ಬಳ್ಳಾರಿ: ದುಪ್ಪಟ್ಟು ದರಕ್ಕೆ ಮೆಣಸಿನಕಾಯಿ ಬೀಜ ವ್ಯಾಪಾರ; ರೈತರು ಕಂಗಾಲು
ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಭತ್ತ ಬೆಳೆದಂತೆ ಮೆಣಸಿನಕಾಯಿ ಬೆಳೆ ಕೂಡ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಸುಮಾರು 1.5 ರಿಂದ 2 ಲಕ್ಷ ಎಕರೆಯವರೆಗೆ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತಿದೆ. ಈ ವರ್ಷ ಮೆಣಸಿನಕಾಯಿ ನಾಟಿ ಮಾಡಲು ರೈತರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು
ಬಳ್ಳಾರಿ: ರಾಜ್ಯದಲ್ಲಿ ಮುಂಗಾರು ಆರಂಭಗೊಳ್ಳುತ್ತಿದೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಮಳೆ ಕೂಡ ಆರಂಭವಾಗಿದೆ. ಹೀಗಾಗಿ ರೈತರು ಬಿತ್ತನೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಆದರೆ ಬಿತ್ತನೆಗೆ ಬೇಕಾದ ಬೀಜಗಳ ಖರೀದಿಗೆ ಮುಂದಾಗಿರುವ ರೈತರು ಇದೀಗ ಕಂಗಾಲಾಗಿದ್ದಾರೆ. ಬೀಜ ವ್ಯಾಪಾರಸ್ಥರು ಲಾಕ್ಡೌನ್ ನೆಪವೊಡ್ಡಿ ದುಪ್ಪಟ್ಟು ದರಕ್ಕೆ ಬೀಜಗಳ ಮಾರಾಟ ಮಾಡುತ್ತಿದ್ದಾರೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಭತ್ತ ಬೆಳೆದಂತೆ ಮೆಣಸಿನಕಾಯಿ ಬೆಳೆ ಕೂಡ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಸುಮಾರು 1.5 ರಿಂದ 2 ಲಕ್ಷ ಎಕರೆಯವರೆಗೆ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತಿದೆ. ಈ ವರ್ಷ ಮೆಣಸಿನಕಾಯಿ ನಾಟಿ ಮಾಡಲು ರೈತರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಮೊದಲು ಮೆಣಸಿನಕಾಯಿ ಸಸಿಗಳನ್ನು ಬೆಳೆಸಬೇಕು. ಇದಕ್ಕಾಗಿ ರೈತರು ಮೆಣಸಿನಕಾಯಿ ಬೀಜಗಳನ್ನು ಖರೀದಿ ಮಾಡಬೇಕು. ಆದರೆ ಈ ಲಾಕ್ಡೌನ್ ಹಿನ್ನೆಲೆಯಲ್ಲಿ ಬೀಜ ವ್ಯಾಪಾರಿಗಳು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ.
ಲಾಕ್ಡೌನ್ ನೆಪವೊಡ್ಡಿ ಮೆಣಸಿನಕಾಯಿ ಬೀಜದ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. 5531 ಮೆಣಸಿನಕಾಯಿ ಬೀಜ ಪ್ರತಿ ಕೆಜಿಗೆ 60 ಸಾವಿರ ಇತ್ತು. ಆದರೆ 1 ಲಕ್ಷಕ್ಕೆ ಒಂದು ಕೆಜಿ ಬೀಜ ಮಾರಾಟ ಮಾಡುತ್ತಿದ್ದಾರೆ. ಸೀಜಂತ ಸೀಡ್ಸ್ ಮೆಣಸಿನಕಾಯಿ ಬೀಜ ಕೂಡ ಪ್ರತಿ ಎಕರೆಗೆ 80 ಸಾವಿರ ಇತ್ತು. ಈಗ ಇದನ್ನು 1.3 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ. ದುಪ್ಪಟ್ಟು ದರ ರೈತರನ್ನು ಕಂಗಾಲು ಆಗುವಂತೆ ಮಾಡಿದೆ.
ಒಂದು ಕಡೆ ಕೊರೊನಾ ಆರ್ಭಟಿಸುತ್ತಿದ್ದರೆ, ಮತ್ತೊಂದೆಡೆ ರೈತರು ಕೃಷಿ ಚಟುವಟಿಕೆ ಆರಂಭಿಸಲು ಪ್ರಕ್ರಿಯೆ ಆರಂಭಿಸಿದ್ದಾರೆ. ಮೆಣಸಿನಕಾಯಿ ಬೀಜಕ್ಕಾಗಿ ರೈತರು ಸೀಡ್ಸ್ ಶಾಪ್ಗಳ ಮುಂದೆ ಮುಗಿಬಿದ್ದಿದ್ದು, ದುಪ್ಪಟ್ಟು ದರ ಮಾಡಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಮೆಣಸಿನಕಾಯಿ ಬೀಜವನ್ನು ಅನಿವಾರ್ಯವಾಗಿ ಖರೀದಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇವಲ ಮೆಣಸಿನಕಾಯಿ ಬೀಜಕ್ಕೆ ಮಾತ್ರವಲ್ಲ. ಉಳಿದ ಬೀಜಗಳನ್ನು ಕೂಡ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ರೈತರಿಗೆ ಇಷ್ಟೆಲ್ಲಾ ತೊಂದರೆ ಆಗುತ್ತಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಪ್ರತಿ ವರ್ಷ ನಷ್ಟ ಅನುಭವಿಸುತ್ತಿರುವ ರೈತರಿಗೆ ಮೆಣಸಿನಕಾಯಿ ಬೀಜ ಕೂಡ ದುಪ್ಪಟ್ಟು ದರಕ್ಕೆ ಮಾರಾಟವಾಗುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದನ್ನೂ ಓದಿ
ಆನಂದಯ್ಯ ನಾಟಿ ಔಷಧ ತಯಾರಿಕೆ ಇಂದಿನಿಂದ ಮತ್ತೆ ಆರಂಭ; ಆನ್ಲೈನ್ ಮೂಲಕವೂ ಔಷಧ ವಿತರಣೆ
ಲಾಕ್ಡೌನ್ ನಿಯಮ ಉಲ್ಲಂಘನೆ; ದಿಶಾ ಪಟಾನಿ, ಟೈಗರ್ ಶ್ರಾಫ್ ವಿರುದ್ಧ ಎಫ್ಐಆರ್ ದಾಖಲು
(Seeds Businessmen are selling chilli seed at higher rates in bellary)
Published On - 11:27 am, Thu, 3 June 21