Karnataka Politics: ನೂತನ ಸಚಿವರಿಗೆ ಕೊವಿಡ್, ನೆರೆ ವೀಕ್ಷಣೆಗೆ ಜಿಲ್ಲೆ ಹಂಚಿಕೆ; ಮಹಿಳೆಯರು ಮಕ್ಕಳ ಸಬಲೀಕರಣಕ್ಕೆ ಅಭಿಯಾನ

| Updated By: ganapathi bhat

Updated on: Aug 04, 2021 | 11:16 PM

CM Bommai Cabinet Expansion: ಹೊಸ ಸಚಿವರಾಗಿ 29 ಮಂದಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ರಾಜ್ಯಪಾಲ ಥಾವರಚಂದ ಗೆಹಲೋತ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದಾರೆ. 

Karnataka Politics: ನೂತನ ಸಚಿವರಿಗೆ ಕೊವಿಡ್, ನೆರೆ ವೀಕ್ಷಣೆಗೆ ಜಿಲ್ಲೆ ಹಂಚಿಕೆ; ಮಹಿಳೆಯರು ಮಕ್ಕಳ ಸಬಲೀಕರಣಕ್ಕೆ ಅಭಿಯಾನ
ಸಿಎಂ ಬಸವರಾಜ ಬೊಮ್ಮಾಯಿ

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿ ಸರಿಯಾಗಿ ಒಂದು ವಾರದ ಬಳಿಕ ಇಂದು (ಆಗಸ್ಟ್ 4) ಸಚಿವ ಸಂಪುಟ ಅಸ್ಥಿತ್ವಕ್ಕೆ ಬಂದಿದೆ. ಹೊಸ ಸಚಿವರಾಗಿ 29 ಮಂದಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ರಾಜ್ಯಪಾಲ ಥಾವರಚಂದ ಗೆಹಲೋತ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದಾರೆ. 

ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಬಿ. ಶ್ರೀರಾಮುಲು, ವಿ. ಸೋಮಣ್ಣ, ಉಮೇಶ್ ವಿಶ್ವನಾಥ್ ಕತ್ತಿ, ಎಸ್. ಅಂಗಾರ, ಜೆ.ಸಿ. ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಡಾ.ಸಿ.ಎನ್. ಅಶ್ವತ್ಥ್ ನಾರಾಯಣ, ಸಿ.ಸಿ. ಪಾಟೀಲ್, ಆನಂದ್ ಸಿಂಗ್, ಕೋಟ ಶ್ರೀನಿವಾಸ ಪೂಜಾರಿ, ಪ್ರಭು ಚೌಹಾಣ್, ಮುರುಗೇಶ್ ನಿರಾಣಿ, ಶಿವರಾಂ ಹೆಬ್ಬಾರ್, ಎಸ್​.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಭೈರತಿ ಬಸವರಾಜ್, ಡಾ.ಕೆ. ಸುಧಾಕರ್, ಕೆ. ಗೋಪಾಲಯ್ಯ, ಶಶಿಕಲಾ ಜೊಲ್ಲೆ, ಎಂಟಿಬಿ ನಾಗರಾಜ್, ಕೆ.ಸಿ. ನಾರಾಯಣಗೌಡ, ಬಿ.ಸಿ. ನಾಗೇಶ್, ವಿ. ಸುನಿಲ್ ಕುಮಾರ್, ಹಾಲಪ್ಪ ಆಚಾರ್, ಶಂಕರ ಪಾಟೀಲ್ ಮುನೇನಕೊಪ್ಪ, ಮುನಿರತ್ನ ಪ್ರಮಾಣವಚನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದಿನ ಕರ್ನಾಟಕ ರಾಜಕೀಯ ಬೆಳವಣಿಗೆಗಳ ಸಂಪೂರ್ಣ ಅಪ್ಡೇಟ್​ಗಳು ಈ ಕೆಳಗೆ ಲಭ್ಯವಿದೆ.

LIVE NEWS & UPDATES

The liveblog has ended.
  • 04 Aug 2021 11:15 PM (IST)

    ಸಚಿವ ಸ್ಥಾನ ಕೈತಪ್ಪಿರಬಹುದು; ಶಾಸಕ ಸ್ಥಾನ ಕಸಿದುಕೊಳ್ಳಲು ಯಾರಿಂದಲೂ ಆಗಲ್ಲ

    ನನಗೆ ಸಚಿವ ಸ್ಥಾನ ಕೈತಪ್ಪಿರಬಹುದು. ಆದರೆ, ಶಾಸಕ ಸ್ಥಾನ ಕಸಿದುಕೊಳ್ಳಲು ಯಾರಿಂದಲೂ ಆಗಲ್ಲ. ಮತದಾರರು ನೀಡಿರುವ ಶಾಸಕ ಸ್ಥಾನ ಕಿತ್ತುಕೊಳ್ಳಲಾಗಲ್ಲ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಫೇಸ್​ಬುಕ್ ಪೋಸ್ಟ್ ಮಾಡಿದ್ದಾರೆ. ಮತ್ತೊಂದೆಡೆ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ, ಕಳೆದುಕೊಂಡಿರುವುದು ಅಧಿಕಾರವೇ ಹೊರತು ಹಣೆಬರಹ ಅಲ್ಲ. ಇದು ಅಂತ್ಯವಲ್ಲ ಆರಂಭ ಎಂದು ವಾಟ್ಸಪ್ ಪೋಸ್ಟ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

  • 04 Aug 2021 10:30 PM (IST)

    ನಾಳೆ ಬೆಳಗ್ಗೆ ಚಾಮುಂಡೇಶ್ವರಿ ದರ್ಶನ ಪಡೆಯಲಿರುವ ಈಶ್ವರಪ್ಪ

    ಸಂಪುಟ ಸಭೆ ಬಳಿಕ ಮೈಸೂರಿಗೆ ತೆರಳಿರುವ ಸಚಿವ ಈಶ್ವರಪ್ಪ, ನಾಳೆ ಬೆಳಗ್ಗೆ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. ಇಂದು ಸಂಜೆ ಚಾಮುಂಡೇಶ್ವರಿ ದರ್ಶನ ಪಡೆಯಬೇಕಿತ್ತು ಆದರೆ ನಾಳೆ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ.

  • 04 Aug 2021 10:29 PM (IST)

    ಆರ್​ಎಸ್​ಎಸ್​ ಪ್ರಮುಖರ ಜೊತೆ ಅಶ್ವತ್ಥ್ ನಾರಾಯಣ ಚರ್ಚೆ

    ನೂತನ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಡಾ. ಸಿ.ಎನ್. ಅಶ್ವತ್ಥನಾರಾಯಣ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥಶ್ರೀಗಳನ್ನು ಭೇಟಿಯಾಗಿದ್ದಾರೆ. ಬೆಂಗಳೂರಿನ ವಿಜಯನಗರದ ಶಾಖಾ ಮಠದಲ್ಲಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಬಳಿಕ, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್​ಎಸ್​ಎಸ್​​ ಕಚೇರಿಗೆ ತೆರಳಿ, ಆರ್​ಎಸ್​ಎಸ್​ ಪ್ರಮುಖರನ್ನು ಭೇಟಿಯಾಗಿದ್ದಾರೆ. ಕೇಶವಕೃಪಾದಲ್ಲಿ ಸಂಘದ ಪ್ರಮುಖರ ಜತೆ ಸಚಿವ ಅಶ್ವತ್ಥ್ ನಾರಾಯಣ ಚರ್ಚೆ ನಡೆಸಿದ್ದಾರೆ.

  • 04 Aug 2021 09:14 PM (IST)

    ಬಿ.ಸಿ. ಪಾಟೀಲ್ ನಾಳೆ ಹಾವೇರಿ ಜಿಲ್ಲಾ ಪ್ರವಾಸ

    ಕೊರೊನಾ ನಿರ್ವಹಣೆ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಣೆ ಉಸ್ತುವಾರಿಯಾಗಿ ನೂತನ ಸಚಿವರಿಗೆ ಜಿಲ್ಲಾವಾರು ವಿಂಗಡಣೆ ಮಾಡಿ ಜವಾಬ್ದಾರಿ ನೀಡಿರುವ ಹಿನ್ನೆಲೆಯಲ್ಲಿ, ಸಚಿವ ಬಿ.ಸಿ. ಪಾಟೀಲ್ ನಾಳೆ ಹಾವೇರಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.

  • 04 Aug 2021 09:14 PM (IST)

    ಉಪ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆಮಾಡಲ್ಲ

    ಯಾವುದೇ ಉಪ ಮುಖ್ಯಮಂತ್ರಿ ಸ್ಥಾನದ ಪ್ರಸ್ತಾಪ ಇಲ್ಲ. ಹೀಗಾಗಿ ಉಪ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆಮಾಡಲ್ಲ. ಡಿಸಿಎಂ ಸ್ಥಾನದ ಬಗ್ಗೆ ಪಕ್ಷ, ವರಿಷ್ಠರು ತೀರ್ಮಾನಿಸಲಿದ್ದಾರೆ. ಪಕ್ಷ ಮತ್ತು ವರಿಷ್ಠರು ನೀಡುವ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಬೆಂಗಳೂರಲ್ಲಿ ಸಚಿವ ಸಿ.ಎನ್. ಅಶ್ವತ್ಥ್​ ನಾರಾಯಣ ಹೇಳಿಕೆ ನೀಡಿದ್ದಾರೆ.

  • 04 Aug 2021 09:13 PM (IST)

    ರಾಜ್ಯದ ಜನರಿಗೆ ನ್ಯಾಯಕೊಡಿಸುವ ಕೆಲಸ ಮಾಡುತ್ತೇನೆ

    ಪಕ್ಷ ನನ್ನನ್ನು ಗುರುತಿಸಿ ಜವಾಬ್ದಾರಿ ಕೊಟ್ಟಿದೆ, ಅದನ್ನ ಸಮರ್ಪಕವಾಗಿ ನಿಭಾಯಿಸಿಕೊಂಡು ಹೊಗುತ್ತೇನೆ. ಸಿಎಂ ಹಾಗೂ ಪಕ್ಷ ಯಾವ ಖಾತೆ ಕೊಡ್ತಾರೋ ಅದನ್ನ ಜವಾಬ್ದಾರಿಯುತವಾಗಿ ಸ್ವೀಕರಿಸಿ, ಕೆಲಸ ಮಾಡ್ತೇನೆ. ರಾಜ್ಯದ ಜನರಿಗೆ ನ್ಯಾಯಕೊಡಿಸುವ ಕೆಲಸ ಮಾಡುತ್ತೇನೆ ಎಂದು ಬಿ.ಸಿ ನಾಗೇಶ್ ಹೇಳಿಕೆ ನೀಡಿದ್ದಾರೆ.

  • 04 Aug 2021 09:13 PM (IST)

    ಬಿಜೆಪಿ ಸರ್ಕಾರ ಅವಧಿಗೂ ಮುನ್ನ ಬಿದ್ದು ಹೋಗುತ್ತೆ

    ಬಿಜೆಪಿ ಸರ್ಕಾರ ಅವಧಿಗೂ ಮುನ್ನ ಬಿದ್ದು ಹೋಗುತ್ತೆ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಿದ್ದವಾಗಿದೆ. ಮುಂದೆ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ‌. ಬಿಜೆಪಿ ಶಾಸಕರು ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿದ್ದಾರೆ. ಅನೇಕ ಕಡೆ‌ ಅಸಮಧಾನವಿದೆ. ಅದಕ್ಕೆ ಸ್ಥಿರ ಸರ್ಕಾರ ಕೊಡೊಕೆ ಸಾಧ್ಯವಿಲ್ಲ. ಉಪ‌ ಸಭಾಪತಿಗಳೆ ರಾಜೀನಾಮೆ ಕೊಡ್ತಿನಿ ಅಂತ ಹೇಳ್ತಾ ಇದ್ದಾರೆ. ನೂತನ ಸಚಿವ ಸಂಪುಟದಲ್ಲಿ ಸಮಾಜಿಕ, ಪ್ರಾದೇಶಿಕ ಸಮತೋಲನ ಕಾಪಾಡಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ. ಸಿಎಂ ಬಹಳ ಒತ್ತಡದಲ್ಲಿ ಕೆಲಸ ಮಾಡ್ತಾ ಇದ್ದಾರೆ ಎಂದು ಯಾದಗಿರಿಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ.

  • 04 Aug 2021 08:36 PM (IST)

    ನಾಳೆ ಬಿಜೆಪಿ ಸೇರಲಿರುವ ಕೊಳ್ಳೇಗಾಲ ಶಾಸಕ ಎನ್​.ಮಹೇಶ್​

    ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್​ಪಿಯಿಂದ ಗೆದ್ದಿದ್ದ ಎನ್​.ಮಹೇಶ್ ನಾಳೆ (ಆಗಸ್ಟ್ 5) ಭಾರತೀಯ ಜನತಾ ಪಕ್ಷವನ್ನು ಸೇರಲಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ.

