AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಜನತೆಗೆ ಬಿಗ್‌ ಶಾಕ್‌: ಹಾಲಿನ ದರ 8 ರೂ.ಹೆಚ್ಚಳಕ್ಕೆ ಸಂಪುಟ ತೀರ್ಮಾನ

ದೀಪಾವಳಿ ಹಬ್ಬದ ಹೊಸ್ತಿಲಲ್ಲೇ ರಾಜ್ಯದ ಜನತೆಗೆ ಸರ್ಕಾರ ಬಿಗ್‌ ಶಾಕ್‌ ಕೊಟ್ಟಿದೆ. ಹಾಲಿನ ದರ 8 ರೂ. ಹೆಚ್ಚಳಕ್ಕೆ ಇಂದು (ಅಕ್ಟೋಬರ್ 29) ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಎಂಟು ರೂಪಾಯಿ ಪೈಕಿ ರೈತರಿಗೆ 7 ರೂಪಾಯಿ, ಇನ್ನೊಂದು ರೂಪಾಯಿ ಕೆಎಂಎಫ್ ಗೆ ನೀಡಲು ನಿರ್ಧರಿಸಿದೆ.

ಕರ್ನಾಟಕದ ಜನತೆಗೆ ಬಿಗ್‌ ಶಾಕ್‌: ಹಾಲಿನ ದರ 8 ರೂ.ಹೆಚ್ಚಳಕ್ಕೆ ಸಂಪುಟ ತೀರ್ಮಾನ
Nandini Milk
ರಮೇಶ್ ಬಿ. ಜವಳಗೇರಾ
|

Updated on:Oct 29, 2026 | 5:04 PM

Share

ಬೆಂಗಳೂರು, (ಅಕ್ಟೋಬರ್ 29): ಕೊನೆಗೂ  ನಂದಿನಿ ಹಾಲಿನ ದರವನ್ನು 8 ರೂ. ಹೆಚ್ಚಳಕ್ಕೆ  ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇಂದು (ಅಕ್ಟೋಬರ 29) ನಡೆದ ಸಚಿವ ಸಂಪುಟದಲ್ಲಿ ಪ್ರತಿ ಲೀಟರ್ ನಂದಿನಿ ಹಾಲಿಗೆ ಬರೋಬ್ಬರಿ ಎಂಟು ರೂಪಾಯಿ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಈ 8 ರೂಪಾಯಿ ಪೈಕಿ ರೈತರಿಗೆ 7 ರೂಪಾಯಿ ಮತ್ತು ಉಳಿದ 1 ರೂಪಾಯಿ ಒಕ್ಕೂಟಗಳಿಗೆ ಸಿಗಲಿದ್ದು,  ನವೆಂಬರ್ 1 ರಿಂದ ಪರಿಸ್ಕೃತ ದರ ಜಾರಿಗೆ ಬರಲಿದೆ. ಸರ್ಕಾರಕ್ಕೆ 70:30 ರಂತೆ ದರ ಏರಿಕೆಗೆ ಒಕ್ಕೂಟಗಳು ಮನವಿ ಮಾಡಿದ್ದವು. ಆದರೆ, 80:20 ರಂತೆ ದರ ಏರಿಕೆ ಮಾಡಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಆದ್ರೆ, ಅಂತಿಮವಾಗಿ 90:10ರಂತೆ ದರ ಏರಿಸಲಾಗಿದೆ.

ರೈತರಿಗೆ 7 ರೂಪಾಯಿ

ದರ ಏರಿಕೆಯ 8 ರೂಪಾಯಿಯಲ್ಲಿ 7 ರೂಪಾಯಿಯನ್ನು ರೈತರಿಗೆ ಸಹಾಯಧನವಾಗಿ ನೀಡಲು ನಿರ್ಧರಿಸಲಾಗಿದೆ. ರೈತರಿಗೆ ಬಮುಲ್ ವ್ಯಾಪ್ತಿಯಲ್ಲಿ ಸದ್ಯ ಪ್ರತಿ ಲೀಟರ್‌ಗೆ 33 ರೂ. ದಿಂದ 35 ರೂ. ನೀಡಲಾಗುತ್ತಿದ್ದು, ಆ ಮೊತ್ತ 40 ರಿಂದ 42 ರೂಪಾಯಿಗೆ ಹೆಚ್ಚಳವಾಗಲಿದೆ. ಹೆಚ್ಚುವರಿ 1 ರೂಪಾಯಿಯನ್ನು ಹಾಲು ಮಂಡಳಿಗಳ ಪಾಲಾಗಿದೆ.

ಇದನ್ನೂ ಓದಿ: ರಾಜ್ಯದ ಹಾಲಿನ ಒಕ್ಕೂಟಗಳ ಪೈಕಿ ನಾಲ್ಕು ತಿಂಗಳಲ್ಲಿ ಬಮೂಲ್​ಗೆ ಅತಿ ಹೆಚ್ಚು ಲಾಭ! 5 ಒಕ್ಕೂಟಗಳಿಗೆ ತೀವ್ರ ನಷ್ಟ

ಇನ್ನು ಬಸ್ ಟಿಕೆಟ್ ದರ ಏರಿಕೆ ಬಗ್ಗೆಯೂ ಸಂಪುಟದಲ್ಲಿ ಚರ್ಚೆಯಾಗಿದೆ. ಆದ್ರೆ, ಸಂಪುಟ ಟಿಕೆಟ್ ದರ ಏರಿಕೆಯನ್ನು ಸಾರಿಗೆ ಇಲಾಖೆಗೆ ಬಿಟ್ಟಿದ್ದು, ಇಲಾಖೆ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿದ್ದು, ನವೆಂಬರ್ 5 ರಂದು ಸಾರಿಗೆ ದರ ಹೆಚ್ಚಳ ತೀರ್ಮಾನವಾಗಲಿದೆ.

ಯಾವ್ಯಾವ ಹಾಲಿನ ದರ ಎಷ್ಟು ಏರಿಕೆ?

  • ಟೋನ್ಡ್‌ ಹಾಲು (1 ಲೀಟರ್): 46ರಿಂದ 54 ರೂಪಾಯಿಗೆ ಏರಿಕೆ.
  • ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು: 47ರಿಂದ 55 ರೂ.
  • ಹೋಮೋಜಿನೈಸ್ಡ್‌ ಹಸುವಿನ ಹಾಲು: 50ರಿಂದ 58 ರೂ.
  • ಶುಭಂ ಹಾಲು: 52ರಿಂದ 60 ರೂ.
  • ಸಮೃದ್ಧಿ ಹಾಲು :55ರಿಂದ 64 ರೂ.
  • ಸ್ಪೆಷಲ್‌ ಹಾಲು: 52ರಿಂದ 60 ರೂ.
  • ಡಬಲ್‌ ಟೋನ್ಡ್‌ ಹಾಲು: 43ರಿಂದ 51 ರೂ.

ಹಾಲಿನ ದರ ಏರಿಕೆ ಬಗ್ಗೆ ಕೃಷ್ಣಭೈರೇಗೌಡ ಮಾಹಿತಿ

10 ರೂ. ಏರಿಸಬೇಕೆಂಬ ಬೇಡಿಕೆ ಇತ್ತು. ಒಕ್ಕೂಟಗಳ ಸ್ವಾಯತ್ತತೆ ಮೊಟಕು ಮಾಡಬಾರದು. ಆದರೂ ನಾವು 8 ರೂ.ಗೆ ಇಳಿಸಿ ನಿರ್ಧಾರ ಮಾಡಿದ್ದು, 7 ರೂ. ರೈತರಿಗೆ ನೀಡುತ್ತೇವೆ. ಇನ್ನುಳಿದ 1 ರೂ. ಒಕ್ಕೂಟಕ್ಕೆ ನೀಡುತ್ತೇವೆ. ಸರ್ವಾನುಮತದಿಂದ ನಾವು ನಿರ್ಧಾರ ಮಾಡಿದ್ದೇವೆ. ಇದರೊಂದಿಗೆ ಪ್ರತಿ ಲೀಟರ್​​ ಹಾಲಿಗೆ 35ರೂ. ರೈತರಿಗೆ ಸಿಗುತ್ತಿತ್ತು. ಈಗ ಸರ್ಕಾರದ 5 ರೂ. ಸಹಾಯಧನ ಸೇರಿ 42 ರೂ. ಸಿಗಲಿದೆ. ಬರಗಾಲದ ಮಧ್ಯೆ ರೈತರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:21 pm, Thu, 29 October 26

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More