ಕೊರೊನಾ ಗೆದ್ದ ಅಜ್ಜಿ; ಕೊರೊನಾ ಮಣಿಸುವ ಮೂಲಕ ಅಚ್ಚರಿ ಮೂಡಿಸಿದ 108 ವರ್ಷದ ಶತಾಯುಷಿ ಅಜ್ಜಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಸರ್ಕಾರಿ ಕೊವಿಡ್ ಆಸ್ವತ್ರೆಯಲ್ಲಿ ಇಂದು ಸಂಭ್ರಮದ ವಾತಾವರಣ ಕಂಡು ಬಂದಿದೆ. ಏಕೆಂದರೆ ತಾಲೂಕಿನ ಬುಳ್ಳಹಳ್ಳಿ ಗ್ರಾಮದ ಶತಾಯುಷಿ 108 ವರ್ಷದ ಅಕ್ಕಾಯಮ್ಮ ಎಂಬ ವೃದ್ದೆ ಕೊರೊನಾವನ್ನು ಮಣಿಸಿ ಗೆದ್ದಿದ್ದಾರೆ.
ದೇವನಹಳ್ಳಿ: ಕೊರೊನಾ ಮಹಾಮಾರಿ ವೃದ್ಧರು ಯುವಕರು ಅನ್ನದೆ ಸಾಕಷ್ಟು ಜನರನ್ನ ತನ್ನ ಬಲಿಪಡೆದುಕೊಳ್ಳುತ್ತಿದೆ. ಆದರೆ ಇದರ ನಡುವೆ ಒಂದು ಸಂತೋಷ ಸುದ್ದಿ ಹೊರ ಬಿದ್ದಿದೆ. ಇಲ್ಲೊಂದು ಸಂಪೂರ್ಣ ಕುಟುಂಬದ ಜೊತೆಗೆ 108 ವರ್ಷದ ಶತಾಯುಷಿ ಅಜ್ಜಿ ಕೊರೊನಾ ಗೆದ್ದು ಬರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಸರ್ಕಾರಿ ಕೊವಿಡ್ ಆಸ್ವತ್ರೆಯಲ್ಲಿ ಇಂದು ಸಂಭ್ರಮದ ವಾತಾವರಣ ಕಂಡು ಬಂದಿದೆ. ಏಕೆಂದರೆ ತಾಲೂಕಿನ ಬುಳ್ಳಹಳ್ಳಿ ಗ್ರಾಮದ ಶತಾಯುಷಿ 108 ವರ್ಷದ ಅಕ್ಕಾಯಮ್ಮ ಎಂಬ ವೃದ್ದೆ ಕೊರೊನಾವನ್ನು ಮಣಿಸಿ ಗೆದ್ದಿದ್ದಾರೆ. ಹೀಗಾಗಿ ಶತಾಯುಷಿ ಅಜ್ಜಿಗೆ ಶುಭ ಕೂರುವ ಮೂಲಕ ಬೀಳ್ಕೂಡುಗೆ ಕೊಟ್ಟು ಆಸ್ಪತ್ರೆ ಸಿಬ್ಬಂದಿ ಡಿಸ್ಚಾರ್ಜ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಅಕ್ಕಾಯಮ್ಮರಿಗೆ ಪಾಸಿಟಿವ್ ಬಂದಿತ್ತು. ಹೀಗಾಗಿ ಅವರನ್ನು ದೇವನಹಳ್ಳಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ಸೇರಿಸಿ ಕೊರೊನಾಗೆ ಚಿಕಿತ್ಸೆ ಕೊಡಿಸಲಾಗಿತ್ತು. ಸತತ 15 ದಿನಗಳ ಕಾಲ ಚಿಕಿತ್ಸೆ ಪಡೆದ ಅಕ್ಕಾಯಮ್ಮ ಇಂದು ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು ಕೊರೊನಾವನ್ನ ಮಣಿಸಿ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ವತ್ರೆ ವೈದ್ಯರು ಸಿಬ್ಬಂದಿ ಸೇರಿದಂತೆ ತಾಲೂಕು ಆರೋಗ್ಯಾಧಿಕಾರಿ ಶತಾಯುಷಿ ಅಜ್ಜಿಗೆ ಆತ್ಮೀಯವಾಗಿ ಬೀಳ್ಕೂಡುಗೆ ನೀಡುವ ಮೂಲಕ ಆಸ್ವತ್ರೆಯಿಂದ ಮನೆಗೆ ಕಳಿಸಿಕೊಟ್ಟಿದ್ದಾರೆ.
ಶತಾಯುಷಿ ಅಕ್ಕಾಯಮ್ಮ ಕುಟುಂಬದಲ್ಲಿ ನಾಲ್ವರಿಗೆ ಕಳೆದ ತಿಂಗಳು ಕೊರೊನಾ ಪಾಸಿಟಿವ್ ಬಂದಿದ್ದು ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಿದಾಗ ಶತಾಯುಷಿ ವೃದ್ದೆಗೂ ಪಾಸಿಟಿವ್ ಬಂದಿತ್ತು. ಹೀಗಾಗಿ ಕಳೆದ ತಿಂಗಳು 22 ರಂದು ಆಸ್ವತ್ರೆಗೆ ದಾಖಲಿಸಿದ್ದ ಕುಟುಂಬಸ್ಥರು ಸೇರಿದಂತೆ ಗ್ರಾಮಸ್ಥರಿಗೂ ಅಜ್ಜಿಗೆ ವಯ್ಯಸ್ಸಾಗಿರೂ ಕಾರಣ ಏನಾಗುತ್ತೋ ಎನ್ನುವ ಆತಂಕದಲ್ಲಿದ್ದರು. ಆದ್ರೆ ಇದೀಗ ಶತಾಯುಷಿ ವೃದ್ದೆ 15 ದಿನಗಳಲ್ಲೇ ಸಂಪೂರ್ಣ ಗುಣಮುಖಳಾರಾಗಿ ವಾಪಸ್ ಗ್ರಾಮಕ್ಕೆ ತೆರಳಿರುವುದು ಎಲ್ಲರ ಸಂತಸಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕೊರೊನಾ ಗೆದ್ದ ಬಳ್ಳಾರಿಯ ಶತಾಯುಷಿ ದಂಪತಿ; ಹದಿನೈದು ದಿನಗಳಲ್ಲಿ ಕೊವಿಡ್ನಿಂದ ಗುಣಮುಖ