  • 04 Aug 2021 08:35 PM (IST)

    ರಾಜ್ಯವನ್ನು ದೇಶದಲ್ಲೇ ನಂ.1 ಮಾಡುತ್ತೀರೆಂದು ನಂಬಿದ್ದೇನೆ

    ಎಲ್ಲರೂ ಪಕ್ಷ ಕಟ್ಟಿ, ಬೆಳೆಸಿ, ಅರ್ಹತೆಯೊಂದಿಗೆ ಸಚಿವರಾಗಿದ್ದಾರೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವವರಿಗೆ ಅಭಿನಂದನೆ ಎಂದು ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಟ್ವೀಟ್ ಮಾಡಿದ್ದಾರೆ. ರಾಜ್ಯವನ್ನು ದೇಶದಲ್ಲೇ ನಂ.1 ಮಾಡುತ್ತೀರೆಂದು ನಂಬಿದ್ದೇನೆ. ನಿಮಗೆ ತಾಯಿ ಚಾಮುಂಡೇಶ್ವರಿ ಶುಭವನ್ನುಂಟು ಮಾಡಲಿ ಎಂದು ಅವರು ಶುಭಹಾರೈಸಿದ್ದಾರೆ.

  • 04 Aug 2021 08:30 PM (IST)

    ಯಾವುದೇ ಖಾತೆ ಸಿಕ್ಕರೂ ಕಾರ್ಯನಿರ್ವಹಿಸುತ್ತೇವೆ

    ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು, ಗೋಶಾಲೆ, ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ ಸೇರಿದಂತೆ ವಿವಿಧ ಕೆಲಸ ಮಾಡಲಾಗಿದೆ. ಪಶುಸಂಗೋಪನೆ ಕೆಲಸಗಳು ಪೂರ್ಣಗೊಳಿಸಬೇಕಿದೆ. ನಮ್ಮ ಸಿಎಂ ಮತ್ತು ವರಿಷ್ಟರು ನೀಡುವ ಖಾತೆ ನಾನು ನಿರ್ವಹಿಸಲಿದ್ದೇನೆ ಎಂದು ಪ್ರಭು ಚೌಹಾಣ್ ತಿಳಿಸಿದ್ದಾರೆ. ಮತ್ತೊಂದೆಡೆ, ಸಿದ್ದಗಂಗಾ ಮಠಕ್ಕೆ ನೂತನ ಸಚಿವ ಮಾಧುಸ್ವಾಮಿ ಭೇಟಿ ಕೊಟ್ಟಿದ್ದಾರೆ. ಶಿವಕುಮಾರಶ್ರೀಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಸಿದ್ದಲಿಂಗಾ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ, ಸಚಿವ ಸಂಪುಟದಲ್ಲಿನ ಖಾತೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ಯಾವುದೇ ಖಾತೆ ಸಿಕ್ಕರೂ ಕಾರ್ಯನಿರ್ವಹಿಸುವೆ ಎಂದು ತಿಳಿಸಿದ್ದಾರೆ.

  • 04 Aug 2021 07:59 PM (IST)

    ಸಚಿವನಾಗಲು ಅವಕಾಶ ಮಾಡಿಕೊಟ್ಟ ಸಿಎಂ, ವರಿಷ್ಠರಿಗೆ ಧನ್ಯವಾದ

    ಸಚಿವನಾಗಲು ಅವಕಾಶ ಮಾಡಿಕೊಟ್ಟ ಸಿಎಂ, ವರಿಷ್ಠರಿಗೆ ಧನ್ಯವಾದ ಎಂದು ಬಿಜೆಪಿ ಕಚೇರಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅವರು ಮಾತನಾಡಿದ್ದಾರೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ಸ್ಥಾನಮಾನ ಗಮನದಲ್ಲಿಟ್ಟು ಸ್ಥಾನ ಕೊಡಲಾಗಿದೆ ಎಂದು ತಿಳಿಸಿದ್ದಾರೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬೆಂಬಲಿಗರ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಅಸಮಾಧಾನವಿದ್ದರೆ ಪಕ್ಷದ ಹಿರಿಯ ನಾಯಕರು ಮಾತಾಡುತ್ತಾರೆ. ಗ್ರಾಮೀಣಾಭಿವೃದ್ಧಿ ಸೇರಿದಂತೆ ಯಾವ ಖಾತೆ ಕೊಟ್ಟರೂ ನಿರ್ವಹಣೆ ಮಾಡುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

  • 04 Aug 2021 07:58 PM (IST)

    ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಗೆ ನೂತನ ಸಚಿವರ ಭೇಟಿ

    ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಗೆ ನೂತನ ಸಚಿವರು ಭೇಟಿ ನೀಡಿದ್ದಾರೆ. ಪ್ರಭು ಚೌಹಾಣ್‌, ಹಾಲಪ್ಪ ಆಚಾರ್‌, ಸುನಿಲ್‌ ಕುಮಾರ್‌, ಅಶ್ವತ್ಥ್‌ ನಾರಾಯಣ, ಕೋಟ ಶ್ರೀನಿವಾಸ ಪೂಜಾರಿ ಭೇಟಿ ಕೊಟ್ಟಿದ್ದಾರೆ. ಪ್ರಮಾಣ ವಚನ ಬಳಿಕ ಡಾ.ಸಿ.ಎನ್. ಅಶ್ವತ್ಥ್‌ ನಾರಾಯಣ ಯತಿರಾಜ ಮಠಕ್ಕೆ ಭೇಟಿ ನೀಡಿದ್ದಾರೆ. ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಯತಿರಾಜ ಮಠಕ್ಕೆ ಅಶ್ವತ್ಥ್‌ನಾರಾಯಣ ಭೇಟಿ ಕೊಟ್ಟಿದ್ದಾರೆ.

  • 04 Aug 2021 07:13 PM (IST)

    ಪದಗ್ರಹಣದ ಬಳಿಕ ಸಿಎಂ ಬೆನ್ನುಬಿಡದ ನೂತನ ಸಚಿವರು

    ಪದಗ್ರಹಣದ ಬಳಿಕ ನೂತನ ಸಚಿವರು ಸಿಎಂ ಬೆನ್ನುಬಿಟ್ಟಂತೆ ಕಾಣುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರಬಲ ಖಾತೆಗಳಿಗಾಗಿ ಸಚಿವರು ಒತ್ತಡ ಹಾಕಿದ್ದಾರೆ. ಸಂಪುಟ ಸಭೆ ಬಳಿಕ ವಿಧಾನಸೌಧ ಕಚೇರಿಯಲ್ಲಿ ಸಿಎಂ ಇದ್ದಾರೆ. ಎಸ್​.ಟಿ. ಸೋಮಶೇಖರ್, ಡಾ.ಕೆ. ಸುಧಾಕರ್ ಬೊಮ್ಮಾಯಿ ಜೊತೆಗಿದ್ದಾರೆ.

  • 04 Aug 2021 07:03 PM (IST)

    ಅರುಣ್ ಸಿಂಗ್ ಭೇಟಿ ಮಾಡಿದ ಶಾಸಕ ಎಂ.ಪಿ. ರೇಣುಕಾಚಾರ್ಯ

    ಸಚಿವ ಸ್ಥಾನದಿಂದ ವಂಚಿರಾಗಿರುವ ಹಿನ್ನೆಲೆ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿದ್ದಾರೆ. ಕುಮಾರಕೃಪಾ ಅತಿಥಿಗೃಹದಲ್ಲಿ ಭೇಟಿಯಾಗಿದ್ದಾರೆ. ಸಚಿವ ಸ್ಥಾನ ದೊರೆಯದೇ ಇರುವ ಬಗ್ಗೆ ಅರುಣ್ ಸಿಂಗ್ ಜೊತೆ ರೇಣುಕಾಚಾರ್ಯ ಚರ್ಚೆ ನಡೆಸಿದ್ದಾರೆ. ಮುಂದೆ ಗೌರವಯುತ ಸ್ಥಾನ ಕೊಡಿಸುವ ಬಗ್ಗೆ ಅರುಣ್ ಸಿಂಗ್ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

  • 04 Aug 2021 06:59 PM (IST)

    ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಿತರೆಲ್ಲ ನಮ್ಮವರೇ

    ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಿತರೆಲ್ಲ ನಮ್ಮವರೇ. ಅಸಮಾಧಾನಿತರೆಲ್ಲರಿಗೂ ಮುಂದೆ ಅವಕಾಶ ಕೊಡುತ್ತೇವೆ ಎಂದು ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. 13 ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾಧಾನ್ಯತೆ ಸಿಗದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸೂಕ್ತವಾದವರನ್ನು ಆ ಪ್ರಾಂತ್ಯಗಳಲ್ಲಿ ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

  • 04 Aug 2021 06:58 PM (IST)

    ಹಗರಣದಲ್ಲಿ ಸಿಲುಕಿಕೊಂಡವರಿಗೆ ಮತ್ತೆ ಮಂತ್ರಿಗಿರಿ ಸಿಕ್ಕಿದೆ

    ಒಂದು ಸ್ಥಾನ ನೀಡದಿರುವುದು ತುಂಬಾ ನೋವುಂಟು ಮಾಡಿದೆ. ಬಿಜೆಪಿಯಲ್ಲಿ ಗೊಲ್ಲ ಸಮುದಾಯದ ಏಕೈಕ ಶಾಸಕಿ ಆಗಿದ್ದೇನೆ. ನಾನು ಯಾವುದೇ ರೀತಿ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಯಾವುದೇ ಹಗರಣ ನನ್ನನ್ನು ಸುತ್ತಿಕೊಂಡಿಲ್ಲ. ಈಗ ಪಕ್ಷ ತೆಗೆದುಕೊಂಡ ನಿರ್ಧಾರ ನನಗೆ ಘಾಸಿ ಉಂಟುಮಾಡಿದೆ. ಹಗರಣದಲ್ಲಿ ಸಿಲುಕಿಕೊಂಡವರಿಗೆ ಮತ್ತೆ ಮಂತ್ರಿಗಿರಿ ಸಿಕ್ಕಿದೆ. ಒಂದೇ ಮನೆಯಲ್ಲಿ ಎರಡು ಮೂರು ಅಧಿಕಾರ ನೀಡಲಾಗಿದೆ. ಹಗರಣ ಇಲ್ಲದ ಮಹಿಳೆಗೆ ಅವಕಾಶ ನೀಡಿದ್ದರೆ ಸಂತೋಷ ಎಂದು ತಿಳಿಸಿದ್ದಾರೆ. ಜಿಲ್ಲೆಯ ಇತರೆ ಶಾಸಕರಿಗೂ ಮಂತ್ರಿಗಿರಿ ನೀಡದೆ ಅಪಮಾನ ಮಾಡಲಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

  • 04 Aug 2021 06:58 PM (IST)

    ಈಗ ಪಕ್ಷ ಜಾಣ ಕುರುಡರಂತೆ ವರ್ತಿಸುತ್ತಿದೆ

    ಪೂರ್ಣಿಮಾ ಶ್ರೀನಿವಾಸ್​ಗೆ ಸಂಪುಟದಲ್ಲಿ ಸ್ಥಾನ ನೀಡದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ಶಾಸಕಿ ಪೂರ್ಣಿಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕಿ, ನಿರಂತರವಾಗಿ ಪಕ್ಷಕ್ಕಾಗಿ ನಾನು, ನನ್ನ ಕುಟುಂಬ ಶ್ರಮಿಸಿದೆ. ಚುನಾವಣೆ ಸಂದರ್ಭದಲ್ಲಿ ನಿರಂತರವಾಗಿ ಪಕ್ಷಕ್ಕಾಗಿ ದುಡಿದಿದ್ದೇವೆ. ಆದರೆ ಈಗ ಪಕ್ಷ ಜಾಣ ಕುರುಡರಂತೆ ವರ್ತಿಸುತ್ತಿದೆ. ಗೊಲ್ಲ ಸಮುದಾಯಕ್ಕೆ ಒಂದು ಸ್ಥಾನ ನೀಡದಿರುವುದು ಬೇಸರ ತಂದಿದೆ ಎಂದು ಹೇಳಿದ್ದಾರೆ.

  • 04 Aug 2021 06:57 PM (IST)

    ಮಂತ್ರಿಸ್ಥಾನಕ್ಕಾಗಿ ಪ್ರತಿಭಟಿಸೋದು ಗೌರವ ಲಕ್ಷಣ ಅಲ್ಲ

    ಸಂಪುಟದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಸ್ಥಾನ ಸಿಗದ ವಿಚಾರವಾಗಿ ಉಡುಪಿಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿಭಟನೆ ಮಾಡಬೇಕು. ಮಂತ್ರಿಸ್ಥಾನಕ್ಕಾಗಿ ಪ್ರತಿಭಟಿಸೋದು ಗೌರವ ಲಕ್ಷಣ ಅಲ್ಲ. ನನ್ನ ಪರ ಪ್ರತಿಭಟನೆ ಮಾಡಿದರೆ ನಾನು ಸಂತೋಷಪಡಲ್ಲ. ಮಂತ್ರಿಗಿರಿ ಸಿಗದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಮುಂದಿನ ನಿರ್ಧಾರಗಳನ್ನು ಆ ಪರಮಾತ್ಮನೇ ಬಲ್ಲ ಎಂದು ಉಡುಪಿಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿಕೆ ನೀಡಿದ್ದಾರೆ.

