ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಲೀಕ್ ಆದರೂ ತಲೆಕೆಡಿಸಿಕೊಳ್ಳದ ಸಿಬ್ಬಂದಿ, ರೋಗಿಗಳು ಕಂಗಾಲು, ತಪ್ಪಿದ ಭಾರಿ ಅನಾಹುತ
ಶಿವಮೊಗ್ಗ: ಜಿಲ್ಲೆಯ ಮೆಗ್ಗಾನ್ ಕೊವಿಡ್ ಆಸ್ಪತ್ರೆಯ 6ನೇ ವಾರ್ಡ್ನಲ್ಲಿ ಆಸ್ಪತ್ರೆಯಲ್ಲಿ ಆಮ್ಲಜನಕ ಸೋರಿಕೆಯಾದರೂ ಆಸ್ಪತ್ರೆಯ ಸಿಬ್ಬಂದಿ ತಲೆ ಕೆಡಿಸಿಕೊಳ್ಳದ ಬೇಜವಾಬ್ಧಾರಿ ಘಟನೆ ನಡೆದಿದೆ. ಆಕ್ಸಿಜನ್ ಸೋರಿಕೆ ಆಗುತ್ತಿದೆ ಎಂದು ಎಚ್ಚರಿಕೆ ಘಂಟೆ ಮೊಳಗಿದರೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರು. ಇದರಿಂದ ಆಕ್ಸಿಜನ್ ಬೆಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಕಂಗಾಲಾದರು. ಆದರೆ ಕೆಲ ಹೊತ್ತಿನ ನಂತರ ಎಚ್ಚೆತ್ತ ವೈದ್ಯರು, ನರ್ಸ್ಗಳು, ಸಿಬ್ಬಂದಿ 6ನೇ ವಾರ್ಡ್ನಲ್ಲಿದ್ದ 15 ರೋಗಿಗಳನ್ನು ಹೊರತಂದರು. ಕೊನೆಗೂ ಹರಸಾಹಸಪಟ್ಟು ಆಕ್ಸಿಜನ್ ಸೋರಿಕೆ ನಿಲ್ಲಿಸಿದರು. ಈ ಮೂಲಕ ಮೆಗ್ಗಾನ್ […]
ಶಿವಮೊಗ್ಗ: ಜಿಲ್ಲೆಯ ಮೆಗ್ಗಾನ್ ಕೊವಿಡ್ ಆಸ್ಪತ್ರೆಯ 6ನೇ ವಾರ್ಡ್ನಲ್ಲಿ ಆಸ್ಪತ್ರೆಯಲ್ಲಿ ಆಮ್ಲಜನಕ ಸೋರಿಕೆಯಾದರೂ ಆಸ್ಪತ್ರೆಯ ಸಿಬ್ಬಂದಿ ತಲೆ ಕೆಡಿಸಿಕೊಳ್ಳದ ಬೇಜವಾಬ್ಧಾರಿ ಘಟನೆ ನಡೆದಿದೆ. ಆಕ್ಸಿಜನ್ ಸೋರಿಕೆ ಆಗುತ್ತಿದೆ ಎಂದು ಎಚ್ಚರಿಕೆ ಘಂಟೆ ಮೊಳಗಿದರೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರು. ಇದರಿಂದ ಆಕ್ಸಿಜನ್ ಬೆಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಕಂಗಾಲಾದರು.
ಆದರೆ ಕೆಲ ಹೊತ್ತಿನ ನಂತರ ಎಚ್ಚೆತ್ತ ವೈದ್ಯರು, ನರ್ಸ್ಗಳು, ಸಿಬ್ಬಂದಿ 6ನೇ ವಾರ್ಡ್ನಲ್ಲಿದ್ದ 15 ರೋಗಿಗಳನ್ನು ಹೊರತಂದರು. ಕೊನೆಗೂ ಹರಸಾಹಸಪಟ್ಟು ಆಕ್ಸಿಜನ್ ಸೋರಿಕೆ ನಿಲ್ಲಿಸಿದರು. ಈ ಮೂಲಕ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊವಿಡ್ ಆಸ್ಪತ್ರೆಯಲ್ಲಿ ಸಂಭವಿಸಬಹುದಾಗಿದ್ದ ಅನಾಹುತವೊಂದನ್ನು ತಪ್ಪಿಸಿದರು.
