Karnataka Budget 2023 PDF:ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್​​ನ ಸಂಪೂರ್ಣ ಮಾಹಿತಿಯ ಪಿಡಿಎಫ್​ ಇಲ್ಲಿದೆ

ಕರ್ನಾಟಕ ಬಜೆಟ್​ 2023: ಬಜೆಟ್​ನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಮತ್ತು ಈ ಬಾರಿ ಬಜೆಟ್​​ ಗಾತ್ರ ಎಷ್ಟಿದೆ, ಯಾವೆಲ್ಲ ಇಲಾಖೆಗೆ ಎಷ್ಟು ಅನುದಾನ ನೀಡಿದ್ದಾರೆ, ಒಟ್ಟು ಬಜೆಟ್​ಗೆ​​ ಆಗುವ ಖರ್ಚು-ವೆಚ್ಚಗಳು ಎಷ್ಟು ಎಂಬುದರ ಸಂಪೂರ್ಣ ಮಾಹಿತಿಯ ಪಿಡಿಎಫ್ ಪ್ರತಿ ಇಲ್ಲಿದೆ ನೋಡಿ 

Karnataka Budget 2023 PDF:ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್​​ನ ಸಂಪೂರ್ಣ ಮಾಹಿತಿಯ ಪಿಡಿಎಫ್​ ಇಲ್ಲಿದೆ
ಸಿದ್ದರಾಮಯ್ಯ

Updated on: Jul 07, 2023 | 2:40 PM

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-2024ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ, ಅನೇಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಂಡಿಸಿದ್ದಾರೆ. ಕೃಷಿ, ಶಿಕ್ಷಣ, ಮಹಿಳೆಯರ ಸಬಲೀಕರಣ, ಆರೋಗ್ಯ, ಇನ್ನೂ ಅನೇಕ ಕ್ಷೇತ್ರಗಳಿಗೆ ಅನುದಾನ ಮತ್ತು ಹೊಸ ಯೋಜನೆಗಳಿಗೆ ಕೋಟಿ ಕೋಟಿ ಹಣವನ್ನು ಮೀಸಲಿಟ್ಟಿದ್ದಾರೆ. ಆದಾಯ ತೆರಿಗೆ ಇಲಾಖೆಯಲ್ಲಿ ಯಾವೆಲ್ಲ ಕ್ಷೇತ್ರಗಳಿಗೆ ಎಷ್ಟು ಹಣವನ್ನು ಮೀಸಲಿಡಲಾಗಿದೆ ಎಂಬುದರ ಬಗ್ಗೆಯು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಇನ್ನೂ ಬಜೆಟ್​ನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಮತ್ತು ಈ ಬಾರಿ ಬಜೆಟ್​​ ಗಾತ್ರ ಎಷ್ಟಿದೆ, ಯಾವೆಲ್ಲ ಇಲಾಖೆಗೆ ಎಷ್ಟು ಅನುದಾನ ನೀಡಿದ್ದಾರೆ.

ಕರ್ನಾಟಕ ಬಜೆಟ್​ 2023-24 ಪಿಡಿಎಫ್ ಪ್ರತಿ

ಇನ್ನೂ ಹಿಂದಿನ ಸರ್ಕಾರ ಮಂಡಿಸಿದ ಬಜೆಟ್​​ನ್ನು ಗಮನದಲ್ಲಿಟ್ಟುಕೊಂಡು ಅನೇಕ ಯೋಜನೆಗಳನ್ನು ಕೈಬಿಡಲಾಗಿದೆ. ಹೊಸ ಯೋಜನೆಗೆ ಸಿದ್ದರಾಮಯ್ಯ ಸರ್ಕಾರ ಆದ್ಯತೆ ನೀಡಿದೆ. ಬೆಂಗಳೂರು ಸೇರಿಸಿದಂತೆ ಅನೇಕ ನಗರ ಪ್ರದೇಶಗಳಿಗೆ ಹೆಚ್ಚು ಅನುದಾನವನ್ನು ನೀಡುವ ಭರವಸೆಯನ್ನು ಬಜೆಟ್​​ ನೀಡಿದ್ದಾರೆ.

ಇಂದಿರಾ ಕ್ಯಾಂಟಿನ್ 200 ಕೋಟಿಯಷ್ಟು ಅನುದಾನ ನೀಡಲಾಗುವುದು ಎಂದು ಹೇಳಿದ್ದಾರೆ, ಇನ್ನೂ ಕಾಂಗ್ರೆಸ್​ ಸರ್ಕಾರ ಮಹತ್ವಾಕಾಂಕ್ಷೆಯ  5 ಗ್ಯಾರೆಂಟಿಗಳಿಗೆ ಸಂಬಂಧಿಸಿದಂತೆ 26ರಷ್ಟು ಸಾಲ ಪಡೆಯಲು ನಿರ್ಧಾರ ತೆಗೆದುಕೊಂಡಿದೆ. ಇನ್ನೂ ಪುನೀತ್ ರಾಜಕುಮಾರ್ ಸ್ಮರಣಾರ್ಥ ಆರೋಗ್ಯ ವ್ಯವಸ್ಥೆಗೆ 6 ಕೋಟಿ ಮೀಸಲಿಡಲಾಗುವುದು ಎಂದು ಹೇಳಿದ್ದಾರೆ. ಇನ್ನೂ ರಾಜ್ಯದಲ್ಲಿರುವ ವಿದ್ಯಾರ್ಥಿಗಳಿಗೆ ಹೊಸ ಯೋಜನೆಗಳ ಮೂಲಕ ಅವರಿಗೆ ಬಲ ನೀಡುವ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: APMC ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವುದಾಗಿ ಘೋಷಿಸಿದ ಸಿದ್ದರಾಮಯ್ಯ

ಬೆಂಗಳೂರಿಗೆ ಹೆಚ್ಚಿನ ಕೊಡುಗೆ

ಸಿದ್ದರಾಮಯ್ಯ ಸರ್ಕಾರ ರಾಜ್ಯ ರಾಜಧಾನಿಗೆ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಿದೆ. ಬೆಂಗಳೂರಿಗೆ 45 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಬ್ರ್ಯಾಂಡ್​ ಬೆಂಗಳೂರು ಯೋಜನೆಯಡಿಯಲ್ಲಿ ಬೆಂಗಳೂರು ವೈಟ್‌ ಟಾಪಿಂಗ್​, ರಸ್ತೆ ಅಭಿವೃದ್ಧಿ, ನಗರೋತ್ಥಾನ, ತಾಜ್ಯ ನಿರ್ವಹಣೆ, ರಾಜಕಾಲುವೆ ತೆರವು ಮತ್ತು ದುರಸ್ತಿಗೆ ಆದ್ಯೆತೆ ನೀಡಲಾಗಿದೆ.

ಕರ್ನಾಟಕ ಬಜೆಟ್ ಸಂಪೂರ್ಣ ಮಾಹಿತಿಯ ಪಿಡಿಎಫ್ ಪ್ರತಿ 

ರಾಜ್ಯ ಬಜೆಟ್​ಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:01 pm, Fri, 7 July 23