30 ಬೆಡ್ಗಳಿರುವ ಆಸ್ಪತ್ರೆಗಳಲ್ಲಿ ಬೆಡ್ಗಳು ಸಿಗಲಿದೆ, ಕೆಲವೇ ದಿನಗಳಲ್ಲಿ ಬೆಡ್ ಸಮಸ್ಯೆ ಇಲ್ಲದಂತೆ ಕ್ರಮ ಕೈಗೊಳ್ಳುತ್ತೇವೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ
30 ಬೆಡ್ಗಳಿರುವ ಆಸ್ಪತ್ರೆಗಳಿಗೆ ಸೂಕ್ತ ನೆರವು ನೀಡಿ ಆಸ್ಪತ್ರೆಗಳಲ್ಲಿರುವ ಬೆಡ್ ಬಳಸಿಕೊಳ್ಳುವುದಕ್ಕೆ ನಿರ್ಧಾರ ಮಾಡಲಾಗಿದೆ. ಹಲವು ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ ಐಸಿಯುಗಳೂ ಸಿಗಲಿದೆ. ಕೆಲವೇ ದಿನಗಳಲ್ಲಿ ಬೆಡ್ ಸಮಸ್ಯೆ ಇಲ್ಲದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಸೋಂಕಿತರ ಸಂಖ್ಯೆ ಹೆಚ್ಚಾದಂತೆ ರಾಜ್ಯದಲ್ಲಿ ಬೆಡ್ಗಳ ಕೊರತೆಯೂ ಹೆಚ್ಚಾಗಿದೆ. ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, 30 ಬೆಡ್ಗಳಿರುವ ಖಾಸಗಿ ಆಸ್ಪತ್ರೆಗಳನ್ನು ಪರಿಗಣಿಸಿರಲಿಲ್ಲ. 30 ಬೆಡ್ಗಳಿರುವ ಆಸ್ಪತ್ರೆಗಳಲ್ಲಿ ಬೆಡ್ಗಳು ಸಿಗಲಿದೆ. ಸುಮಾರು 2 ಸಾವಿರ ಬೆಡ್ಗಳು ಪಡೆಯಲು ಅವಕಾಶವಿದೆ ಎಂದಿದ್ದಾರೆ. ಜೊತೆಗೆ 30 ಬೆಡ್ಗಳಿರುವ ಆಸ್ಪತ್ರೆಗಳಿಗೆ ಸೂಕ್ತ ನೆರವು ನೀಡಿ ಆಸ್ಪತ್ರೆಗಳಲ್ಲಿರುವ ಬೆಡ್ ಬಳಸಿಕೊಳ್ಳುವುದಕ್ಕೆ ನಿರ್ಧಾರ ಮಾಡಲಾಗಿದೆ. ಹಲವು ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ ಐಸಿಯುಗಳೂ ಸಿಗಲಿದೆ. ಕೆಲವೇ ದಿನಗಳಲ್ಲಿ ಬೆಡ್ ಸಮಸ್ಯೆ ಇಲ್ಲದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ನೋಡಲ್ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇವೆ. ಮೃತಪಟ್ಟವರ ಮಾಹಿತಿ ನೀಡದ 3 ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ. 2,000 ಬೆಡ್ನ ಸ್ಟೆಪ್ ಡೌನ್ ಆಸ್ಪತ್ರೆ 3 ದಿನದಲ್ಲಿ ನಿರ್ಮಾಣ ಮಾಡಲಾಗುವುದು. ಈ ಬಗ್ಗೆ ಹೊಟೇಲ್ ಸಂಘ ಹಾಗು ಖಾಸಗಿ ಆಸ್ಪತ್ರೆಗಳ ಜೊತೆ ಚರ್ಚೆ ಮಾಡಲಾಗಿದೆ. ಲಸಿಕೆ ಪೂರೈಕೆಯಲ್ಲಿ ಕೆಲವು ವ್ಯತ್ಯಯ ಆಗಿದೆ. ಏಕಾಏಕಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ. ನಾವು ಲಸಿಕೆ ತರಿಸಿಕೊಳ್ಳಲು ಕ್ರಮ ವಹಿಸಲಾಗಿದೆ. ಲಸಿಕೆ ಸಿಗುವುದಿಲ್ಲ ಎಂದು ಜನ ಆತಂಕದಿಂದ ಕೇಂದ್ರಗಳಿಗೆ ಬಂದಿದ್ದಾರೆ. ಲಸಿಕೆ ಎಲ್ಲರಿಗೂ ಸಿಗಲಿದೆ. ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಕೊವಿಡ್ ಟೆಸ್ಟ್ ಸಂಖ್ಯೆಯನ್ನು ಕಡಿಮೆ ಮಾಡಿಲ್ಲ. ಕೊವಿಡ್ ಟೆಸ್ಟ್ ಮಾಡುವುದಕ್ಕೆ ನಿಯಮವಿದೆ. ನಿಯಮದ ಪ್ರಕಾರವೇ ಟೆಸ್ಟ್ ಮಾಡಲಾಗುತ್ತಿದೆ ಎಂದು ಮಾತನಾಡಿದ ಬಸವರಾಜ ಬೊಮ್ಮಾಯಿ ಲಾಕ್ಡೌನ್ ವೇಳೆ ವಾಹನ ಜಪ್ತಿ ಮಾಡುವುದು, ಪೊಲೀಸರು ಲಾಠಿ ಬೀಸುವುದು ಮುಖ್ಯವಲ್ಲ. ಜನ ಅರ್ಥ ಮಾಡಿಕೊಂಡು ಸಹಕಾರ ನೀಡಬೇಕು. ಲಾಕ್ಡೌನ್ ಮುಗಿದ ಬಳಿಕ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದಿದ್ದಾರೆ.
ಇದನ್ನೂ ಓದಿ
Covid 19: ಕೊರೊನಾಕ್ಕೆ ಬಲಿಯಾದ ಗರ್ಭಿಣಿ ವೈದ್ಯೆ; ಗಂಡ ಹಂಚಿಕೊಂಡ ಮನಕಲಕುವ ವಿಡಿಯೋ ಸಂದೇಶ ಇಲ್ಲಿದೆ
ಬೆಂಗಳೂರು ನಗರದ ಜನ ಬೆಂಗಳೂರಿನಲ್ಲೇ ಲಸಿಕೆ ಪಡೆಯಿರಿ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
(Basavaraja Bommai says We will soon take action to prevent bed problems)