ಕೊರೊನಾ ಭಯದಿಂದಲೇ ಇಡೀ ಕುಟುಂಬ ನಾಶ, ಜ್ವರ ಕಾಣಿಸಿಕೊಂಡಿದಕ್ಕೆ ಎಲ್ಲರೂ ಆತ್ಮಹತ್ಯೆಗೆ ಶರಣು

ಕೊರೊನಾ ಭಯಕ್ಕೆ ಮಗಳೊಂದಿಗೆ ತಂದೆ, ತಾಯಿ ನೇಣು‌ ಹಾಕಿಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಳೆದು 2-3ದಿನಗಳಿಂದ ಕುಟುಂಬಸ್ಥರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಹಾಗೂ ಜ್ವರ ಕಡಿಮೆಯಾಗದ್ದಿದ್ದರಿಂದ ಕೊರೊನಾ ಬಂದಿರಬಹುದೆಂದು ಶಂಕಿಸಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ.

ಕೊರೊನಾ ಭಯದಿಂದಲೇ ಇಡೀ ಕುಟುಂಬ ನಾಶ, ಜ್ವರ ಕಾಣಿಸಿಕೊಂಡಿದಕ್ಕೆ ಎಲ್ಲರೂ ಆತ್ಮಹತ್ಯೆಗೆ ಶರಣು
ಮೃತರಿದ್ದ ಮನೆ
Follow us
TV9 Web
| Updated By: ಆಯೇಷಾ ಬಾನು

Updated on:Jun 03, 2021 | 11:33 AM

ಚೆನ್ನೈ: ಕೊರೊನಾ ಭಯಕ್ಕೆ ನಿನ್ನೆ ಕರ್ನಾಟಕ ರಾಜ್ಯದ ಚಾಮರಾಜನಗರದ ಹೆಚ್.ಮೂಕಹಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ನಡೆದಿತ್ತು. ಈಗ ಅದೇ ರೀತಿ ಮಹಾಮಾರಿ ಕೊರೊನಾ ಸೋಂಕು ತಗುಲಿರಬಹುದು ಎಂಬ ಭಯಕ್ಕೆ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಕೊರೊನಾ ಭಯಕ್ಕೆ ಮಗಳೊಂದಿಗೆ ತಂದೆ, ತಾಯಿ ನೇಣು‌ ಹಾಕಿಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಳೆದು 2-3ದಿನಗಳಿಂದ ಕುಟುಂಬಸ್ಥರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಹಾಗೂ ಜ್ವರ ಕಡಿಮೆಯಾಗದ್ದಿದ್ದರಿಂದ ಕೊರೊನಾ ಬಂದಿರಬಹುದೆಂದು ಶಂಕಿಸಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ. ಚೆನ್ನೈನ ತಿರುಮುಲ್ಲಾವಿಯೂಲ್​ನ  ದಿಲ್ಲಿ ಬಾಬು(70), ಆತನ ಪತ್ನಿ‌ ಮಹೇಶ್ವರಿ, ಹಾಗೂ ಇವರ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯಲ್ಲಿಯೇ ನೇಣು‌ ಹಾಕಿಕೊಂಡು ಇಡೀ ಕುಟುಂಂಬ ಆತ್ಮಹತ್ಯೆ ಮಾಡಿಕೊಂಡಿದೆ. ತಿರುಮುಲ್ಲಾವಿಯೂಲ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಚೆನ್ನೈ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

family suicide

ತಿರುಮುಲ್ಲಾವಿಯೂಲ್

ಇನ್ನು ಕೆಲ ತಿಂಗಳ ಹಿಂದೆ ತಮಿಳುನಾಡಿನ ಚೆನ್ನೈನಲ್ಲಿ ಮಕ್ಕಳಿಲ್ಲದ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಕೊರೊನಾ ಸೋಂಕಿನಿಂದಾಗಿ ಗಂಡ-ಹೆಂಡತಿ ಬೇರೆ ಉಳಿಯುವ ಪರಿಸ್ಥಿತಿ ಬರಬಹುದು ಎಂಬ ಭಯಕ್ಕೆ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ತಮ್ಮ ಕೋಣೆಯ ಮನೆಯ ಚಾವಣಿಗೆ ನೀರಿಯ ಮೂಲಕ ಇಬ್ಬರೂ ನೇಣಿಗೆ ಶರಣಾಗಿದ್ದರು. ಅರ್ಜುನನ್ (70) ಮತ್ತು ಅಂಜಲಿ (60) ಮೃತ ದಂಪತಿ. ಮೊದಲಿಗೆ ಅರ್ಜುನನ್ಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿದ್ದರು. ಆದ್ರೆ ಕೊರೊನಾ ವರದಿ ಇನ್ನೂ ಬಂದಿರಲಿಲ್ಲ. ಆದರೆ ಕೊರೊನಾ ಸೋಂಕು ಇರುವುದು ದೃಢಪಟ್ಟರೆ ಇಬ್ಬರೂ ಬೇರೆ ಇರಬೇಕಾಗುತ್ತೆ ಎಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು.

ಇದನ್ನೂ ಓದಿ:  ಚಾಮರಾಜನಗರ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಲಾಕ್​ಡೌನ್​ನಿಂದ ಆರ್ಥಿಕ ಸಂಕಷ್ಟದ ಕಾರಣ ಶಂಕೆ

Published On - 11:29 am, Thu, 3 June 21