ಕೊಪ್ಪಳದಲ್ಲಿ ಕಾಡುತ್ತಿದೆ ಮಕ್ಕಳ ವೈದ್ಯರ ಕೊರತೆ: ಸರ್ಕಾರಕ್ಕೆ ಸ್ಥಳೀಯರ ಆಗ್ರಹ
ಕೊಪ್ಪಳ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆ. ಜಿಲ್ಲೆಯಲ್ಲಿ ಸದ್ಯ ಕೊರೊನಾ ಆರ್ಭಟ ಜೋರಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಕಡಿಮೆಯಾದರೂ ಸಾವಿನ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ನಿತ್ಯ ಹತ್ತು ಜನ ಕೊರೊನಾಗೆ ಬಲಿಯಾಗುತ್ತಿದ್ದಾರೆ.
ಕೊಪ್ಪಳ: ಕೊರೊನಾ ಎರಡನೇ ಅಲೆ ನಿಧಾನವಾಗಿ ಕಮ್ಮಿಯಾಗುತ್ತಿದೆ. ಎರಡನೇ ಅಲೆ ಬಳಿಕ ಮೂರನೇ ಅಲೆಯಲ್ಲಿ ಮಕ್ಕಳಿಗೆ ಗಂಡಾಂತರ ಕಾದಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಕುರಿತು ಸಲಹಾ ಸಮಿತಿ ವರದಿ ಕೊಟ್ಟಿದೆ. ಮಕ್ಕಳ ಮೇಲೆ ಮಾಹಾಮಾರಿ ಸವಾರಿ ಮಾಡುವ ಮೊದಲು ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ. ರಾಜ್ಯದಲ್ಲಿ ಮಕ್ಕಳ ವೈದ್ಯರ ಕೊರತೆ ಇದೆ. ಅದರಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳ ವೈದ್ಯರ ಕೊರತೆ ಇದೆ ಎನ್ನುವುದನ್ನು ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ.
ಕೊಪ್ಪಳ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆ. ಜಿಲ್ಲೆಯಲ್ಲಿ ಸದ್ಯ ಕೊರೊನಾ ಆರ್ಭಟ ಜೋರಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಕಡಿಮೆಯಾದರೂ ಸಾವಿನ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ನಿತ್ಯ ಹತ್ತು ಜನ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಕಳೆದ ಒಂದು ವಾರದ ಹಿಂದೆ ನಿತ್ಯ 600 ರಿಂದ 700 ಕೊರೊನಾ ಪ್ರಕರಣಗಳು ಬರುತ್ತಿದ್ದವು. ಆದರೆ ಸದ್ಯ ನಿತ್ಯ 200 ರಿಂದ 300 ಪಾಸಿಟಿವ್ ಕೇಸ್ಗಳು ಬರುತ್ತಿವೆ. ಆದರೆ ಜಿಲ್ಲೆಯ ಜನರಲ್ಲಿ ಮೂರನೇ ಅಲೆಯ ಭೀತಿ ಶುರುವಾಗಿದೆ. ಮಕ್ಕಳಿಗೆ ಕೊರೊನಾ ಬಂದರೆ ದೊಡ್ಡ ಅವರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಜಿಲ್ಲೆಯಲ್ಲಿ ಹೆಚ್ಚಿದೆ. ಕಾರಣ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಇರೋದು ಕೇವಲ ಒಬ್ಬ ವೈದ್ಯ ಮಾತ್ರ. ಜಿಲ್ಲೆಯಲ್ಲಿ ಮಕ್ಕಳ ತಜ್ಞ ವೈದ್ಯರೇ ಇಲ್ಲ. ಹೀಗಾಗಿ ಮಕ್ಕಳಿಗೆ ಕೊರೊನಾ ಬಂದರೆ ಅವರನ್ನು ನೋಡುವವರು ಯಾರೂ ಎನ್ನುವ ಪ್ರಶ್ನೆ ಮೂಡಿದೆ.
ಈಗಾಗಲೇ ಎರಡನೇ ಅಲೆಯಲ್ಲಿ ಸುಮಾರು 1,600 ಜನ ಮಕ್ಕಳಿಗೆ ಕೊರೊನಾ ಪಾಸಿಟಿವ್ ಆಗಿದೆ. ಕಳೆದ ವಾರ ಕೊಪ್ಪಳ ತಾಲೂಕಿನ ಕುಣಕೇರಿ ನಿವಾಸಿ 11 ವರ್ಷದ ಮಾನಸ ಕೊರೊನಾಗೆ ಬಲಿಯಾಗಿದ್ದಾಳೆ. ಈಗಲೇ ಮಕ್ಕಳು ಕೊರೊನಾಗೆ ಬಲಿಯಾಗುತ್ತಿದ್ದರೆ, ಮೂರನೇ ಅಲೆಗೆ ಮಕ್ಕಳ ಪರಿಸ್ಥಿತಿ ಊಹಿಸಕ್ಕೂ ಸಾಧ್ಯವಾಗುತ್ತಿಲ್ಲ. ಜಿಲ್ಲಾಡಳಿತ ಮಕ್ಕಳ ಸಮೀಕ್ಷೆ ಆರಂಭಿಸಿದೆ. ಜೊತೆಗೆ ಅಗತ್ಯವಿರುವ ವೆಂಟಿಲೇಟರ್ಗಳ ಖರೀದಿಗೂ ಮುಂದಾಗಿದೆ. ಆದರೆ ಜಿಲ್ಲೆಗೆ ವೈದ್ಯರ ಅವಶ್ಯಕತೆ ಇದೆ. ಜಿಲ್ಲಾ ಆಸ್ಪತ್ರೆ ಹೊರತುಪಡಿಸಿ ಬೇರೆ ಯಾವ ಕಡೆನೂ ಮಕ್ಕಳ ತಜ್ಞ ವೈದ್ಯರೇ ಇಲ್ಲ. ಕೂಡಲೇ ಸರ್ಕಾರ ನಮ್ಮ ಜಿಲ್ಲೆಗೆ ವೈದ್ಯರನ್ನು ಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ
ಕೋಪದಿಂದ ಸೊಸೆಯನ್ನು ತಬ್ಬಿಕೊಂಡ ಕೊವಿಡ್ 19 ಸೋಂಕಿತ ಅತ್ತೆ; ಮಹಿಳೆಗೆ ತವರು ಮನೆಯಲ್ಲೇ ಚಿಕಿತ್ಸೆ
(shortage of pediatrician in Koppal and locals have urged the government to appoint a doctor)