ಮೀನು ಕೃಷಿಗೆ ಕೈ ಹಾಕಿ ಯಶಸ್ವಿಯಾದ ಕೊಡಗು ರೈತ; ಗ್ರಾಹಕರ ಎದುರೇ ಹಿಡಿದು ತಾಜಾ ಮೀನು ಮಾರಾಟ

ತೇಜಸ್ ನಾಣಯ್ಯ, ರಾಷ್ಟ್ರಮಟ್ಟದ ಕೃಷಿ ಪಂಡಿತ ಪುರಸ್ಕೃತರು. ಸಾಮಾನ್ಯವಾಗಿ ಕೊಡಗು ಜಿಲ್ಲೆಯ ವಾತಾವರಣ ಮೀನು ಕೃಷಿಗೆ ಅಷ್ಟೊಂದು ಪೂರಕವಾಗಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಮೀನು ಕೃಷಿ ಅಷ್ಟಕಷ್ಟೆ. ಆದರೆ ತೇಜಸ್ ನಾಣಯ್ಯ ಮಾತ್ರ ಈ ಕೃಷಿಯನ್ನು ಸವಾಲಾಗಿ ಸ್ವೀಕರಿಸಿ ಇಂದು ಸಾವಿರಾರು ಮೀನುಗಳನ್ನು ಸಾಕಿದ್ದಾರೆ.

ಮೀನು ಕೃಷಿಗೆ ಕೈ ಹಾಕಿ ಯಶಸ್ವಿಯಾದ ಕೊಡಗು ರೈತ; ಗ್ರಾಹಕರ ಎದುರೇ ಹಿಡಿದು ತಾಜಾ ಮೀನು ಮಾರಾಟ
ತಾಜಾ ಮೀನು, ಮೀನು ಸಾಕಿದ ಕೆರೆ
Follow us
TV9 Web
| Updated By: sandhya thejappa

Updated on: Jun 03, 2021 | 2:08 PM

ಕೊಡಗು: ಕೊಡಗಿನ ಕಾಫಿ ಉದ್ಯಮ ಕಳೆದ ಹಲವು ವರ್ಷಗಳಿಂದ ಕುಸಿತ ಕಾಣುತ್ತಿದೆ. ಇದರ ಜೊತೆಗೆ ಪ್ರಾಕೃತಿಕ ವಿಕೋಪವೂ ಇಲ್ಲಿನ ಜನರನ್ನು ಕಂಗೆಡಿಸಿದೆ. ಆದರೆ ಜಿಲ್ಲೆಯ ರೈತರೊಬ್ಬರು ಕೇವಲ ಕಾಫಿ, ಕಾಳು ಮೆಣಸನ್ನು ಮಾತ್ರ ನೆಚ್ಚಿಕೊಳ್ಳದೆ ಪರ್ಯಾಯ ಕೃಷಿಯೊಂದನ್ನು ಮಾಡಿ ಯಶಸ್ವಿ ಕೃಷಿಕರಾಗಿದ್ದಾರೆ. ತೇಜಸ್ ನಾಣಯ್ಯ ಎಂಬ ರೈತ ವೃತ್ತಿಪರ ವ್ಯಾಪಾರಿಯಲ್ಲ. ಆದರೆ ವೃತ್ತಿಪರ ಮೀನು ಕೃಷಿಕರು. ಕಳೆದ ಲಾಕ್​​ಡೌನ್​ ಅವಧಿಯಲ್ಲಿ ಮೀನು ಕೃಷಿಗೆ ಕೈ ಹಾಕಿ ಯಶಸ್ವಿಯಾಗಿ ದಿನಕ್ಕೆ ನೂರಾರು ಕೆ.ಜಿ ಮೀನು ಮಾರಾಟ ಮಾಡಿ ಲಕ್ಷಾಂತರ ರೂ. ಆದಾಯಗಳಿಸುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ಆದಾಯಗಳಿಸುತ್ತಿರುವ ತೇಜಸ್ ನಾಣಯ್ಯ, ರಾಷ್ಟ್ರಮಟ್ಟದ ಕೃಷಿ ಪಂಡಿತ ಪುರಸ್ಕೃತರು. ಸಾಮಾನ್ಯವಾಗಿ ಕೊಡಗು ಜಿಲ್ಲೆಯ ವಾತಾವರಣ ಮೀನು ಕೃಷಿಗೆ ಅಷ್ಟೊಂದು ಪೂರಕವಾಗಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಮೀನು ಕೃಷಿ ಅಷ್ಟಕಷ್ಟೆ. ಆದರೆ ತೇಜಸ್ ನಾಣಯ್ಯ ಮಾತ್ರ ಈ ಕೃಷಿಯನ್ನು ಸವಾಲಾಗಿ ಸ್ವೀಕರಿಸಿ ಇಂದು ಸಾವಿರಾರು ಮೀನುಗಳನ್ನು ಸಾಕಿದ್ದಾರೆ. ಲಾಕ್​ಡೌನ್​ ರಿಲೀಫ್ ಅವಧಿಯಲ್ಲಿ ಗ್ರಾಹಕರ ಎದುರೇ ಮೀನು ಹಿಡಿದು ಜೀವಂತ ತಾಜಾ ಮೀನು ಮಾರಾಟ ಮಾಡಿ ಭರ್ಜರಿ ಲಾಭ ಗಳಿಸುತ್ತಿದ್ದಾರೆ.

