ಪಡಿತರ ಪಡೆಯುವುದಕ್ಕೆ ಬೆರಳಚ್ಚು ಕಡ್ಡಾಯವಲ್ಲ; ಆರೋಗ್ಯ ಇಲಾಖೆ
ಕೊರೊನಾ ಸೋಂಕು ಹರಡುವಿಕೆಯ ಬಗ್ಗೆ ಗಮನಹರಿಸಿ ಎಚ್ಚೇತ್ತು ಕೊಂಡ ಆರೋಗ್ಯ ಇಲಾಖೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಬೆರಳಚ್ಚು ಕಡ್ಡಾಯವಲ್ಲ ಎಂದು ಆದೇಶ ಹೊರಡಿಸಿದೆ.
ಬೆಂಗಳೂರು: ಕೊರೊನಾ ಎರಡನೇ ಅಲೆ ಅತ್ಯಂತ ವೇಗವಾಗಿ ಹರಡುತ್ತಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇನ್ನು ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ಲಾಕ್ಡೌನ್ ಘೋಷಿಸಿದೆ. ಹೀಗಿರುವಾಗಲೇ ಕೊರೊನಾ ಸೋಂಕು ಹರಡುವಿಕೆಯ ಬಗ್ಗೆ ಗಮನಹರಿಸಿ ಎಚ್ಚೇತ್ತು ಕೊಂಡ ಆರೋಗ್ಯ ಇಲಾಖೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಬೆರಳಚ್ಚು ಕಡ್ಡಾಯವಲ್ಲ ಎಂದು ಆದೇಶ ಹೊರಡಿಸಿದೆ.
ಪಡಿತರ ವಿವರ ಪಡೆಯಲು ಬಂದಿದೆ ಹೊಸ ಆ್ಯಪ್ ದೇಶದ ಪಡಿತರ ಚೀಟಿದಾರರಿಗೆ ಸಹಕಾರಿಯಾಗಬಲ್ಲ ಆ್ಯಂಡ್ರಾಯ್ಡ್ ಆ್ಯಪ್ ಆ್ಯಪ್ ಒಂದನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. ಮಹತ್ವಾಕಾಂಕ್ಷಿ ಒನ್ ನೇಶನ್ ಒನ್ ರೇಷನ್ ಕಾರ್ಡ ಯೋಜನೆ ಜಾರಿಗೆ ಸಹಾಯಕಾರಿ ಆಗಬಲ್ಲ ಈ ಆ್ಯಪ್ಗೆ‘ಮೇರಾ ರೇಷನ್’ ಎಂದು ಹೆಸರಿಸಲಾಗಿದೆ. ಮೇರಾ ರೇಷನ್ ಆ್ಯಪ್ ಪಡಿತರ ಚೀಟಿ ಹೊಂದಿರುವ ವಲಸೆ ಕಾರ್ಮಿಕರಿಗೆ ಹೆಚ್ಚು ಉಪಯೋಗವಾಗಲಿದೆ. ಅಲ್ಲದೇ ದೇಶದ ಎಲ್ಲಾ ಬಿಪಿಎಲ್ ಕಾರ್ಡುದಾರರು ಈ ಆ್ಯಪ್ನ ಪ್ರಯೋಜನ ಪಡೆಯಬಹುದಾಗಿದೆ.
ಪಡಿತರ ಚೀಟಿದಾರರು ಹತ್ತಿರದ ನ್ಯಾಯಬೆಲೆ ಅಂಗಡಿಯ ವಿವರ, ಹಿಂದಿನ ಬಾರಿ ಪಡೆದ ಪಡಿತರದ ವಿವರ ಮತ್ತು ಪಡಿತರ ಚೀಟಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಪಡೆಯಲು ಮೇರಾ ರೇಷನ್ ಆ್ಯಪ್ ಸಹಕಾರಿಯಾಗಲಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿ ಹೊಂದಿದವರು ತಮಗೆ ದೊರೆಯುವ ಪಡಿತರದ ವಿವರವನ್ನು ಮೇರಾ ರೇಷನ್ ಆ್ಯಪ್ ಮೂಲಕ ಪರಿಶೀಲನೆ ಮಾಡಿಕೊಳ್ಳಬಹುದು. ಇದೀಗ ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆಯನ್ನು ಉತ್ತರ ಪ್ರದೇಶದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲು ’ಮೇರಾ ರೇಷನ್’ ಎಂಬ ಆ್ಯಪ್ ಬಿಡುಗಡೆ ಮಾಡಲಾಗಿದೆ.
ಸದ್ಯ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತ್ರ ಮೇರಾ ರೇಷನ್ ಆ್ಯಪ್ ಲಭ್ಯವಿದೆ. ಮುಂದಿನ ದಿನಗಳಲ್ಲಿ ದೇಶದ ವಿವಿಧ 14 ಭಾಷೆಗಳಲ್ಲಿ ಈ ಆ್ಯಪ್ ಬಿಡುಗಡೆ ಮಾಡಲಿದ್ದೇವೆ ಎಂದು ಆ್ಯಪ್ ರಚಿಸಿದ ನ್ಯಾಷನಲ್ ಇನ್ಫಾರ್ಮೇಶನ್ ಸೆಂಟರ್ ತಿಳಿಸಿದೆ.
ಇದನ್ನೂ ಓದಿ:
ಜೂನಿಯರ್ ಆರ್ಟಿಸ್ಟ್‌ಗಳಿಗೆ ಪಡಿತರ ಕಿಟ್ ವಿತರಣೆ; ಮಾನವೀಯತೆ ಮೆರೆದ ಹಿರಿಯ ನಟಿ ಲೀಲಾವತಿ ಹಾಗೂ ನಟ ವಿನೋದ್ ರಾಜ್
ಬಿಪಿಎಲ್ ಕಾರ್ಡುದಾರರೇ ಇತ್ತ ಗಮನಿಸಿ.. ಪಡಿತರ ವಿವರ ಪಡೆಯಲು ಬಂದಿದೆ ಹೊಸ ಆ್ಯಪ್