AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್ ಜಾರಕಿಹೊಳಿ ಸಿ.ಡಿ ಬಹಿರಂಗ ಪ್ರಕರಣ: ದಿನೇಶ್ ಕಲ್ಲಹಳ್ಳಿ ಪರ ವಕೀಲರು ನೀಡಿದ್ದ ಅರ್ಜಿ ತಿರಸ್ಕರಿಸಿದ ಕಬ್ಬನ್​ಪಾರ್ಕ್ ಠಾಣೆ ಪೊಲೀಸರು

ರಮೇಶ್ ಜಾರಕಿಹೊಳಿ ರಾಸಲೀಲೆ CD ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ಕಲ್ಲಹಳ್ಳಿ ಪರ ವಕೀಲರು ನೀಡಿದ್ದ ಅರ್ಜಿಯನ್ನ ಕಬ್ಬನ್​ಪಾರ್ಕ್ ಠಾಣೆ ಪೊಲೀಸರು ತಿರಸ್ಕರಿಸಿದ್ದಾರೆ. ನಿನ್ನೆ ಪ್ರಕರಣಕ್ಕೆ ಸಂಬಂಧಿಸಿದ ದೂರು ವಾಪಸ್​ ಪಡೆಯಲು ವಕೀಲರನ್ನು ದಿನೇಶ್ ಕಲ್ಲಹಳ್ಳಿ ಕಳಿಸಿದ್ದರು.

ರಮೇಶ್ ಜಾರಕಿಹೊಳಿ ಸಿ.ಡಿ ಬಹಿರಂಗ ಪ್ರಕರಣ: ದಿನೇಶ್ ಕಲ್ಲಹಳ್ಳಿ ಪರ ವಕೀಲರು ನೀಡಿದ್ದ ಅರ್ಜಿ ತಿರಸ್ಕರಿಸಿದ ಕಬ್ಬನ್​ಪಾರ್ಕ್ ಠಾಣೆ ಪೊಲೀಸರು
ದಿನೇಶ್ ಕಲ್ಲಹಳ್ಳಿ
ಪೃಥ್ವಿಶಂಕರ
|

Updated on:Mar 08, 2021 | 9:58 AM

Share

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ CD ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ಕಲ್ಲಹಳ್ಳಿ ಪರ ವಕೀಲರು ನೀಡಿದ್ದ ಅರ್ಜಿಯನ್ನ ಕಬ್ಬನ್​ಪಾರ್ಕ್ ಠಾಣೆ ಪೊಲೀಸರು ತಿರಸ್ಕರಿಸಿದ್ದಾರೆ. ನಿನ್ನೆ ಪ್ರಕರಣಕ್ಕೆ ಸಂಬಂಧಿಸಿದ ದೂರು ವಾಪಸ್​ ಪಡೆಯಲು ವಕೀಲರನ್ನು ದಿನೇಶ್ ಕಲ್ಲಹಳ್ಳಿ ಕಳಿಸಿದ್ದರು. ಆದರೆ ವಕೀಲರು ನೀಡಿದ್ದ ಅರ್ಜಿಯನ್ನು ತಿರಸ್ಕರಿಸಿದ ಪೊಲೀಸರು, ಖುದ್ದು ದೂರುದಾರ ಹಾಜರಾಗಲು ಸೂಚಿಸಿದ್ದಾರೆ. ಆದರೆ ಇಂದು ಠಾಣೆಗೆ ಹಾಜರಾಗದಿರಲು ಕಲ್ಲಹಳ್ಳಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ವಕೀಲರ ಭೇಟಿ ಬಳಿಕ ದಿನೇಶ್ ಮುಂದಿನ ತೀರ್ಮಾನ ಮಾಡಬಹುದು ಎನ್ನಲಾಗಿದೆ. ದೂರು ಇದುವರೆಗೆ ವಾಪಸ್ಸಾಗಿಲ್ಲದ ಕಾರಣ ಕಬ್ಬನ್ ಪಾರ್ಕ್ ಪೊಲೀಸರು ತಮ್ಮ ತನಿಖೆ ಮುಂದುವರೆಸಿದ್ದಾರೆ.

