ಜೂನ್ ತಿಂಗಳಲ್ಲಿ ರಾಜ್ಯದ 60 ಲಕ್ಷಕ್ಕೂ ಹೆಚ್ಚು ಜನರಿಗೆ ಕೊವಿಡ್ ಲಸಿಕೆ ವಿತರಿಸಲು ಸಿದ್ಧತೆ: ಸಿಎಂ ಯಡಿಯೂರಪ್ಪ

| Updated By: guruganesh bhat

Updated on: Jun 03, 2021 | 3:25 PM

ಈವರೆಗೆ ಕರ್ನಾಟಕದ ಒಟ್ಟು 1.41 ಕೋಟಿ ಜನರಿಗೆ ಕೊವಿಡ್ ಲಸಿಕೆ ಹಾಕಲಾಗಿದೆ.ಜೂನ್ ತಿಂಗಳ ಅಂತ್ಯಕ್ಕೆ 2 ಕೋಟಿ ಜನರಿಗೆ ಲಸಿಕೆ ವಿತರಣೆ ಮುಗಿದಿರಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಜೂನ್ ತಿಂಗಳಲ್ಲಿ ರಾಜ್ಯದ 60 ಲಕ್ಷಕ್ಕೂ ಹೆಚ್ಚು ಜನರಿಗೆ ಕೊವಿಡ್ ಲಸಿಕೆ ವಿತರಿಸಲು ಸಿದ್ಧತೆ: ಸಿಎಂ ಯಡಿಯೂರಪ್ಪ
Follow us on

ಬೆಂಗಳೂರು: ಜೂನ್‌ ತಿಂಗಳಲ್ಲಿ ಕರ್ನಾಟಕದಲ್ಲಿ 60 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ವಿತರಣೆ ಮಾಡಲು ಸಿದ್ಧತೆ ನಡೆದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಈವರೆಗೆ ಕರ್ನಾಟಕದ ಒಟ್ಟು 1.41 ಕೋಟಿ ಜನರಿಗೆ ಕೊವಿಡ್ ಲಸಿಕೆ ಹಾಕಲಾಗಿದೆ.ಜೂನ್ ತಿಂಗಳ ಅಂತ್ಯಕ್ಕೆ 2 ಕೋಟಿ ಜನರಿಗೆ ಲಸಿಕೆ ವಿತರಣೆ ಮುಗಿದಿರಲಿದೆ ಎಂದು ತಿಳಿಸಿರುವ ಅವರು, ಲಸಿಕೆ ಅಭಿಯಾನಕ್ಕೆ ಸಹಕರಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಜೂನ್ ತಿಂಗಳಲ್ಲಿ ಲಸಿಕೆ ವಿತರಣೆ ಬಗ್ಗೆ ತಮ್ಮ ಟ್ವೀಟ್ ಮೂಲಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್​ಗೆ ಸಿಎಂ ಯಡಿಯೂರಪ್ಪ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ. ಇಂದು ಮಧ್ಯಾಹ್ನ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಲಸಿಕೆ ಹಂಚಿಕೆ ವಿವರದ ಜೊತೆಗೆ ರಾಜ್ಯ ಸರ್ಕಾರದ ಜವಾಬ್ದಾರಿ ಕುರಿತಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ವೀಟ್ ಮಾಡಿದ್ದರು. ಇದೀಗ ರಾಜ್ಯದಲ್ಲಿ ಲಸಿಕಾಕರಣಕ್ಕೆ ಮಾಡಿಕೊಂಡಿರುವ ಸಿದ್ಧತೆ ಬಗ್ಗೆ ಟ್ವೀಟ್ ಮಾಡಿ ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ.

ರಾಜಧಾನಿಯಲ್ಲಿ ಮುಂಗಾರು ವಿಕೋಪ ತಡೆಯಲು ಪೂರ್ವಸಿದ್ಧತೆ ಪರಿಶೀಲನೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಂಗಳೂರು ನಗರದಲ್ಲಿ ಮಳೆ ವಿಕೋಪ ತಡೆಯಲು ಕೈಗೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.ಬಿಬಿಎಂಪಿಯ 8 ವಲಯಗಳಲ್ಲಿ ಶಾಶ್ವತ ನಿಯಂತ್ರಣ ಕೊಠಡಿಗಳಿದ್ದು, 63 ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ದಿನದ 24 ಗಂಟೆಯೂ ಈ ನಿಯಂತ್ರಣ ಕೊಠಡಿಗಳು ಕಾರ್ಯನಿರ್ವಹಿಸಲಿದ್ದು, ಅನ್-ಸ್ಕಿಲ್ಡ್ ಕೂಲಿಗಳು, ಮೇಲ್ವಿಚಾರಕರು, ಮತ್ತು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಅಗತ್ಯ ಸಲಕರಣೆಗಳನ್ನು ಸಂಗ್ರಹಿಸಲು ಕ್ರಮ ವಹಿಸಲಾಗುತ್ತಿದೆ.

ರಸ್ತೆ ಬದಿ ಮಳೆ ನೀರು ಚರಂಡಿಗಳ ಹೂಳು ತೆರವುಗೊಳಿಸುವುದು, ಅಡ್ಡ ಮೋರಿಗಳ ಹೂಳು ತೆಗೆಯುವುದು, ರಾಜ ಕಾಲುವೆಗೆ ಸಂಪರ್ಕಿಸುವ ಚರಂಡಿಗಳನ್ನು ಗುರುತಿಸಿ ಸುಸ್ಥಿತಿಯಲ್ಲಿಡಲು ಕ್ರಮ ವಹಿಸಲಾಗಿದೆ. ದೊಡ್ಡ ಕಾಲುವೆಗಳಲ್ಲಿ 26 ವಾಟರ್ ಲೆವೆಲ್ ಸೆನ್ಸರ್ ಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: PU Exams 2021: ಜುಲೈ 7ರಿಂದ ಪಿಯು ಪರೀಕ್ಷೆ ಎಂದು ಡಿಸಿಎಂ ಅಶ್ವತ್ಥ್​ ನಾರಾಯಣ ಹೆಸರಲ್ಲಿ ಮಾಡಲಾದ ಟ್ವೀಟ್ ಸುಳ್ಳು; ನಂಬಬೇಡಿ ಎಂದು ಸಚಿವರ ಮನವಿ

ಸೆರಮ್, ಭಾರತ್ ಬಯೋಟೆಕ್ ನಂತರ ಕೊವಿಡ್ ಲಸಿಕೆ ತಯಾರಿಸಲಿದೆ ಬಯೋಲಾಜಿಕಲ್ ಇ; ಹೇಗಿದೆ ಸಿದ್ಧತೆ?

(Karnataka CM BS Yediyurappa tweets will distribute covid vaccine to more than 60 lakh people in June month)

Published On - 3:23 pm, Thu, 3 June 21