ಇಂದು ಕೊವಿಡ್ ಸೋಂಕಿತರ ವಿವರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 39,998 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, 517 ಜನರು ಮೃತಪಟ್ಟಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಅವಧಿಯಲ್ಲಿ 16,286 ಜನರಿಗೆ ಕೊವಿಡ್ ಸೋಂಕು ತಗುಲಿರುವುದು ಪತ್ತೆಯಾಗಿದ್ದು, 275 ಜನರು ನಿಧನರಾಗಿದ್ದಾರೆ. ಸದ್ಯ 5,92,182 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ 3,60,619 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಪತ್ತೆಯಾದ ಸೋಂಕಿತರನ್ನೂ ಸೇರಿಸಿ ಈವರೆಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20,53,191ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 34,752 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ. ಈಮೂಲಕ ಈವರೆಗೆ ರಾಜ್ಯದಲ್ಲಿ 14,40,621 ಜನ ಗುಣಮುಖರಾಗಿ ಡಿಸ್ಚಾರ್ಜ್ ಆದಂತಾಗಿದೆ.
ಜಿಲ್ಲಾವಾರು ಸೋಂಕಿತರ ವಿವರ ಇಂತಿದೆ ಬೆಂಗಳೂರು ನಗರ ಜಿಲ್ಲೆ 16,286, ತುಮಕೂರು 2,360, ಬಳ್ಳಾರಿ 1,823, ಮೈಸೂರು 1,773, ಹಾಸನ 1,572, ಮಂಡ್ಯ 1,223, ಬೆಂಗಳೂರು ಗ್ರಾಮಾಂತರ 1,138, ಶಿವಮೊಗ್ಗ 1,125, ದಕ್ಷಿಣ ಕನ್ನಡ 1,077, ಉತ್ತರ ಕನ್ನಡ 960, ಉಡುಪಿ 919, ಧಾರವಾಡ 904, ಬೆಳಗಾವಿ 856, ಕೋಲಾರ 815, ಯಾದಗಿರಿ 753, ವಿಜಯಪುರ 690, ಕೊಡಗು ಜಿಲ್ಲೆ 678, ಚಿಕ್ಕಮಗಳೂರು ಜಿಲ್ಲೆ 646, ಕಲಬುರಗಿ 646, ಬಾಗಲಕೋಟೆ 610, ಚಿಕ್ಕಬಳ್ಳಾಪುರ 554, ಚಾಮರಾಜನಗರ 517, ದಾವಣಗೆರೆ 362, ಗದಗ 347, ರಾಯಚೂರು 289, ಬೀದರ್ 281, ಕೊಪ್ಪಳ 278, ಚಿತ್ರದುರ್ಗ 192, ಹಾವೇರಿ 189, ರಾಮನಗರ ಜಿಲ್ಲೆಗಳಲ್ಲಿ 135 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ | ಕೊವಿಡ್ ಸುನಾಮಿ ಮಧ್ಯೆ ರಾಜ್ಯದ ಐಎಎಸ್ ಅಧಿಕಾರಿಗಳ ವಿಫಲತೆ ಬಗ್ಗೆ ಮಾತನಾಡುವವರು ಯಾರು?
ಚಿನ್ನ ಉತ್ಪಾದನೆ ಬಂದ್: ಹಟ್ಟಿ ಚಿನ್ನದ ಗಣಿಯ ಸಮುದಾಯ ಭವನ ಕೊವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ
(Oxygen leak in Shivamogga megan hospital)