ತೋರಿಕೆಗೆ ಗಾಂಧಿ ಆದರ್ಶವನ್ನಿಟ್ಟುಕೊಂಡಿರುವ ಕಾಂಗ್ರೆಸ್​ನಿಂದ ದೇಶಕ್ಕೆ ದೊಡ್ಡ ಹಾನಿಯಾಗಿದೆ; ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಬೊಮ್ಮಾಯಿ ಟೀಕೆ

ಬಂಡವಾಳ ಶಾಹಿಗಳಿಗೆ ಪ್ರೋತ್ಸಾಹ ಕೊಟ್ಟವರೇ ಕಾಂಗ್ರೆಸ್​ನವರು. ಕಾಂಗ್ರೆಸ್ ದ್ವಂದ್ವದಿಂದ ದೇಶಕ್ಕೆ ದೊಡ್ಡ ಹಾನಿಯಾಗಿದೆ, ತುಂಬಲಾರದ ನಷ್ಟ ಉಂಟಾಗಿದೆ. ವಾಮ ಮಾರ್ಗದಿಂದ ಕುಟಿಲ ರಾಜಕಾರಣದಿಂದ ಬೇರೆ ಪಕ್ಷಗಳು ಯಶಸ್ವಿ ಆಗದಂತೆ ನೋಡಿಕೊಂಡಿದ್ದು ಕಾಂಗ್ರೆಸ್ ಎಂದು ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ತೋರಿಕೆಗೆ ಗಾಂಧಿ ಆದರ್ಶವನ್ನಿಟ್ಟುಕೊಂಡಿರುವ ಕಾಂಗ್ರೆಸ್​ನಿಂದ ದೇಶಕ್ಕೆ ದೊಡ್ಡ ಹಾನಿಯಾಗಿದೆ; ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಬೊಮ್ಮಾಯಿ ಟೀಕೆ
ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

ದಾವಣಗೆರೆ: ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಒಂದು ಸ್ವಾತಂತ್ರ್ಯ ಚಳುವಳಿ ಅಲೆ ಮೇಲೆ ರಾಜಕಾರಣ ಮಾಡಿತು. ಕಾಂಗ್ರೆಸ್​ಗೆ ವೈಚಾರಿಕತೆ ಇಲ್ಲ, ಸಿದ್ಧಾಂತ ಇಲ್ಲ, ದೇಶದ ಬಗ್ಗೆ ನಿಖರ ನಿರ್ಣಯ ಇಲ್ಲ. ಮಹಾತ್ಮ ಗಾಂಧಿ ಅದಕ್ಕಾಗಿಯೇ ಕಾಂಗ್ರೆಸ್ ವಿಸರ್ಜನೆ ಮಾಡಬೇಕು ಅಂದಿದ್ದರು. ಕಾಂಗ್ರೆಸ್ ಯಾವತ್ತೂ ತೋರಿಕೆಗೆ ಮಾತ್ರ ಗಾಂಧಿಯನ್ನು ಆದರ್ಶನವಾಗಿಟ್ಟುಕೊಂಡಿತು. ಸರ್ವಾಧಿಕಾರಿ ಆಗಿರುವ ಈ ಗಾಂಧಿ ಬೇರೆ, ಮೊದಲಿನ ಗಾಂಧಿ ಬೇರೆ. ಇಷ್ಟು ವರ್ಷಗಳ ಕಾಲ ದ್ವಂದ್ವದಲ್ಲಿ ನಮ್ಮ ದೇಶವನ್ನು ಆಳಿ, ದೇಶವನ್ನು ದ್ವಂದ್ವದಲ್ಲಿ ಇಟ್ಟು ಪ್ರಜಾಪ್ರಭುತ್ವ ಕಾಪಾಡದ ಕಾರಣ ಈಗ ನಾವು ಅದನ್ನು ಸ್ವಚ್ಛಗೊಳಿಸುವ ಕೆಲಸ ಮಾಡಬೇಕಾಗಿದೆ ಎಂದು ಕಾರ್ಯಕಾರಿಣಿ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಕಾರ್ಯಕಾರಿಣಿ ಉದ್ಘಾಟನಾ ಭಾಷಣ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ಬಿಜೆಪಿ ಅಧ್ಯಕ್ಷರಾಗಿ ಎರಡು ವರ್ಷ ಮುಗಿದಿದೆ. ಅವರು ಬಂದ ಮೇಲೆ ನಿಯಮಿತವಾಗಿ ಎರಡು ತಿಂಗಳಿಗೊಮ್ಮೆ ಕಾರ್ಯಕಾರಿಣಿ ನಡೆಸಿಕೊಂಡು ಬಂದಿದ್ದಾರೆ. ಒಳ್ಳೆಯ ಪರಂಪರೆ ಹಾಕಿದ್ದಕ್ಕಾಗಿ ಕಟೀಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವ ಯಶಸ್ವಿ ಆಗಬೇಕಾದರೆ ಪ್ರತಿಯೊಬ್ಬರು ಅದರಲ್ಲಿ ಪಾಲ್ಗೊಳ್ಳಲೇಬೇಕು. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ, ನಿಗದಿತ ಕಾಲದಲ್ಲಿ ಜನರ ಸಮಸ್ಯೆ ಚರ್ಚೆ ಮಾಡುವ ವೇದಿಕೆ ನಮ್ಮದು. ನಮ್ಮ ದೇಶದಲ್ಲಿ ರಾಜಕೀಯ ಪಕ್ಷಗಳ ಹಾದಿ ದೊಡ್ಡದು, ನಡತೆ ದೊಡ್ಡದಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಪ್ರತಿಯೊಂದು ಬೂತ್ ನಲ್ಲಿ ಕಾರ್ಯಕರ್ತರ ಮುಖಂಡರು ಇರುವ ಪಕ್ಷ ಬಿಜೆಪಿ ಎಂದಿದ್ದಾರೆ.

