ಕೆಲವೇ ತಿಂಗಳಲ್ಲಿ ಹೊರಬೀಳಲಿದೆ ಇನ್ನೊಂದು ಕೊವಿಡ್​ 19 ಲಸಿಕೆ; ಹೈದರಾಬಾದ್ ಮೂಲದ ಕಂಪನಿಗೆ ಈಗಲೇ ಮುಂಗಡ ಹಣ ನೀಡಿದ ಕೇಂದ್ರ  

ಕೆಲವೇ ತಿಂಗಳಲ್ಲಿ ಹೊರಬೀಳಲಿದೆ ಇನ್ನೊಂದು ಕೊವಿಡ್​ 19 ಲಸಿಕೆ; ಹೈದರಾಬಾದ್ ಮೂಲದ ಕಂಪನಿಗೆ ಈಗಲೇ ಮುಂಗಡ ಹಣ ನೀಡಿದ ಕೇಂದ್ರ  
ಕೊರೊನಾ ಲಸಿಕೆ (ಪ್ರಾತಿನಿಧಿಕ ಚಿತ್ರ)

Covid 19 Vaccine: ಎಂಆರ್​ಎನ್​ಎ (ಮೆಸೆಂಜರ್ ರಿಬೊನ್ಯೂಕ್ಲಿಯಿಕ್ ಆಮ್ಲ) PTX-COVID19-B ಲಸಿಕೆಯನ್ನು ಭಾರತದಲ್ಲಿ ತಯಾರಿಸಲೂ ಸಹ ಬಯಾಲಜಿಕಲ್ ಇ ಕಂಪನಿಯು ಮುಂದಾಗಿದೆ. ಇದಕ್ಕಾಗಿ ಕೆನಡಾ ಮೂಲದ ಪ್ರೊವಿಡೆನ್ಸ್​ ಥೆರಪೂಟಿಕ್ಸ್ ಹೋಲ್ಡಿಂಗ್ಸ್ ಇಂಕ್​​ನೊಂದಿಗೆ ಸಹಯೋಗ ಹೊಂದಿದೆ.

TV9kannada Web Team

| Edited By: Lakshmi Hegde

Jun 03, 2021 | 11:49 AM

ಮುಂದಿನ ಕೆಲವೇ ತಿಂಗಳುಗಳಲ್ಲಿ ಹೈದರಾಬಾದ್​ ಮೂಲದ ಎಂ/ಎಸ್ ಬಯಾಲಜಿಕಲ್​ ಇ ಲಿಮಿಟೆಡ್​ ಕಂಪನಿಯಿಂದ ಕೊವಿಡ್​ 19 ಲಸಿಕೆಯೊಂದು ಹೊರಬರಲಿದೆ. ಸುಮಾರು 30 ಕೋಟಿ ಡೋಸ್​ ಲಸಿಕೆಗಾಗಿ ಕೇಂದ್ರ ಸರ್ಕಾರ ಈಗಾಗಲೇ ಮುಂಗಡ ಒಪ್ಪಂದ ಪೂರ್ಣಗೊಳಿಸಿದೆ. 1500 ಕೋಟಿ ರೂಪಾಯಿ ಪಾವತಿ ಮಾಡಿದೆ. ಈ ಲಸಿಕೆ 1 ಮತ್ತು 2ನೇ ಹಂತದ ಕ್ಲಿನಿಕಲ್​ ಟ್ರಯಲ್​ನ್ನು ಪೂರ್ಣಗೊಳಿಸಿದ್ದು, 3ನೇ ಹಂತದ ಕ್ಲಿನಿಕಲ್​ ಪರೀಕ್ಷೆ ನಡೆಯುತ್ತಿದೆ. ಬಯಾಲಜಿಕಲ್​ ಇ ಅಭಿವೃದ್ಧಿ ಪಡಿಸಿದ ಈ ಲಸಿಕೆ ಆರ್​ಬಿಡಿ ಪ್ರೋಟಿನ್​ ಸಬ್​ ಯೂನಿಟ್​ ಲಸಿಕೆಯಾಗಿದ್ದು, 1 ಮತ್ತು 2ನೇ ಹಂತದ ಪರೀಕ್ಷೆಯಲ್ಲಿ ಸಕಾರಾತ್ಮಕ ಫಲಿತಾಂಶವನ್ನು ನೀಡಿದೆ. ಇದೀಗ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ನಡೆಯುತ್ತಿದ್ದು, ಅದಾದ ಬಳಿಕ ಬಳಕೆಗೆ ಸಿಗಲಿದೆ.

ಹೈದರಾಬಾದ್​​ನ ಬಯಾಲಜಿಕಲ್​ ಇ ಲಿಮಿಟೆಡ್​ ಕಂಪನಿಯು ಯುಎಸ್​ನ ಬೇಲರ್​​ ಮೆಡಿಸಿನ್​ ಕಾಲೇಜಿನ ಸಹಯೋಗದೊಂದಿಗೆ ಲಸಿಕೆ ತಯಾರು ಮಾಡುತ್ತಿದೆ. ಈ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​​ಗೆ ಕಂಪನಿಯು ಏಪ್ರಿಲ್​​ನಲ್ಲಿ ಕೇಂದ್ರ ಔಷಧಗಳ ಮತ್ತು ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಅನುಮತಿ ನೀಡಿತ್ತು.

ಇದರೊಂದಿಗೆ  ಎಂಆರ್​ಎನ್​ಎ (ಮೆಸೆಂಜರ್ ರಿಬೊನ್ಯೂಕ್ಲಿಯಿಕ್ ಆಮ್ಲ) PTX-COVID19-B ಲಸಿಕೆಯನ್ನು ಭಾರತದಲ್ಲಿ ತಯಾರಿಸಲೂ ಸಹ ಬಯಾಲಜಿಕಲ್ ಇ ಕಂಪನಿಯು ಮುಂದಾಗಿದೆ. ಇದಕ್ಕಾಗಿ ಕೆನಡಾ ಮೂಲದ ಪ್ರೊವಿಡೆನ್ಸ್​ ಥೆರಪೂಟಿಕ್ಸ್ ಹೋಲ್ಡಿಂಗ್ಸ್ ಇಂಕ್​​ನೊಂದಿಗೆ ಸಹಯೋಗ ಹೊಂದಿದೆ. ಈ ಎಂಆರ್​​ಎನ್​ಎ ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ಅಗತ್ಯವಿರುವ ಎಲ್ಲ ರೀತಿಯ ತಂತ್ರಜ್ಞಾನವನ್ನೂ ಪ್ರಾವಿಡೆನ್ಸ್​ ಕಂಪನಿ ಬಯಾಲಜಿಕಲ್​ ಇ ಕಂಪನಿಗೆ ವರ್ಗಾವಣೆ ಮಾಡಲಿದೆ.

ಇದನ್ನೂ ಓದಿ: ಲಾಕ್​ಡೌನ್​ ನಿಯಮ ಉಲ್ಲಂಘನೆ; ದಿಶಾ ಪಟಾನಿ, ಟೈಗರ್​ ಶ್ರಾಫ್​ ವಿರುದ್ಧ ಎಫ್​ಐಆರ್​ ದಾಖಲು

Follow us on

Related Stories

Most Read Stories

Click on your DTH Provider to Add TV9 Kannada