ಬೆಂಗಳೂರಿಂದ ಕಾರ್ಮಿಕರು ಯಾರೂ ಊರುಗಳಿಗೆ ಹೋಗಬೇಡಿ.. ಯಾಕೆ ಗೊತ್ತಾ?

|

Updated on: May 01, 2020 | 3:58 PM

ಬೆಂಗಳೂರು: ಕೊರೊನಾ ಲಾಕ್​ ಡೌನ್​ ಅವಧಿ ಇನ್ನೇನು ಮುಗಿಯುತ್ತಾ ಬಂದದ್ದು, ಈ ಮಧ್ಯೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೊರಡಲು ಸಜ್ಜಾಗುತ್ತಿದ್ದಾರೆ. ಆದ್ರೆ ಈ ಹಂತದಲ್ಲಿ ಯಾರೂ ಊರುಗಳಿಗೆ ತೆರಳದಂತೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಮನವಿ ಮಾಡಿರುವ ಸಿಎಂ ಯಡಿಯೂರಪ್ಪ, ಮೇ 4ರಿಂದ ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಆರಂಭವಾದ್ರೆ ಕಾರ್ಮಿಕರ ಕೊರತೆ ಎದುರಾಗಬಹುದು ಎಂಬ ಆತಂಕ ನಿರ್ಮಾಣವಾಗಿದೆ. ಊರುಗಳಿಗೆ ತೆರಳಿದರೆ ಹಿಂದಿರುಗಲು ಸಮಯ ಬೇಕಾಗುತ್ತೆ. ವಾಪಸ್ ಕರೆತರುವುದು ಮತ್ತೊಂದು ಕೆಲಸವಾಗಿಬಿಡುತ್ತದೆ. ಹಾಗಾಗಿ […]

ಬೆಂಗಳೂರಿಂದ ಕಾರ್ಮಿಕರು ಯಾರೂ ಊರುಗಳಿಗೆ ಹೋಗಬೇಡಿ.. ಯಾಕೆ ಗೊತ್ತಾ?
Follow us on

ಬೆಂಗಳೂರು: ಕೊರೊನಾ ಲಾಕ್​ ಡೌನ್​ ಅವಧಿ ಇನ್ನೇನು ಮುಗಿಯುತ್ತಾ ಬಂದದ್ದು, ಈ ಮಧ್ಯೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೊರಡಲು ಸಜ್ಜಾಗುತ್ತಿದ್ದಾರೆ. ಆದ್ರೆ ಈ ಹಂತದಲ್ಲಿ ಯಾರೂ ಊರುಗಳಿಗೆ ತೆರಳದಂತೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಮಾಧ್ಯಮ ಪ್ರಕಟಣೆ ಮೂಲಕ ಮನವಿ ಮಾಡಿರುವ ಸಿಎಂ ಯಡಿಯೂರಪ್ಪ, ಮೇ 4ರಿಂದ ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಆರಂಭವಾದ್ರೆ ಕಾರ್ಮಿಕರ ಕೊರತೆ ಎದುರಾಗಬಹುದು ಎಂಬ ಆತಂಕ ನಿರ್ಮಾಣವಾಗಿದೆ. ಊರುಗಳಿಗೆ ತೆರಳಿದರೆ ಹಿಂದಿರುಗಲು ಸಮಯ ಬೇಕಾಗುತ್ತೆ. ವಾಪಸ್ ಕರೆತರುವುದು ಮತ್ತೊಂದು ಕೆಲಸವಾಗಿಬಿಡುತ್ತದೆ. ಹಾಗಾಗಿ ಯಾರೂ ಊರಿಗೆ ಹೋಗಬಾರದು ಎಂದು ತಿಳಿಸಿದ್ದಾರೆ.

ಸಣ್ಣ ಕೈಗಾರಿಕೆಗಳು, ಕಟ್ಟಡ ನಿರ್ಮಾಣ, ರಸ್ತೆ ದುರಸ್ತಿ ಕೆಲಸಗಳಿಗೆ ಕಾರ್ಮಿಕರು ಸಿಗದೆ ಸಮಸ್ಯೆಯಾಗಬಹುದೆಂಬ ಆತಂಕವಿದೆ. ಜೊತೆಗೆ, ಕೊರೊನಾ ಕಾರಣಕ್ಕೆ ಕಾರ್ಮಿಕರು ಹಿಂದಿರುಗಲು ಹಿಂಜರಿಯಬಹುದು ಎಂಬ ಆತಂಕವೂ ನಿರ್ಮಾಣವಾಗಿದೆ. ಹೀಗಾಗಿ ಎಲ್ಲಾ ವಿಚಾರಗಳ ಬಗ್ಗೆ ಯೋಚಿಸಿರುವ ರಾಜ್ಯ ಸರ್ಕಾರವು ಮಾಧ್ಯಮ ಪ್ರಕಟಣೆ ಮೂಲಕ ಕಾರ್ಮಿಕರಿಗೆ ಮನವಿ ಮಾಡಿಕೊಳ್ಳಲಾಗಿದೆ.

Published On - 2:51 pm, Fri, 1 May 20