  • 04 Aug 2021 06:26 PM (IST)

    ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕೆ ಅಭಿಯಾನ

    ಎಸ್​ಟಿಪಿಎಸ್​​ ಹಣ ಬೇರೆ ಇಲಾಖೆಗೆ ನೀಡುತ್ತಿದ್ದ ಹಿನ್ನೆಲೆ ಶೀಘ್ರದಲ್ಲೇ ಎಸ್​ಟಿ ಸೆಕ್ರೆಟರಿಯೇಟ್​ ರಚನೆ ತೀರ್ಮಾನ ಮಾಡುತ್ತೇವೆ. ಎಸ್​ಟಿ ಸಮುದಾಯದ ಬೇಡಿಕೆಯಂತೆ ಸೆಕ್ರೆಟರಿಯೇಟ್​ ರಚನೆ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕೆ ಅಭಿಯಾನ ನಡೆಸುತ್ತೇವೆ. ಅಭಿಯಾನ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

  • 04 Aug 2021 06:19 PM (IST)

    ಒಂದೆರಡು ದಿನಗಳಲ್ಲಿ ಖಾತೆ ಹಂಚಿಕೆ

    ಒಂದೆರಡು ದಿನಗಳಲ್ಲಿ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇವೆ. ಯಾವುದೇ ಸಚಿವರು ಇಂಥದ್ದೇ ಖಾತೆ ಬೇಕೆಂದು ಆಗ್ರಹಿಸಿಲ್ಲ. ಇಂದಿನ ಸಂಪುಟ ಸಭೆಯಲ್ಲಿ ನೂತನ ಸಚಿವರು ಒತ್ತಾಯಿಸಿಲ್ಲ. ಸಂಪುಟ ರಚನೆಗೆ ಹಿಂದೆ 10-15 ದಿನ ಅಥವಾ ತಿಂಗಳು ಹಿಡಿಯುತ್ತಿತ್ತು. ಆದರೆ, ಈ ಬಾರಿ 3 ದಿನದಲ್ಲಿ ಸಚಿವರ ಪಟ್ಟಿ ಫೈನಲ್ ಮಾಡಿಕೊಂಡು ಬಂದಿದ್ದೇನೆ. ಹೀಗಾಗಿ ಖಾತೆ ಹಂಚಿಕೆಗೆ ಹೆಚ್ಚು ದಿನ ತೆಗೆದುಕೊಳ್ಳುವುದಿಲ್ಲ. ನೂತನ ಸಚಿವರಿಗೆ ನಾನೇ ಖಾತೆ ಹಂಚಿಕೆ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಯಾರೊಬ್ಬರೂ ಮೊದಲ ಖಾತೆಯಲ್ಲಿ ಮುಂದುವರಿಸಿ ಅಂದಿಲ್ಲ. ಯಾವುದೇ ಖಾತೆ ನೀಡಿದರೂ ನಿಭಾಯಿಸುತ್ತೇವೆ ಅಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

  • 04 Aug 2021 06:16 PM (IST)

    ಸಚಿವ ಸಂಪುಟ ರಚನೆ ಬಳಿಕ ಸಿಎಂ ಮೊದಲ ಮಾತು

    ಕರ್ನಾಟಕ ಸಂಪುಟದ ನೂತನ ಸಚಿವರಿಗೆ ಕೊವಿಡ್, ನೆರೆ ವೀಕ್ಷಣೆಗೆ ಜಿಲ್ಲೆ ಹಂಚಿಕೆ ಮಾಡುತ್ತೇವೆ. ಸಚಿವರು ನಾಳೆಯೇ ಜಿಲ್ಲೆಗಳಿಗೆ ತೆರಳಿ ಪರಿಹಾರ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಆಗಸ್ಟ್ 4) ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ. ಕೊರೊನಾ 3ನೇ ಅಲೆ, ನೆರೆ ವೀಕ್ಷಣೆ ಜತೆ ಪರಿಹಾರದ ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳೀಯವಾಗಿ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಕೊವಿಡ್ ಟಾಸ್ಕ್​ಫೋರ್ಸ್​ ಪುನಾರಚನೆ ಮಾಡಲಾಗುವುದು. ಸಚಿವರಿಗೆ ಖಾತೆ ಹಂಚಿಕೆ ನಂತರ ಟಾಸ್ಕ್​ಫೋರ್ಸ್​ ರಚನೆ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

  • 04 Aug 2021 05:51 PM (IST)

    ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯ

    ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಮುಕ್ತಾಯವಾಗಿದೆ. ನೂತನ ಸಚಿವರ ಜತೆ ಸಿಎಂ ಬೊಮ್ಮಾಯಿ ಮೊದಲ ಸಭೆ ನಡೆಸಿದ್ದಾರೆ. ಇತ್ತ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರು ನಾಳೆ ಬೆಂಗಳೂರಿನಿಂದ ದೆಹಲಿಗೆ ವಾಪಸಾಗಲಿದ್ದಾರೆ.

  • 04 Aug 2021 05:27 PM (IST)

    ಚಾಮುಂಡೇಶ್ವರಿ ದರ್ಶನಕ್ಕೆ ತೆರಳಲಿರುವ ಸಚಿವ ಕೆ.ಎಸ್.ಈಶ್ವರಪ್ಪ

    ಚಾಮುಂಡೇಶ್ವರಿ ದರ್ಶನ ಪಡೆಯಲು ಸಚಿವ ಈಶ್ವರಪ್ಪ ಮೈಸೂರಿಗೆ ತೆರಳಲಿದ್ದಾರೆ. ಇಂದು ರಾತ್ರಿ 8 ಗಂಟೆಗೆ ನಾಡ ದೇವತೆ ಚಾಮುಂಡೇಶ್ವರಿ ದರ್ಶನ ಪಡೆಯಲು ಮೈಸೂರಿಗೆ ಪ್ರಯಾಣ ಕೈಗೊಳ್ಳಲಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. ಸಂಪುಟ ಸಭೆ ಮುಗಿದ ಬಳಿಕ ಈಶ್ವರಪ್ಪ ಮೈಸೂರಿಗೆ ತೆರಳಲಿದ್ದಾರೆ.

  • 04 Aug 2021 05:06 PM (IST)

    ನೂತನ ಸಚಿವರ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ಆರಂಭ

    ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಆರಂಭಗೊಂಡಿದೆ. ನೂತನ ಸಚಿವರ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣಲ್ಲಿ ಸಂಪುಟ ಸಭೆ ನಡೆಯಲಿದೆ.

  • 04 Aug 2021 05:04 PM (IST)

    ಇನ್ನು ಕೆಲವೇ ಕ್ಷಣಗಳಲ್ಲಿ ಸಚಿವ ಸಂಪುಟ ಸಭೆ

    ಸಮ್ಮೇಳನ ಸಭಾಂಗಣಕ್ಕೆ ನೂತನ ಸಚಿವರು ಆಗಮಿಸುತ್ತಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.

  • 04 Aug 2021 04:54 PM (IST)

    ಜಾಣ ಕುರುಡರಂತೆ ವರ್ತಿಸುತ್ತಿರುವುದು ನೋವುಂಟು ಮಾಡಿದೆ – ಪೂರ್ಣಿಮಾ ಶ್ರೀನಿವಾಸ್ ಅಸಮಾಧಾನ

    ಸಾಮಾಜಿಕ ಜಾಲತಾಣದಲ್ಲಿ ಪೂರ್ಣಿಮಾ ಶ್ರೀನಿವಾಸ್ ಅಸಮಾಧಾನ ಹೊರಹಾಕಿದ್ದಾರೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂತರವಾಗಿ ಪಕ್ಷಕ್ಕಾಗಿ ನಾನು ನನ್ನ ಕುಟುಂಬ ಶ್ರಮಿಸಿದ್ದೇವೆ. ಚುನಾವಣೆ ಸಂದರ್ಭಗಳಲ್ಲಿ ನಿರಂತರವಾಗಿ ಪಕ್ಷಕ್ಕಾಗಿ ದುಡಿದ್ದೇವೆ. ಜಾಣ ಕುರುಡರಂತೆ ವರ್ತಿಸುತ್ತಿರುವುದು ನೋವುಂಟು ಮಾಡಿದೆ. ಆದ್ರೆ ಈಗ ಪಕ್ಷ ಜಾಣ ಕುರುಡರಂತೆ ವರ್ತಿಸುತ್ತಿದೆ. ಗೊಲ್ಲ ಸಮುದಾಯಕ್ಕೆ ಒಂದು ಸ್ಥಾನ ನೀಡದಿರುವುದು ನೋವುಂಟು ಮಾಡಿದೆ ಎಂದು ಬೇಸರ ಹೊರಹಾಕಿದ್ದಾರೆ.

  • 04 Aug 2021 04:46 PM (IST)

    ಹುಬ್ಬಳ್ಳಿಯ ಗೋಕುಲ ಬಳಿ ರಸ್ತೆ ತಡೆದು ಪ್ರತಿಭಟನೆ

    ಅರವಿಂದ್ ಬೆಲ್ಲದ್​ಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗರಿಂದ ಪ್ರತಿಭಟನೆ ನಡೆಯುತ್ತಿದೆ. ಹುಬ್ಬಳ್ಳಿಯ ಗೋಕುಲ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ಮಧ್ಯೆ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

  • 04 Aug 2021 04:39 PM (IST)

    ನಾರಾಯಣಗೌಡರಿಗೆ ಸಚಿವ ಸ್ಥಾನ ಸಿಕ್ಕ ಹಿನ್ನೆಲೆಯಲ್ಲಿ ಅಭಿಮಾನಿಗಳ ಸಂಭ್ರಮ

    ನಾರಾಯಣಗೌಡರಿಗೆ ಸಚಿವ ಸ್ಥಾನ ಸಿಕ್ಕ ಹಿನ್ನೆಲೆಯಲ್ಲಿ ಅಭಿಮಾನಿಗಳೆಲ್ಲ ಸಂಭ್ರಮಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ನಾರಾಯಣಗೌಡ ಅಭಿಮಾನಿಗಳ ಸಂಭ್ರಮ ಪಡುತ್ತಿದ್ದಾರೆ. ಕೆ.ಆರ್ ಪೇಟೆಯ ಮೈಸೂರು ವೃತ್ತದಲ್ಲಿ ಪಟಾಕಿ ಸಿಡಿಸಿ. ಸಿಹಿ ಹಂಚಿ, ಜೈಕಾರ ಕೂಗಿ ಸಂಭ್ರಮಿಸಿದ್ದಾರೆ.

  • 04 Aug 2021 04:32 PM (IST)

    ಕಾವೇರಿ ನಿವಾಸದ ಬಳಿ ಕೈ ಕೊಯ್ದುಕೊಂಡ ವಿಜಯೇಂದ್ರ ಅಭಿಮಾನಿ

    ನಮ್ಮ ಸಾಹೇಬ್ರ ಮಗನನ್ನ ಸಂಪುಟಕ್ಕೆ ಸೇರಿಸಿಲ್ಲ. ನನಗೆ ನೋವಾಗುತ್ತಿದೆ. ನಾನು ಪ್ರಾಣವನ್ನೇ ಕಳೆದಕೊಳ್ಳಬೇಕು. ಆದ್ರೆ ನನಗೂ ಕುಟುಂಬ ಇದೆ.
    ಹಾಗಾಗಿ ನಾನು ಸಾಯಲ್ಲ ಎಂದು ಕಾವೇರಿ ನಿವಾಸದ ಬಳಿ ವಿಜಯೇಂದ್ರ ಅಭಿಮಾನಿ ಕೈ ಕೊಯ್ದುಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಶಿವಕುಮಾರ್ ಎಂಬ ಮಾಹಿತಿ ಲಭ್ಯವಾಗಿದೆ.

  • 04 Aug 2021 04:28 PM (IST)

    ಭಿಕ್ಷೆ ಬೇಡಿ ಮಂತ್ರಿ ಸ್ಥಾನ ಪಡೆಯುವಂತ ಪರಿಸ್ಥಿತಿ ನನಗೆ ಬಂದಿಲ್ಲ – ಶಾಸಕ ರಾಜುಗೌಡ

    ಶಾಸಕ ರಾಜುಗೌಡಗೆ ಮಂತ್ರಿ ‌ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ಶಾಸಕರ ಬೆಂಬಲಿಗರಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬೆಂಬಲಿಗರನ್ನ ಉದ್ದೇಶಿಸಿ ಶಾಸಕ ರಾಜುಗೌಡ ಮಾತನಾಡಿ, ಪ್ರತಿಭಟನೆ ಮಾಡ್ಬೇಡಿ ಪಕ್ಷಕ್ಕೆ ಅವಮಾನ ಮಾಡಿದ ಹಾಗೆ ಆಗುತ್ತೆ. ಮಂತ್ರಿ ಸ್ಥಾನ ಕೊಡದೆ ಇರೋದ್ದಕ್ಕೆ ಒಳ್ಳೆಯದಾಗ್ಲಿ, ಎಲ್ಲಾ ಮಂತ್ರಿಗಳಿಗೂ ಒಳ್ಳೆಯದಾಗ್ಲಿ,  ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಭಿಕ್ಷೆ ಬೇಡಿ ಮಂತ್ರಿ ಸ್ಥಾನ ಪಡೆಯುವಂತ ಪರಿಸ್ಥಿತಿ ನನಗೆ ಬಂದಿಲ್ಲ. ಬಕೆಟ್ ಹಿಡಿದು ಮಂತ್ರಿ ಆಗುವ ಅವಶ್ಯಕತೆ ನನಗಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ಎಂಜಲು ತಿನ್ನೋದು ಬೇಡ ಮುಂದೆ ಹೊಸ ಸರ್ಕಾರದಲ್ಲಿ ಮಂತ್ರಿ ಆಗ್ತೀನಿ. ದಯವಿಟ್ಟು ಯಾರು ದಿಕ್ಕಾರ ಕೂಗಿ ಪ್ರತಿಭಟನೆ ಮಾಡ್ಬೇಡಿ. ಪ್ರತಿಭಟನೆ ಬಿಟ್ಟು ಊರಿಗೆ ಹೋಗಿ ಎಂದು ಶಾಸಕ ರಾಜುಗೌಡ ಹೇಳಿದ್ದಾರೆ.

