15,760 ಕೋಟಿ ರೂಪಾಯಿ ವೆಚ್ಚದ ಸಬ್ ಅರ್ಬನ್ ರೈಲು ಯೋಜನೆ ಶಂಕುಸ್ಥಾಪನೆಗೆ ಪ್ರಧಾನಿ ಮೋದಿಗೆ ಆಮಂತ್ರಣ: ಏನಿದು ಯೋಜನೆ?

Bengaluru suburban rail project: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಹೀಲಲಿಗೆವರೆಗೆ ಸಂಚರಿಸಿ, ಬೆಂಗಳೂರು ಉಪನಗರ ರೈಲು ಯೋಜನೆ ಹಾಗೂ ರೈಲು ಮಾರ್ಗ ಡಬ್ಲಿಂಗ್ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಕಂದಾಯ ಸಚಿವ ಆರ್. ಅಶೋಕ್, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಕಪಿಲ್ ಮೋಹನ್ ಮತ್ತು ಇತರ ಹಿರಿಯ ಅಧಿಕಾರಿಗಳು ಜೊತೆಗಿದ್ದರು.

15,760 ಕೋಟಿ ರೂಪಾಯಿ ವೆಚ್ಚದ ಸಬ್ ಅರ್ಬನ್ ರೈಲು ಯೋಜನೆ ಶಂಕುಸ್ಥಾಪನೆಗೆ ಪ್ರಧಾನಿ ಮೋದಿಗೆ ಆಮಂತ್ರಣ: ಏನಿದು ಯೋಜನೆ?
15,760 ಕೋಟಿ ವೆಚ್ಚದ ಸಬ್ ಅರ್ಬನ್ ರೈಲು ಯೋಜನೆ ಶಂಕುಸ್ಥಾಪನೆಗೆ ಪ್ರಧಾನಿ ಮೋದಿಗೆ ಆಮಂತ್ರಣ: ಏನಿದು ಯೋಜನೆ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 24, 2021 | 3:15 PM

ಬೆಂಗಳೂರು: ರಾಜಧಾನಿಯಲ್ಲಿಂದು ಮುಖ್ಯಮಂತ್ರಿ ಬಿ ಎಸ್​​ ಯಡಿಯೂರಪ್ಪ ಅವರು  ರೈಲ್ವೇ ದ್ವಿಪಥ ಕಾಮಗಾರಿ ಯೋಜನೆ ಪರಿಶೀಲನೆ ನಡೆಸಿದರು. ಬೆಂಗಳೂರು ನಗರದಲ್ಲಿ ಹೆಚ್ಚುವರಿ ರೈಲು ಕಾರ್ಯಾಚರಣೆಗೆ ಅನುಕೂಲವಾಗುವಂತಹ ಈ 148 ಕಿ.ಮೀ. ಯೋಜನೆಯು ನಾಲ್ಕು ಕಾರಿಡಾರ್ ಗಳನ್ನು ಹೊಂದಿದೆ. ಮೂರು ತಿಂಗಳಲ್ಲಿ ಸಬ್ ಅರ್ಬನ್ ರೈಲು ಯೋಜನೆ ಶಂಕುಸ್ಥಾಪನೆ ಮಾಡುತ್ತೇವೆ. ಶಂಕುಸ್ಥಾಪನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಮಂತ್ರಿಸುತ್ತೇನೆ. ಅವರು ಬರುವ ಬಗ್ಗೆ 100 ಕ್ಕೆ ನೂರು ವಿಶ್ವಾಸವಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಹೀಲಲಿಗೆವರೆಗೆ ಸಂಚರಿಸಿ, ಬೆಂಗಳೂರು ಉಪನಗರ ರೈಲು ಯೋಜನೆ ಹಾಗೂ ರೈಲು ಮಾರ್ಗ ಡಬ್ಲಿಂಗ್ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಕಂದಾಯ ಸಚಿವ ಆರ್. ಅಶೋಕ್, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಕಪಿಲ್ ಮೋಹನ್ ಮತ್ತು ಇತರ ಹಿರಿಯ ಅಧಿಕಾರಿಗಳು ಜೊತೆಗಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಯಡಿಯೂರಪ್ಪ ಹೇಳಿದ್ದಿಷ್ಟು:

ಸಬ್ ಅರ್ಬನ್ ರೈಲು ಹಾಗೂ ರೈಲ್ವೇ ಡಬ್ಲಿಂಗ್ ಕಾಮಗಾರಿ ಪರಿಶೀಲನೆ ಮಾಡಿದ್ದೇನೆ. ಸಬ್ ಅರ್ಬನ್ ರೈಲ್ವೆ ಯೋಜನೆಯಿಂದ ಉಪ ನಗರಗಳ ಸಂಪರ್ಕಕ್ಕೆ ಅನುಕೂಲ ಆಗಲಿದೆ. 15,760 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೆಚ್ಚ ಭರಿಸಲಿವೆ. ಸಬ್ ಅರ್ಬನ್ ಪ್ರಧಾನಿ ಮೋದಿ ಅವರ ಕನಸಿನ ಯೋಜನೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಇದ್ದರೂ ಪ್ರಯೋಜ‌ನ ಏನು? ಎಂದು ಕಾಂಗ್ರೆಸ್‌ನವರು ಟೀಕಿಸಿದ್ದರು. ಅವರು ಬಂದು ಇಲ್ಲಿ ನೋಡಲಿ, ಏನು ಅಭಿವೃದ್ಧಿ ಆಗಿದೆ ಅನ್ನೋದು ಗೊತ್ತಾಗುತ್ತದೆ.

ಸಬ್ ಅರ್ಬನ್ ರೈಲು ಯೋಜನೆಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡ್ತಿದೆ. ಆದರೆ ಕೆಲವು ಕಾಂಗ್ರೆಸ್ ನಾಯಕರುಗಳು ಪ್ರಧಾನಿಗಳನ್ನು ಟೀಕೆ ಮಾಡ್ತಿದ್ದಾರೆ. ಬಹಳ ವರ್ಷಗಳ ಕನಸಾದ ಈ ಸಬ್ ಅರ್ಬನ್ ರೈಲು ಇನ್ನು ಮೂರು ತಿಂಗಳಲ್ಲಿ ಪ್ರಾರಂಭ ಆಗ್ತಿದೆ. ಇದರ ಕೆಲಸ ಕಾರ್ಯಗಳು ತ್ವರಿತವಾಗಿ ನಡೆಯುತ್ತಿವೆ. ಇದನ್ನೆಲ್ಲಾ ನೋಡಿ ಆದರೂ ಕಾಂಗ್ರೆಸ್ ನವರು ಟೀಕೆ ಮಾಡೋದನ್ನು ನಿಲ್ಲಿಸಬೇಕು.

ಎರಡು ದಿನಕ್ಕೊಮ್ಮೆ ದೆಹಲಿಯ ಮಾರ್ಕೆಟ್ ಗೆ ಎಳ ನೀರು, ಮಾವಿನ ಹಣ್ಣು, ಟೊಮೊಟೊ ಕಳುಹಿಸುತ್ತಿದ್ದೇವೆ. 7 ಲಕ್ಷ ಪ್ರತಿ ಟ್ರೈನ್ ಗೆ ಸಬ್ಸಿಡಿ ಕೊಡ್ತಿದ್ದೇವೆ. ನಾಳೆ ಇದನ್ನೆಲ್ಲಾ ಯಾವ ರೀತಿ ಸಾಗಾಟ ಮಾಡ್ತಿದ್ದಾರೆ ಎಂಬುದನ್ನು ನೋಡಿಕೊಂಡು ಬರುತ್ತೇನೆ. ರೈತರು ಬೆಳೆದ ಬೆಲೆಗೆ ಸರಿಯಾದ ಬೆಲೆ ಸಿಗಬೇಕು. ಅದಕ್ಕಾಗಿ ಇಂತಹ ಅಪರೂಪದ ಕಾರ್ಯಕ್ರಮವನ್ನು ಪ್ರಧಾನಿಗಳ ಆಶಯದಲ್ಲಿ ಮಾಡ್ತಿದ್ದೇವೆ. ಈ ರೀತಿ ಒಂದು ಟ್ರೈನ್ ನಲ್ಲಿ ಸಾಗಾಟ ಮಾಡೋದ್ರಿಂದ 24 ಲಕ್ಷ ರೂ ಲಾಭ ಸಿಗ್ತಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

(karnataka chief minister BS Yediyurappa reviews bengaluru suburban rail project pm narendra modi will be invited)