ಕುಂದುಕೊರತೆ, ಸಮಸ್ಯೆ ಆಲಿಸಲು ಸಿಎಂ ಹೊಸ ಟ್ವಿಟರ್​​ ಹ್ಯಾಂಡಲ್; ಏನೇನು ದಾಖಲೆ ಬೇಕು? ದೂರು ನೀಡುವುದು ಹೇಗೆ?

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಿಂದ ಪ್ರಾರಂಭವಾಗಿರುವ ಹೊಸ ಉಪಕ್ರಮವಾಗಿದ್ದು, ಯಾವುದೇ ದೊಡ್ಡ ಹಾಗೂ ದೀರ್ಘಕಾಲದಿಂದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಕುಂದುಕೊರತೆ, ಸಮಸ್ಯೆ ಆಲಿಸಲು ಸಿಎಂ ಹೊಸ ಟ್ವಿಟರ್​​ ಹ್ಯಾಂಡಲ್; ಏನೇನು ದಾಖಲೆ ಬೇಕು? ದೂರು ನೀಡುವುದು ಹೇಗೆ?
ಸಿಎಂಒ ಹೊಸ ಟ್ವಿಟರ್ ಹ್ಯಾಂಡಲ್

Updated on: Jul 11, 2023 | 4:48 PM

ಬೆಂಗಳೂರು: ಜನರಿಗೆ ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಸಹಾಯ ಮಾಡಲು, ಕರ್ನಾಟಕ ಮುಖ್ಯಮಂತ್ರಿಗಳ ಕಚೇರಿ (CMO) ಹೊಸ ಟ್ವಿಟರ್ ಹ್ಯಾಂಡಲ್ ಅನ್ನು ಪ್ರಾರಂಭಿಸಿದ್ದು, ಇದರ ಮೂಲಕ ಹೇಗೆ ದೂರು ನೀಡಬೇಕು? ದೂರು ನೀಡುವವರು ಏನೇನು ಮಾಹಿತಿ, ದಾಖಲೆಗಳನ್ನು ನೀಡಬೇಕು ಎಂಬುದನ್ನು ತಿಳಿಸಿದೆ. ಇದನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ನಿರ್ವಹಿಸಲಿದ್ದಾರೆ. ಜನರು ತಮ್ಮ ಕುಂದುಕೊರತೆಗಳೊಂದಿಗೆ @osd_cmkarnataka ಅನ್ನು ಟ್ಯಾಗ್ ಮಾಡಬಹುದಾಗಿದ್ದು, ಅವುಗಳನ್ನು ಆಯಾ ಇಲಾಖೆಗಳಿಗೆ ಕಳುಹಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಡಾ. ವೈಷ್ಣವಿ ಕೆ ಕುಂದುಕೊರತೆ ಟ್ವಿಟರ್ ಹ್ಯಾಂಡಲ್​​ನ ಮುಖ್ಯಸ್ಥರಾಗಿರಲಿದ್ದಾರೆ. ಈ ಸೇವೆಗಳನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ವೈಯಕ್ತಕ ಸಮಸ್ಯೆಗಳನ್ನು ಹೊರತುಪಡಿಸಿ ನೈಜವಾದ ಮತ್ತು ಸಂಪೂರ್ಣವಾದ ಮಾಹಿತಿಯನ್ನು ನೀಡುವಂತೆ ಕೋರಲಾಗಿದೆ ಎಂದು @osd_cmkarnataka ಟ್ವೀಟ್ ಮಾಡಿದೆ.

ಈ ಟ್ವಿಟರ್ ಹ್ಯಾಂಡಲ್ ಮೂಲಕ ಪ್ರಸ್ತಾಪಿಸಿರುವ ಸಮಸ್ಯೆಯನ್ನು, ಸಿಎಂಒ ಅಧಿಕಾರಿಗಳು ಆಯಾ ಇಲಾಖೆಗಳಿಗೆ ದೂರನ್ನು ಕಡಿಮೆ ಸಮಯದಲ್ಲಿ ಪರಿಹರಿಸಲು ನಿರ್ದೇಶಿಸಲಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಿಂದ ಪ್ರಾರಂಭವಾಗಿರುವ ಹೊಸ ಉಪಕ್ರಮವಾಗಿದ್ದು, ಯಾವುದೇ ದೊಡ್ಡ ಹಾಗೂ ದೀರ್ಘಕಾಲದಿಂದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.


ಜನರು ತಮ್ಮ ಹೆಸರು, ವಿಳಾಸ ಆಧಾರ್ ಸಂಖ್ಯೆ ಮತ್ತು ಅವರ ಸಮಸ್ಯೆಗಳ ಸಂಕ್ಷಿಪ್ತ ವಿವರಣೆಯನ್ನು ನೀಡುವಂತೆ ಮುಖ್ಯಮಂತ್ರಿಗಳ ಕಚೇರಿ ಕೇಳಿದೆ. ಹಲವಾರು ಜನರು ಹ್ಯಾಂಡಲ್ ಅನ್ನು ಟ್ಯಾಗ್ ಮಾಡುವ ಮೂಲಕ ತಮ್ಮ ಸಮಸ್ಯೆಗಳನ್ನು ಕಳುಹಿಸಲು ಈಗಾಗಲೇ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: Bengaluru: ವಿಧಾನಸೌಧದಲ್ಲಿ ಶಾಸಕರ ವಾಹನ ನಿಲ್ಲಿಸಲು ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ಮಧ್ಯವರ್ತಿಗಳು ಹೆಚ್ಚಾಗಿದ್ದಾರೆ ಎಂದು ಒಪ್ಪಿಕೊಂಡ ಸಚಿವ ಎಚ್‌ಕೆ ಪಾಟೀಲ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಬೆಂಗಳೂರಿನ ಕೆಕೆ ರಸ್ತೆಯಲ್ಲಿರುವ ತಮ್ಮ ನಿವಾಸದ ಹೊರಗೆ ಪ್ರತಿದಿನ ಜನರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