  • 04 Aug 2021 04:18 PM (IST)

    ಕ್ರೀಡಾ ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೇನೆ – ಸಚಿವ ನಾರಾಯಣ್ ಗೌಡ

    ಕ್ರೀಡಾ ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಈಗ ಯಾವುದೇ ಖಾತೆ ಕೊಟ್ರು ನಿಭಾಯಿಸುತ್ತೇನೆ. ಯಡಿಯೂರಪ್ಪನವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಚಿವ ನಾರಾಯಣ್ ಗೌಡ ಟಿವಿ9 ಗೆ ಹೇಳಿಕೆ ನೀಡಿದ್ದಾರೆ.

  • 04 Aug 2021 04:17 PM (IST)

    ಹಿರಿಯರನ್ನ ಪಕ್ಷದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನ – ನಳಿನ್​ ಕಟೀಲ್​ ಹೇಳಿಕೆ

    ಹಿರಿಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೈತಪ್ಪಿದ ವಿಚಾರದ ಹಿನ್ನೆಲೆಯಲ್ಲಿ ಹಿರಿಯರನ್ನ ಪಕ್ಷದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗುವುದು. ಮುಂದಿನ ಚುನಾವಣೆ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಯಾವ ಶಾಸಕರು ಕೂಡ ರಾಜೀನಾಮೆ ನೀಡುವುದಿಲ್ಲ.
    ಸಚಿವ ಸಂಪುಟದಲ್ಲಿ ಸ್ಥಾನ ಸಿಗದವರಿಗೆ ಅಸಮಾಧಾನ ಇರುತ್ತೆ. ಅವರನ್ನ ಕರೆದು ಸಮಾಧಾನ ಪಡಿಸುವ ಕೆಲಸ ಮಾಡಲಾಗುತ್ತದೆ ಎಂದು
    ಬೆಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕಟೀಲು ಹೇಳಿಕೆ ನೀಡಿದ್ದಾರೆ.

  • 04 Aug 2021 04:10 PM (IST)

    ದಿ.ಎಸ್.ಆರ್.ಬೊಮ್ಮಾಯಿ ಪ್ರತಿಮೆಗೆ ಮಾರ್ಲಪಣೆ ಮಾಡಿದ ಸಿಎಂ ಪುತ್ರ

    ದಿ.ಎಸ್.ಆರ್.ಬೊಮ್ಮಾಯಿ ಪ್ರತಿಮೆಗೆ ಸಿಎಂ ಪುತ್ರ ಭರತ್ ಬೊಮ್ಮಾಯಿ ಮಾರ್ಲಪಣೆ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಾನು ಉದ್ಯಮಿಯಾಗಿದ್ದೆನೆ, ತಂದೆಯವರಿಗೆ ಎಲ್ಲಾ ರಾಜಕೀಯ ಮತ್ತು ಆಡಳಿತ ಗೊತ್ತಿದೆ. ಅವರೆಲ್ಲಾ ಕೆಲಸವನ್ನು ನಿರ್ವಹಿಸುತ್ತಾರೆ. ತಂದೆ ಸಿಎಂ ಆದ ಬಳಿಕ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದೆ, ಅಜ್ಜನವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಹುಬ್ಬಳ್ಳಿಯ ಸಿಎಂ ಪುತ್ರ ಭರತ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

  • 04 Aug 2021 04:02 PM (IST)

    ಖಾತೆ ಯಾವುದೇ ಕೊಟ್ಟರು ನಿಭಾಯಿಸುತ್ತೇನೆ- ಸಚಿವ ವಿ.ಸೋಮಣ್ಣ

    ಖಾತೆ ಯಾವುದೇ ಕೊಟ್ಟರು ನಿಭಾಯಿಸುತ್ತೇನೆ. ಖಾತೆ ಕೊಡುವುದ ಸಿಎಂಗೆ ಬಿಟ್ಟಿದ್ದು. ನಾವು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಕೊರೊನಾ ನಿಯಂತ್ರಣ ಮಾಡುವುದು ನಮ್ಮ ಗುರಿ ಎಂದು ಟಿವಿ9ಗೆ ನೂತನ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.

  • 04 Aug 2021 04:00 PM (IST)

    ನಾನು ಯಾವುದೇ ಲಾಭಿ ನಡೆಸಿಲ್ಲ – ಟಿವಿ9ಗೆ ನೂತನ ಸಚಿವ ಈಶ್ವರಪ್ಪ ಹೇಳಿಕೆ

    ಸಚಿವ ಸ್ಥಾನಕ್ಕೆ ನಾನು ಯಾವುದೇ ಲಾಭಿ ನಡೆಸಿಲ್ಲ. ಯಾವುದೇ ಖಾತೆ ಕೊಟ್ಟರು ನಿಭಾಯಿಸುತ್ತೇನೆ ಎಂದು ಟಿವಿ9ಗೆ ನೂತನ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

  • 04 Aug 2021 03:54 PM (IST)

    ಸಂಜೆ 5 ಗಂಟೆಗೆ ನೂತನ ಸಚಿವರ ಜತೆ ಸಿಎಂ ಸಂಪುಟ ಸಭೆ

    ಸಂಜೆ 5 ಗಂಟೆಗೆ ನೂತನ ಸಚಿವರ ಜತೆ ಸಿಎಂ ಸಂಪುಟ ಸಭೆ ನಡೆಯಲಿದೆ. ವಿಧಾನಸೌಧದಲ್ಲಿ ನೂತನ ಮಂತ್ರಿ ಮಂಡಲದ ಸಂಪುಟ ಸಭೆ ಜರುಗಲಿದೆ.

  • 04 Aug 2021 03:52 PM (IST)

    ಇಬ್ಬರು ಸಚಿವರಿಗೆ ಖಾತೆ ಮುಂದುವರಿಸುವ ಸಾಧ್ಯತೆ

    ಇಬ್ಬರು ಸಚಿವರಿಗೆ ಖಾತೆ ಮುಂದುವರಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಕೇಳಿ ಬಂದಿವೆ. ಕೋಟ ಶ್ರೀನಿವಾಸ ಪೂಜಾರಿ-ಮುಜರಾಯಿ ಖಾತೆ ಹಾಗೂ ಪ್ರಭುಚೌಹಾಣ್‌- ಪಶುಸಂಗೋಪನೆ ಖಾತೆ ಮುಂದುವರೆಯುವ ಸಾಧ್ಯತೆ ಇದೆ.

  • 04 Aug 2021 03:46 PM (IST)

    ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯಾದ 29 ಸಚಿವರ ಪಟ್ಟಿ

    ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯಾದ 29 ಸಚಿವರ ಪಟ್ಟಿ ಹೀಗಿದೆ:

    ಗೋವಿಂದ ಕಾರಜೋಳ
    ಕೆ.ಎಸ್.ಈಶ್ವರಪ್ಪ
    ಆರ್.ಅಶೋಕ್
    ಬಿ.ಶ್ರೀರಾಮುಲು
    ವಿ.ಸೋಮಣ್ಣ
    ಉಮೇಶ್ ವಿಶ್ವನಾಥ್ ಕತ್ತಿ
    ಎಸ್.ಅಂಗಾರ
    ಜೆ.ಸಿ.ಮಾಧುಸ್ವಾಮಿ
    ಆರಗ ಜ್ಞಾನೇಂದ್ರ
    ಡಾ.ಸಿ.ಎನ್.ಅಶ್ವತ್ಥ್ ನಾರಾಯಣ
    ಸಿ.ಸಿ. ಪಾಟೀಲ್
    ಆನಂದ್ ಸಿಂಗ್
    ಕೋಟ ಶ್ರೀನಿವಾಸ ಪೂಜಾರಿ
    ಪ್ರಭು ಚೌಹಾಣ್
    ಮುರುಗೇಶ್ ನಿರಾಣಿ
    ಶಿವರಾಂ ಹೆಬ್ಬಾರ್
    S.T.ಸೋಮಶೇಖರ್
    ಬಿ.ಸಿ.ಪಾಟೀಲ್
    ಭೈರತಿ ಬಸವರಾಜ್
    ಡಾ.ಕೆ.ಸುಧಾಕರ್
    ಕೆ.ಗೋಪಾಲಯ್ಯ
    ಶಶಿಕಲಾ ಜೊಲ್ಲೆ
    ಎಂಟಿಬಿ ನಾಗರಾಜ್
    ಕೆ.ಸಿ.ನಾರಾಯಣಗೌಡ
    ಬಿ.ಸಿ.ನಾಗೇಶ್
    ವಿ.ಸುನಿಲ್ ಕುಮಾರ್
    ಹಾಲಪ್ಪ ಆಚಾರ್
    ಶಂಕರ ಪಾಟೀಲ್ ಮುನೇನಕೊಪ್ಪ
    ಮುನಿರತ್ನ

  • 04 Aug 2021 03:42 PM (IST)

    ಮುಧೋಳ ಪಟ್ಟಣದಲ್ಲಿ ನಿರಾಣಿ ಬೆಂಬಲಿಗರಿಂದ ಪಟಾಕಿ ಸಿಡಿಸಿ ಸಂಭ್ರಮ

    ಮುರುಗೇಶ ನಿರಾಣಿ ಸಚಿವರಾಗಿ ಪ್ರಮಾಣ ವಚನ‌ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ನಿರಾಣಿ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ನಗರದ ಗಾಂಧಿ ಚೌಕ‌ನಲ್ಲಿ ನಿರಾಣಿ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ. ಪಟಾಕಿ ಸಿಡಿಸಿ, ಸಿಹಿ‌ ಹಂಚಿ ಸಂಭ್ರಮಾಚರಣೆ ನಡೆಯುತ್ತಿದೆ.

  • 04 Aug 2021 03:39 PM (IST)

    ಕಲಬುರಗಿ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಕಾರ್ಯಕರ್ತರ ಆಕ್ರೋಶ

    ಬೊಮ್ಮಾಯಿ ಸಂಪುಟದಲ್ಲಿ ಕಲಬುರಗಿ ಜಿಲ್ಲೆಗೆ ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದಾರೆ. ದತ್ತಾತ್ರೇಯ ಪಾಟೀಲ ರೇವೂರ್​ಗೆ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಅದರಲ್ಲೂ ಕಲಬುರಗಿ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

  • 04 Aug 2021 03:31 PM (IST)

    ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಮುಕ್ತಾಯ

    ರಾಜಭವನದ ಗಾಜಿನಮನೆಯಲ್ಲಿ ನಡೆದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ 29 ಸಚಿವರು ಸೇರ್ಪಡೆಯಾಗಿದ್ದಾರೆ. ರಾಷ್ಟ್ರಗೀತೆಯೊಂದಿಗೆ ಪ್ರಮಾಣವಚನ ಕಾರ್ಯಕ್ರಮ ಮುಕ್ತಾಯಗೊಂಡಿದೆ.

  • 04 Aug 2021 03:28 PM (IST)

    ಎರಡನೇ ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 64 ವರ್ಷ ವಯಸ್ಸಿನ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್

    64 ವರ್ಷ ವಯಸ್ಸಿನ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಎರಡನೇ ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಂಕೋಲಾ ತಾಲೂಕಿನ ಅರಬೈಲ್ ಸಮೀಪದ ಶೇವಕಾರ್ ಮೂಲದ ಹೆಬ್ಬಾರ್ ಅವರು 1983 ರಲ್ಲಿ ಯಲ್ಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರಾಗಿ, ಅಧ್ಯಕ್ಷರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. 2019 ರಲ್ಲಿ ಬಿಜೆಪಿ ಸೇರಿ ಸಚಿವ ಸ್ಥಾನ ಅಲಂಕಾರಿಸಿದರು. ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಪಡೆದರು. ಕಳೆದ‌ 2 ವರ್ಷದಿಂದ ಕಾರ್ಮಿಕ ಕಲ್ಯಾಣ, ಕೆಲವು ಅವಧಿಗೆ ಸಕ್ಕರೆ ಖಾತೆ ನಿರ್ವಹಣೆ ಮಾಡಿದ್ದಾರೆ.