ಲಾಕ್​ಡೌನ್​ ಅವಧಿಯಲ್ಲಿ ನಗರಗಳಿಗೆ ತೆರಳಿ ಮೀನು ಖರೀದಿಸುವುದು ಕಷ್ಟವೇ. ಅಲ್ಲದೆ ಫ್ರೆಶ್ ಮೀನು ಕೂಡ ಸಿಗುವುದಿಲ್ಲ. ಹಾಗಾಗಿ ತಮ್ಮೂರಲ್ಲೇ ತಾಜಾ ಮೀನು ಸಿಗುತ್ತಿರುವುದು ಸ್ಥಳೀಯರಿಗೂ ಅನುಕೂಲ ಕಲ್ಪಿಸಿದೆ. ತಾಜಾ ಕೆರೆ ಮೀನು ಆರೋಗ್ಯಕ್ಕೂ ಒಳ್ಳೆಯದ್ದು ಮತ್ತು ರುಚಿಕರವೂ ಹೌದು. ಸ್ಥಳೀಯರು ಮಾತ್ರವಲ್ಲ ಮುಖ್ಯ ರಸ್ತೆಯಲ್ಲಿ ತೆರಳುವವರೂ ಕೂಡ ಇಲ್ಲಿಗೆ ಆಗಮಿಸಿ ಒಂದು ಕೆ.ಜಿಯ ಜಾಗದಲ್ಲಿ ಎರಡು ಕೆ.ಜಿ ಖರೀದಿಸಿ ಕೊಂಡೊಯ್ಯುತ್ತಾರೆ.

ಕೃಷಿ ಪಂಡಿತ ತೇಜಸ್ ಸುಮಾರು ಐದು ಏಕರೆ ಪ್ರದೇಶದಲ್ಲಿ ಏಳು ಕೆರೆಗಳನ್ನು ಹೊಂದಿದ್ದಾರೆ. ಕಳೆದೊಂದು ವರ್ಷದಿಂದ ಮೀನು ಕೃಷಿಯಲ್ಲಿ ಯಸ್ವಿಯಾಗಿದ್ದಾರೆ. ಕಾಫಿ ಬೆಲೆ ಕುಸಿತ, ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಕೊಡಗಿನ ಜನರಿಗೆ ಮೀನು ಕೃಷಿ ಅತ್ಯುತ್ತಮ ಆದಾಯದ ಮಾರ್ಗವೂ ಹೌದು ಎಂದು ತೇಜಸ್ ತಿಳಿಸಿದರು.

ಇದನ್ನೂ ಓದಿ

ಬಳ್ಳಾರಿ: ದುಪ್ಪಟ್ಟು ದರಕ್ಕೆ ಮೆಣಸಿನಕಾಯಿ ಬೀಜ ವ್ಯಾಪಾರ; ರೈತರು ಕಂಗಾಲು

ಲಾಕ್​ಡೌನ್​ ಎಫೆಕ್ಟ್: ಐದು ಎಕರೆ ಹಸಿ ಮೆಣಸಿನಕಾಯಿ ಬೆಳೆಯನ್ನು ಹಾಳು ಮಾಡಿದ ಹಾವೇರಿ ರೈತ

(Kodagu farmer has succeeded in fish farming and getting more income)

ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