ಕೊವಿಡ್ 19 ಲಸಿಕೆಯಿಂದ ಭಾರತದಲ್ಲಿ ಮೃತಪಟ್ಟವರು ಎಷ್ಟು ಮಂದಿ?..ಕೊನೆಗೂ ಸಂಖ್ಯೆ ದೃಢಪಡಿಸಿದ ಎಇಎಫ್ಐ ಸಮಿತಿ
ಲಸಿಕೆಯಿಂದ ಉಂಟಾಗುವ ರಿಯಾಕ್ಷನ್ಗಳು ನಿರೀಕ್ಷತವೇ ಆಗಿರುತ್ತವೆ. ಲಸಿಕೆಗಳಿಂದ ಅನಾಫಿಲ್ಯಾಕ್ಸಿಸ್ ಮತ್ತಿತರ ಅಲರ್ಜಿಗಳು ಉಂಟಾಗುವುದು ಸಾಮಾನ್ಯ.
ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಜನವರಿಯಿಂದ ಶುರುವಾಗಿದೆ. ಲಸಿಕೆ ತೆಗೆದುಕೊಂಡವರಿಗೆ ಸಣ್ಣಪುಟ್ಟ ರಿಯಾಕ್ಷನ್ ಕೂಡ ಆಗಿದೆ. ಆದರೆ ಕೊರೊನಾ ಲಸಿಕೆಯ ಅಡ್ಡಪರಿಣಾಮದಿಂದಲೇ ಯಾರಾದರೂ ಮೃತಪಟ್ಟಿದ್ದ ಬಗ್ಗೆ ಯಾವುದೇ ಸ್ಪಷ್ಟ ವರದಿ ಇರಲಿಲ್ಲ. ಆದರೆ ಇದೀಗ AEFI (Adverse event following immunization) ಕಮಿಟಿ, ಅಂದರೆ ರೋಗ ನಿರೋಧಕತೆಯ ನಂತರದ ಪ್ರತಿಕೂಲವನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರ ರಚಿಸಿದ ಸಮಿತಿ ಒಂದು ವಿಚಾರವನ್ನು ತಿಳಿಸಿದೆ. ಕೊವಿಡ್ 19 ಲಸಿಕೆಯನ್ನು ಪಡೆದು, ಅದರ ಅಡ್ಡ ಪರಿಣಾಮದಿಂದ 68ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಲಸಿಕೆಯಿಂದ ಆದ ಮೊದಲ ಸಾವು ಇದು ಎಂದು ತಿಳಿಸಿದೆ.
ಈ ಹಿರಿಯ ವ್ಯಕ್ತಿ ಮಾರ್ಚ್ 8ರಂದು ಕೊವಿಡ್ 19 ಲಸಿಕೆ ಪಡೆದಿದ್ದರು. ಅದಾದ ಬಳಿಕ ಅನಾಫಿಲ್ಯಾಕ್ಸಿಸ್ಗೆ ಒಳಗಾಗಿದ್ದರು. ಅನಾಫಿಲ್ಯಾಕ್ಸಿಸ್ ಮಾರಣಾಂತಿಕ ಅಲರ್ಜಿಯಾಗಿದೆ. ಮೈಮೇಲೆ ಕೆಂಪು ದದ್ದು ಏಳುವುದು, ವಾಂತಿ, ಉಸಿರಾಟದ ಸಮಸ್ಯೆಗಳು ಉಂಟಾಗುತ್ತವೆ. ಇವರಿಗೆ ಲಸಿಕೆ ತೆಗೆದುಕೊಂಡ ನಂತರ ರಿಯಾಕ್ಷನ್ ಆಗಿದೆ. ಅದರಿಂದಲೇ ಜೀವ ಕಳೆದುಕೊಂಡಿದ್ದಾರೆ ಎಂದು AEFI ಸಮಿತಿ ಅಧ್ಯಕ್ಷ ಡಾ. ಎನ್.ಕೆ.ಅರೋರಾ ದೃಢಪಡಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಕೊವಿಡ್ 19 ಲಸಿಕೆ ಸಂಬಂಧಿತ ಇದುವರೆಗೂ ಮೂವರು ಸಾವನ್ನಪ್ಪಿದ್ದಾರೆ ಎಂದು ಅಲ್ಲಲ್ಲಿ ವರದಿಯಾಗುತ್ತಿದ್ದರೂ, ಕೇಂದ್ರ ಸರ್ಕಾರದ ಈ ಸಮಿತಿ ಒಂದೇ ಸಾವನ್ನು ದೃಢಪಡಿಸಿದೆ. ಹೀಗೆ ಲಸಿಕೆಯಿಂದ ಉಂಟಾಗುವ ರಿಯಾಕ್ಷನ್ಗಳು ನಿರೀಕ್ಷತವೇ ಆಗಿರುತ್ತವೆ. ಲಸಿಕೆಗಳಿಂದ ಅನಾಫಿಲ್ಯಾಕ್ಸಿಸ್ ಮತ್ತಿತರ ಅಲರ್ಜಿಗಳು ಉಂಟಾಗುವುದು ಸಾಮಾನ್ಯ. ಆದರೆ ಅವು ಕೆಲವೊಮ್ಮೆ ಮಾರಣಾಂತಿಕವಾಗಿ ಪರಿಣಮಿಸುತ್ತವೆ ಎಂದು ಸಮಿತಿ ಹೇಳಿದೆ. ಹಾಗೇ ಜನವರಿ 16 ಮತ್ತು 19ರಂದು ಲಸಿಕೆ ಪಡೆದ ಇನ್ನಿಬ್ಬರಲ್ಲೂ ಅನಾಫಿಲ್ಯಾಕ್ಸಿಸ್ ಕಾಣಿಸಿಕೊಂಡಿತ್ತು. ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ನಂತರ ಚೇತರಿಸಿಕೊಂಡಿದ್ದಾರೆ ಎಂದೂ AEFI ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: ವಿಶಾಖಪಟ್ಟಣದಲ್ಲೂ ಮಕ್ಕಳಿಗೆ ಕಾಡುತ್ತಿದೆ ‘ಮಿಸ್ಸಿ’ ಸಮಸ್ಯೆ, 10ಕ್ಕೂ ಅಧಿಕ ಮಕ್ಕಳಿಗೆ ಚಿಕಿತ್ಸೆ
Government has confirmed the death of old man after covid 19 vaccination