  • 04 Aug 2021 03:14 PM (IST)

    ತಿಪಟೂರಿನಲ್ಲಿ ಕಾರ್ಯಕರ್ತರ ಅಭಿಮಾನಿಗಳ ಸಂಭ್ರಮಾಚರಣೆ

    ತಿಪಟೂರು ಶಾಸಕ ಬಿಸಿ ನಾಗೇಶ್ ಸಚಿವರಾಗಿ ಪ್ರಮಾಣ ವಚನ ಹಿನ್ನೆಲೆಯಲ್ಲಿ ಕಾರ್ಯಕರ್ತರ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿಯೇ ನಡೆಯುತ್ತಿದೆ. ನಗರದ ನಂಜಪ್ಪ ವೃತ್ತದಲ್ಲಿ ಕಾರ್ಯಕರ್ತರೆಲ್ಲರು ಸೇರಿದ್ದಾರೆ. ಶಾಮಿಯಾನ ಹಾಕಿ ದೊಡ್ಡ ಪರದೆಯಲ್ಲಿ ಟಿವಿ9 ವೀಕ್ಷಣೆ ಮಾಡುತ್ತ ಸಂಭ್ರಮಿಸುತ್ತಿದ್ದಾರೆ.

  • 04 Aug 2021 03:10 PM (IST)

    ನೂತನ ಸಚಿವರ ಪಟ್ಟಿ

    ನೂತನ ಸಚಿವರ ಪಟ್ಟಿ ಈ ಕೆಳಗಿನಂತಿದೆ :

    ಗೋವಿಂದ ಕಾರಜೋಳ
    ಕೆ.ಎಸ್ ಈಶ್ವರಪ್ಪ
    ಆರ್ ಅಶೋಕ್
    ಡಾ. ಅಶ್ವಥ್ ನಾರಾಯಣ
    ಬಿ. ಶ್ರೀರಾಮುಲು
    ವಿ. ಸೋಮಣ್ಣ
    ಜೆ.ಸಿ ಮಾಧುಸ್ವಾಮಿ
    ಸಿ.ಸಿ ಪಾಟೀಲ್
    ಪ್ರಭು ಚವಾಣ
    ಆನಂದ್ ಸಿಂಗ್
    ಕೆ. ಗೋಪಾಲಯ್ಯ
    ಬೈರತಿ ಬಸವರಾಜ
    ಎಸ್. ಟಿ ಸೋಮಶೇಖರ
    ಬಿ.ಸಿ ಪಾಟೀಲ್
    ಕೆ. ಸುಧಾಕರ್
    ಕೆ. ಸಿ ನಾರಾಯಣಗೌಡ
    ಶಿವರಾಮ ಹೆಬ್ಬಾರ್
    ಉಮೇಶ್ ಕತ್ತಿ
    ಎಸ್ ಅಂಗಾರಾ
    ಮುರುಗೇಶ್ ನಿರಾಣಿ
    ಎಂ ಟಿ ಬಿ ನಾಗರಾಜ
    ಕೋಟ ಶ್ರೀನಿವಾಸ ಪೂಜಾರಿ
    ಶಶಿಕಲಾ ಜೊಲ್ಲೆ
    ವಿ ಸುನಿಲ್ ಕುಮಾರ್
    ಹಾಲಪ್ಪ ಆಚಾರ್
    ಅರಗ ಜ್ಞಾನೇಂದ್ರ
    ಶಂಕರ್ ಪಾಟೀಲ್ ಮುನೇನಕೊಪ್ಪ
    ಬಿ ಸಿ ನಾಗೇಶ್
    ಮುನಿರತ್ನ

  • 04 Aug 2021 03:07 PM (IST)

    ಸಚಿವರಾಗಿ ಈಶ್ವರಪ್ಪ ಮತ್ತು ಆರಗ ಜ್ಞಾನೇಂದ್ರ ಆಯ್ಕೆ ಹಿನ್ನಲೆ ಬಿಜೆಪಿ ಮಹಿಳಾ ಮೋರ್ಚಾದಿಂದ ಸಂಭ್ರಮಾಚರಣೆ

    ಸಚಿವರಾಗಿ ಈಶ್ವರಪ್ಪ ಮತ್ತು ಆರಗ ಜ್ಞಾನೇಂದ್ರ ಆಯ್ಕೆ ಹಿನ್ನಲೆಯಲ್ಲಿ ಶಿವಮೊಗ್ಗ ಬಿಜೆಪಿ ಮಹಿಳಾ ಮೋರ್ಚಾದಿಂದ ಸಂಭ್ರಮಾಚರಣೆ ನಡೆಯುತ್ತಿದೆ. ಪರಸ್ಪರ ಬಣ್ಣ ಹಾಕಿಕೊಳ್ಳುವ ಮೂಲಕ ಸಂಭ್ರಮ ನಡೆಯುತ್ತಿದೆ. ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು.. ಹಾಡು ಹಾಡುತ್ತಾ ಮಹಿಳೆಯರು ಹೆಜ್ಜೆ ಹಾಕಿ ಸಮಭ್ರಮಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯ ಮುಂದೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಸಂಭ್ರಮದಲ್ಲಿ ಬಿಜೆಪಿಯ ಮಹಿಳಾ ಪಾಲಿಕೆ ಸದಸ್ಯರು ಭಾಗಿಯಾಗಿದ್ದಾರೆ.

  • 04 Aug 2021 03:02 PM (IST)

    ಶಾಸಕ ಡಾ.ಕೆ.ಸುಧಾಕರ್ ಸಚಿವರಾಗಿ ಪ್ರಮಾಣ ವಚನ ಹಿನ್ನಲೆ ಸಂಭ್ರಮ

    ಶಾಸಕ ಡಾ.ಕೆ.ಸುಧಾಕರ್ ಸಚಿವರಾಗಿ ಪ್ರಮಾಣ ವಚನ ಹಿನ್ನಲೆಯಲ್ಲೆ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಬ್ರಮಾಚರಣೆ ನಡೆಯುತ್ತಿದೆ. ನಗರದ ಬಲಮುರಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.

  • 04 Aug 2021 02:59 PM (IST)

    ಮುಧೋಳ ಶಾಸಕ ಗೋವಿಂದ ಕಾರಜೋಳ ಅವರಿಗೆ ಸಚಿವ ಸ್ಥಾನ ಹಿನ್ನೆಲೆ ಸಂಭ್ರಮಾಚರಣೆ

    ಮುಧೋಳ ಶಾಸಕ ಗೋವಿಂದ ಕಾರಜೋಳ ಅವರಿಗೆ ಸಚಿವ ಸ್ಥಾನ ಹಿನ್ನೆಲೆಯಲ್ಲಿ ಮುಧೋಳ‌ ನಗರದಲ್ಲಿ ಸಂಭ್ರಮಾಚರಣೆ ಜೋರಾಗಿಯೇ ನಡೆಯುತ್ತಿದೆ. ರನ್ನ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಕಾರಜೋಳ ಪರ ಘೋಷಣೆ ಕೂಗುತ್ತಿದ್ದಾರೆ.

  • 04 Aug 2021 02:57 PM (IST)

    ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗಿ ಪ್ರಮಾಣವಚನ ‌ಸ್ವೀಕರಿಸಿದ ಪ್ರಭು ಚೌಹಾನ್

    ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಪ್ರಭು ಚೌಹಾನ್ ಪ್ರಮಾಣವಚನ ‌ಸ್ವೀಕರಿಸಿದ್ದಾರೆ. ಹಿಂದೂಳಿದ ತಾಲೂಕು ಔರಾದ್ ಮೀಸಲು ವಿಧಾನ ‌ಸಭಾ ಕ್ಷೇತ್ರದ ಶಾಸಕನಿಗೆ ಮಂತ್ರಿಗಿರಿ ಒಲಿದಿದೆ. ಪ್ರಮಾಣ ವಚನ‌ ಸ್ವೀಕರಿಸುತ್ತಿದಂತೆ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮ ನಡೆಯುತ್ತಿದೆ. ಪ್ರಭು ಚೌಹಾನ್ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳಿಂದ ಸಂಭ್ರಮ ಮಾಡುತ್ತಿದ್ದಾರೆ.

  • 04 Aug 2021 02:50 PM (IST)

    ಪ್ರತಿಜ್ಞಾವಿಧಿ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ

    ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

     

  • 04 Aug 2021 02:48 PM (IST)

    ಸಚಿವರಾಗಿ ಆನಂದ್ ಸಿಂಗ್ ಪ್ರಮಾಣವಚನ ಸ್ವೀಕಾರ

    ವಿಜಯನಗರ ಕ್ಷೇತ್ರದ ಶಾಸಕ  ಆನಂದ್ ಸಿಂಗ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.

     

  • 04 Aug 2021 02:47 PM (IST)

    ರಾಜಭವನದ ಹೊರಗಡೆ ಕಾರ್ಯಕರ್ತರ ಸಂಭ್ರಮ

    ರಾಜಭವನದ ಹೊರಗಡೆ ತಮ್ಮ ತಮ್ಮ ನಾಯಕರ ಭಾವ ಚಿತ್ರ ಹಿಡಿದು  ಸಚಿವರ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ.

  • 04 Aug 2021 02:45 PM (IST)

    ಸಚಿವರಾಗಿ ಸಿ.ಸಿ.ಪಾಟೀಲ್ ಪ್ರಮಾಣವಚನ ಸ್ವೀಕಾರ

    ಗದಗ ಜಿಲ್ಲೆಯ ನರಗುಂದ ಕ್ಷೇತ್ರದ ಶಾಸಕ ಸಿ.ಸಿ.ಪಾಟೀಲ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇವರ ಹೆಸರಿನಲ್ಲಿ ಸಿ.ಸಿ.ಪಾಟೀಲ್ ತಿಜ್ಞಾವಿಧಿ ಸ್ವೀಕರಿಸಿದರು.

     

  • 04 Aug 2021 02:43 PM (IST)

    ಡಾ.ಸಿ.ಎನ್​.ಅಶ್ವತ್ಥ್​ ನಾರಾಯಣ ಪ್ರಮಾಣವಚನ ಸ್ವೀಕಾರ

    ಸಚಿವರಾಗಿ ಮಲ್ಲೇಶ್ವರಂ ಶಾಸಕ ಡಾ.ಅಶ್ವತ್ಥ್ ನಾರಾಯಣ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಗೆಹ್ಲೋಟ್ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.

  • 04 Aug 2021 02:40 PM (IST)

    ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಪ್ರಮಾಣವಚನ ಸ್ವೀಕಾರ

    ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ  ಪ್ರಮಾಣವಚನ ಸ್ವೀಕರಿಸಿದ್ದಾರೆ. ನಾಲ್ಕು ಬಾರಿ ಶಾಸಕರಾಗಿದ್ದ ಆರಗ ಜ್ಞಾನೇಂದ್ರ  ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.

     

  • 04 Aug 2021 02:36 PM (IST)

    ಪ್ರಮಾಣವಚನ ಸ್ವೀಕರಿಸಿದ ಜೆ.ಸಿ.ಮಾಧುಸ್ವಾಮಿ

    ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಜೆ.ಸಿ.ಮಾಧುಸ್ವಾಮಿ ಸಚಿವರಾಗಿ  ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇವರ ಹೆಸರಿನಲ್ಲಿ ಮಾಧುಸ್ವಾಮಿ ಪ್ರಮಾಣವಚನ ಸ್ವೀಕರಿಸಿದರು.

     

  • 04 Aug 2021 02:33 PM (IST)

    ಸಚಿವರಾಗಿ ಎಸ್.ಅಂಗಾರ ಪ್ರಮಾಣವಚನ ಸ್ವೀಕಾರ

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ ಸಚಿವರಾಗಿ ಪ್ರಮಾಣವಚನ  ಸ್ವೀಕರಿಸಿದರು. ರಾಜ್ಯಪಾಲ ಗೆಹ್ಲೋಟ್ ಸಚಿವರಿಗೆ  ಪ್ರಮಾಣವಚನ ಬೋಧಿಸಿದರು.

     

     

  • 04 Aug 2021 02:30 PM (IST)

    ಉಮೇಶ್ ಕತ್ತಿ ಪ್ರಮಾಣವಚನ ಸ್ವೀಕಾರ

    ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

     

  • 04 Aug 2021 02:29 PM (IST)

    ವಿ. ಸೋಮಣ್ಣ ಪ್ರಮಾಣವಚನ ಸ್ವೀಕಾರ

    ವಿ. ಸೋಮಣ್ಣ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ.

  • 04 Aug 2021 02:28 PM (IST)

    ಕೊನೇ ಕ್ಷಣದಲ್ಲಿ ರಾಜಭವನದತ್ತ ಶಶಿಕಲಾ ಜೊಲ್ಲೆ ದೌಡು

    ಶಶಿಕಲಾ ಜೊಲ್ಲೆ  ಕೊನೇ ಕ್ಷಣದಲ್ಲಿ ರಾಜಭವನದತ್ತ ದೌಡಾಯಿಸುತ್ತಿದ್ದಾರೆ. ಝೀರೋ ಟ್ರಾಫಿಕ್​​ನಲ್ಲಿ ಜೊಲ್ಲೆ  ಪ್ರಮಾಣ ವಚನ ಸ್ವೀಕರಿಸಲು ಆಗಮಿಸುತ್ತಿದ್ದಾರೆ.