ಬಂಡವಾಳ ಶಾಹಿಗಳಿಗೆ ಪ್ರೋತ್ಸಾಹ ಕೊಟ್ಟವರೇ ಕಾಂಗ್ರೆಸ್​ನವರು. ಕಾಂಗ್ರೆಸ್ ದ್ವಂದ್ವದಿಂದ ದೇಶಕ್ಕೆ ದೊಡ್ಡ ಹಾನಿಯಾಗಿದೆ, ತುಂಬಲಾರದ ನಷ್ಟ ಉಂಟಾಗಿದೆ. ವಾಮ ಮಾರ್ಗದಿಂದ ಕುಟಿಲ ರಾಜಕಾರಣದಿಂದ ಬೇರೆ ಪಕ್ಷಗಳು ಯಶಸ್ವಿ ಆಗದಂತೆ ನೋಡಿಕೊಂಡಿದ್ದು ಕಾಂಗ್ರೆಸ್. ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ದೂ ಅವರೇ, ಖಾಸಗೀಕರಣ ಮಾಡಿದ್ದು ಅವರೇ. ಈ ಕಾರಣಕ್ಕಾಗಿಯೇ ದ್ವಂದ್ವದಿಂದ ದೇಶವನ್ನು ಪಾರು ಮಾಡಲು ಬಿಜೆಪಿಯನ್ನು ಹುಟ್ಟು ಹಾಕಲಾಯಿತು. ದೇಶದ ಬಹುಸಂಖ್ಯಾತ ಭಾವನೆಗಳಿಗೆ ಸ್ಪಂದಿಸುವ, ತುಷ್ಟೀಕರದಿಂದ ಮುಕ್ತಿ ನೀಡಲು ಬಿಜೆಪಿ ಹುಟ್ಟಿದೆ. ಹೀಗಾಗಿ ದೇಶಭಕ್ತಿ ವೈಚಾರಿಕತೆ ಸಿದ್ದಾಂತದ ಆಧಾರದ ಮೇಲೆ ಬಿಜೆಪಿ ಹುಟ್ಟಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಬಿಜೆಪಿ ಜನರ ನಾಡಿಮಿಡಿತ, ಸಮಸ್ಯೆ ಕೈಗೆತ್ತಿಕೊಂಡು ಜನಪರ ಆಡಳಿತ ನೀಡದ್ದಕ್ಕಾಗಿ ಬಿಜೆಪಿ ಇಷ್ಟು ದೊಡ್ಡಮಟ್ಟದಲ್ಲಿ ಬೆಳೆದಿದೆ. ಪ್ರಜಾಪ್ರಭುತ್ವ ಯಶಸ್ವಿ ಗೆ ಸಂಘಟನೆ ಬಹಳ‌ ಮುಖ್ಯ. ವೈಚಾರಿಕತೆ ಜನರ ಮನಸ್ಸಿಗೆ ಮುಟ್ಟುವಂತ ಕೆಲಸ ಮಾಡುವ ನಾಯಕತ್ವ ಮುಖ್ಯ. ನರೇಂದ್ರ ಮೋದಿ ನಮಗೆ ನಾಯಕರಾಗಿ ದೊರಕಿದ್ದಾರೆ. ಇಡೀ ವಿಶ್ವದಲ್ಲಿ ದೊಡ್ಡ ಪಕ್ಷವಾಗಿ ನಾವು ಹೊರಹೊಮ್ಮಿದ್ದೇವೆ. ಪರಿಪಕ್ವವಾದ ನಾಯಕತ್ವ ಇದ್ರೆ ಅದು ಬಿಜೆಪಿಯಲ್ಲಿ ಮಾತ್ರ ಎನ್ನೋದು ಜನಜನಿತ. ಪ್ರಾದೇಶಿಕ ನಾಯಕತ್ವಕ್ಕೆ ಮನ್ನಣೆ ಕೊಟ್ಟಿರುವ ಪಕ್ಷ ಬಿಜೆಪಿ. ಜನರ ಭಾವನೆಗಳಿಗೆ ನಾಯಕತ್ವ ಕೊಡಬೇಕು ಅಂತ ಪ್ರಾದೇಶಿಕ ನಾಯಕತ್ವಕ್ಕೂ ಮನ್ನಣೆ ನೀಡಿದೆ. ಅದಕ್ಕೆ ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪನವರೇ ಸಾಕ್ಷಿ. ಈ ಕೆಲಸ ಕಾಂಗ್ರೆಸ್ ಪಕ್ಷದ ಕೈಲಿ ಆಗಿಲ್ಲದ ಕಾರಣ ಪ್ರಾದೇಶಿಕ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ದೇಗುಲ ತೆರವು ಘಟನೆ ನಡೆದ ಬಳಿಕ ಹಲವರ ಬಳಿ ಚರ್ಚೆ ಮಾಡಿದ್ದೇನೆ. ಕಾನೂನು ತೊಡಕಿನ ಮಧ್ಯೆಯೂ ಶಾಂತಿ‌ ಕದಡುವ ಕೆಲಸಕ್ಕೆ ಇತಿಶ್ರೀ ಹಾಡುವ ಕೆಲಸವಾಗುತ್ತಿದೆ. ಆ ಭಾಗದ ಜನರ ಭಾವನೆಗೆ ಸ್ಪಂದಿಸುವ ಕೆಲಸ ಮಾಡುವೆ. ಈ ಸರ್ಕಾರ ನಮ್ಮ ಕಾರ್ಯಕರ್ತರದ್ದು. ಕಾರ್ಯಕರ್ತರ ಭಾವನೆ ನಮಗೆ ಅರ್ಥವಾಗುತ್ತದೆ. ಅವರ ಭಾವನೆಗೆ ಬೆಲೆ ಕೊಡುವ ನಿರ್ಣಯ ತೆಗೆದುಕೊಳ್ತೇವೆ ಎಂದು ಕಾರ್ಯಕಾರಿಣಿ ಉದ್ದೇಶಿಸಿ ಸಿಎಂ ಬೊಮ್ಮಾಯಿ ಭಾಷಣ ಮಾಡಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ; ಮೂರು ಪ್ರಮುಖ ನಿರ್ಣಯ ಸಾಧ್ಯತೆ

(Karnataka CM Basavaraj Bommai Angry on Congress Dictatorship in Davanagere BJP Core Committee Meeting)

Read Full Article

Click on your DTH Provider to Add TV9 Kannada