ದೂರು ಕೊಟ್ಟ್ ದಿನೇಶ್ ಕಲ್ಲಹಳ್ಳಿಗೆ ಈಗ ದಿಗಿಲು.. ರಮೇಶ್ ಜಾರಕಿಹೊಳಿ ವಿರುದ್ದ ದೂರು ಕೊಟ್ಟ್ ದಿನೇಶ್ ಕಲ್ಲಹಳ್ಳಿಗೆ ಈಗ ಭಯ ಶುರುವಾಗಿದೆ. ಕೊಟ್ಟ ದೂರನ್ನು ವಾಪಸ್ಸು ಪಡೆಯಲು ಮುಂದಾಗಿದ್ದು ಯಾಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ. ನೆನ್ನೆ ದಿನೇಶ್ ತನ್ನ ವಕೀಲರ ಮೂಲಕ ದೂರು ವಾಪಸ್ಸು ಪಡೆಯಲು ಮುಂದಾಗಿದ್ದರು. ಆದರೆ ವಕೀಲ ತಂದಿದ್ದ ದಿನೇಶ್ ನೀಡಿದ್ದ ಪತ್ರಕ್ಕೆ ಕಬ್ಬನ್ ಪಾರ್ಕ್ ಪೊಲೀಸರು ಸೊಪ್ಪುಹಾಕಲಿಲ್ಲ. ಅರ್ಜಿ ಸ್ವೀಕರಿಸದೆ ಇದ್ರು ಸಹ ಮುಂದಿನ ಹೆಜ್ಜೆ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ. ದಿನೇಶ್ ಕೊಟ್ಟಿರುವ ದೂರುನಲ್ಲಿ ಗಂಭೀರ ಅಂಶಗಳು ಹಾಗು ವಿಚಾರಗಳು ಇವೆ ಹೀಗಾಗಿ ಕಬ್ಬನ್ ಪಾರ್ಕ್ ಪೊಲೀಸರು ಮತ್ತೊಮ್ಮೆ ಲೀಗಲ್ ಒಪಿನಿಯನ್ ಮೊರೆ ಹೋಗಿದ್ದಾರೆ.

ಸಚಿವರ ವಿರುದ್ಧದ ದೂರು ಗಂಭೀರ ಸ್ವರೂಪದ್ದು.. ಕೊಟ್ಟ ದೂರಿನಿಂದ ಹಾಗೂ ಸಿಡಿಯಿಂದ ದೊಡ್ಡ ಮಟ್ಟದ ಬೆಳವಣಿಗೆಗಳು ಅಗಿವೆ. ಈಗ ಉಲ್ಟಾ ಹೊಡೆದರೆ ಹೇಗೆ ಮುಂದೆ ಏನು ಮಾಡಬೇಕು ಎಂಬುದು ಪೊಲೀಸರ ಪ್ರಶ್ನೆಯಾಗಿದೆ. ಕಾನೂನು ಸಲಹೆ ಬಂದ ಬಳಿಕ ಪೊಲೀಸರು ಮುಂದಿನ ಕ್ರಮಕೈಗೊಳ್ಳುವ ಸಾಧ್ಯತೆಯಿದೆ. ಕಬ್ಬನ್ ಪಾರ್ಕ್ ಪೊಲೀಸರು ದಿನೇಶ್ ಕಲ್ಲಹಳ್ಳಿಯನ್ನು ಮತ್ತೊಮ್ಮೆ ವಿಚಾರಣೆ ನಡೆಸಬಹುದು. ಅಲ್ಲದೆ ಕಾನೂನನ್ನು ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡ್ರು ಅನ್ನೊ ಅರೋಪ ಈಗ ಕಲ್ಲಹಳ್ಳಿ ಮೇಲೆ ಕೇಳಿಬಂದಿದೆ.

ಕೊಟ್ಟ ದೂರು ವಾಪಸ್ಸು ಪಡೆಯುವುದು ಅಷ್ಟು ಸುಲಭವಲ್ಲ.. ದೂರು ಪಡೆದು ಈಗಾಗಲೇ ತನಿಖೆ ಆರಂಭ ಮಾಡಲಾಗಿದೆ. ಈ ಸಮಯದಲ್ಲಿ ದೂರು ವಾಪಸ್ಸು ಅಂದ್ರೆ ಅದು ತನಿಖಾ ಅಧಿಕಾರಿಗಳ ವಿವೇಚನೆಗೆ ಬಿಟ್ಟ ವಿಚಾರ. ಸ್ವಂತ ವಿಚಾರಗಳಲ್ಲಿ ದೂರನ್ನು ವಾಪಸ್ಸು ಪಡೆಯವ ಅವಕಾಶ ಹೆಚ್ಚು. ಎಫ್ ಐ ಆರ್ ದಾಖಲಾಗಿದ್ರೆ ಠಾಣೆ ಯಲ್ಲಿ ವಾಪಸ್ಸು ಪಡೆಯೋದು ಸಾದ್ಯವಿರಲ್ಲಾ. ಈಗ ಕೇಸ್ ದಾಖಲಾಗದ ಕಾರಣ, ದೂರು ದಾರ ಸೂಕ್ತ ಕಾರಣ ನೀಡಿದ್ರೆ ದೂರು ವಾಪಸ್ಸು ಪಡೆಯಬಹುದು.ಒಂದು ವೇಳೆ ದೂರು ವಾಪಸ್ಸು ಪಡೆಯುವುದ ಹಿಂದೆ ಬೇರೊಂದು ದುರುದ್ದೇಶ ಇದೆ ಎಂದು ತನಿಖಾ ಅಧಿಕಾರಿಗೆ ಅನ್ನಿಸಿದ್ರೆ ವಾಪಸ್ಸು ನೀಡದೆ ತನಿಖೆ ಮುಂದುವರೆಸಬಹುದು.

