ಕಾರ ನತ್ತು ಖಾಸಗಿ ಸಹಭಾಗಿತ್ವದ (ಪಿಪಿಪಿ ಮಾದರಿ) ಯೋಜನೆ ಘೋಷಿಸುವ ಸಾಧ್ಯತೆಯಲ್ಲಿ ತಳ್ಳಿಹಾಕುವಂತಿಲ್ಲ.
ಸಾಲದ ಮೊರೆ ಹೋಗಲು ನಿರ್ಧರಿಸಿರುವ ರಾಜ್ಯ ಸರ್ಕಾರ? ಕೇಂದ್ರ ಸರ್ಕಾರ ಸಾಲ ಪಡೆಯುವ ಮಿತಿಯನ್ನು ಶೇ.3ರಿಂದ ಶೇ.5ಕ್ಕೆ ಹೆಚ್ಚಿಸಿದ ಹಿನ್ನೆಲೆಯ ಕಾರಣ ಹೆಚ್ಚಿನ ಸಾಲ ಪಡೆಯುವ ಆಯ್ಕೆ ಬಳಸಲು ಸಿಎಂ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದಾಯ ಮೂಲ ಸೀಮಿತವಾಗಿರುವುದರಿಂದ ಸಾಲದ ಮೊರೆ ಹೋದರೆ ಸಂಪನ್ಮೂಲದ ಕ್ರೋಢೀಕರಣ ಮಾಡಬಹುದು ಎಂಬ ಯೋಜನೆಯನ್ನು ಮುಖ್ಯಮಂತ್ರಿ ಹೊಂದಿದ್ದಾರೆ.
ಇದನ್ನೂ ಓದಿ: Karnataka Budget 2021: ಕರ್ನಾಟಕ ಬಜೆಟ್ ಬಗ್ಗೆ ಜನಸಾಮಾನ್ಯರ ನಿರೀಕ್ಷೆಗಳೇನು? ಸರ್ಕಾರದ ಮುಂದಿರುವ ಸವಾಲುಗಳೇನು?
Karnataka Budget 2021: ಈ ಬಾರಿಯ ಕರ್ನಾಟಕ ಬಜೆಟ್‌ನಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ: ಬಿ.ಎಸ್.ಯಡಿಯೂರಪ್ಪ