ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 39,998 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, 517 ಜನರು ಮೃತಪಟ್ಟಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಅವಧಿಯಲ್ಲಿ 16,286 ಜನರಿಗೆ ಕೊವಿಡ್ ಸೋಂಕು ತಗುಲಿರುವುದು ಪತ್ತೆಯಾಗಿದ್ದು, 275 ಜನರು ನಿಧನರಾಗಿದ್ದಾರೆ. ಸದ್ಯ 5,92,182 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ 3,60,619 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಪತ್ತೆಯಾದ ಸೋಂಕಿತರನ್ನೂ ಸೇರಿಸಿ ಈವರೆಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20,53,191ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 34,752 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ. ಈಮೂಲಕ ಈವರೆಗೆ ರಾಜ್ಯದಲ್ಲಿ 14,40,621 ಜನ ಗುಣಮುಖರಾಗಿ ಡಿಸ್ಚಾರ್ಜ್ ಆದಂತಾಗಿದೆ.
ಜಿಲ್ಲಾವಾರು ಸೋಂಕಿತರ ವಿವರ ಇಂತಿದೆ
ಬೆಂಗಳೂರು ನಗರ ಜಿಲ್ಲೆ 16,286, ತುಮಕೂರು 2,360, ಬಳ್ಳಾರಿ 1,823, ಮೈಸೂರು 1,773, ಹಾಸನ 1,572, ಮಂಡ್ಯ 1,223, ಬೆಂಗಳೂರು ಗ್ರಾಮಾಂತರ 1,138, ಶಿವಮೊಗ್ಗ 1,125, ದಕ್ಷಿಣ ಕನ್ನಡ 1,077, ಉತ್ತರ ಕನ್ನಡ 960, ಉಡುಪಿ 919, ಧಾರವಾಡ 904, ಬೆಳಗಾವಿ 856, ಕೋಲಾರ 815, ಯಾದಗಿರಿ 753, ವಿಜಯಪುರ 690, ಕೊಡಗು ಜಿಲ್ಲೆ 678, ಚಿಕ್ಕಮಗಳೂರು ಜಿಲ್ಲೆ 646, ಕಲಬುರಗಿ 646, ಬಾಗಲಕೋಟೆ 610, ಚಿಕ್ಕಬಳ್ಳಾಪುರ 554, ಚಾಮರಾಜನಗರ 517, ದಾವಣಗೆರೆ 362, ಗದಗ 347, ರಾಯಚೂರು 289, ಬೀದರ್ 281, ಕೊಪ್ಪಳ 278, ಚಿತ್ರದುರ್ಗ 192, ಹಾವೇರಿ 189, ರಾಮನಗರ ಜಿಲ್ಲೆಗಳಲ್ಲಿ 135 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾವಾರು ಮೃತರ ವಿವರ
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 517 ಜನರ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆ 275, ಶಿವಮೊಗ್ಗ ಜಿಲ್ಲೆ 26 , ಕಲಬುರಗಿ ಜಿಲ್ಲೆ 23, ಹಾಸನ ಜಿಲ್ಲೆ 19, ಬಳ್ಳಾರಿ ಜಿಲ್ಲೆ 17 , ತುಮಕೂರು ಜಿಲ್ಲೆ 14, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೊಪ್ಪಳ ಜಿಲ್ಲೆ 12, ಹಾವೇರಿ, ಕೊಡಗು ಜಿಲ್ಲೆ, ಮಂಡ್ಯ ಜಿಲ್ಲೆ 10 , ಮೈಸೂರು ಜಿಲ್ಲೆ 9, ಚಾಮರಾಜನಗರ ಜಿಲ್ಲೆ,ಉತ್ತರ ಕನ್ನಡ ಜಿಲ್ಲೆ, ಧಾರವಾಡ ಜಿಲ್ಲೆ, ವಿಜಯಪುರ ಜಿಲ್ಲೆ 8 , ಬೀದರ್ ಜಿಲ್ಲೆ 7, ಚಿಕ್ಕಬಳ್ಳಾಪುರ ಜಿಲ್ಲೆ,ಉಡುಪಿ ಜಿಲ್ಲೆ 6, ರಾಮನಗರ ಜಿಲ್ಲೆ 5, ಗದಗ, ಯಾದಗಿರಿ ಜಿಲ್ಲೆ 4, ರಾಯಚೂರು ಜಿಲ್ಲೆ 3, ಬಾಗಲಕೋಟೆ, ಬೆಳಗಾವಿ,ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಕೋಲಾರ ಜಿಲ್ಲೆ 2, ದಾವಣಗೆರೆ ಜಿಲ್ಲೆಯಲ್ಲಿ ಓರ್ವ ಕೊರೊನಾದಿಂದ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ | ಕೊವಿಡ್ ಸುನಾಮಿ ಮಧ್ಯೆ ರಾಜ್ಯದ ಐಎಎಸ್ ಅಧಿಕಾರಿಗಳ ವಿಫಲತೆ ಬಗ್ಗೆ ಮಾತನಾಡುವವರು ಯಾರು?
ಏರ್ ಫೋರ್ಸ್ನಿಂದ 100 ಕೋವಿಡ್ ಬೆಡ್ ಒದಗಿಸಲಾಗಿದೆ, ಆದರೆ ಅದನ್ನೇಕೆ ಬಳಸಿಲ್ಲ; ಬಿಬಿಎಂಪಿಗೆ ಹೈಕೋರ್ಟ್ ತರಾಟೆ
(Karnataka Covid update 39998 new cases and 517 death in last 24 hours)
Published On - 9:04 pm, Wed, 12 May 21