     

  • 04 Aug 2021 02:27 PM (IST)

    ಬಿ.ಶ್ರೀರಾಮುಲು ಪ್ರಮಾಣವಚನ ಸ್ವೀಕಾರ

    ಡಿಸಿಎಂ ಹುದ್ದೆ ಮೇಲೆ ಕಣ್ಣಟ್ಟಿದ್ದ ಶಾಸಕ ಬಿ.ಶ್ರೀರಾಮುಲು ಪ್ರಮಾಣವಚನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

  • 04 Aug 2021 02:23 PM (IST)

    ಪ್ರಮಾಣವಚನ ಸ್ವೀಕರಿಸಿದ ಆರ್​.ಅಶೋಕ್​

    ಕೆ.ಎಸ್​.ಈಶ್ವರಪ್ಪ ನಂತರ ಆರ್​.ಅಶೋಕ್​ ಪ್ರಮಾಣವಚನ ಸ್ವೀಕರಿಸಿದ್ದಾರೆ.

  • 04 Aug 2021 02:20 PM (IST)

    ಎರಡನೇಯವರಾಗಿ ಕೆ.ಎಸ್‌.ಈಶ್ವರಪ್ಪ ಪ್ರಮಾಣವಚನ ಸ್ವೀಕಾರ

    ಕೆ.ಎಸ್‌.ಈಶ್ವರಪ್ಪ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

  • 04 Aug 2021 02:18 PM (IST)

    ಮೊದಲನೆಯವರಾಗಿ ಕಾರಜೋಳ ಪ್ರಮಾಣವಚನ ಸ್ವೀಕಾರ

    ಸಚಿವರಾಗಿ ಗೋವಿಂದ ಕಾರಜೋಳ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದ್ದಾರೆ.

  • 04 Aug 2021 02:17 PM (IST)

    ಏರ್​ಪೋರ್ಟ್​ಗೆ ಅಗಮಿಸಿದ ಸಚಿವೆ ಶಶಿಕಲಾ ಜೊಲ್ಲೆ

    ಶಾಸಕಿ ಶಶಿಕಲಾ ಜೊಲ್ಲೆ ಏರ್​ಪೋರ್ಟ್​ಗೆ ಆಗಮಿಸಿದ್ದಾರೆ. ತರಾತುರಿಯಲ್ಲಿ ಏರ್​ಪೋರ್ಟ್​ನಿಂದ ಪ್ರಯಾಣ ಬೆಳೆಸುತ್ತಿದ್ದಾರೆ.

     

  • 04 Aug 2021 02:15 PM (IST)

    ಗಾಜಿನ ಮನೆಗೆ ರಾಜ್ಯಪಾಲರ ಆಗಮನ

    ಗಾಜಿನ ಮನೆಗೆ ರಾಜ್ಯಪಾಲರು ಆಗಮಿಸುತ್ತಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಾಕ್ರಮ ಪ್ರಾರಂಭವಾಗುತ್ತದೆ.

  • 04 Aug 2021 02:13 PM (IST)

    ಕೊನೆಯವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಶಶಿಕಲಾ ಜೊಲ್ಲೆ

    ವಿಮಾನ ವಿಳಂಬವಾಗಿ ಬರುತ್ತಿರುವ ಕಾರಣ ಸಚಿವೆಯಾಗಿ ಶಶಿಕಲಾ ಜೊಲ್ಲೆ ಕೊನೆಯವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ.

  • 04 Aug 2021 02:12 PM (IST)

    ಲಾಬಿ ಮಾಡಿದ್ದರೆ ನಾನು ಕೂಡ ಸಚಿವನಾಗುತ್ತಿದ್ದೆ: ರೇಣುಕಾಚಾರ್ಯ

    ಲಾಬಿ ಮಾಡಿದ್ದರೆ ನಾನು ಕೂಡ ಸಚಿವನಾಗುತ್ತಿದ್ದೆ. ಲಾಬಿ ಮಾಡದಿದ್ದಕ್ಕೆ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ. ಸಮರ್ಥರಿಗೆ ಸ್ಥಾನ ನೀಡಿದ್ದಾರೆಂದು ಅಂದುಕೊಂಡಿದ್ದೇನೆ ಎಂದು  ಬೆಂಗಳೂರಿನಲ್ಲಿ ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

  • 04 Aug 2021 02:08 PM (IST)

    ಕೆಲವೇ ಕ್ಷಣಗಳಲ್ಲಿ ನೂತನ ಸಚಿವರ ಪ್ರತಿಜ್ಞಾವಿಧಿ ಸ್ವೀಕಾರ

    ಸಚಿವರ ಪಟ್ಟಿ ಬಿಡುಗಡೆಯಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತದೆ.

  • 04 Aug 2021 02:04 PM (IST)

    ಬಿಜೆಪಿ ಕಾರ್ಯಕರ್ತರು ಪೊಲೀಸರ ನಡುವೆ ಮಾತಿನ ಚಕಮಕಿ

    ಒಳಗೆ ಹೋಗಲು ಬಿಜೆಪಿ ಕಾರ್ಯಕರ್ತರು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಕೊನೆಗೆ ಪಾಸ್ ಇದೆ ಬಿಡಿ ಅಂತ ಕಾರ್ಯಕರ್ತರು ಒಳಗೆ ಹೋದರು.

  • 04 Aug 2021 01:57 PM (IST)

    ರಾಜಭವನಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ

    ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಭವನಕ್ಕೆ ಆಗಮಿಸಿದ್ದಾರೆ.

  • 04 Aug 2021 01:56 PM (IST)

    ಶಾಸಕಿ ಶಶಿಕಲಾ ಜೊಲ್ಲೆ ಬರುವುದಕ್ಕೆ ಎಸ್ಕಾರ್ಟ್ ವ್ಯವಸ್ಥೆ

    ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಶಶಿಕಲಾ ಜೊಲ್ಲೆ ಬರುವುದಕ್ಕೆ  ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ. ಕೆಐಎಬಿಯಿಂದ ರಾಜಭವನಕ್ಕೆ ಬರುವುದಕ್ಕೆ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ.

     

  • 04 Aug 2021 01:55 PM (IST)

    ರಾಜಭವನಕ್ಕೆ ಆಗಮಿಸಿದ ಮಾಜಿ ಸಿಎಂ ಯಡಿಯೂರಪ್ಪ

    ಮಾಜಿ ಸಿಎಂ ಯಡಿಯೂರಪ್ಪ ರಾಜಭವನಕ್ಕೆ ಆಗಮಿಸಿದ್ದಾರೆ. ತಂದೆ ಜತೆಯೇ ಬಿ.ವೈ.ವಿಜಯೇಂದ್ರ ಆಗಮಿಸಿದರು. ಯಡಿಯೂರಪ್ಪ ಆಗಮಿಸುತ್ತಿದ್ದಂತೆ ರಾಜಭವನದಲ್ಲಿ ಜೈಕಾರದ ಘೋಷಣೆ ಕೂಗಿದರು.

     

     

  • 04 Aug 2021 01:53 PM (IST)

    ರಾಜಭವನದತ್ತ ಸಿಎಂ ಬಸವರಾಜ ಬೊಮ್ಮಾಯಿ

    ಆರ್.ಟಿ.ನಗರದ ನಿವಾಸದಿಂದ ಸಿಎಂ ಬಸವರಾಜ ಬೊಮ್ಮಾಯಿ ರಾಜಭವನದತ್ತ ಆಗಮಿಸುತ್ತಿದ್ದಾರೆ.

     

  • 04 Aug 2021 01:53 PM (IST)

    ಶಶಿಕಲಾ ಜೊಲ್ಲೆಗೆ ಆರಂಭದಲ್ಲೆ ವಿಘ್ನ; 1:30 ಕ್ಕೆ ಕೆಐಎಬಿಗೆ ಆಗಮಿಸಬೇಕಿದ್ದ ವಿಮಾನ ವಿಳಂಬ

    ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಲು  ಶಾಸಕಿ ಶಶಿಕಲಾ ಜೊಲ್ಲೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಆದರೆ 1:30 ಕ್ಕೆ ಕೆಐಎಬಿಗೆ ಆಗಮಿಸಬೇಕಿದ್ದ ವಿಮಾನ ಅರ್ಧ ಗಂಟೆ ತಡವಾಗಿ ಬರಲಿದೆ. 2 ಗಂಟೆ ಸುಮಾರಿಗೆ  ವಿಮಾನ ಬರಲಿದೆ. ಹೀಗಾಗಿ ಶಶಿಕಲಾ ಜೊಲ್ಲೆ ತಡವಾಗಿ ಪ್ರಮಾಣವಚನ ಸ್ವೀಕರಲಿಸಲಿದ್ದಾರೆ.

     

  • 04 Aug 2021 01:48 PM (IST)

    ನನಗ್ಯಾಕೆ ಸಚಿವ ಸ್ಥಾನವಿಲ್ಲ?- ರಾಜುಗೌಡ ಪ್ರಶ್ನೆ

    ನನ್ನ ವಿರುದ್ಧ ಯಾವುದೇ ಒಂದು ರಿಮಾರ್ಕ್ ಇಲ್ಲ. ಆದರೂ ನನಗೇಕೆ ಸಚಿವ ಸ್ಥಾನ ಕೊಟ್ಟಿಲ್ಲವೆಂದು  ಬಿಜೆಪಿ ಶಾಸಕ ರಾಜುಗೌಡ  ಪ್ರಶ್ನಿಸಿದ್ದಾರೆ. ಒಂದಲ್ಲಾ ಒಂದು ದಿನ ದೇವರು ಕಾಪಾಡುತ್ತಾನೆ ಅಂತ ಟಿವಿ9ಗೆ ಶಾಸಕ ಹೇಳಿಕೆ ನೀಡಿದ್ದಾರೆ.

     

  • 04 Aug 2021 01:45 PM (IST)

    ಸಂಪುಟದಲ್ಲಿ ಸ್ಥಾನ ನೀಡದ್ದಕ್ಕೆ ಓಲೇಕಾರ್​ ಕೆಂಡಾಮಂಡಲ; ಸಿಎಂ ವಿರುದ್ಧ ದೂರು ಕೊಡಲು ಶಾಸಕ ನಿರ್ಧಾರ

    ಸಂಪುಟದಲ್ಲಿ ಸಚಿವ ಸ್ಥಾನ ನೀಡದ್ದಕ್ಕೆ ನೆಹರು ಓಲೇಕಾರ್ ಸಿಎಂ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ. ಸಂಘ ಪರಿವಾರದವರನ್ನು ಭೇಟಿ ಮಾಡಿ ದೂರು ನೀಡುವೆ. ಹಾವೇರಿ ಜಿಲ್ಲೆಯಿಂದ ಬೊಮ್ಮಾಯಿ ಸಿಎಂ ಆಗಿದ್ದಾರೆ. ಬಿ.ಸಿ.ಪಾಟೀಲ್ ಕೂಡ ಮುಂದುವರಿದ ಸಮುದಾಯದವರು. ಆದರೆ ಸಚಿವ ಸ್ಥಾನ ಮಾತ್ರ ಹಿಂದುಳಿದ ವರ್ಗಕ್ಕೆ ಕೊಡಲಿಲ್ಲ. ಸಂಪುಟದಲ್ಲಿ ಜಾತಿವಾರು ಅಸಮತೋಲನ ಎದ್ದು ಕಾಣಿಸ್ತಿದೆ. ಹಿರಿಯರು ಕರೆದು ಮಾತನಾಡಿದರೆ ಹೋಗಿ ಚರ್ಚಿಸುತ್ತೇನೆ. ಸಂಪುಟದಲ್ಲಿ ಹಿಂದುಳಿದ ವರ್ಗದವರನ್ನು ಕಡೆಗಣಿಸಿದ್ದಾರೆ. ಯಡಿಯೂರಪ್ಪ ಇದ್ದಾಗಲೂ ಅವಕಾಶ ವಂಚಿತನಾದೆ.  ಇದುವರೆಗೂ ನನಗೆ ಯಾವುದೇ ರೀತಿ ಭರವಸೆ ನೀಡಿಲ್ಲ. ನಾವು ಪಕ್ಷದ ಜೊತೆಯಲ್ಲಿದ್ದು, ಹೋರಾಟ ಮಾಡ್ತೇನೆ. ಮುಖ್ಯಮಂತ್ರಿ ಬೊಮ್ಮಾಯಿ ನನಗೆ ಮೋಸ ಮಾಡಿದ್ದಾರೆ. ನಿಷ್ಠಾವಂತರನ್ನು ಸಿಎಂ ಬೊಮ್ಮಾಯಿ ಕಡೆಗಣಿಸಿದ್ದಾರೆ. ಪ್ರಮಾಣವಚನ ಕಾರ್ಯಕ್ರಮಕ್ಕೂ ನಾನು ಹೋಗಲ್ಲ. ಪ್ರಮಾಣವಚನ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿಲ್ಲ ಎಂದು  ಬಿಜೆಪಿ ಶಾಸಕ ನೆಹರು ಓಲೇಕಾರ್ ಹೇಳಿದರು.