ದಿನೇಶ್ ಕಲ್ಲಹಳ್ಳಿಗೆ ಈಗ ಕಾಡ್ತಿದೆ ಸಂಪೂರ್ಣ ಭಯ.. ದಿನೇಶ್ ಕಲ್ಲಹಳ್ಳಿಗೆ ಒಂದು ಟೀಮ್ ವಿಡೀಯೋ ಸಿಡಿ ನೀಡಿತ್ತು. ಆದರೆ ಯಾವ ತಂಡ ವಿಡಿಯೋ ಕೊಟ್ಟಿತ್ತೊ ಅವ್ರು ಹುಡುಗಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲಾ. ಸಿಡಿ ಬಹಿರಂಗ ಪಡಿಸಿ ದೂರು ನೀಡುವಂತೆ ಆ ತಂಡ ದಿನೇಶ್​ಗೆ ತಿಳಿಸಿತ್ತು. ದೂರು ನೀಡಿದ ಎರಡು ದಿನ ಬಳಿಕ ಯುವತಿ ಬರ್ತಾಳೆ ಎಂದು ಕಲ್ಲಹಳ್ಳಿಗೆ ಹೇಳಲಾಗಿತ್ತು. ಅಲ್ಲದೆ ಜಾರಕಿಹೊಳಿ ವಿರುದ್ದ ಪೊಲೀಸ್ ಹಾಗು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಾಳೆ ಎಂದಿದ್ರು. ಈಗ ಯುವತಿಯು ಬಂದಿಲ್ಲಾ , ಯುವತಿಯ ಬಗ್ಗೆ ದಿನೇಶ್​ಗೆ ಮಾಹಿತಿಯು ಇಲ್ಲಾ.

ಯಾರೊ ಅವರ ಕೆಲಸಕ್ಕೆ ಬಳಸಿಕೊಂಡ್ರು.. ಇತ್ತ ಪೊಲೀಸರು ಯುವತಿಯನ್ನು ಪತ್ತೆ ಮಾಡುವ ಸನಿಹಕ್ಕೆ ಹೋಗಿದ್ದಾರೆ. ಯುವತಿ ಪತ್ತೆ ಅದ್ರೆ ದಿನೇಶ್​ಗೆ ಸಮಸ್ಯೆ ಅಗುತ್ತೆ. ಇತ್ತ ದಿನೇದಿನೇ ಕೇಸ್ ಮುಂದೆ ಹೋಗ್ತಾ ಇದೆ. ಅದ್ರೆ ಅದಕ್ಕೆ ದಿನೇಶ್ ಬಳಿ ಸೂಕ್ತ ದಾಖಲೆ ಇಲ್ಲ. ಮತ್ತೊಂದೆಡೆ ಡೀಲ್ ನಡೆಸಿ ವಿಡಿಯೋ ಬಿಡುಗಡೆ ಮಾಡಿದ್ದಾರೆ ಎಂಬ ಮಾತು ಜೋರಾಗಿದೆ. ಡೀಲ್ ಪದ ಕೇಳಿದ ತಕ್ಷಣ ದಿನೇಶ್ ಕಲ್ಲಹಳ್ಳಿ ಭಯಕ್ಕೆ ಬಿದ್ದಿದ್ದಾರೆ. ತನ್ನನ್ನು ಯಾರೊ ಅವರ ಕೆಲಸಕ್ಕೆ ಬಳಸಿಕೊಂಡ್ರು ಅನ್ನೊ ಭಯ ಶುರುವಾಗಿದೆ. ಇತ್ತ ಜಾರಕಿಹೊಳಿ ಸಹ ಪ್ರಭಾವಿ , ಅವ್ರನ್ನು ಎದುರಾಕಿಕೊಂಡು ಭದುಕೋದು ಹೇಗೆ. ದೂರು ನೀಡಿದ ದಿನದಿಂದ ಇಲ್ಲಿಯವರೆಗೆ ಗೋಕಾಕ್​ನಲ್ಲಿ ನಿಂತಿಲ್ಲಾ ಕಿಚ್ಚು. ದಿನೇಶ್​ಗೂ ನಿತ್ಯ ಬರುತ್ತಿವೆಯಂತೆ ಹಲವಾರು ಬೆದರಿಕೆ ಕರೆಗಳು. ಹೀಗಾಗಿ ಹಲವು ಕಾರಣಗಳಿಂದ ಹೆದರಿದ ದಿನೇಶ್ ಕೇಸ್ ವಾಪಸ್ಸು ಪಡೆದುಕೊಳ್ಳುವ ದಾರಿ ಹಿಡಿದ್ದಾರೆ.

Published On - 9:57 am, Mon, 8 March 21