Crime News: ಗದಗದಲ್ಲಿ ಇಟ್ಟಿಗೆ ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ, ಕ್ಲೀನರ್ ಸಾವು
ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕಪ್ಪತಗುಡ್ಡ ಬಳಿ ಇಟ್ಟಿಗೆ ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.
ಗದಗ: ಇಟ್ಟಿಗೆ ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಮೃತಪಟ್ಟ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕಪ್ಪತಗುಡ್ಡ ಬಳಿ ನಡೆದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ನಿವಾಸಿಗಳಾದ ಮಳ್ಳಪ್ಪ ಸೋಮನಕಟ್ಟಿ(25), ಸುರೇಶ್(32) ಮೃತರು. ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಿಡಿಲು ಬಡಿದು ಮಹಿಳೆ ಸಾವು ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಕರ್ಣಕುಪ್ಪೆ ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆ ಮೃತಪಟ್ಟಿದ್ದಾರೆ. ಸಿಡಿಲು ಬಡಿದು 54 ವರ್ಷದ ಗಾಯತ್ರಿ ಸಾವನ್ನಪ್ಪಿದ್ದಾರೆ. ಮನೆಯ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಕೋಲಾರ ತಾಲೂಕಿನ ಕಲ್ಲಂಡೂರು ಗ್ರಾಮದ ಹೊರವಲಯದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಯುವಕ ನಿತಿನ್ (20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶವವನ್ನು ಕೋಲಾರದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರತ್ಯೇಕ ಘಟನೆಯಲ್ಲಿ ಹೃದಯಾಘಾತದಿಂದ ಕಾರ್ಮಿಕರಿಬ್ಬರ ಸಾವು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 2 ಪ್ರತ್ಯೇಕ ಘಟನೆಯಲ್ಲಿ ಹೃದಯಾಘಾತದಿಂದ ಕಾರ್ಮಿಕರಿಬ್ಬರು ಮೃತಪಟ್ಟಿದ್ದಾರೆ. ಚಿಲುಗೋಡು ಗ್ರಾಮದಲ್ಲಿ ತಳವಾರ ನಾಗಪ್ಪ(56), ಮಗಿಮಾವಿನಹಳ್ಳಿಯಲ್ಲಿ ಹೆಚ್.ಓಬಳಪ್ಪ(36) ಮೃತರು. ಕೆರೆ ಹೂಳು ಎತ್ತುವ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬನ್ನೇರುಘಟ್ಟ ಉದ್ಯಾನವನದ ಹುಲಿ ಶಿವ ಸಾವು ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಐದು ವರ್ಷ ಆರು ತಿಂಗಳ ಪ್ರಾಯದ ಜಂಗಲ್ ಸಫಾರಿಯಲ್ಲಿದ್ದ ಬೆಂಗಾಲ್ ಟೈಗರ್ ಶಿವು ಮೃತಪಟ್ಟಿದೆ. ಹೇನು ರೋಗಕ್ಕೆ ತುತ್ತಾಗಿರುವ ಅನುಮಾನ ವ್ಯಕ್ತವಾಗಿದೆ. ಇಂಥಾದ್ದೇ ರೋಗಕ್ಕೆ ಈ ಹಿಂದೆ ಹುಲಿಯೊಂದು ತುತ್ತಾಗಿತ್ತು. ಈಗಲೂ ಅಂಥದ್ದೇ ಖಾಯಿಲೆಯಿಂದ ಶಿವ ಹುಲಿ ಕೂಡ ಮೃತಪಟ್ಟಿರುವ ಬಗ್ಗೆ ಪಶು ವೈದ್ಯರು ಅನುಮಾನ ಹೊರ ಹಾಕಿದ್ದಾರೆ. ಚರ್ಮ ಮತ್ತು ಎಲುಬಿಗೆ ಈ ಖಾಯಿಲೆ ಬರುತ್ತದೆ. ಕಳೆದ ಹಲವು ದಿನಗಳಿಂದ ಹುಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರೆಳೆದಿದೆ. ವನ್ಯ ಜೀವಿ ಕಾಯ್ದೆಯಂತೆ ಹುಲಿಯ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಬಿದ್ದೇ ಬಿಡ್ತು ಬಹುದೊಡ್ಡ ಹೋರ್ಡಿಂಗ್ ಸರ್ಜಾಪುರದಲ್ಲಿ ಗಾಳಿಗೆ ಹೋರ್ಡಿಂಗ್ ಉಡೀಸ್ ಆಗಿದೆ. ಹೋಲ್ಡಿಂಗ್ಸ್ ಬಿದ್ದ ಪರಿಣಾಮ ವಿದ್ಯುತ್ ಕಂಬ ವಾಲಿದೆ. ಬಿಲ್ಡಿಂಗ್ ನಿವಾಸಿಗಳು ಜೀವಭಯದಲ್ಲಿದ್ದಾರೆ. ಸರ್ಜಾಪುರ ನಿವಾಸಿ ಮುತ್ತುಸ್ವಾಮಿಗೆ ಸೇರಿದ ಜಾಗದಲ್ಲಿ ತಿಂಗಳಿಗೆ 10 ಸಾವಿರ ರೆಂಟ್ ಮೇಲೆ ಜಾಹಿರಾತು ಎಜೆನ್ಸಿ ಹೋರ್ಡಿಂಗ್ ಅಳವಡಿಸಿತ್ತು. ಆದ್ರೆ ಭಾರಿ ಗಾಳಿಯ ರಭಸಕ್ಕೆ ಹೋರ್ಡಿಂಗ್ ಬಿದ್ದಿದೆ.
Published On - 10:10 pm, Mon, 9 May 22