  • 04 Aug 2021 01:40 PM (IST)

    ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹೆಚ್.ನಾಗೇಶ್‌ಗೆ ತೀವ್ರ ನಿರಾಸೆ

    ದೆಹಲಿಯಿಂದ ಮುಳಬಾಗಿಲು ಶಾಸಕ ನಾಗೇಶ್ ವಾಪಸ್ ಆಗಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹೆಚ್.ನಾಗೇಶ್‌ಗೆ ತೀವ್ರ ನಿರಾಸೆಗೊಂಡಿದ್ದಾರೆ. ನಿರಾಸೆಯಿಂದಲೇ ಹೆಚ್.ನಾಗೇಶ್ ಬೆಂಗಳೂರಿನತ್ತ ತೆರಳಿದ್ದಾರೆ.

  • 04 Aug 2021 01:38 PM (IST)

    ಶಾಸಕ ರಾಜುಗೌಡಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಪ್ರತಿಭಟನೆ

    ಶಾಸಕ ರಾಜುಗೌಡಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಪ್ರತಿಭಟನೆ ಕೈಗೊಂಡಿದ್ದಾರೆ. ರಾಜುಗೌಡ ಬೆಂಬಲಿಗರಿಂದ ಪ್ರತಿಭಟನಾ ಮೆರವಣಿಗೆ ಹೊರಟಿದೆ. ಬೆಂಗಳೂರಿನ ಮೋತಿ ಮಹಲ್ ಲಾಡ್ಜ್‌ನಿಂದ ಮೆರವಣಿಗೆ ಹೊರಟಿದ್ದು, ಬೆಂಬಲಿಗರನ್ನು ರಾಜುಗೌಡರು ಸಮಾಧಾನಪಡಿಸುತ್ತಿದ್ದಾರೆ.

  • 04 Aug 2021 01:36 PM (IST)

    ಸಚಿವ ಸ್ಥಾನದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲೇ ಇಲ್ಲ – ಶಾಸಕ ಕೆ.ಜಿ ಬೋಪಯ್ಯ

    ಸಚಿವ ಸ್ಥಾನದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲೇ ಇಲ್ಲ ಎಂದು ಬೆಂಗಳೂರಿನಲ್ಲಿ ಶಾಸಕ ಕೆ.ಜಿ.ಬೋಪಯ್ಯ ಹೇಳಿಕೆ ನೀಡಿದ್ದಾರೆ. ಯಾರನ್ನೂ ಸಚಿವರನ್ನಾಗಿ ಮಾಡುವಂತೆ ಕೇಳಿರಲಿಲ್ಲ. ಕೊಟ್ಟರೆ ಕೊಡಲಿ ಎಂದಷ್ಟೇ ಇದ್ದೆ. ನನಗೆ ಯಾವುದೇ ಬೇಸರ ಇಲ್ಲವೆಂದ ಕೆ.ಜಿ.ಬೋಪಯ್ಯ ಪ್ರತಿಕ್ರಿಯಿಸಿದ್ದಾರೆ.

  • 04 Aug 2021 01:34 PM (IST)

    ಮೈಸೂರಿನಲ್ಲಿ ನಾಯಕ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ

    ಸಚಿವ ಸಂಪುಟ ರಚನೆ ಬೆನ್ನಲ್ಲೆ ಅಸಮಾಧಾನ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಾಯಕ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯುತ್ತಿದೆ. ಡಿಸಿಎಂ ಸ್ಥಾನ ನೀಡಿಲ್ಲ ಕೇವಲ ಒಂದು ಸ್ಥಾನ ನೀಡಲಾಗಿದೆ. ಇದು ಸಮುದಾಯಕ್ಕೆ ಮಾಡಿದ ಅವಮಾನ ಎಂದು ಮೈಸೂರು ನ್ಯಾಯಾಲಯದ ಗಾಂಧೀ ಪುತ್ಥಳಿ ಬಳಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಸಿಎಂ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಮುಂದಿನ ದಿನದಲ್ಲಿ ಬಿಜೆಪಿ ವಿರುದ್ದ ಮತ ಚಲಾಯಿಸಲು ಕರೆ ನೀಡುತ್ತಿದ್ದಾರೆ.

  • 04 Aug 2021 01:32 PM (IST)

    ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಕಿಡಿ

    ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಸರ್ಕಾರದ ವಿರುದ್ಧ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಆಸೆ ತೋರಿಸಿ ಆಚೆ ನೂಕುವ ಧೋರಣೆ ಮಾಡಲಾಗಿದೆ. ಮುಂದುವರಿದ ಸಮುದಾಯಗಳಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಹಿಂದುಳಿದ ಗೊಲ್ಲ ಸಮುದಾಯದ ಕಡೆಗಣನೆ ಸರಿಯಲ್ಲ. ನ್ಯಾಯ ನೀಡದಿದ್ದರೆ ಗೊಲ್ಲ ಸಮುದಾಯದಿಂದ ಹೋರಾಟ ನಡೆಯಲಿದೆ. ಸಭೆ ನಡೆಸಿ ಚರ್ಚಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಚಿತ್ರದುರ್ಗದಲ್ಲಿ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ.

  • 04 Aug 2021 01:27 PM (IST)

    ಸಂಪುಟದಲ್ಲಿ ಸ್ಥಾನ ನೀಡದ್ದಕ್ಕೆ ಓಲೇಕಾರ್​ ಕೆಂಡಾಮಂಡಲ

    ಸಂಪುಟದಲ್ಲಿ ಸ್ಥಾನ ನೀಡದ್ದಕ್ಕೆ ಓಲೇಕಾರ್​ ಕೆಂಡಾಮಂಡಲರಾಗಿದ್ದಾರೆ. ಸಂಘ ಪರಿವಾರದವರನ್ನು ಭೇಟಿ ಮಾಡಿ ದೂರು ನೀಡುವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ನೆಹರು ಓಲೇಕಾರ್ ಹೇಳಿಕೆ ನೀಡಿದ್ದಾರೆ. ಹಾವೇರಿ ಜಿಲ್ಲೆಯಿಂದ ಬೊಮ್ಮಾಯಿ ಸಿಎಂ ಆಗಿದ್ದಾರೆ. ಬಿ.ಸಿ.ಪಾಟೀಲ್ ಕೂಡ ಮುಂದುವರಿದ ಸಮುದಾಯದವರು. ಆದರೆ ಸಚಿವ ಸ್ಥಾನ ಮಾತ್ರ ಹಿಂದುಳಿದ ವರ್ಗಕ್ಕೆ ಕೊಡಲಿಲ್ಲ. ಸಂಪುಟದಲ್ಲಿ ಜಾತಿವಾರು ಅಸಮತೋಲನ ಎದ್ದು ಕಾಣಿಸ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹಿರಿಯರು ಕರೆದು ಮಾತನಾಡಿದರೆ ಹೋಗಿ ಚರ್ಚಿಸುತ್ತೇನೆ. ಯಡಿಯೂರಪ್ಪ ಇದ್ದಾಗಲೂ ಅವಕಾಶ ವಂಚಿತನಾದೆ, ಇದುವರೆಗೂ ನನಗೆ ಯಾವುದೇ ರೀತಿ ಭರವಸೆ ನೀಡಿಲ್ಲ. ನಾವು ಪಕ್ಷದ ಜೊತೆಯಲ್ಲಿದ್ದು ಹೋರಾಟ ಮಾಡ್ತೇನೆ.ಮುಖ್ಯಮಂತ್ರಿ ಬೊಮ್ಮಾಯಿ ನನಗೆ ಮೋಸ ಮಾಡಿದ್ದಾರೆ, ನಿಷ್ಠಾವಂತರನ್ನು ಸಿಎಂ ಬೊಮ್ಮಾಯಿ ಕಡೆಗಣಿಸಿದ್ದಾರೆ, ಪ್ರಮಾಣ ವಚನ ಕಾರ್ಯಕ್ರಮಕ್ಕೂ ನಾನು ಹೋಗಲ್ಲ, ಪ್ರಮಾಣ ವಚನ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ನೆಹರು ಓಲೇಕಾರ್ ಹೇಳಿಕೆ ನೀಡಿದ್ದಾರೆ.

  • 04 Aug 2021 01:09 PM (IST)

    ಮನುಷ್ಯ ಜೀವನದಲ್ಲಿ ನಿರೀಕ್ಷೆ ಇಟ್ಟುಕೊಂಡು ಬದುಕುವುದಿಲ್ಲ- ಶಾಸಕ ರಾಮದಾಸ್

    ಮನುಷ್ಯ ಜೀವನದಲ್ಲಿ ನಿರೀಕ್ಷೆ ಇಟ್ಟುಕೊಂಡು ಬದುಕುವುದಿಲ್ಲ. ಬಂದಂತ ವಿಚಾರವನ್ನ ಸ್ವೀಕಾರ ಮಾಡುವುದು ಮನುಷ್ಯನ ಅರ್ಹತೆ ಮೇಲೆ‌ ಇರುತ್ತೆ. ನನ್ನ ತಂದೆ ಸೈನಿಕ, ಸೈನಿಕನ‌ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ. ನಾನು ಯಾವುದಕ್ಕು ಬೇಸರ ಪಡುವುದಿಲ್ಲ. ನಿರೀಕ್ಷೆ ಇದಿದ್ದು ಸಹಜ. ಬೇರೆ ಲೆಕ್ಕಚಾರದ ಮೂಲಕ ಸಂಪುಟ ಮಾಡಿದ್ದಾರೆ. ನನಗೆ ಅರ್ಹತೆ ಎನ್ನುವುದಕ್ಕಿಂತ, ಅನುಭವ ಇದೆ ಎಂದು ಶಾಸಕ ರಾಮದಾಸ್ ಅಭಿಪ್ರಾಯಪಟ್ಟಿದ್ದಾರೆ.

     

  • 04 Aug 2021 01:07 PM (IST)

    ಈ ಭಾರಿ‌‌ ಕಲಬುರಗಿ ಜಿಲ್ಲೆಗೆ ಅನ್ಯಾಯವಾಗಿದೆ: ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ್

    ಈ ಭಾರಿ‌‌ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗೋ ನಿರೀಕ್ಷೆ ಇತ್ತು. ಆದ್ರೆ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಿಲ್ಲ. ಈ ಭಾಗಕ್ಕೆ ಅನ್ಯಾಯವಾಗಿದೆ. ಆದ್ರೆ ಮುಂದಿನ ದಿನಗಳಲ್ಲಿ ಆದ್ರು‌ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು. ಬಸವರಾಜ್ ಬೊಮ್ಮಾಯಿ ಅವರಿಗೆ ಈ ಭಾಗದ ಬಗ್ಗೆ ಗೊತ್ತಿದೆ. ಅವರು ಈ ಹಿಂದೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೂಡಾ ಕೆಲಸ ಮಾಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಂತ್ರಿ ಸ್ಥಾನ ನೀಡುವ ಭರವಸೆ ಇದೆ ಎಂದು ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ್ ಹೇಳಿದರು.

  • 04 Aug 2021 01:02 PM (IST)

    ಸಚಿವ ಸ್ಥಾನದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ: ಕೆ.ಜಿ.ಬೋಪಯ್ಯ ಹೇಳಿಕೆ

    ನಮ್ಮ ಕ್ಷೇತ್ರದ ಜನ ಕಷ್ಟದಲ್ಲಿದ್ದಾರೆ. ಕೊರೊನಾ ಇದೆ. ಕೇರಳ ಗಡಿಯಲ್ಲಿ ನಮ್ಮ ಜಿಲ್ಲೆ ಇದೆ. ಸಚಿವ ಸ್ಥಾನದ ಬಗ್ಗೆ ತಲೆ ಕಡೆಸಿಕೊಳ್ಳಲೇ ಇಲ್ಲ.
    ನಾನು ಯಾರನ್ನು ಸಚಿವರನ್ನಾಗಿ ಮಾಡಿ ಅಂತಾ ಕೇಳಿಲ್ಲ. ಕೊಟ್ರೆ ಕೊಡಲ್ಲಿ ಅಂತಾ ಇದ್ದೆ ಅಷ್ಟೇ. ನನಗೆ ಯಾವುದೇ ಬೇಸರ ಇಲ್ಲವೆಂದು ಶಾಸಕರ ಭವನದಲ್ಲಿ ಕೆ.ಜಿ.ಬೋಪಯ್ಯ ಹೇಳಿದರು.

  • 04 Aug 2021 12:58 PM (IST)

    ಪ್ರಮಾಣವಚನ‌ ಕಾರ್ಯಕ್ರಮಕ್ಕೆ ಹೊಸ ಕೋಟ್ ಧರಿಸಿ ತೆರಳಲಿರುವ‌ ಸಿಎಂ ಬೊಮ್ಮಾಯಿ

    2.15ಕ್ಕೆ ಸುಮಾರಿಗೆ ನೂತನ ಸಚಿವರ ಪ್ರಮಾಣವಚನ‌ ಕಾರ್ಯಕ್ರಮ ನಡೆಯುತ್ತದೆ. ಪ್ರಮಾಣವಚನ‌ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಹೊಸ ಕೋಟ್ ಧರಿಸಿ ತೆರಳಲಿದ್ದಾರೆ.

