ಕೋಪದಿಂದ ಸೊಸೆಯನ್ನು ತಬ್ಬಿಕೊಂಡ ಕೊವಿಡ್​ 19 ಸೋಂಕಿತ ಅತ್ತೆ; ಮಹಿಳೆಗೆ ತವರು ಮನೆಯಲ್ಲೇ ಚಿಕಿತ್ಸೆ

ಕೋಪದಿಂದ ಸೊಸೆಯನ್ನು ತಬ್ಬಿಕೊಂಡ ಕೊವಿಡ್​ 19 ಸೋಂಕಿತ ಅತ್ತೆ; ಮಹಿಳೆಗೆ ತವರು ಮನೆಯಲ್ಲೇ ಚಿಕಿತ್ಸೆ
ಪ್ರಾತಿನಿಧಿಕ ಚಿತ್ರ

ಅತ್ತೆಗೆ ಕೊರೊನಾ ತಗುಲಿದ ಬಳಿಕ ಅವರನ್ನು ಪ್ರತ್ಯೇಕವಾಗಿ ಇಟ್ಟು, ಆಹಾರ, ಅಗತ್ಯವಸ್ತುಗಳನ್ನು ನೀಡಲಾಗುತ್ತಿತ್ತು. ಅವರ ಮೊಮ್ಮಕ್ಕಳಿಗೂ ಅಲ್ಲಿಗೆ ಹೋಗಲು ಕೊಡುತ್ತಿರಲಿಲ್ಲ ಎಂದು ಸೋಂಕಿತ ಸೊಸೆ ಹೇಳಿದ್ದಾರೆ.

Lakshmi Hegde

|

Jun 03, 2021 | 11:39 AM

ಕೊವಿಡ್​ 19 ಸೋಂಕಿಗೆ ತುತ್ತಾದ ಮಹಿಳೆಯೊಬ್ಬರು, ತಮ್ಮ ಸೊಸೆಯನ್ನು ಬಲವಂತಾಗಿ ಅಪ್ಪಿಕೊಂಡು ಆಕೆಗೂ ಸೋಂಕು ಹಬ್ಬಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೊದಲು ಅತ್ತೆ ಕೊರೊನಾಕ್ಕೆ ತುತ್ತಾದರು. ಆದರೆ ತಾವೊಬ್ಬರೇ ಪ್ರತ್ಯೇಕವಾಗಿ ಇರಲು ಒಪ್ಪದ ಅತ್ತೆ ಹೋಗಿ ಸೊಸೆಯನ್ನೂ ತಬ್ಬಿಕೊಂಡಿದ್ದಾರೆ. ಅದಾದ ಬಳಿಕ ಸೊಸೆಯಲ್ಲೂ ಕೊವಿಡ್ ಲಕ್ಷಣಗಳು ಕಾಣಿಸಿಕೊಂಡು, ಆಕೆಯನ್ನು ತಪಾಸಣೆಗೆ ಒಳಪಡಿಸಿದಾಗ ವರದಿ ಪಾಸಿಟಿವ್​ ಬಂದಿದೆ.

ಕೊರೊನಾ ಸೋಂಕಿತ ಸೊಸೆಯನ್ನು ಮನೆಯಿಂದ ಹೊರಹಾಕಿದ್ದು, ನಂತರ ತಿಮ್ಮಾಪುರ ಗ್ರಾಮದಲ್ಲಿರುವ ಆಕೆಯ ತವರು ಮನೆಗೆ ಸೋದರಿ ಕರೆದುಕೊಂಡು ಹೋಗಿದ್ದಾಳೆ. ಮೊದಲು ಅತ್ತೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆಗ ಅವರನ್ನು ಪ್ರತ್ಯೇಕವಾಗಿ ಇರವಂತೆ ಹೇಳಲಾಯಿತು. ಯಾರೊಬ್ಬರೂ ಅವರ ಬಳಿ ಸುಳಿಯುತ್ತಿರಲಿಲ್ಲ. ಇದರಿಂದ ಕೋಪಗೊಂಡ ಅವರು ನನ್ನ ಅಕ್ಕನನ್ನು ತಬ್ಬಿಹಿಡಿದರು ಎಂದು ಆಕೆಯ ತಂಗಿ ಹೇಳಿದ್ದಾರೆ.

ಹಾಗೇ, ಅತ್ತೆಯಿಂದ ಸೋಂಕು ಹರಡಿಸಿಕೊಂಡ ಮಹಿಳೆಯೂ ಅದನ್ನೇ ಹೇಳಿದ್ದಾರೆ. ಅತ್ತೆಗೆ ಕೊರೊನಾ ತಗುಲಿದ ಬಳಿಕ ಅವರನ್ನು ಪ್ರತ್ಯೇಕವಾಗಿ ಇಟ್ಟು, ಆಹಾರ, ಅಗತ್ಯವಸ್ತುಗಳನ್ನು ನೀಡಲಾಗುತ್ತಿತ್ತು. ಅವರ ಮೊಮ್ಮಕ್ಕಳಿಗೂ ಅಲ್ಲಿಗೆ ಹೋಗಲು ಕೊಡುತ್ತಿರಲಿಲ್ಲ. ಹೀಗಾಗಿ ಅವರು ತುಂಬ ಬೇಸರಗೊಂಡಿದ್ದರು. ನಾನು ಸತ್ತರೆ ನಿಮಗೆಲ್ಲ ಖುಷಿಯಾಗುತ್ತದೆಯಾ ಎಂದು ಕೂಗಾಡುತ್ತಿದ್ದರು ಎಂದು ಆಕೆ ತಿಳಿಸಿದ್ದಾರೆ. ಸದ್ಯ ಸೊಸೆ ತನ್ನ ಸೋದರಿಯ ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Corona Warriors: ನಮ್ಮದು ಶಮನವಾಗದ ನೋವು; ವೈದ್ಯರ ಮೇಲಿನ ದೌರ್ಜನ್ಯ ನಿರ್ಲಕ್ಷಿಸಬಹುದಾದಷ್ಟು ನಿಕೃಷ್ಟವಾಯಿತೇ?

Follow us on

Related Stories

Most Read Stories

Click on your DTH Provider to Add TV9 Kannada