ಏರ್ ಫೋರ್ಸ್ನಿಂದ 100 ಕೋವಿಡ್ ಬೆಡ್ ಒದಗಿಸಲಾಗಿದೆ, ಆದರೆ ಅದನ್ನೇಕೆ ಬಳಸಿಲ್ಲ; ಬಿಬಿಎಂಪಿಗೆ ಹೈಕೋರ್ಟ್ ತರಾಟೆ
ಬೆಂಗಳೂರು: ಭಾರತೀಯ ವಾಯುಪಡೆಯು 100 ಕೋವಿಡ್ ಬೆಡ್ಗಳನ್ನು ಒದಗಿಸಲಾಗಿದೆ. ಆದರೆ ಅದನ್ನು ಬಳಸಿಲ್ಲ ಯಾಕೆ ಎಂದು ಬಿಬಿಎಂಪಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಏರ್ಫೋರ್ಸ್ ಬೆಡ್ಗಳು, ವೈದ್ಯರು, ಸಿಬ್ಬಂದಿಯನ್ನೂ ನೀಡಿದೆ. ಆದರೆ ಅದನ್ನ ಬಳಸಲು ಬಿಬಿಎಂಪಿ ವಿಫಲವಾಗಿದೆ. ಯಾಕೆ ಹೀಗೆ? ವಿವರಣೆ ನೀಡಿ ಎಂದು ಬಿಬಿಎಂಪಿ ವಕೀಲರಿಗೆ ಹೈಕೋರ್ಟ್ ತಾಕೀತು ಮಾಡಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಸಮಪರ್ಕವಾಗಿ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಆದರೆ ಏರ್ಫೋರ್ಸ್ ಮುಂದೆ ಬಂದು ಸಾಕಷ್ಟು ಸೌಕರ್ಯಗಳನ್ನು ಒದಗಿಸಿದೆ. ಆದರೆ ಈವರೆಗೂ ಬಿಬಿಎಂಪಿ ಇದನ್ನು ಬಳಸಿಕೊಂಡಿಲ್ಲ […]
ಬೆಂಗಳೂರು: ಭಾರತೀಯ ವಾಯುಪಡೆಯು 100 ಕೋವಿಡ್ ಬೆಡ್ಗಳನ್ನು ಒದಗಿಸಲಾಗಿದೆ. ಆದರೆ ಅದನ್ನು ಬಳಸಿಲ್ಲ ಯಾಕೆ ಎಂದು ಬಿಬಿಎಂಪಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಏರ್ಫೋರ್ಸ್ ಬೆಡ್ಗಳು, ವೈದ್ಯರು, ಸಿಬ್ಬಂದಿಯನ್ನೂ ನೀಡಿದೆ. ಆದರೆ ಅದನ್ನ ಬಳಸಲು ಬಿಬಿಎಂಪಿ ವಿಫಲವಾಗಿದೆ. ಯಾಕೆ ಹೀಗೆ? ವಿವರಣೆ ನೀಡಿ ಎಂದು ಬಿಬಿಎಂಪಿ ವಕೀಲರಿಗೆ ಹೈಕೋರ್ಟ್ ತಾಕೀತು ಮಾಡಿದೆ.
ಕೊರೊನಾ ಸಂಕಷ್ಟ ಕಾಲದಲ್ಲಿ ಸಮಪರ್ಕವಾಗಿ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಆದರೆ ಏರ್ಫೋರ್ಸ್ ಮುಂದೆ ಬಂದು ಸಾಕಷ್ಟು ಸೌಕರ್ಯಗಳನ್ನು ಒದಗಿಸಿದೆ. ಆದರೆ ಈವರೆಗೂ ಬಿಬಿಎಂಪಿ ಇದನ್ನು ಬಳಸಿಕೊಂಡಿಲ್ಲ ಎಂದು ಕೇಂದ್ರ ಸರ್ಕಾರದ ಪರ ವಕೀಲ ಎಂ.ಎನ್.ಕುಮಾರ್ ಹೇಳಿದ್ದಾರೆ. ಇದನ್ನು ಆಲಿಸಿದ ಹೈಕೋರ್ಟ್ ತಕ್ಷಣ ಬೆಡ್ಗಳನ್ನು ಬಳಸಿಕೊಳ್ಳಲು ಸೂಚನೆ ನೀಡಿದೆ. ಇದೆ ವೇಳೆ ಸರ್ಕಾರವೂ ರೈಲ್ವೆ ಇಲಾಖೆ ಒದಗಿಸಿರುವ ಬೆಡ್ಗಳನ್ನು ಬಳಸಿಕೊಂಡಿಲ್ಲ. ಇದಕ್ಕೂ ವಿವರಣೆ ನೀಡುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
(bbmp and karnataka government not utilizing the services provided by central forces why questions high court)