     

  • 04 Aug 2021 12:56 PM (IST)

    ಸಚಿವ ಸಂಪುಟದಲ್ಲಿ ಎಸ್.ಎ.ರಾಮದಾಸ್‌ಗೆ ತಪ್ಪಿದ ಸ್ಥಾನ

    ಸಚಿವ ಸಂಪುಟದಲ್ಲಿ ಎಸ್.ಎ.ರಾಮದಾಸ್‌ಗೆ ಸ್ಥಾನ ತಪ್ಪಿದೆ. ಸಚಿವ ಸ್ಥಾನ ತಪ್ಪುತ್ತಿದ್ದಂತೆ ಬೆಂಬಲಿಗರ ಜೊತೆ ಸಭೆ ನಡೆಸಿದ್ದಾರೆ. ಕೆ.ಆರ್.ಕ್ಷೇತ್ರದ ವಿವಿಧ ಮೋರ್ಚಾ ಅಧ್ಯಕ್ಷರು ಭಾಗಿಯಾಗಿದ್ದಾರೆ.

     

  • 04 Aug 2021 12:50 PM (IST)

    ಬೆಂಗಳೂರಿನಲ್ಲಿ ರಾಜುಗೌಡ ಬೆಂಬಲಿಗರಿಂದ ಪ್ರತಿಭಟನೆ

    ಶಾಸಕ ರಾಜುಗೌಡಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಬೆಂಗಳೂರಿನಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಎಂ ಬೊಮ್ಮಾಯಿ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

     

  • 04 Aug 2021 12:46 PM (IST)

    ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಆರಗ ಜ್ಞಾನೇಂದ್ರ ಬೆಂಬಲಿಗರು

    ಇದೇ ಮೊದಲ ಬಾರಿಗೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಸಚಿವರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ತೀರ್ಥಹಳ್ಳಿ ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

     

  • 04 Aug 2021 12:40 PM (IST)

    ಯೂಟರ್ನ್ ಹೊಡೆದ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ

    ಸಚಿವ ಸ್ಥಾನ ನೀಡದಿದ್ದರೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಆದರೆ ಇದೀಗ ಯೂಟರ್ನ್ ಹೊಡೆದಿದ್ದಾರೆ. ರಾಜೀನಾಮೆ ನೀಡದಂತೆ ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ನಾನು ರಾಜೀನಾಮೆ ನೀಡಲ್ಲ ಅಂತ ಡೆಪ್ಯೂಟಿ ಸ್ಪೀಕರ್ ಆನಂದ್ ಮಾಮನಿ ಟಿವಿ9ಗೆ ತಿಳಿಸಿದ್ದಾರೆ.

     

  • 04 Aug 2021 12:37 PM (IST)

    ನೆಹರು ಓಲೇಕಾರ್​ಗೆ ಸಚಿವ ಸ್ಥಾನ ಸಿಗದ್ದಕ್ಕೆ ಆಕ್ರೋಶ; ಬೆಂಬಲಿಗನಿಂದ ಉರುಳುಸೇವೆ

    ಶಾಸಕ ನೆಹರು ಓಲೇಕಾರ್​ಗೆ ಸಚಿವ ಸ್ಥಾನ ಸಿಗದ್ದಕ್ಕೆ ಬೆಂಬಲಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿ ಪ್ರವಾಸಿ ಮಂದಿರದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಹೋಗುತ್ತಿದ್ದಾರೆ. ಪ್ರತಿಭಟನಾ ಮೆರವಣಿಗೆ ವೇಳೆ ಪರಸಪ್ಪ ಕುಂಬಾರ ಎಂಬ ಬೆಂಬಲಿಗ ಉರುಳುಸೇವೆ ಮಾಡಿದ್ದಾರೆ.

     

     

  • 04 Aug 2021 12:30 PM (IST)

    ಒಕ್ಕಲಿಗ ಕೋಟಾದಲ್ಲಿ 7 ಜನರಿಗೆ ಸಚಿವ ಸ್ಥಾನ

    ಒಕ್ಕಲಿಗ ಕೋಟಾದಲ್ಲಿ 7 ಜನರಿಗೆ ಸಚಿವ ಸ್ಥಾನ ಸಿಕ್ಕಿದೆ. ಡಾ.ಅಶ್ವತ್ಥ್ ನಾರಾಯಣ, ಕೆ.ಸಿ.ನಾರಾಯಣಗೌಡ, ಆರ್.ಅಶೋಕ್. ಡಾ.ಕೆ.ಸುಧಾಕರ್, ಆರಗ ಜ್ಞಾನೇಂದ್ರ, ಕೆ.ಗೋಪಾಲಯ್ಯ, ಎಸ್‌.ಟಿ. ಸೋಮಶೇಖರ್​ಗೆ ಸಚಿವ ಸ್ಥಾನ ಸಿಗುತ್ತಿದೆ.

  • 04 Aug 2021 12:29 PM (IST)

    ಸಂಪುಟದಲ್ಲಿ ಲಿಂಗಾಯತ ಸಮುದಾಯಕ್ಕೆ ಸಿಂಹಪಾಲು

    ಸಚಿವ ಸಂಪುಟದಲ್ಲಿ ಲಿಂಗಾಯತ ಸಮುದಾಯಕ್ಕೆ ಸಿಂಹಪಾಲು ಸಿಕ್ಕಿದೆ. ಲಿಂಗಾಯತ ಕೋಟಾದಲ್ಲಿ 8 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ. ವಿ.ಸೋಮಣ್ಣ, ಶಂಕರ ಪಾಟೀಲ್​ ಮುನೇನಕೊಪ್ಪ, ಜೆ.ಸಿ.ಮಾಧುಸ್ವಾಮಿ, ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ್, ಸಿ.ಸಿ.ಪಾಟೀಲ್, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

     

  • 04 Aug 2021 12:22 PM (IST)

    ಮುಖ್ಯಮಂತ್ರಿ ನೇರವಾಗಿ ಕರೆ ಮಾಡಿ ಪ್ರಮಾಣವಚನಕ್ಕೆ ಆಹ್ವಾನ ನೀಡಿರುವ ಶಾಸಕರ ಪಟ್ಟಿ

    ಮುಧೋಳ ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ, ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್​.ಅಶೋಕ್​, ಯಶವಂತಪುರ ಕ್ಷೇತ್ರದ ಶಾಸಕ S.T.ಸೋಮಶೇಖರ್, ಕೆ.ಆರ್.ಪುರಂ ಕ್ಷೇತ್ರದ ಶಾಸಕ ಭೈರತಿ ಬಸವರಾಜ್, ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್, ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್, ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ, ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್.ಅಶೋಕ್, ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು, ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಗೋವಿಂದರಾಜನಗರ ಕ್ಷೇತ್ರದ ಶಾಸಕ ವಿ.ಸೋಮಣ್ಣ, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಜೆ.ಸಿ.ಮಾಧುಸ್ವಾಮಿ, ಕಾರ್ಕಳ ಕ್ಷೇತ್ರದ ಶಾಸಕ ವಿ.ಸುನಿಲ್ ಕುಮಾರ್, ನರಗುಂದ ಕ್ಷೇತ್ರದ ಶಾಸಕ ಸಿ.ಸಿ.ಪಾಟೀಲ್, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ, ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡ, ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌಹಾಣ್, ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ, ಯಲಬುರ್ಗಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್, ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್, ನವಲಗುಂದ ಶಾಸಕ ಶಂಕರ ಪಾಟೀಲ್​ ಮುನೇನಕೊಪ್ಪ, ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ್ ನಿರಾಣಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ, ತಿಪಟೂರು ಶಾಸಕ ಬಿ.ಸಿ.ನಾಗೇಶ್‌ಗೆ ಸಚಿವ ಸ್ಥಾನ ಸಿಗಲಿದೆ.

  • 04 Aug 2021 12:18 PM (IST)

    ಬಿಎಸ್‌ವೈ ಭೇಟಿ ಮಾಡಿದ ನೂತನ ಸಚಿವರು

    ಬಿ.ಸಿ ಪಾಟೀಲ್, ಮುರಗೇಶ್ ನಿರಾಣಿ. ಗೋವಿಂದ ಕಾರಜೋಳ, ಕೆ.ಸುಧಾಕರ್ ನಾರಾಯಣಗೌಡ , ವಿ ಸೋಮಣ್ಣ, ಎಸ್‌. ಟಿ.ಸೋಮಶೇಖರ್ ಪ್ರಭು ಚೌಹಾಣ್, ಆರ್.ಅಶೋಕ್ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪರನ್ನು ಭೇಟಿ ಮಾಡಿದರು.

  • 04 Aug 2021 12:07 PM (IST)

    ಯಡಿಯೂರಪ್ಪಗೆ ನೂತನ ಸಚಿವರ ಪಟ್ಟಿ ನೀಡಿದ ಬೊಮ್ಮಾಯಿ

    ಸಿಎಂ ಬೊಮ್ಮಾಯಿ ಯಡಿಯೂರಪ್ಪಗೆ ನೂತನ ಸಚಿವರ ಪಟ್ಟಿಯನ್ನು ನೀಡಿದ್ದಾರೆ. ಬಿಎಸ್ ವೈ ನಿವಾಸಕ್ಕೆ ಪ್ರಮಾಣ ವಚನ ಸ್ವೀಕರಿಸಲಿರುವ ಶಾಸಕರು ಆಗಮಿಸುತ್ತಿದ್ದಾರೆ.

     

     

  • 04 Aug 2021 12:05 PM (IST)

    ಬೊಮ್ಮಾಯಿ ಸಂಪುಟದಲ್ಲಿ ಹಾಸನಕ್ಕೆ ಸಿಗದ ಪ್ರಾತಿನಿಧ್ಯ

    ಬೊಮ್ಮಾಯಿ ಸಂಪುಟದಲ್ಲಿ ಹಾಸನಕ್ಕೆ ಪ್ರಾತಿನಿಧ್ಯ ಸಿಗಲಿಲ್ಲ. ಶಾಸಕ ಪ್ರೀತಂಗೌಡ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ನಿರಾಸೆಯಾಗಿದೆ. ಸಚಿನ ಸ್ಥಾನ ಸಿಗಲಿ ಎಂದು ಬೆಂಬಲಿಗರು ಪೂಜೆ ಮಾಡಿ ಹಾರೈಸಿದ್ದರು. ಆದ್ರೆ ಅಂತಿಮವಾಗಿ ಸಚಿವ ಸ್ಥಾನ ಸಿಗದಿದ್ದರಿಂದ ಬೆಂಬಲಿಗರಿಗೆ ಭಾರೀ ನಿರಾಸೆಯಾಗಿದೆ.

     

  • 04 Aug 2021 12:03 PM (IST)

    ಮಾಜಿ ಸಚಿವ ಆನಂದ್ ಸಿಂಗ್​ಗೆ ಸಚಿವ ಸ್ಥಾನ ಖಚಿತ

    ಮಾಜಿ ಸಚಿವ ಆನಂದ್ ಸಿಂಗ್​ಗೆ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ. ಈ ಬಗ್ಗೆ ಟಿವಿ9 ಗೆ ದೂರವಾಣಿ ಮೂಲಕ  ಆನಂದ್ ಸಿಂಗ್ ತಿಳಿಸಿದ್ದಾರೆ.

     

  • 04 Aug 2021 12:01 PM (IST)

    ಯಡಿಯೂರಪ್ಪರ ಜೊತೆಗೆ ರಾಜಕೀಯಕ್ಕೆ ಬಂದವನು ನಾನು; ಕೋಟಾ ಶ್ರೀನಿವಾಸ ಪೂಜಾರಿ

    ನನ್ನ 45 ವರ್ಷಗಳ ರಾಜಕೀಯ ಸೇವೆಯನ್ನು ಗುರುತಿಸಿ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಸಚಿವ ಸ್ಥಾನ ಕೊಡ್ತಿರೋದಕ್ಕೆ ತುಂಬಾ ಖುಷಿಯಾಗಿದೆ. ನಾಲ್ಕು ಬಾರಿ ಶಾಸಕನಾಗಿದ್ದೇನೆ. ಯಡಿಯೂರಪ್ಪರ ಜೊತೆಗೆ ರಾಜಕೀಯಕ್ಕೆ ಬಂದವನು ನಾನು. ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ಸಿಗಬೇಕಿತ್ತು. ಬೊಮ್ಮಯಿಯವರಿಗೆ ನಾನು ಏನು ಅನ್ನೋದು ಗೊತ್ತಿದೆ. ಅವರು ಸೂಕ್ತ ಖಾತೆ ಕೊಟ್ಟು ನನ್ನ ಬಳಸಿಕೊಳ್ತಾರೆ‌. ಯಾವುದೇ ಖಾತೆ ಕೊಟ್ರು, ನಿಷ್ಠೆ ಯಿಂದ ನಿಭಾಯಿಸ್ತೀನಿ. ಗ್ರಾಮೀಣ ಅಭಿವೃದ್ಧಿ ಬಗ್ಗೆ ನನಗೆ ಆಸಕ್ತಿ ಇದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

     

  • 04 Aug 2021 11:59 AM (IST)

    ಯಡಿಯೂರಪ್ಪ ಭೇಟಿಗೆ ಆಗಮಿಸಿದ ಸಿಎಂ ಬೊಮ್ಮಾಯಿ

    ದೆಹಲಿಯಿಂದ ಸಚಿವರ ಪಟ್ಟಿ ಹಿಡಿದು ಬಂದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಲು ಆಗಮಿಸಿದ್ದಾರೆ.

Published On - 8:26 am, Wed, 4 August 21

Follow us on