PU Exams 2021: ಜುಲೈ 7ರಿಂದ ಪಿಯು ಪರೀಕ್ಷೆ ಎಂದು ಡಿಸಿಎಂ ಅಶ್ವತ್ಥ್​ ನಾರಾಯಣ ಹೆಸರಲ್ಲಿ ಮಾಡಲಾದ ಟ್ವೀಟ್ ಸುಳ್ಳು; ನಂಬಬೇಡಿ ಎಂದು ಸಚಿವರ ಮನವಿ

ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಹರಿದಾಡುತ್ತಿರುವ ಯಾವುದೇ ಹೇಳಿಕೆಗಳು ಸತ್ಯಕ್ಕೆ ದೂರ. ಅಂತಹ ಯಾವುದೇ ಸುಳ್ಳು ಸಂದೇಶವನ್ನು ಫಾರ್ವರ್ಡ್ ಮಾಡಬೇಡ ಎಂದು ಡಿಸಿಎಂ ಡಾ.ಅಶ್ವತ್ಥ್​ ನಾರಾಯಣ ಪ್ರತ್ಯೇಕ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

PU Exams 2021: ಜುಲೈ 7ರಿಂದ ಪಿಯು ಪರೀಕ್ಷೆ ಎಂದು ಡಿಸಿಎಂ ಅಶ್ವತ್ಥ್​ ನಾರಾಯಣ ಹೆಸರಲ್ಲಿ ಮಾಡಲಾದ ಟ್ವೀಟ್ ಸುಳ್ಳು; ನಂಬಬೇಡಿ ಎಂದು ಸಚಿವರ ಮನವಿ
ನಕಲಿ ಟ್ವೀಟ್
Follow us
TV9 Web
| Updated By: guruganesh bhat

Updated on:Jun 03, 2021 | 2:40 PM

ಬೆಂಗಳೂರು: ಉಪ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್‌ ನಾರಾಯಣ ಅವರ ಹೆಸರಲ್ಲಿ ಕಿಡಿಗೇಡಿಗಳು ಜುಲೈ 7ರಿಂದ ಪಿಯು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ನಕಲಿ ಟ್ವೀಟ್ ಮಾಡಿದ್ದಾರೆ. ಈ ಕುರಿತು ಸ್ವತಃ ಡಿಸಿಎಂ ಡಾ.ಅಶ್ವತ್ಥ್​ ನಾರಾಯಣ ಅವರೇ ಸ್ಪಷ್ಟನೆ ನೀಡಿದ್ದು, ಇದು ನಕಲಿ ಟ್ವೀಟ್ ಆಗಿದ್ದು, ಕಿಡಿಗೇಡಿಗಳು ನಕಲಿ ಟ್ವೀಟ್ ಮಾಡಿದ್ದಾರೆ. ಪಿಯು ಪರೀಕ್ಷೆ ಕುರಿತು ನಾನು ಯಾವುದೇ ನಿರ್ಧಾರ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜುಲೈ 7 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆಯನ್ನು ಎರಡು ಗಂಟೆಗಳ ಅವಧಿಗೆ ಇಳಿಸಲಾಗಿದೆ ಎಂದು ಟ್ವೀಟ್ ಮಾಡಲಾಗಿದ್ದು, ಇದು ಡಿಸಿಎಂ ಡಾ.ಅಶ್ವತ್ಥ್​ ನಾರಾಯಣ ಎಂಬ ಖಾತೆಯಿಂದ ಟ್ವೀಟ್ ಆಗಿದೆ. ಆದರೆ ಈ ಟ್ವಿಟರ್​ ಅಕೌಂಟ್ ಡಾ.ಅಶ್ವತ್ಥ್‌ ನಾರಾಯಣ ಅವರ ಅಧಿಕೃತ ಖಾತೆಯಲ್ಲ. ನಕಲಿ ಖಾತೆ ಸೃಷ್ಟಿಸಿ ಈ ಟ್ವೀಟ್ ಮಾಡಲಾಗಿದ್ದು ವಿದ್ಯಾರ್ಥಿಗಳೂ, ಪಾಲಕರು ಈ ವದಂತಿಯನ್ನು ನಂಬುಗ ಅಗತ್ಯವಿಲ್ಲ ಎಂದು ಡಿಸಿಎಂ ಅಶ್ವತ್ಥ್​ ನಾರಾಯಣ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಪರೀಕ್ಷೆಯನ್ನು ನಡೆಸುವ ಬಗ್ಗೆ ಯಾವುದೇ ಸಭೆಗಳು ಅಥವಾ ಚರ್ಚೆಗಳಲ್ಲಿ ನಾನು ಭಾಗವಹಿಸಿಲ್ಲ. ಸಂಬಂಧಪಟ್ಟ ಇಲಾಖೆ ಈ ಕುರಿತು ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಹರಿದಾಡುತ್ತಿರುವ ಯಾವುದೇ ಹೇಳಿಕೆಗಳು ಸತ್ಯಕ್ಕೆ ದೂರ. ಅಂತಹ ಯಾವುದೇ ಸುಳ್ಳು ಸಂದೇಶವನ್ನು ಫಾರ್ವರ್ಡ್ ಮಾಡಬೇಡ ಎಂದು ಡಿಸಿಎಂ ಡಾ.ಅಶ್ವತ್ಥ್​ ನಾರಾಯಣ ಪ್ರತ್ಯೇಕ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ:  ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧವಾಗುತ್ತಿದೆ ಎರಡು ಪರ್ಯಾಯ ಮಾರ್ಗ; ಕಾಲೇಜು ಹಂತದಲ್ಲೇ ಬಹು ಆಯ್ಕೆ ಪ್ರಶ್ನೆಗಳನ್ನು ನೀಡಿ ಪರೀಕ್ಷೆ ನಡೆಸಲು ಸಲಹೆ

ಕೊರೊನಾ ವೈರಸ್ ಹುಟ್ಟಿನ ಬಗ್ಗೆ ಮತ್ತೊಮ್ಮೆ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂದ ಡಬ್ಲ್ಯೂಹೆಚ್​ಒ, ಹಾಲೆಂಡ್​ನಲ್ಲಿ ನಡೆಯಲಿದೆ ಟೆಸ್ಟಿಂಗ್

(False tweet about PU Exams starts from July 7 in the name of Karnataka DCM Ashwath Narayan)

Published On - 2:36 pm, Thu, 3 June 21