Karnataka Covid Update: 10 ತಿಂಗಳ ನಂತರ ಮೂರಂಕಿಗೆ ಇಳಿದ ಬೆಂಗಳೂರಿನ ಕೊವಿಡ್ ಸೋಂಕಿತರ ಸಂಖ್ಯೆ; ಬೆಂಗಳೂರಿನಲ್ಲಿ 985, ರಾಜ್ಯದಲ್ಲಿ 5,041 ಜನರಿಗೆ ಸೋಂಕು ದೃಢ

ಈವರೆಗೆ 25,81,559 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 33,148 ಜನರ ಸಾವನ್ನಪ್ಪಿದ್ದಾರೆ. ಸದ್ಯ 1,62,282 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Karnataka Covid Update: 10 ತಿಂಗಳ ನಂತರ ಮೂರಂಕಿಗೆ ಇಳಿದ ಬೆಂಗಳೂರಿನ ಕೊವಿಡ್ ಸೋಂಕಿತರ ಸಂಖ್ಯೆ; ಬೆಂಗಳೂರಿನಲ್ಲಿ 985, ರಾಜ್ಯದಲ್ಲಿ 5,041 ಜನರಿಗೆ ಸೋಂಕು ದೃಢ
ಕೋವಿಡ್​ ವಾರಿಯರ್​ಗಳು
Follow us
TV9 Web
| Updated By: guruganesh bhat

Updated on:Jun 15, 2021 | 7:57 PM

ಬೆಂಗಳೂರು: ಕರ್ನಾಟಕದಲ್ಲಿ ಇಂದು 5,041 ಜನರಿಗೆ ಕೊವಿಡ್ ದೃಢಪಟ್ಟಿದ್ದು, ರಾಜಧಾನಿ ಬೆಂಗಳೂರಲ್ಲಿ ಇಂದು ಒಂದೇ ದಿನ 985 ಜನರಿಗೆ ಸೋಂಕು ಖಚಿತವಾಗಿದೆ. ಈ ಮೂಲಕ  ಬೆಂಗಳೂರಿನ ಕೊವಿಡ್ ಸೋಂಕಿತರ ಸಂಖ್ಯೆ 10 ತಿಂಗಳ ನಂತರ ಮೂರಂಕಿಗೆ ಇಳಿದಂತಾಗಿದೆ.  ರಾಜ್ಯದಲ್ಲಿ 115 ಜನರು ಕೊವಿಡ್​ನಿಂದ ಮೃತಪಟ್ಟಿದ್ದು, ಬೆಂಗಳೂರಲ್ಲಿ 16 ಜನರು ನಿಧನರಾಗಿದ್ದಾರೆ. ಇಂದಿನ ಕೊವಿಡ್ ಸೋಂಕಿತರ ಸಂಖ್ಯೆಯನ್ನೂ ಸೇರಿಸಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 27,77,010ಕ್ಕೆ ಏರಿಕೆಯಾಗಿದೆ. ಈವರೆಗೆ 25,81,559 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 33,148 ಜನರ ಸಾವನ್ನಪ್ಪಿದ್ದಾರೆ. ಸದ್ಯ 1,62,282 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಾಗಲಕೋಟೆ 23, ಬಳ್ಳಾರಿ 122, ಬೆಳಗಾವಿ 95, ಬೆಂಗಳೂರು ಗ್ರಾಮಾಂತರ 133, ಬೆಂಗಳೂರು ನಗರ 985, ಬೀದರ್ 2, ಚಾಮರಾಜನಗರ 79, ಚಿಕ್ಕಬಳ್ಳಾಪುರ 65, ಚಿಕ್ಕಮಗಳೂರು 224, ಚಿತ್ರದುರ್ಗ 95, ದಕ್ಷಿಣ ಕನ್ನಡ 482, ದಾವಣಗೆರೆ 183, ಧಾರವಾಡ 65, ಗದಗ 21, ಹಾಸನ 522, ಹಾವೇರಿ 29, ಕಲಬುರಗಿ 26, ಕೊಡಗು 64, ಕೋಲಾರ 162, ಕೊಪ್ಪಳ 30, ಮಂಡ್ಯ 213, ಮೈಸೂರು 490, ರಾಯಚೂರು 5, ರಾಮನಗರ 25, ಶಿವಮೊಗ್ಗ 282, ತುಮಕೂರು 329, ಉಡುಪಿ 107, ಉತ್ತರ ಕನ್ನಡ 122, ವಿಜಯಪುರ 50, ಯಾದಗಿರಿ 11 ಸೋಂಕಿತರು ದೃಢಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 115 ಜನರ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆ 26, ಬೆಂಗಳೂರು 16, ಧಾರವಾಡ ಜಿಲ್ಲೆ 8, ಹಾಸನ ಜಿಲ್ಲೆ 6, ದಾವಣಗೆರೆ ಜಿಲ್ಲೆ 7, ಬಳ್ಳಾರಿ, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ 5, ಕೋಲಾರ ಜಿಲ್ಲೆ 4, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಿಕ್ಕಬಳ್ಳಾಪುರ, ಹಾವೇರಿ, ತುಮಕೂರು, ಚಿಕ್ಕಮಗಳೂರು, ಕೊಡಗು ಜಿಲ್ಲೆ 3, ಕೊಪ್ಪಳ, ಮಂಡ್ಯ, ರಾಮನಗರ ಜಿಲ್ಲೆ ಇಬ್ಬರು, ರಾಯಚೂರು, ಉಡುಪಿ, ವಿಜಯಪುರ ಜಿಲ್ಲೆಗಳಾದ ತಲಾ ಓರ್ವ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Corona Vaccine: ಕೊವಿಡ್ ಲಸಿಕೆ ಪಡೆಯಲು ಆನ್​ಲೈನ್ ರಿಜಿಸ್ಟ್ರೇಶನ್ ಅಥವಾ ಬುಕಿಂಗ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ

ಕೊವಿಡ್​ 19 ಲಸಿಕೆಯಿಂದ ಭಾರತದಲ್ಲಿ ಮೃತಪಟ್ಟವರು ಎಷ್ಟು ಮಂದಿ?..ಕೊನೆಗೂ ಸಂಖ್ಯೆ ದೃಢಪಡಿಸಿದ ಎಇಎಫ್​ಐ ಸಮಿತಿ

(Karnataka Covid Upadte 5041 new cases in the state, and 985 in Bangaluru)

Published On - 7:35 pm, Tue, 15 June 21